ರೈತರ ಕೃಷಿ ಸಾಲದ ಭಾರ ಇಳಿಸಿದ ರಾಜ್ಯ ಸರ್ಕಾರ; ಕೈಗೊಂಡಿದೆ ಹೊಸ ಕ್ರಮ!

ರೈತರು ತಮ್ಮ ಕೃಷಿ ಕೆಲಸಕ್ಕಾಗಿ (agriculture activities) ಹಲವು ಬಾರಿ ಕೃಷಿ ಸಾಲ (agriculture loan) ವನ್ನು ಮಾಡಬೇಕಾಗಿರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ರೈತರು (farmers) ತಮ್ಮ ಭೂಮಿಯಲ್ಲಿ ಕೃಷಿ ಬೆಳೆಯುವುದು ಅಂದ್ರೆ ದೊಡ್ಡ ಸವಾಲು. ಆ ಕೆಲಸವನ್ನು ಮಾಡುವುದು ಅಷ್ಟು ಸುಲಭವಲ್ಲ. ಯಾಕಂದ್ರೆ ಕೃಷಿಯಲ್ಲಿ ರೈತರು ಎದುರಿಸಬೇಕಾದ ಸವಾಲುಗಳು ಸಾಕಷ್ಟು ಮುಂಗಾರು ಹಾಗೂ ಹಿಂಗಾರು ಮಳೆಯನ್ನು ಅವಲಂಬಿಸಿರುತ್ತದೆ.

ಪ್ರತಿವರ್ಷ ಮಳೆ ಸರಿಯಾಗಿ ಬಾರದೆ ಇದ್ದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಿಲ್ಲ. ಅದರಲ್ಲೂ ಈ ವರ್ಷ ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿಯೇ ಸಾಕಷ್ಟು ಪ್ರದೇಶವನ್ನು ಬರ ಪೀಡಿತ ಪ್ರದೇಶ (Drought prone area) ಎಂದು ಕೂಡ ಗುರುತಿಸಲಾಗಿದೆ.

ರೈತರು ತಮ್ಮ ಕೃಷಿ ಕೆಲಸಕ್ಕಾಗಿ (agriculture activities) ಹಲವು ಬಾರಿ ಕೃಷಿ ಸಾಲ (agriculture loan) ವನ್ನು ಮಾಡಬೇಕಾಗಿರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ರೈತರ ಕೃಷಿ ಸಾಲದ ಭಾರ ಇಳಿಸಿದ ರಾಜ್ಯ ಸರ್ಕಾರ; ಕೈಗೊಂಡಿದೆ ಹೊಸ ಕ್ರಮ! - Kannada News

ಪಿಯುಸಿ ಪಾಸ್ ಆಗಿದ್ರೆ ಸಾಕು ಗ್ರಾಮ ಪಂಚಾಯತ್ ನಲ್ಲಿ ಸರ್ಕಾರಿ ಕೆಲಸ! ಅರ್ಜಿ ಸಲ್ಲಿಸಿ

ಕೃಷಿ ಸಾಲ (agriculture loan) ಅಥವಾ ಬೆಳೆ ಸಾಲ (crop loan) ವನ್ನು ಹತ್ತಿರದ ಬ್ಯಾಂಕ್ಗಳಲ್ಲಿ ತೆಗೆದುಕೊಳ್ಳಬಹುದು ಇದರ ಜೊತೆಗೆ ಸರ್ಕಾರದ ಕೆಲವು ಸಬ್ಸಿಡಿ ಪ್ರಯೋಜನವನ್ನು ಪಡೆಯಬಹುದು

ಆದರೂ ಕೂಡ ಬೆಳೆ ಸರಿಯಾಗಿ ಬಾರದೆ ಇರುವ ಹಿನ್ನೆಲೆಯಲ್ಲಿ ರೈತರಿಗೆ ತಾವು ತೆಗೆದುಕೊಂಡ ಕೃಷಿ ಸಾಲವನ್ನು ಸುಲಭವಾಗಿ ತೀರಿಸಲು ಸಾಧ್ಯವಾಗುವುದಿಲ್ಲ, ಇದರಿಂದ ರೈತರಿಗೆ ತಮ್ಮ ಕುಟುಂಬವನ್ನು ನಡೆಸಬೇಕು ಇತ್ತ ಸಾಲವನ್ನು ತೀರಿಸಬೇಕು ಎನ್ನುವ ದೊಡ್ಡ ಸಮಸ್ಯೆ ಎದುರಾಗುತ್ತದೆ

ಇದನ್ನು ಪರಿಹರಿಸುವುದಕ್ಕಾಗಿ ಸರ್ಕಾರ ಬಹಳ ದೊಡ್ಡ ಉಪಕ್ರಮ ಕೈಗೊಂಡಿರುವುದಾಗಿ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಯುವ ನಿಧಿ ಯೋಜನೆಗೆ ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಕೆ ಆರಂಭ! ಈ ದಾಖಲೆಗಳು ಕಡ್ಡಾಯ

ರೈತರ ಸಾಲ ಮರು ಪರಿವರ್ತನೆ ಅಥವಾ ವಿಸ್ತರಣೆ! (Loan repayment time extended)

agriculture loanರಾಜ್ಯದ ರೈತರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಕಾಲಕ್ಕೆ ರೈತರು ತಾವು ತೆಗೆದುಕೊಂಡ ಸಾಲವನ್ನು ಹಿಂತಿರುಗಿಸದೆ ಇದ್ದಲ್ಲಿ ಬ್ಯಾಂಕ್ ಸುಮ್ಮನಿರುವುದಿಲ್ಲ ರೈತರನ್ನು ಮತ್ತೆ ಮತ್ತೆ ಸಾಲ ತೀರಿಸುವಂತೆ ಕೇಳುತ್ತಿದೆ. ಇನ್ನೂ ಸಾಲ ತೀರಿಸದೇ ಇದ್ದಾಗ ಬ್ಯಾಂಕ್ನಿಂದ ನೋಟಿಸ್ ಕೂಡ ಜಾರಿ ಆಗಬಹುದು

ಆದರೆ ಇನ್ನು ಮುಂದೆ ಈ ಟೆನ್ಶನ್ ಇಲ್ಲ ಯಾಕೆಂದರೆ ರೈತರು ತಾವು ತೆಗೆದುಕೊಂಡ ಕೃಷಿ ಸಾಲ ಅಥವಾ ಬೆಳೆ ಸಾಲವನ್ನು ತೀರಿಸಲು ಅವಧಿ ವಿಸ್ತರಣೆಗೆ ಸರಕಾರ ಬ್ಯಾಂಕ್ ಗಳಿಗೆ ಸೂಚಿಸಿದೆ.

ಹೌದು, ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿರುವಂತೆ ಬ್ಯಾಂಕ್ ಗಳು, ರೈತರು ತೆಗೆದುಕೊಂಡ ಅಲ್ಪಾವಧಿ ಸಾಲವನ್ನು ಮಧ್ಯಮ ಅವಧಿಗೆ ಹಾಗೂ ಮಧ್ಯಮಾವಧಿಗೆ ಸಾಲವನ್ನು ದೀರ್ಘಾವಧಿಗೆ ವಿಸ್ತರಿಸಬೇಕು ಎಂದು ತಿಳಿಸಿದೆ. ಇದರಿಂದಾಗಿ ರೈತರಿಗೆ ಸಾಲ ತೀರಿಸಲು ಹೆಚ್ಚು ಸಮಯ ಲಭ್ಯವಾಗುತ್ತದೆ. ವರ್ಷದ ಬೆಳೆ ಬಂದ ನಂತರವೇ ರೈತರು ಸಾಲ ತೀರಿಸಬಹುದು.

ಈ 15 ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ 4ನೇ ಕಂತಿನ ಹಣ ಜಮಾ! ಖಾತೆ ಚೆಕ್ ಮಾಡಿಕೊಳ್ಳಿ

ರೈತರು ಸಾಲ ಮನ್ನಾ ಆಗಿರುವ ಬಗ್ಗೆ ತಿಳಿದುಕೊಳ್ಳುವುದು ಹೇಗೆ?

ಕಳೆದ ವರ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು. ಇದರ ಬಗ್ಗೆ ರೈತರು ಮಾಹಿತಿ ಪಡೆದುಕೊಳ್ಳಲು https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066 ಈ ವೆಬ್ಸೈಟ್ಗೆ ಭೇಟಿ ನೀಡಿ. ಅಲ್ಲಿ ಮಾದರಿ ಎನ್ನುವ ಆಯ್ಕೆಯಲ್ಲಿ ರೈತ ಎಂಬುದನ್ನು ಸೆಲೆಕ್ಟ್ ಮಾಡಿ. ಬಳಿಕ ನಿಮ್ಮ ಗ್ರಾಮ ಹೋಬಳಿ ಹಾಗೂ ಸಾಲದ ಮತ್ತಿತರ ವಿವರಗಳನ್ನು ನೀಡಿ ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ಸಾಲ ಮನ್ನಾ ಆಗಿರುವ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು.

ಕರ್ನಾಟಕ ರಾಜ್ಯದಲ್ಲಿ ಘೋಷಣೆ ಆಗಿರುವ ಕೆಲವು ಬರಪೀಡಿತ ಪ್ರದೇಶಗಳಲ್ಲಿ ಫಲಾನುಭವಿ ರೈತರಿಗೆ 2000 ರೂ. ಗಳನ್ನು ಬರ ಪರಿಹಾರ ನಿಧಿ ಆಗಿ ಜಮಾ ಮಾಡಲಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ ಫಲಾನುಭವಿ ರೈತರ ಖಾತೆಗೆ (Bank Account) ಹಣ ವರ್ಗಾವಣೆ ಮಾಡುವುದರ ಮೂಲಕ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಇನ್ನು ಸದ್ಯದಲ್ಲಿಯೇ ಬರ ಪೀಡಿತ ಪ್ರದೇಶದ ಫಲಾನುಭವಿ ರೈತರ ಖಾತೆಗೆ ಸರ್ಕಾರದಿಂದ ಬಿಡುಗಡೆಯಾಗಿರುವ 2000 ರೂ. ಸಂದಾಯವಾಗಲಿವೆ.

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ; ಇದು ನಿಜಕ್ಕೂ ಖುಷಿಯ ವಿಚಾರ

The state government has reduced the burden of farmers agricultural loans

Follow us On

FaceBook Google News

The state government has reduced the burden of farmers agricultural loans