ಗೃಹಲಕ್ಷ್ಮಿ 4ನೇ ಕಂತಿನ ಬಿಗ್ ಅಪ್ಡೇಟ್; ಯೋಜನೆಯಲ್ಲಿ ಹೊಸ ಹೊಸ ಬದಲಾವಣೆಗಳು
ಗೃಹಲಕ್ಷ್ಮಿ ಹಣ ಸರ್ಕಾರದಿಂದ ಜಮಾ ಆಗಿದ್ದರೂ ಕೂಡ ಬ್ಯಾಂಕ್ನಿಂದ (Bank) ಮಹಿಳೆಯರ ಖಾತೆಗೆ ಹಣ ಜಮಾ (Money Deposit) ಆಗದೇ ಇರಬಹುದು
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಆರಂಭವಾದಾಗ ಮಹಿಳೆಯರಿಗೆ ಎಷ್ಟು ಖುಷಿ ಕೊಟ್ಟಿತ್ತೋ ಈಗ ರಾಜ್ಯದ ಜನತೆಗೆ ಅಷ್ಟೇ ಅಸಮಾಧಾನ ಕೂಡ ಮೂಡಿಸಿದೆ, ಇದಕ್ಕೆ ಮುಖ್ಯ ಕಾರಣ ಗೃಹಲಕ್ಷ್ಮಿ ಯೋಜನೆಯ ಆರಂಭವಾಗಿ ನಾಲ್ಕು ತಿಂಗಳುಗಳು ಕಳೆದಿವೆ ಮೂರು ಕಂತಿನ ಹಣವೂ ಕೂಡ ಬಿಡುಗಡೆ ಆಗಿದೆ. ಆದರೆ ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾವಣೆ (Money Transfer) ಆಗಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ, ಇಲ್ಲ…
ಹೌದು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ತಮ್ಮ ಖಾತೆಗೆ ಬರುತ್ತದೆ ಎಂದು ಕಾದು ಕಾದು ಸುಸ್ತಾಗಿದ್ದಾರೆ. ಬಹುತೇಕರು ಈ ಹಣ ನಮ್ಮ ಖಾತೆಗೆ ಬರುವುದೇ ಇಲ್ಲವೇನೋ ಎಂದು ನಿರೀಕ್ಷೆಯನ್ನು ಕೈಬಿಟ್ಟಿದ್ದಾರೆ.
ಹೊಸ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಪಡಿತರ ಚೀಟಿ ತಿದ್ದುಪಡಿಗೂ ಅವಕಾಶ
ಪ್ರತಿ ಬಾರಿ ಸಚಿವ ಸಂಪುಟ ಸಭೆ ನಡೆಸುವ ಸಿಎಂ (CM siddaramaiah) ಸಿದ್ದರಾಮಯ್ಯ ನೇತೃತ್ವದ ತಂಡ ಗೃಹಲಕ್ಷ್ಮಿ ಯೋಜನೆಯ ಫಲಿತಾಂಶವನ್ನು ಪರಿಶೀಲಿಸಿ ಯಾರ ಖಾತೆಗೆ (Bank Account) ಹಣ ವರ್ಗಾವಣೆ ಆಗಲಿಲ್ಲವೋ ಅಂತವರಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆಯೆ ಹೊರತು ಖಾತೆಯಲ್ಲಿ ಇರುವ ಎಲ್ಲಾ ತಾಂತ್ರಿಕ ದೋಷಗಳನ್ನು (technical error) ಕೂಡ ಪರಿಹರಿಸಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವಲ್ಲಿ ಮಾತ್ರ ವಿಫಲವಾಗುತ್ತಿದೆ ಸರ್ಕಾರ.
ಈ ಒಂದು ಮಾರ್ಗದ ಮೂಲಕ ಹಣ ವರ್ಗಾವಣೆಗೆ ಪ್ರಯತ್ನ!
ಮಹಿಳೆಯರ ಖಾತೆಯಲ್ಲಿ ಯಾಕೆ ಸಮಸ್ಯೆ ಉಂಟಾಗಿದೆ ಎಂಬುದನ್ನ ಕಂಡು ಹಿಡಿಯಲು ಕೂಡ ಸಾಧ್ಯವಾಗುತ್ತಿಲ್ಲ. ಸರ್ಕಾರ ಹೇಳಿರುವ ಪ್ರಕಾರ ಸಾಕಷ್ಟು ಮಹಿಳೆಯರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ (Aadhar Card link) ಆಗಿಲ್ಲ.
ಆದರೆ ಮಹಿಳೆಯರು ಹೇಳುವ ಪ್ರಕಾರ ತಾವು ಸ್ವತಃ ಬ್ಯಾಂಕ್ ಗೆ ಹೋಗಿ ಲಿಂಕ್ ಮಾಡಿಸಿಕೊಂಡಿದ್ದೇವೆ. ಆದರೆ ಸರ್ವರ್ ಸಮಸ್ಯೆ (server problem) ಯಿಂದಾಗಿ ಈ ಲಿಂಕ್ ಪ್ರಕ್ರಿಯೆ ಪೂರ್ಣಗೊಳ್ಳದೆ ಇರಬಹುದು ಇದೇ ಕಾರಣಕ್ಕೆ ಸರ್ಕಾರದಿಂದ ಹಣ ಜಮಾ ಆಗಿದ್ದರೂ ಕೂಡ ಬ್ಯಾಂಕ್ನಿಂದ ಮಹಿಳೆಯರ ಖಾತೆಗೆ ಹಣ ಜಮಾ (Money Deposit) ಆಗದೇ ಇರಬಹುದು.
ಯುವ ನಿಧಿ ಯೋಜನೆ ಹಣ ವರ್ಗಾವಣೆಗೆ ದಿನಾಂಕ ಫಿಕ್ಸ್! ಈ ದಾಖಲೆ ಸಿದ್ಧಪಡಿಸಿಕೊಳ್ಳಿ
ಇದೆಲ್ಲವನ್ನೂ ಪರಿಶೀಲಿಸುತ್ತಿರುವ ಸರ್ಕಾರ ಇದೀಗ ಒಂದು ವೇಳೆ ಮನೆಯ ಯಜಮಾನಿಯ ಖಾತೆಗೆ ಹಣ ಬಾರದೆ ಇದ್ದಲ್ಲಿ ಮನೆಯ ಎರಡನೇ ಸದಸ್ಯ ಅಥವಾ ಮನೆಯ ಯಜಮಾನನ ಖಾತೆಗೆ ಹಣ ವರ್ಗಾವಣೆ ಮಾಡಲು ತೀರ್ಮಾನಿಸಿದೆ.
ಹೌದು, ಇನ್ನು ಮುಂದೆ ಮನೆಯ ಯಜಮಾನಿಯ ಖಾತೆಗೆ ಹಣ ಬಾರದೆ ಇದ್ದರೂ ಗೃಹಲಕ್ಷ್ಮಿ ಯೋಜನೆಯ ಹಣ ಮನೆಯ ಯಜಮಾನನ ಖಾತೆ ಸೇರುವ ಸಾಧ್ಯತೆ ಇದೆ.
ಮತ್ತೆ ಅರ್ಜಿ ಸಲ್ಲಿಸಬೇಕೆ?
ಮನೆಯ ಎರಡನೇ ಸದಸ್ಯ ಅಥವಾ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿಯ ನಂತರ ಯಾರ ಹೆಸರು ಇರುತ್ತದೆಯೋ ಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರಿಗೆ ತಾವು ಇದಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕೆ ಎನ್ನುವ ಗೊಂದಲ ಆರಂಭವಾಗಿದೆ.
ಮನೆಯ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿದ್ದರೆ ಸರ್ಕಾರದ ಬಳಿಯೇ ಎಲ್ಲ ಡಾಟಾ ಇರುತ್ತದೆ. ಇದು ಎರಡನೇ ಸದಸ್ಯನ ಖಾತೆಗೆ ಹಣ ವರ್ಗಾವಣೆ ಆಗಲಿ ಅಂಥವರ ಬ್ಯಾಂಕ್ ಖಾತೆ ಈ ಕೆ ವೈ ಸಿ (EKYC) ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ
ಸೈಟ್ ಹಾಗೂ ನಿವೇಶನ ಹಂಚಿಕೆ, ಅತಿ ಕಡಿಮೆ ದರದಲ್ಲಿ ಗೃಹ ಮಂಡಳಿಯಿಂದ ಅರ್ಜಿ ಆಹ್ವಾನ
ಜೊತೆಗೆ ನಿಮ್ಮ ಬ್ಯಾಂಕ್ ಅಕೌಂಟ್ active ಆಗಿರುವಂತೆ ನೋಡಿಕೊಳ್ಳಿ. ಇಷ್ಟು ಮಾಡಿದ್ರೆ ಇನ್ನು ಮುಂದಿನ ತಿಂಗಳಿನಿಂದ ಬಿಡುಗಡೆ ಆಗುವ ಗೃಹಲಕ್ಷ್ಮಿ ಯೋಜನೆಯ ಹಣ ಮನೆಯ ಯಜಮಾನಿಯ ಖಾತೆಗೆ ಬಾರದೆ ಇದ್ದರೂ ಯಜಮಾನನ ಖಾತೆಗೆ (Bank Account) ಜಮಾ ಆಗಬಹುದು.
ಗೃಹಲಕ್ಷ್ಮಿ ಯೋಜನೆಯ ಹಣ ಮಾತ್ರವಲ್ಲದೆ ಅನ್ನಭಾಗ್ಯ ( AnnaBhagya scheme)! ಯೋಜನೆಯ ಹಣ ವರ್ಗಾವಣೆ ಆಗದೆ ಇದ್ದರೂ ಕೂಡ ಇನ್ನು ಮುಂದೆ ಮನೆಯ ಎರಡನೇ ಸದಸ್ಯರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವು ವರ್ಗಾವಣೆ ಆಗಲಿದೆ.
Gruha lakshmi 4th Installment Big Update, New changes in the Scheme