ಗೃಹಲಕ್ಷ್ಮಿ ಅರ್ಜಿ ಅಗಸ್ಟ್ 15ಕ್ಕಿಂತ ಮೊದಲು ಸಲ್ಲಿಸಿದ್ದರೆ ಇಲ್ಲಿದೆ ಬಿಗ್ ಅಪ್ಡೇಟ್! ಹೊಸ ಸೂಚನೆ
ಸರ್ಕಾರ ಶತಾಯಗತಾಯ ಮಹಿಳೆಯರ ಖಾತೆಗೆ (Bank Account) ಗೃಹಲಕ್ಷ್ಮಿ ಹಣ (Gruha lakshmi scheme) ಜಮಾ ಮಾಡಲು ಪ್ರಯತ್ನಿಸುತ್ತಿದೆ.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಪ್ರತಿಶತ 100% ನಷ್ಟು ಯಶಸ್ವಿಯಾಗಿ ಎಲ್ಲಾ ಮಹಿಳೆಯರಿಗೂ ತಲುಪಿಸಿದ್ದೇವೆ ಎಂದು ಹೇಳಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ (State government) ಶತಾಯಗತಾಯ ಮಹಿಳೆಯರ ಖಾತೆಗೆ (Bank Account) ಹಣ ಜಮಾ ಮಾಡಲು ಪ್ರಯತ್ನಿಸುತ್ತಿದೆ.
ಅತ್ತ ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಸರಿಯಾಗಿ ಆಗುತ್ತಿಲ್ಲ. ಇತ್ತ ಸರ್ಕಾರದ ಕಡೆಯಿಂದ ಆಗುತ್ತಿರುವ ಸರ್ವರ್ ಸಮಸ್ಯೆ ಕೂಡ ಪರಿಹಾರವಾಗುತ್ತಿಲ್ಲ. ಎರಡು ಸಮಸ್ಯೆಗಳ ನಡುವೆ ಫಲಾನುಭವಿ ಗೃಹಿಣಿಯರ ಖಾತೆಗೆ ಮಾತ್ರ ಹಣ (Money Deposit) ಸಂದಾಯವಾಗುತ್ತಿಲ್ಲ.
ಮಹಿಳೆಯರಿಗೆ ಹೊಸ ಸ್ಕೀಮ್! ಭೂಮಿ ಖರೀದಿಗೆ ಸರ್ಕಾರ ನೀಡುತ್ತೆ 25 ಲಕ್ಷ ಸಬ್ಸಿಡಿ ಸಾಲ
ಹೌದು, ಸರ್ಕಾರ ಈಗಾಗಲೇ ಸಾಕಷ್ಟು ಹೊಸ ಹೊಸ ಉಪಕ್ರಮಗಳನ್ನು (initiative) ಕೈಗೊಳ್ಳುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆ ಸೇರಬೇಕು ಎಂದು ಪ್ರಯತ್ನಿಸುತ್ತಿದೆ.
ಆದರೂ ಕೂಡ ಇನ್ನೂ 10 ರಿಂದ 20%ನಷ್ಟು ಮಹಿಳೆಯರ ಖಾತೆಗೆ (Bank Account) ಮೂರು ಕಂತಿನ ಹಣ ಬಂದು ಸೇರಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಚಿವ ಸಂಪುಟ ಸಭೆ ನಡೆಸಿದ್ದು ಈ ಸಭೆಯಲ್ಲಿ ಹಲವು ಪರಿಹಾರಕಾರಿ ನಿರ್ಣಯಗಳನ್ನು ಕೈಗೊಂಡಿದ್ದಾರೆ.
ತಕ್ಷಣ ದೂರು ನೀಡಿ! (Complaint)
ಅಗಸ್ಟ್ ತಿಂಗಳಿನಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಮೂರು ಕಂತಿನ ಹಣವು ಕೂಡ ಬಿಡುಗಡೆ ಆಗಿದೆ. ಆದಾಗ್ಯೂ ನಿಮ್ಮ ಖಾತೆಗೆ ಮಾತ್ರ ಹಣ ಬಂದಿಲ್ಲ ಅಂದ್ರೆ ಸರ್ಕಾರ ಸೂಚಿಸಿದ ಈ ಪರಿಹಾರವನ್ನು ಟ್ರೈ ಮಾಡಿ.
ನಿಮ್ಮ ಖಾತೆಗೆ ಹಣ ಬಾರದೆ ಇದ್ದಾಗ ಸರ್ಕಾರ ದೂರು ಸಲ್ಲಿಸುವ ಸಲುವಾಗಿ ಗೃಹಲಕ್ಷ್ಮಿ ಅದಾಲತ್ (gruha lakshmi Adalat) ಆರಂಭಿಸಿದೆ. ಇದರಿಂದಾಗಿ ನೀವು ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದನ್ನು ಗ್ರಾಮ ಪಂಚಾಯತ್ (Gram Panchayat) ಸಿಬ್ಬಂದಿಗಳಿಗೆ ತಿಳಿಸಬೇಕು
ಗೃಹಲಕ್ಷ್ಮಿ 4ನೇ ಕಂತಿನ ಬಿಗ್ ಅಪ್ಡೇಟ್; ಯೋಜನೆಯಲ್ಲಿ ಹೊಸ ಹೊಸ ಬದಲಾವಣೆಗಳು
ಅವರು ತಕ್ಷಣವೇ ನಿಮ್ಮ ಖಾತೆಯನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸಬೇಕು, ಜೊತೆಗೆ ತಮ್ಮ ಗ್ರಾಮದಲ್ಲಿ ಯಾವ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ (Money Transfer), ಯಾಕೆ ಆಗಿಲ್ಲ ಎನ್ನುವ ಹಲವು ಮಾಹಿತಿಗಳನ್ನು ಕೂಡ ಸರ್ಕಾರಕ್ಕೆ ಒದಗಿಸಬೇಕು.
ಇನ್ನು ಮಹಿಳೆಯರ ಖಾತೆಗೆ ಹಣ ಬರುವಂತೆ ಮಾಡಲು ಅಂಗನವಾಡಿ ಸಹಾಯಕಿಯರಿಗೂ ಕೂಡ ತಿಳಿಸಲಾಗಿದೆ. ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಗೃಹಲಕ್ಷ್ಮಿ ಹಣ ಬಾರದೆ ಇರುವ ಮಹಿಳೆಯರನ್ನ ಬ್ಯಾಂಕಿಗೆ ಕರೆದುಕೊಂಡು ಹೋಗಿ ಅವರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.
ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ ಆಗದೆ ಇರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಈ ಸಂಬಂಧ ಸರ್ಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಬಹುತೇಕ ಮಹಿಳೆಯರು ಪಡೆದುಕೊಂಡಿದ್ದಾರೆ. ಈವರೆಗೆ ಸಂದಾಯವಾಗಿರುವ 1.17 ಕೋಟಿ ಮಹಿಳೆಯರ ಅರ್ಜಿಗಳ ಪೈಕಿ 1.10 ಕೋಟಿ ಅರ್ಜಿದಾರರಿಗೆ ಹಣ ಸಂದಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಹೊಸ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಪಡಿತರ ಚೀಟಿ ತಿದ್ದುಪಡಿಗೂ ಅವಕಾಶ
ಅಗಸ್ಟ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿ ಇನ್ನೂ ಹಣ ಬಾರದೆ ಇರುವವರಿಗೆ ಸೂಚನೆ!
ಯುವ ನಿಧಿ ಯೋಜನೆ ಹಣ ವರ್ಗಾವಣೆಗೆ ದಿನಾಂಕ ಫಿಕ್ಸ್! ಈ ದಾಖಲೆ ಸಿದ್ಧಪಡಿಸಿಕೊಳ್ಳಿ
ಗೃಹಲಕ್ಷ್ಮಿ ಯೋಜನೆಯ ಆರಂಭವಾಗಿ ನಾಲ್ಕು ತಿಂಗಳು ಕಳೆದಿವೆ. ಈಗಾಗಲೇ ಮೂರು ಕಂತಿನ ಹಣವು ಕೂಡ ವರ್ಗಾವಣೆ ಆಗಿದೆ. ಅಗಸ್ಟ್ 15ನೇ ತಾರೀಖಿನ ಮೊದಲು ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೋ ಅಂತವರ ಖಾತೆಗೆ ಮಿಸ್ ಆಗದಂತೆ 6,000ಗಳನ್ನು ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ಡಿಸೆಂಬರ್ ಅಂತ್ಯದ ಒಳಗೆ ಎಲ್ಲಾ ಮಹಿಳೆಯರಿಗೂ ಕೂಡ ಆರ್ಥಿಕ ಸಬಲೀಕರಣಕ್ಕಾಗಿ ನೀಡಲಾಗುತ್ತಿರುವ ಗೃಹಲಕ್ಷ್ಮಿ ಯೋಜನೆಯ 2,000 ತಲುಪುತ್ತದೆ ಎಂದು ಸಚಿವೆ ಭರವಸೆ ನೀಡಿದ್ದಾರೆ.
If Gruha lakshmi application has been submitted before August 15 here is the big update