ಎಪಿಎಲ್, ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ! ಇನ್ಮುಂದೆ ಪ್ರತಿ ತಿಂಗಳು ಹೊಸ ಅರ್ಜಿ ಸ್ವೀಕಾರ

Story Highlights

Ration Card : ಸದ್ಯದಲ್ಲೇ ಹೊಸ ಪಡಿತರ ಚೀಟಿ ಪಡೆದುಕೊಳ್ಳುವುದಕ್ಕೆ ಅರ್ಜಿ ಸ್ವೀಕೃತಿ ಕೆಲಸ ಆರಂಭವಾಗಲಿದೆ

ಎಪಿಎಲ್ (APL card) ಹಾಗೂ ಬಿಪಿಎಲ್ (BPL card) ಜೊತೆಗೆ ಅಂತ್ಯೋದಯ ಕಾರ್ಡ್ (antyodaya card) ಪಡೆದುಕೊಳ್ಳಲು ರಾಜ್ಯದ ಸಾಕಷ್ಟು ಸಮಯದಿಂದ ಕಾಯುತ್ತಿದ್ದಾರೆ. ಸಲ್ಲಿಕೆ ಮಾಡಿರುವ ಅರ್ಜಿ ಇಂದು ಪರಿಶೀಲನೆ ಆಗುತ್ತೆ, ಇಂದು ವಿತರಣೆ ಆಗುತ್ತೆ ಎಂದು ಜನ ಕಾಯುತ್ತಿರುವುದೇ ಆಯ್ತು.

ಆದರೆ ಸರ್ಕಾರ ಇದರ ಬಗ್ಗೆ ಮಾತ್ರ ಈವರೆಗೆ ಚಕಾರ ಎತ್ತಿರಲಿಲ್ಲ. ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳುತ್ತಿತ್ತೇ ಹೊರತು ಹಳೆಯ ಅರ್ಜಿಗಳ ವಿಲೇವಾರಿ (new ration card distribution) ಮಾಡುವಂತಹ ಹೆಚ್ಚಿನ ಗಮನಹರಿಸಿರಲಿಲ್ಲ.

ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆ ಇರುವುದಿಲ್ಲ ಯಾಕೆಂದರೆ ಸರ್ಕಾರ ಈಗ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.

ರೈತರ ಕೃಷಿ ಸಾಲದ ಭಾರ ಇಳಿಸಿದ ರಾಜ್ಯ ಸರ್ಕಾರ; ಕೈಗೊಂಡಿದೆ ಹೊಸ ಕ್ರಮ!

ಆಹಾರ ಇಲಾಖೆಯಿಂದ ಹೊಸ ಕಾರ್ಡ್ ವಿತರಣೆಗೆ ಉಪಕ್ರಮ!

ಕಳೆದ ಎರಡುವರೆ ವರ್ಷಗಳಲ್ಲಿ ರಾಜ್ಯ ಸರ್ಕಾರಕ್ಕೆ ಒಟ್ಟು ಸಂದಾಯವಾಗಿರುವ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳ ಅರ್ಜಿ ಸುಮಾರು 3 ಲಕ್ಷದಷ್ಟು ಅದೇ ರೀತಿ ಕಳೆದ ಕೆಲವು ತಿಂಗಳುಗಳಲ್ಲಿ ಆರೋಗ್ಯದ ಕಾರಣಕ್ಕೆ ಆದ್ಯತಾ ಪಡಿತರ ಚೀಟಿ ಪಡೆದುಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು.

ಹಾಗಾಗಿ ಸುಮಾರು ಒಂದು ಲಕ್ಷದಷ್ಟು ಹೊಸ ಅರ್ಜಿಗಳು ಸರ್ಕಾರಕ್ಕೆ ಸಂದಾಯ ಆಗಿವೆ. ಆದಾಗ್ಯೂ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ ಈಗಾಗಲೇ ಸುಮಾರು ಒಂದು ಲಕ್ಷ ಅರ್ಜಿಗಳನ್ನ ಸಾರಾ ಸಗಟಾಗಿ ಸರ್ಕಾರ ತಿರಸ್ಕರಿಸಿದೆ (1,00,000 application rejected). ಇನ್ನು ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ.

ತಮ್ಮ ಅರ್ಜಿಗಳನ್ನು ಬೇಗ ಪರಿಶೀಲನೆ ನಡೆಸಿ ತಮಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಿ ಎಂದು ಜನ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಸುಮಾರು 20 ಸಾವಿರ ಅರ್ಜಿಗಳನ್ನು ಪರಿಶೀಲನೆ ನಡೆಸಿದ್ದು ಅವುಗಳ ವಿತರಣೆಗೆ ಮುಂದಾಗಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ 20,000 ಪಡಿತರ ಚೀಟಿ ವಿತರಣೆ ಆಗಲಿದೆ. ಮೈಸೂರು, ಮಂಡ್ಯ, ಬೆಂಗಳೂರು, ಉತ್ತರ ಕನ್ನಡ, ಕಲಬುರ್ಗಿ ಮೊದಲಾದ ಪ್ರದೇಶಗಳಿಗೆ ಮೊದಲ ಹಂತದಲ್ಲಿಯೇ ಹೊಸ ಪಡಿತರ ಚೀಟಿ ವಿತರಣೆ ಆಗುವ ಸಾಧ್ಯತೆ ಇದೆ.

ಯುವ ನಿಧಿ ಯೋಜನೆಗೆ ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಕೆ ಆರಂಭ! ಈ ದಾಖಲೆಗಳು ಕಡ್ಡಾಯ

ಆದ್ಯತಾ ಚೀಟಿ ಪಡೆದುಕೊಳ್ಳಲು ಅವಕಾಶ! (New application)

BPL Ration Card
ಆಹಾರ ಇಲಾಖೆಯ ಸಚಿವರಾಗಿರುವ ಕೆಎಚ್ ಮುನಿಯಪ್ಪ (minister K.H muniyappa) ಇದೀಗ ಆದ್ಯತಾ ಪಡಿತರ ಚೀಟಿಯನ್ನು ಅಗತ್ಯ ಇರುವವರಿಗೆ ವಿತರಣೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ

ಸದ್ಯದಲ್ಲೇ ಹೊಸ ಪಡಿತರ ಚೀಟಿ ಪಡೆದುಕೊಳ್ಳುವುದಕ್ಕೆ ಅರ್ಜಿ ಸ್ವೀಕೃತಿ ಕೆಲಸ ಆರಂಭವಾಗಲಿದೆ. ಜಿಲ್ಲೆಗಳಲ್ಲಿ ಪ್ರತಿ ತಿಂಗಳ 1ನೇ ತಾರೀಖಿನಿಂದ 10ನೇ ತಾರೀಖಿನವರೆಗೆ ಹೊಸ ಅರ್ಜಿಗಳ ಸ್ವೀಕಾರ ಹಾಗೂ ಆಧಾರ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಗೆ ಪಡಿತರ ಚೀಟಿ ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ ಈ ಹಿನ್ನೆಲೆಯಲ್ಲಿ ಪಡಿತರ ಚೀಟಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಕೂಡ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ರೇಷನ್ ಕಾರ್ಡ್ ವಿತರಣೆಯಲ್ಲಿ ಬಿಗ್ ಅಪ್ಡೇಟ್! ಈಗ ಪಡಿತರ ಪಡೆಯೋದು ಇನ್ನಷ್ಟು ಸುಲಭ

ಹಾಗಾಗಿ ಈಗಾಗಲೇ ಮೂರರಿಂದ ನಾಲ್ಕು ಬಾರಿ ಪಡಿತರ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು ಆದರೆ ಸರ್ಕಾರದ ಸರ್ವರ್ ಸಮಸ್ಯೆ (server problem) ಯಿಂದಾಗಿ ಸಾಕಷ್ಟು ಜನ ತಿದ್ದುಪಡಿ (ration card correction) ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಇದನ್ನ ಗಮನಿಸಿರುವ ಸರ್ಕಾರ ಈಗ ಮತ್ತೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತಿದೆ. ಯಾವುದೇ ಅರ್ಜೆಂಟ್ ಇಲ್ಲದೆ ಪ್ರತಿಯೊಬ್ಬರೂ ಕೂಡ ಸುಲಭವಾಗಿ ತಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನು ಸೇವಾ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದು.

ಇದಕ್ಕಿಗ ಸಾಕಷ್ಟು ಕಾಲಾವಕಾಶವನ್ನು ಸರ್ಕಾರ ನೀಡಿದೆ. ಹಾಗಾಗಿ ನಿಜಕ್ಕೂ ಯಾರಿಗೆ ಆದ್ಯತಾ ಪಡಿತರ ಚೀಟಿಯ ಅಗತ್ಯ ಇದೆಯೋ ಅವರು ಸರಿಯಾದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ ಸದ್ಯದಲ್ಲಿಯೇ ಅಂತಹ ಅರ್ಜಿಗಳ ಪರಿಶೀಲನೆ ಮಾಡಿ ವಿಲೇವಾರಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಈ 15 ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ 4ನೇ ಕಂತಿನ ಹಣ ಜಮಾ! ಖಾತೆ ಚೆಕ್ ಮಾಡಿಕೊಳ್ಳಿ

Opportunity to get APL, BPL card, applications will be accepted every month

Related Stories