ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ; ಇದು ನಿಜಕ್ಕೂ ಖುಷಿಯ ವಿಚಾರ
ಎಲ್ಲರಿಗೂ ತಿಳಿದಿರುವಂತೆ ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಕೇಂದ್ರ ಸರ್ಕಾರದ (central government) 5 ಕೆಜಿ ಉಚಿತ ಅಕ್ಕಿಯ (free rice) ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುವುದಾಗಿ ರಾಜ್ಯ ಸರ್ಕಾರ (state government) ತಿಳಿಸಿತ್ತು
ಆದರೆ ಈವರೆಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಹೆಚ್ಚುವರಿ ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗದೆ ಇರುವ ಕಾರಣಕ್ಕಾಗಿ 5 ಕೆಜಿ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ.
ರದ್ದಾಗುತ್ತೆ ಇಂತಹವರ ರೇಷನ್ ಕಾರ್ಡ್! ತಪ್ಪಿಸಲು ತಕ್ಷಣ ಈ ಕೆಲಸ ಮಾಡಲು ಸೂಚನೆ
ನಿರೀಕ್ಷೆ ಹುಟ್ಟಿಸಿದ ಅನ್ನಭಾಗ್ಯ ಯೋಜನೆ
5 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತದೆ ಎಂದು ಭಾವಿಸಿದವರಿಗೆ ಸರ್ಕಾರ ಈವರೆಗೂ ನಿರಾಶೆಯಲ್ಲಿ ಮೂಡಿಸಿದೆ. ಕೆಲವರಿಗೆ ಅಕ್ಕಿಯ ಬದಲು ಹಣವೇ ಕೊಟ್ಟರೆ ಒಳ್ಳೆಯದು ಎಂದಿದ್ದರು, ಇನ್ನು ಸಾಕಷ್ಟು ಫಲಾನುಭವಿಗಳು ತಮಗೆ ದುಡ್ಡು ಬೇಡ ಅದರ ಬದಲು ಅಕ್ಕಿಯನ್ನು ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ
ಸರ್ಕಾರ ಅಕ್ಕಿ ಒದಗಿಸಲು ಸಾಧ್ಯವಾಗದೆ ಇದ್ದಲ್ಲಿ ಕಡೆ ಪಕ್ಷ ಬೇರೆ ಧಾನ್ಯವನ್ನಾದರೂ ಕೊಡಬೇಕು ಎಂದು ನಿರೀಕ್ಷಿಸಿದ ಜನರಿಗೆ ಮಾತ್ರ ಇದು ಖುಷಿಯ ವಿಚಾರ. ಅಂತದ್ದೊಂದು ಯೋಚನೆಯನ್ನು ಸರ್ಕಾರ ಮಾಡಿದೆ.
ಜಮಾ ಆಗದ ಗೃಹಲಕ್ಷ್ಮಿ ಹಣ ತಲುಪಿಸಲು ಸರಕಾರದ ಮೆಗಾ ಪ್ಲಾನ್! ಪೆಂಡಿಗ್ ಹಣ ರಿಲೀಸ್
ಮತ್ತೊಂದು ಅಕ್ಕಿ ವಿತರಣೆ ಮಾಡಲು ಮುಂದಾದ ಸರ್ಕಾರ! (Brown rice)
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ (minister KH muniyappa) ಈಗಾಗಲೇ ಈ ವಿಚಾರದ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದಾರೆ. ಸರ್ಕಾರದೊಂದಿಗೆ ಚರ್ಚಿಸಿ ವಿತರಣೆ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವುದರಿಂದ ಮಾಹಿತಿ ನೀಡಿದ್ದಾರೆ. 5 ಕೆಜಿ ಬಿಳಿ ಅಕ್ಕಿ ವಿತರಣೆಯ ಬದಲು ಕೆಂಪು ಅಕ್ಕಿ (brown rice) ಅಥವಾ ಕುಚ್ಚಲಕ್ಕಿ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಬಳಸುವಂತಹ ಬಿಳಿ ಅಕ್ಕಿ ಒದಗಿಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಕುಚ್ಚಲಕ್ಕಿ ಯನ್ನು ನೀಡಲು ಮುಂದಾಗಿದೆ. ಈಗಾಗಲೇ ನಾಲ್ಕು ಕಂತಿನ ಅನ್ನಭಾಗ್ಯ ಯೋಜನೆಯ ಹಣ ಜಮಾ (Money Deposit) ಆಗಿದೆ ಇನ್ನು ಮುಂದಿನ ಕಂತಿನಲ್ಲಿ ಹಣದ ಬದಲು ಐದು ಕೆಜಿ ಕುಚ್ಚಲಕ್ಕಿ ವಿತರಣೆ ಮಾಡುವ ಸಾಧ್ಯತೆ ಇದೆ. ಸದ್ಯದಲ್ಲಿಯೇ ಸರ್ಕಾರ ಕುಚಲಕ್ಕಿ ನೀಡುವುದಾದರೆ ಅದರ ಬಗ್ಗೆ ಸುತ್ತೋಲೆ ಹೊರಡಿಸಬಹುದು.
ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿಕೊಳ್ಳಿ
ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಇದೆ ವಿರೋಧ!
ಕುಚಲಕ್ಕಿ ವಿತರಣೆಯ ಬದಲು ಇತರ ಯಾವುದೇ ಪೋಷಕಾಂಶ (nutrient food) ಇರುವ ಧಾನ್ಯಗಳನ್ನು ವಿತರಣೆ ಮಾಡಿ ಎಂದು ಜನ ಬೇಡಿಕೆ ಇಟ್ಟಿದ್ದಾರೆ ಇದಕ್ಕೆ ಮುಖ್ಯವಾದ ಕಾರಣ ಅಂದ್ರೆ ಕುಚ್ಚಲಕ್ಕಿಯನ್ನು ಸಾಮಾನ್ಯವಾಗಿ ಕರಾವಳಿ ಭಾಗದ ಜನರು ಬಳಸುತ್ತಾರೆ
ಅಂತವರಿಗೆ ಇದು ನಿಜಕ್ಕೂ ಖುಷಿಯ ವಿಚಾರ ಆದರೆ ಬಯಲು ಸೀಮೆ ಬದಿಯಲ್ಲಿ ಅಥವಾ ಬೆಂಗಳೂರು ಮಂಡ್ಯ ಭಾಗದಲ್ಲಿ ಯಾರು ಕುಚ್ಚಲಕ್ಕಿ ಸೇವನೆ ಮಾಡುವುದು ಅಷ್ಟಾಗಿ ಕಂಡು ಬರುವುದಿಲ್ಲ
ಈ ಹಿನ್ನೆಲೆಯಲ್ಲಿ ತಮಗೆ ಕುಚ್ಚಲಕ್ಕಿ ನೀಡಿದರೆ ಹೆಚ್ಚು ಪ್ರಯೋಜನ ಇಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸದ್ಯ ಸರ್ಕಾರ ಯಾವ ನಿರ್ಣಯ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.
changes in Annabhagya Yojana, government offered to give grains instead of rice