ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿಕೊಳ್ಳಿ

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆಗಳು (AnnaBhagya scheme) ಬಹುತೇಕ ಯಶಸ್ವಿಯಾಗಿವೆ ಎಂದು ಹೇಳಬಹುದು.
ಅತಿ ಹೆಚ್ಚು ಅನುದಾನ ಪಡೆದುಕೊಂಡಿರುವ ಗೃಹಲಕ್ಷ್ಮಿ ಯೋಜನೆಯ 2000 ಪ್ರಯೋಜನವನ್ನು ರಾಜ್ಯದ ಕೋಟ್ಯಂತರ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ.
ರದ್ದಾಗುತ್ತೆ ಇಂತಹವರ ರೇಷನ್ ಕಾರ್ಡ್! ತಪ್ಪಿಸಲು ತಕ್ಷಣ ಈ ಕೆಲಸ ಮಾಡಲು ಸೂಚನೆ
ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! (Gruha Lakshmi scheme money released)
ಈಗಾಗಲೇ ಮೂರು ಕಂತಿನ ಆಧಾರದ ಮೇಲೆ ಎರಡು ಸಾವಿರ ರೂಪಾಯಿಗಳಂತೆ ಮಹಿಳೆಯರ ಖಾತೆಗೆ (Bank Account) ವರ್ಗಾವಣೆ ಮಾಡಲಾಗಿದೆ. ಸರ್ಕಾರ ತಿಳಿಸಿರುವಂತೆ ಈವರೆಗೆ ಬಹುತೇಕ 80%ಕ್ಕಿಂತ ಹೆಚ್ಚು ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಆಗಿದೆ.
ಇನ್ನು ಕೆಲವರ ಖಾತೆಗೆ ಮಾತ್ರ ಹಣ ವರ್ಗಾವಣೆ ಬಾಕಿ ಇದ್ದು ತಾಂತ್ರಿಕ ದೋಷಗಳು (technical error) ಕೂಡ ಇದಕ್ಕೆ ಕಾರಣವಾಗಿದೆ, ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಡಿಸೆಂಬರ್ ತಿಂಗಳ ಅಂತ್ಯದ ಒಳಗೆ ಪೆಂಡಿಂಗ್ (pending money) ಇರುವ ಹಣವನ್ನು ಕೂಡ ಸೇರಿಸಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಭರವಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಬೇಕಿದ್ದ ಹಣ ಡಿಸೆಂಬರ್ 15 ರಿಂದ 20ನೇ ತಾರೀಕಿನ ಒಳಗೆ ಬಿಡುಗಡೆ ಆಗುವ ಸಾಧ್ಯತೆ ಇದೆ, ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದು 15ರಿಂದ 20ನೇ ತಾರೀಕಿನ ಒಳಗೆ ಸಂದೇಶ ನಿಮ್ಮ ಮೊಬೈಲಿಗೆ ಬಾರದೆ ಇದ್ದರೆ ನೇರವಾಗಿ ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಿಕೊಳ್ಳಿ.
ಜಮಾ ಆಗದ ಗೃಹಲಕ್ಷ್ಮಿ ಹಣ ತಲುಪಿಸಲು ಸರಕಾರದ ಮೆಗಾ ಪ್ಲಾನ್! ಪೆಂಡಿಗ್ ಹಣ ರಿಲೀಸ್
ಅನ್ನ ಭಾಗ್ಯ ಯೋಜನೆಯ ಹಣ ಬಿಡುಗಡೆ! (Annabhagya scheme)

ಡಿಸೆಂಬರ್ ತಿಂಗಳಿನ ಹಣವನ್ನು ಡಿಸೆಂಬರ್ 15ನೇ ತಾರೀಖಿನ ಒಳಗೆ ಬಿಡುಗಡೆ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ಕೃಷಿ ಭೂಮಿ ಇರುವವರಿಗೆ ಉಚಿತ ಬೋರ್ ವೆಲ್; ಅರ್ಜಿ ಸಲ್ಲಿಕೆಗೆ 2 ದಿನ ಮಾತ್ರ ಬಾಕಿ
ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಮಾಹಿತಿ (Check your DBT status)
https://ahara.kar.nic.in/status1/status ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಈ ಸರ್ವಿಸ್ ವಿಭಾಗದಲ್ಲಿ ಪಡಿತರ ಚೀಟಿ ಸ್ಟೇಟಸ್ ಚೆಕ್ ಮಾಡಬಹುದು
ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು DBT ಸ್ಟೇಟಸ್ ಚೆಕ್ ಮಾಡಿದಾಗ ನಿಮಗೆ ತಿಳಿಯುತ್ತದೆ. ಪೇಮೆಂಟ್ ಪೆಂಡಿಂಗ್ ಇರುವ ಆಯ್ಕೆ ಕಾಣಿಸಿದರೆ ನಿಮ್ಮ ಖಾತೆಗೆ ಸದ್ಯದಲ್ಲಿಯೇ ಹಣ ಜಮಾ ಆಗಲಿದೆ ಎಂದು ಅರ್ಥ.
ಉಚಿತ ಮನೆ ಸ್ಕೀಮ್; ಸರ್ಕಾರದ ವಸತಿ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ
ಇನ್ನೇನು ಸದ್ಯದಲ್ಲಿಯೇ ಬಿಡುಗಡೆ ಆಗಲಿರುವ ಡಿಸೆಂಬರ್ ತಿಂಗಳಿನ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಬಗ್ಗೆ ನೀವು ಡಿಬಿಟಿ ಸ್ಟೇಟಸ್ ಮೂಲಕ ಹಾಗೂ ಡಿ ಬಿ ಟಿ ಕರ್ನಾಟಕ (DBT Karnataka) ಎನ್ನುವ ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದು.
Gruha Lakshmi, Annabhagya Yojana Money Transferred for the month of December




