ಮಹಿಳೆಯರಿಗೆ ಹೊಸ ಸ್ಕೀಮ್! ಭೂಮಿ ಖರೀದಿಗೆ ಸರ್ಕಾರ ನೀಡುತ್ತೆ 25 ಲಕ್ಷ ಸಬ್ಸಿಡಿ ಸಾಲ

ಸಾಲ (Loan) ಸೌಲಭ್ಯದ ಜೊತೆಗೆ ಸಬ್ಸಿಡಿ (subsidy with loan) ಕೂಡ ನೀಡಲಿದ್ದು ಈ ಯೋಜನೆಯ ಬಗ್ಗೆ ತಿಳಿದುಕೊಂಡು ನೀವು ಅರ್ಹರಾಗಿದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ

Bengaluru, Karnataka, India
Edited By: Satish Raj Goravigere

ತಮ್ಮದೇ ಆದ ಸ್ವಂತ ಆಸ್ತಿ (own property) ಮನೆ ಜಮೀನು ಹೊಂದಿರಬೇಕು ಎನ್ನುವ ಕನಸು ಹಲವರದ್ದು ಆದರೆ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಬೇಕಾಗಿರುವ ಏಕೈಕ ಔಷಧ ಅಂದರೆ ಹಣ (Money).

ಕಾಸಿದ್ರೆ ಕೈಲಾಸ ಎನ್ನುವಂತೆ ಹಣ ಇಲ್ಲದೆ ಯಾವುದು ಸಾಧ್ಯ ಆಗುವುದಿಲ್ಲ. ಹಾಗಾಗಿ ಸ್ವಂತ ಜಮೀನಿನ ಕನಸು ಹಲವರಿಗೆ ಕನಸಾಗಿ ಉಳಿದುಬಿಡುತ್ತದೆ. ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ.

New scheme for women, Government provides 25 lakh subsidy loan for land purchase

ಸ್ವಂತ ಜಮೀನು ಇಟ್ಟುಕೊಳ್ಳಬೇಕು ಎಂದು ಬಯಸುವವರಿಗೆ ಸರ್ಕಾರ ಸಹಾಯಧನ ನೀಡಲು ಮುಂದಾಗಿದೆ. ಸಾಲ (Loan) ಸೌಲಭ್ಯದ ಜೊತೆಗೆ ಸಬ್ಸಿಡಿ (subsidy with loan) ಕೂಡ ನೀಡಲಿದ್ದು ಈ ಯೋಜನೆಯ ಬಗ್ಗೆ ತಿಳಿದುಕೊಂಡು ನೀವು ಅರ್ಹರಾಗಿದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ.

ಗೃಹಲಕ್ಷ್ಮಿ 4ನೇ ಕಂತಿನ ಬಿಗ್ ಅಪ್ಡೇಟ್; ಯೋಜನೆಯಲ್ಲಿ ಹೊಸ ಹೊಸ ಬದಲಾವಣೆಗಳು

ಭೂ ಒಡೆತನ ಯೋಜನೆ! (Karnataka land purchase scheme 2023)

ಭೂ ಒಡೆತನ ಯೋಜನೆ ಅಡಿಯಲ್ಲಿ ಭೂ ರಹಿತ ಮಹಿಳಾ ಕೃಷಿಕರು ತಾವು ವಾಸಿಸುವ ಸ್ಥಳದಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 2 ಎಕರೆ ಖುಷ್ಕ ಅಥವಾ ಒಂದು ಎಕರೆ ತರಿ ಜಮೀನು ಖರೀದಿಸಲು ಸರ್ಕಾರ ಸಹಾಯಧನ (subsidy) ನೀಡುತ್ತದೆ.

ಈ ಸಹಾಯಧನದ ಮೊತ್ತ 25 ಲಕ್ಷ ಹಾಗೂ 20 ಲಕ್ಷ ರೂಪಾಯಿ. ಇದರಲ್ಲಿ 50% ನಷ್ಟು ಫಲಾನುಭವಿಗಳು ಪಾವತಿಸಿದರೆ ಇನ್ನು 50% ನಷ್ಟು ಸರ್ಕಾರ ಸಬ್ಸಿಡಿ ನೀಡುತ್ತದೆ. ಯೋಜನೆಯ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 25 ಲಕ್ಷ ರೂಪಾಯಿಗಳ ಸಾಲ ಹಾಗೂ ಇನ್ನುಳಿದ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿಗಳ ಸಾಲವನ್ನು (Subsidy Loan) ಸರ್ಕಾರ ಮಂಜೂರು ಮಾಡಲಿದೆ.

ಹೊಸ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಪಡಿತರ ಚೀಟಿ ತಿದ್ದುಪಡಿಗೂ ಅವಕಾಶ

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

Subsidy Loan Schemeಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ (income certificate)
ಜಾತಿ ಪ್ರಮಾಣ ಪತ್ರ (cast certificate)
ಅರ್ಜಿದಾರರ ಫೋಟೋ
ಕೃಷಿ ಕಾರ್ಮಿಕರ ದೃಢೀಕರಣ ಪತ್ರ

ಇವಿಷ್ಟು ಮೂಲಭೂತ ದಾಖಲೆಗಳಾಗಿದ್ದು ಹೆಚ್ಚಿನ ಮಾಹಿತಿಯನ್ನು ನೀವು ಆನ್ಲೈನ್ ಪೋರ್ಟಲ್ (online web portal) ನಲ್ಲಿ ತಿಳಿದುಕೊಳ್ಳಬಹುದು.

ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಕೃತ ವೆಬ್ಸೈಟ್ (official website) https://sevasindhu.karnataka.gov.in/Sevasindhu/Kannada?ReturnUrl=%2F ಗೆ ಭೇಟಿ ನೀಡಿ. ಅರ್ಜಿ ಹಾಕುವುದಕ್ಕೂ ಮೊದಲು ನಿಯಮಗಳನ್ನು ತಿಳಿದುಕೊಂಡು ನಂತರ ಅರ್ಜಿ ಫಾರಂ ಭರ್ತಿ ಮಾಡಿ ಸರಿಯಾದ ದಾಖಲೆಗಳನ್ನು ನೀಡಿ.

ನೀವು ಅರ್ಹರಾಗಿದ್ದರೆ ತಕ್ಷಣವೇ ಸಾಲ ಮಂಜೂರಾಗುತ್ತದೆ. ಒಂದು ವೇಳೆ ಅನರ್ಹರು ಎಂದು ಕಂಡುಬಂದರೆ ಸಾಲ ಮಂಜೂರಾತಿಯ ಯಾವುದೇ ಹಂತದಲ್ಲಿ ಸಾಲವನ್ನು ಸ್ಥಗಿತಗೊಳಿಸಬಹುದು.

ಯುವ ನಿಧಿ ಯೋಜನೆ ಹಣ ವರ್ಗಾವಣೆಗೆ ದಿನಾಂಕ ಫಿಕ್ಸ್! ಈ ದಾಖಲೆ ಸಿದ್ಧಪಡಿಸಿಕೊಳ್ಳಿ

ಯೋಜನೆ ಪ್ರಯೋಜನ ಪಡೆದುಕೊಳ್ಳಲು ಯಾರು ಅರ್ಹರು?

ಭೂ ಒಡೆತನ ಯೋಜನೆಯ ಸಾಲ ಸೌಲಭ್ಯವನ್ನು (Loan) ಪಡೆದುಕೊಳ್ಳಲು ಮುಖ್ಯವಾಗಿ ಈ ಕೆಳಗಿನ ನಿಗಮದ ಅಡಿಯಲ್ಲಿ ಬರುವ ಸಮುದಾಯಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೂ ಕೂಡ 2023-24ನೇ ಸಾಲಿನಲ್ಲಿ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಪರಿಶಿಷ್ಟ ಜಾತಿ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಸಮುದಾಯದವರು ಅರ್ಜಿ ಸಲ್ಲಿಸಬಹುದಾಗಿದೆ.

ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (last day to apply) ಡಿಸೆಂಬರ್ 15, 2023. ಕೇವಲ ಐದು ದಿನಗಳು ಮಾತ್ರ ಅವಕಾಶವಿದ್ದು ಅರ್ಹರು ತಕ್ಷಣವೇ ಅರ್ಜಿ ಸಲ್ಲಿಸಿ ಸರ್ಕಾರದ ಸಹಾಯಧನ ಪಡೆದು ಸ್ವಂತ ಜಮೀನು (Own Property) ಖರೀದಿಸಿ.

New scheme for women, Government provides 25 lakh subsidy loan for land purchase