ರದ್ದಾಗುತ್ತೆ ಇಂತಹವರ ರೇಷನ್ ಕಾರ್ಡ್! ತಪ್ಪಿಸಲು ತಕ್ಷಣ ಈ ಕೆಲಸ ಮಾಡಲು ಸೂಚನೆ

31ರ ಒಳಗೆ ಈ ಕೆಲಸ ಮಾಡದೆ ಇದ್ದರೆ ಅಂತಹ ಕುಟುಂಬದ ಸದಸ್ಯರು ಇನ್ನು ಮುಂದೆ ಎಂದಿಗೂ ರೇಷನ್ ಕಾರ್ಡ್ ಪ್ರಯೋಜನ (Ration Card Benefit) ಪಡೆದುಕೊಳ್ಳಲು ಸಾಧ್ಯವಿಲ್ಲ

Bengaluru, Karnataka, India
Edited By: Satish Raj Goravigere

ಪಡಿತರ ಚೀಟಿ (Ration Card) ಕುರಿತಂತೆ ಸರ್ಕಾರ ಸಾಕಷ್ಟು ನೀತಿ ನಿಯಮಗಳನ್ನು ಜಾರಿಗೆ ತರುತ್ತಿದ್ದರು ಕೂಡ ಜನ ಅದನ್ನ ನಿರ್ಲಕ್ಷ ಮಾಡಿ ಮತ್ತೆ ಅದೇ ಅದೇ ತಪ್ಪನ್ನು ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಕೊನೆಯ ಅವಕಾಶ ಒಂದನ್ನು ಸರ್ಕಾರ ಕೊಟ್ಟಿದೆ. 31ರ ಒಳಗೆ ಈ ಕೆಲಸ ಮಾಡದೆ ಇದ್ದರೆ ಅಂತಹ ಕುಟುಂಬದ ಸದಸ್ಯರು ಇನ್ನು ಮುಂದೆ ಎಂದಿಗೂ ರೇಷನ್ ಕಾರ್ಡ್ ಪ್ರಯೋಜನ (Ration Card Benefit) ಪಡೆದುಕೊಳ್ಳಲು ಸಾಧ್ಯವಿಲ್ಲ.

Check whether your name is in the ration card list or not

ನಮ್ಮ ದೇಶದಲ್ಲಿ ಬೇರೆ ಯಾವುದೇ ದಾಖಲೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ (Aadhaar Card) ಎಷ್ಟು ಮುಖ್ಯವೋ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ ಕೂಡ ಅಷ್ಟೇ ಮುಖ್ಯ.

ಜಮಾ ಆಗದ ಗೃಹಲಕ್ಷ್ಮಿ ಹಣ ತಲುಪಿಸಲು ಸರಕಾರದ ಮೆಗಾ ಪ್ಲಾನ್! ಪೆಂಡಿಗ್ ಹಣ ರಿಲೀಸ್

ಅದರಲ್ಲೂ ಇತ್ತೀಚೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆ (AnnaBhagya scheme) ಯ ಹಣವನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ (BPL card) ಹೊಂದಿರಬೇಕು ಹಾಗೂ ಬಿಪಿಎಲ್ ಕಾರ್ಡ್ ನಲ್ಲಿ ಪ್ರಮುಖ ಬದಲಾವಣೆಗಳನ್ನು ಕೂಡ ಮಾಡಿಕೊಂಡಿರಬೇಕು.

ಇತ್ತೀಚಿಗೆ ಆಹಾರ ಇಲಾಖೆ (food department) ತಿಳಿಸಿರುವಂತೆ ಇನ್ನು ಮುಂದೆ ಹೊಸ ಪಡಿತರ ಚೀಟಿಯನ್ನು ಯಾರು ಪಡೆದುಕೊಳ್ಳುತ್ತಾರೋ ಅವರು ತಮ್ಮ ಬ್ಯಾಂಕಿಂಗ್ ವ್ಯವಹಾರ (bank transaction) ಹಾಗೂ ಏರ್ಪೋರ್ಟ್ ಗಳಲ್ಲಿಯೂ ಕೂಡ ರೇಷನ್ ಕಾರ್ಡ್ ಅನ್ನು ಪ್ರಮುಖ ಗುರುತಿನ ಚೀಟಿಯಾಗಿ ಬಳಸಿಕೊಳ್ಳಬಹುದು.

ಇದೆಲ್ಲಾ ತಿಳಿದಿದ್ದರೂ ಕೂಡ ಕೆಲವರು ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಇದೊಂದು ಕೆಲಸವನ್ನು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡಿಕೊಳ್ಳದೆ ಇರುವವರ ರೇಷನ್ ಕಾರ್ಡ್ ರದ್ದಾಗುವುದು ಎಂದು ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.

ಕೃಷಿ ಭೂಮಿ ಇರುವವರಿಗೆ ಉಚಿತ ಬೋರ್ ವೆಲ್; ಅರ್ಜಿ ಸಲ್ಲಿಕೆಗೆ 2 ದಿನ ಮಾತ್ರ ಬಾಕಿ

ರೇಷನ್ ಕಾರ್ಡ್ ಈಕೆವೈಸಿ (Ration card EKYC)

ಪಡಿತರ ಚೀಟಿ ಅದರಲ್ಲೂ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿತರಣೆ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ಹೊಂದಿರುವವರು ಉಚಿತವಾಗಿ ರೇಷನ್ ಪಡೆದುಕೊಳ್ಳಬಹುದು, ಅನ್ನಭಾಗ್ಯ ಯೋಜನೆಯ ಹಣ ಪಡೆದುಕೊಳ್ಳಬಹುದು.

ಹಾಗೂ ಸರ್ಕಾರದ ಇತರ ಯೋಜನೆಯ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಆದರೆ ಇದೆಲ್ಲ ಪ್ರಯೋಜನಗಳು ನಿಮಗೆ ಸಿಗಬೇಕು ಅಂದ್ರೆ ಕಡ್ಡಾಯವಾಗಿ ರೇಷನ್ ಕಾರ್ಡ್ ಈಕೆವೈಸಿ ಮಾಡಿಸಿಕೊಳ್ಳಲೇಬೇಕು.

ಹೌದು, ಇದನ್ನು ಈಗಾಗಲೇ ಸರ್ಕಾರ ಸಾಕಷ್ಟು ಬಾರಿ ಹೇಳಿದೆ ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯೋಜನೆಯ ಉಪಯೋಗ ಪಡೆದುಕೊಳ್ಳುವ ಸಲುವಾಗಿ ನಕಲಿ ರೇಷನ್ ಕಾರ್ಡ್ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ.

ಈ ಹಿನ್ನೆಲೆಯಲ್ಲಿ ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ಯಾವುದು ಎಂಬುದನ್ನ ಕಂಡು ಹಿಡಿಯಲು ರೇಷನ್ ಕಾರ್ಡ್ ಈಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ರೇಷನ್ ಕಾರ್ಡ್ ಈಕೆವೈಸಿ ಆಗಿದ್ದರೆ ಆ ಪಡಿತರ ಚೀಟಿಯನ್ನು ಯಾರು ಕೂಡ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಪಡಿತರ ಅಂಗಡಿಗಳಲ್ಲಿ ಪಡಿತರ ವಸ್ತು ಪಡೆದುಕೊಳ್ಳಲು ಕೂಡ ಬಯೋಮೆಟ್ರಿಕ್ (biometric) ವ್ಯವಸ್ಥೆ ಇರುವುದರಿಂದ ಒಬ್ಬರ ರೇಷನ್ ಕಾರ್ಡನ್ನು ಇನ್ನೊಬ್ಬರು ಬಳಸಿಕೊಳ್ಳಲು ಸಾಧ್ಯವಿಲ್ಲ.

ಇನ್ಮುಂದೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಕೊರಗುವ ಅವಶ್ಯಕತೆ ಇಲ್ಲ! ಇಷ್ಟು ಮಾಡಿ ಸಾಕು

ಈಕೆವೈಸಿ ಮಾಡಿಸಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನಾಂಕ

BPL Ration Cardಸರ್ಕಾರದ ಗ್ಯಾರಂಟಿ ಯೋಜನೆಗಳು (guarantee schemes) ಆರಂಭವಾದಾಗಿನಿಂದ ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಸರ್ಕಾರ ನಾಲ್ಕಾರು ಬಾರಿ ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ರೇಷನ್ ಕಾರ್ಡ್ ಕೆ ವೈ ಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂಬುದನ್ನು ತಿಳಿಸಿತ್ತು.

ರೇಷನ್ ಕಾರ್ಡ್ ಗೆ ಈಕೆವೈಸಿ ಕಂಪ್ಲೀಟ್ ಆಗದೆ ಇದ್ದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (pradhanmantri Kisan Yojana) ಹಣವು ಕೂಡ ರೈತರ ಖಾತೆಯನ್ನು ತಲುಪುವುದಿಲ್ಲ.

ಈ ಎಲ್ಲಾ ಕಾರಣಕ್ಕೆ ಇದೆ ತಿಂಗಳ ಕೊನೆ ಅಂದರೆ ಡಿಸೆಂಬರ್ 31ರ ಒಳಗೆ ಪ್ರತಿಯೊಬ್ಬರು ಈಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಕೆವೈಸಿ ಆಗದೆ ಇದ್ದಲ್ಲಿ ಅಂತಹ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಶೀಘ್ರವೇ ಸಿಗಲಿದೆ ಹೊಸ ಪಡಿತರ ಚೀಟಿ; ಬಿಗ್ ಅಪ್ಡೇಟ್

ರೇಷನ್ ಕಾರ್ಡ್ ಈಕೆವೈಸಿ ಮಾಡಿಸಿಕೊಳ್ಳುವುದು ಹೇಗೆ?

ಪಡಿತರ ಚೀಟಿ ಈ ಕೆ ವೈ ಸಿ ಮಾಡಿಸಿಕೊಳ್ಳುವುದು ಎಂದರೆ ಪಡಿತರ ಚೀಟಿ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಕೊಳ್ಳುವುದು. ಇದನ್ನು ನೀವು ಆನ್ಲೈನ್ ಮೂಲಕವೂ ಮಾಡಿಕೊಳ್ಳಬಹುದಾಗಿದೆ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಹಾಗೂ ಬ್ಯಾಂಕ್ಗಳಲ್ಲಿ ಮಾಡಿಸಬಹುದು.

ಆನ್ಲೈನ್ ಮೂಲಕ ಈಕೆವೈಸಿ ಮಾಡಿಸುವುದು ಹೇಗೆ? (Online EKYC process)

*ಮೊದಲನೇದಾಗಿ ನೀವು ಯಾವ ಬ್ಯಾಂಕಿನ ಗ್ರಾಹಕರಾಗಿರುತ್ತೀರೋ ಅಂದರೆ ಯಾವ ಬ್ಯಾಂಕ್ ನಲ್ಲಿ ಖಾತೆ ಹೊಂದಿರುತ್ತೀರೋ ಆ ಬ್ಯಾಂಕಿನ ಅಧಿಕೃತ ವೆಬ್ಸೈಟ್ ಅನ್ನು ಗೂಗಲ್ ನಲ್ಲಿ ತೆರೆಯಿರಿ.

*ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಲಾಗಿನ್ ಆಗಿ.

*ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕೆ ವೈ ಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ಕೆ ವೈ ಸಿ ಮಾಡಿಸಿಕೊಳ್ಳಲು ನೀವು ಅಗತ್ಯ ಇರುವ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮೊದಲಾದ ಮಾಹಿತಿಯನ್ನು ಫಿಲ್ ಮಾಡಬೇಕು.

*ಬಳಿಕ ನಿಮ್ಮ ಆಧಾರ್ ಸಂಖ್ಯೆ ಹಾಗೂ ಅಗತ್ಯ ಇರುವ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಪ್ಲೋಡ್ ಮಾಡಬೇಕು. ನೆನಪಿರಲಿ, ನಿಮ್ಮ ದಾಖಲೆಗಳನ್ನು ಸ್ಕ್ಯಾನ್ ಮಾಡುವಾಗ ದಾಖಲೆಯ ಎರಡು ಬದಿಗೆ ಸ್ಕ್ಯಾನ್ ಮಾಡಬೇಕು.

*ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ಹೆಸರಿನಲ್ಲಿ ಒಂದು ಸೇವಾ ಸಂಖ್ಯೆ ಜನರೇಟ್ ಆಗುತ್ತದೆ. ಈ ಮೂಲಕ ನೀವು ನವೀಕರಣದ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ನೀವು ಲಗತ್ತಿಸಿರುವ ಇಮೇಲ್ ಐಡಿಗೂ ಸಂದೇಶ ಕಳುಹಿಸಲಾಗುತ್ತದೆ.

ನೀವು ಈಕೆವೈಸಿ ಅರ್ಜಿ ಸಲ್ಲಿಸಿದ ಕೆಲವೇ ಸಮಯದಲ್ಲಿ ನಿಮ್ಮ ಈ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅತ್ಯಂತ ಸುಲಭವಾಗಿ ಮಾಡಬಹುದಾದ ಈಕೆ ವೈ ಸಿ ಪ್ರಕ್ರಿಯೆಯನ್ನು ಡಿಸೆಂಬರ್ 31ರ ಒಳಗೆ ಮಾಡಿಸಿಕೊಳ್ಳಿ. ಸರ್ಕಾರದ ಎಲ್ಲಾ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

The ration card of such people will be cancelled, do this work immediately