ರಾಜ್ಯ ಸರ್ಕಾರವು (state government) ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಮನೆಯೊಡತಿಗೆ ಪ್ರತಿ ತಿಂಗಳು 2೦೦೦ ರೂ. ನೀಡುವ ಗೃಹಲಕ್ಷ್ಮಿ ಯೋಜನೆಯೂ (Gruha lakshmi Yojana) ಒಂದಾಗಿದೆ.

ಇದಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರು (Congress leader Rahul Gandhi) ಆಗಸ್ಟ್ ತಿಂಗಳಿನಲ್ಲಿ ಚಾಲನೆ ನೀಡಿದ್ದರು. ಆದರೆ ಆರಂಭದಿಂದಲೂ ತಾಂತ್ರಿಕ ತೊಂದರೆಯಿಂದಾಗಿ (technical error) ಎಲ್ಲ ಫಲಾನುಭವಿಗಳಿಗೆ 2,000 ರೂ. ತಲುಪಿಸಲು ಸಾಧ್ಯವಾಗಲಿಲ್ಲ.

Gruha Lakshmi Yojana funds have been released, Check the women of this district

ಇದುವರೆಗೂ ಎಷ್ಟೋ ಜನ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ಎಲ್ಲ ಫಲಾನುಭವಿಗಳಿಗೂ ತಮ್ಮ ಯೋಜನೆ ತಲುಪಿಸಲೇಬೇಕು ಎನ್ನುವ ನಿರ್ಧಾರ ಕೈಗೊಂಡಿರುವುದರಿಂದ ಈ ತಾಂತ್ರಿಕ ಸಮಸ್ಯೆಗೆ ಒಂದು ಪರಿಹಾರ ಹುಡುಕಿದೆ.

ಇಂತಹವರಿಗೆ ಅನ್ನಭಾಗ್ಯ ಹಣ ₹170 ರೂಪಾಯಿ ಸಿಗೋಲ್ಲ! ಯೋಜನೆಯಲ್ಲಿ ಬಿಗ್ ಟ್ವಿಸ್ಟ್

ಮನೆಯ ಯಜಮಾನಿಯ ಹೆಸರು ಎರಡನೇ ಸ್ಥಾನದಲ್ಲಿದ್ದರೂ ಹಣ ವರ್ಗಾವಣೆ!

ಗೃಹಲಕ್ಷ್ಮಿ ಯೋಜನೆ ಆರಂಭಗೊಂಡಾಗ ಪಡಿತರ ಚೀಟಿಯಲ್ಲಿ ಮನೆಯೊಡತಿಯ ಹೆಸರು ಮೊದಲ ಸ್ಥಾನದಲ್ಲಿ ಇರಬೇಕು. ಅಂತಹವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಲಾಭ ಸಿಗಲಿದೆ ಎಂದು ಹೇಳಿತ್ತು. ಇದರಿಂದ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದವರು ಪಡಿತರ ಚೀಟಿ ತಿದ್ದುಪಡಿಗೆ (Ration Card Correction) ಅರ್ಜಿ ಸಲ್ಲಿಸಿ ಸಾಕಷ್ಟು ಜನರು ಮನೆಯ ಯಜಮಾನನ ಸ್ಥಾನದಲ್ಲಿ ಮನೆಯೊಡತಿ ಹೆಸರನ್ನು ಸೇರಿಸಿದ್ದರು.

ಆದರೂ ಬ್ಯಾಂಕ್ನಲ್ಲಿ (Bank) ಆಗುವ ಕೆಲವೊಂದು ತಾಂತ್ರಿಕ ತೊಂದರೆಗಳು, ಆಧಾರ್ ಕಾರ್ಡ್ (Aadhaar Card) ಹಾಗೂ ಬ್ಯಾಂಕ್ ಖಾತೆಯಲ್ಲಿ (Bank Account) ಇರುವ ಹೆಸರಿಗೆ ಮ್ಯಾಚ್ ಆಗದಿರುವುದು, ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ (Bnak Account) ಲಿಂಕ್ ಆಗದೆ ಇರುವುದು ಹೀಗೆ ಹಲವು ಸಮಸ್ಯೆಗಳಿಂದ ಗೃಹಲಕ್ಷ್ಮಿ ಯೋಜನೆ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಅದಕ್ಕಾಗಿ ಸರ್ಕಾರ ಈಗ ಒಂದು ನಿರ್ಧಾರಕ್ಕೆ ಬಂದಿದೆ. ಯಾರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೋ ಅವರು ಅರ್ಹರಾಗಿದ್ದರೆ ಮನೆಯೊಡತಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (bank account – Aadhar link) ಆಗದೆ ಇದ್ದಲ್ಲಿ ಆಕೆಯ ಪತಿಯ ಖಾತೆಗೆ ಹಣ ವರ್ಗಾವಣೆ (DBT) ಮಾಡಲು ನಿರ್ಧರಿಸಿದೆ. ಈ ರೀತಿ ಆಗಲು ಯಜಮಾನನ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಹಾಗೂ ಪಡಿತರ ಚೀಟಿ ಕೆವೈಸಿ (KYC) ಮಾಡಿಸಿರಬೇಕು.

ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರು ಬಿಲ್ ಬಂತಾ? ಹೀಗೆ ಮಾಡಿ ಜೀರೋ ಬಿಲ್ ಬರುತ್ತೆ

ಡಿಸೆಂಬರ್ ನಲ್ಲೂ ಗೃಹಲಕ್ಷ್ಮಿ ಬಾರದಿದ್ದರೆ ಹೀಗೆ ಮಾಡಿ:

Gruha Lakshmi Yojanaಇಲ್ಲಿಯವರೆಗೂ ಸಾವಿರಾರು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಹಣ ಬರುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ಕೆಲವೊಂದು ಕಾರಣಗಳಿಂದ ಅವರ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ.

ಆದರೆ ಇನ್ಮುಂದೆ ನೀವು ಹಣ ಬಂದಿಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ. ಪ್ರತಿ ತಿಂಗಳು ನಡೆಯುವ ಗೃಹಲಕ್ಷ್ಮಿ ಅದಾಲತ್ನಲ್ಲಿ (Gruha lakshmi Adalat) ದೂರು ಸಲ್ಲಿಸಬಹುದು. ನೀವು ದೂರು ಸಲ್ಲಿಸಿದ್ದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಖಾತೆಯಲ್ಲಿ ಉಂಟಾದ ಸಮಸ್ಯೆ ಬಗೆಹರಿಸಿಕೊಡಲಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಅಧಿಕಾರಿಗಳು (Gram Panchayat officer) ನಿಮ್ಮ ಸಂಪರ್ಕದಲ್ಲಿ ಇರುತ್ತಾರೆ. ಒಂದು ವೇಳೆ ಮಹಿಳೆರಿಗೆ ಬ್ಯಾಂಕ್ಗೆ ಹೋಗಲು ಸಾಧ್ಯವಾಗದಿದ್ದರೆ ಅಧಿಕಾರಿಗಳೇ ಬ್ಯಾಂಕ್ ಗೆ ತೆರಳಿ ಗೃಹಲಕ್ಷ್ಮಿ ಹಣ ಬರುವಂತೆ ಮಾಡಿಕೊಡಲಿದ್ದಾರೆ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಶೀಘ್ರವೇ ಸಿಗಲಿದೆ ಹೊಸ ಪಡಿತರ ಚೀಟಿ; ಬಿಗ್ ಅಪ್ಡೇಟ್

ಗೃಹಲಕ್ಷ್ಮಿಗಾಗಿ ಗ್ರಾಮ ಮಟ್ಟದಲ್ಲಿ ಅದಾಲತ್

ಇದುವರೆಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 1.17 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 1.1೦ ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಅವರ ಖಾತಗೆ ಹಣ ಜಮಾ ಮಾಡಲಾಗುತ್ತಿದೆ. ಆದರೆ ಉಳಿದ 2 ಲಕ್ಷ ಫಲಾನುಭವಿಗಳಿಗೆ ಹಣ ಜಮಾ ಮಾಡಲು ಆಗುತ್ತಿಲ್ಲ. ಈ ತೊಂದರೆ ನಿವಾರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಬ್ಯಾಂಕ್ ಖಾತೆಯ (Bank Account) ಗೊಂದಲ, ಆಧಾರ್ ಲಿಂಕ್ ಆಗದೆ ಇರುವುದು, ಪಡಿತರ ಚೀಟಿ ಕೆವೈಸಿ ಆಗದೆ ಇರುವುದು ಹೀಗೆ ಹಲವು ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸುವ ಸಲುವಾಗಿ ಗೃಹಲಕ್ಷ್ಮಿ ಅದಾಲತ್ ನಡೆಸಲಾಗುತ್ತಿದೆ.

ಫಲಾನುಭವಿಗಳು ಈ ಅದಾಲತ್ನಲ್ಲಿ ಭಾಗವಹಿಸಿ ದೂರು ನೀಡಿದಲ್ಲಿ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ಗೃಹಲಕ್ಷ್ಮಿ ಯೋಜನೆಯಲ್ಲಿ ಆದ ಗೊಂದಲ ನಿವಾರಣೆ ಮಾಡಲಿದ್ದಾರೆ. ಹಾಗೂ ನಿಮ್ಮ ಖಾತೆಗೆ ಹಣ ಜಮಾ (Money Transfer) ಆಗುವ ರೀತಿ ಮಾಡಲಿದ್ದಾರೆ ಎಂದು ಸರ್ಕಾರ ಭರವಸೆ ನೀಡಿದೆ.

ಗೃಹಲಕ್ಷ್ಮಿ ಅರ್ಜಿ ಅಗಸ್ಟ್ 15ಕ್ಕಿಂತ ಮೊದಲು ಸಲ್ಲಿಸಿದ್ದರೆ ಇಲ್ಲಿದೆ ಬಿಗ್ ಅಪ್ಡೇಟ್! ಹೊಸ ಸೂಚನೆ

There is no need to worry about Gruha lakshmi Scheme money, Do This To Get