Karnataka NewsBangalore News

ಹೊಸ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಪಡಿತರ ಚೀಟಿ ತಿದ್ದುಪಡಿಗೂ ಅವಕಾಶ

ಗೃಹಲಕ್ಷ್ಮಿ ಯೋಜನೆ (Gruha lakshmi scheme) 2,000 ರೂಪಾಯಿಗಳನ್ನು ಪಡೆದುಕೊಳ್ಳುವುದಕ್ಕಾಗಲಿ ಅಥವಾ ಅನ್ನಭಾಗ್ಯ ಯೋಜನೆಯ (Annabhagya Yojana) ಹಣವು ನಿಮ್ಮ ಖಾತೆಗೆ ಡಿಬಿಟಿ (DBT ) ಆಗುವುದಕ್ಕಾಗಲಿ ಮುಖ್ಯವಾಗಿ ರೇಷನ್ ಕಾರ್ಡ್ (Ration card) ಬೇಕಾಗಿರುತ್ತದೆ.

ಹಾಗಾಗಿ ರೇಷನ್ ಕಾರ್ಡ್ ಹೊಂದಿರುವವರು ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಇದೇ ಕಾರಣಕ್ಕೆ ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅಂತವರು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ.

Big Update on New BPL Ration Card Application Submission, Here is the information

ಎರಡು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಹೊಸ ಪಡಿತರ ಚೀಟಿ (application for new ration card) ಪಡೆದುಕೊಳ್ಳಲು ಅರ್ಜಿಗಳು ಸಂದಾಯವಾಗಿವೆ ಇತ್ತೀಚಿನ ದಿನಗಳಲ್ಲಿಯೂ ಕೂಡ ವಿಶೇಷ ಸಂದರ್ಭಗಳಲ್ಲಿ ಬಳಸಬಹುದಾದಂತಹ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿತ್ತು.

ಯುವ ನಿಧಿ ಯೋಜನೆ ಹಣ ವರ್ಗಾವಣೆಗೆ ದಿನಾಂಕ ಫಿಕ್ಸ್! ಈ ದಾಖಲೆ ಸಿದ್ಧಪಡಿಸಿಕೊಳ್ಳಿ

ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ! (Applications for new ration card)

ಹೊಸ ಪಡಿತರ ಹಾಗೂ ಪಡಿತರ ಚೀಟಿಯಲ್ಲಿನ ತಿದ್ದುಪಡಿ (ration card correction) ಸೇರಿ ರಾಜ್ಯ ಆಹಾರ ಇಲಾಖೆಗೆ (food department) ಸುಮಾರು ಮೂರು ಲಕ್ಷದಷ್ಟು ಅರ್ಜಿಗಳು ಸಂದಾಯವಾಗಿದ್ದವು.

ಅದು ಅಲ್ಲದೆ ಇತ್ತೀಚಿನ ದಿನಗಳಲ್ಲಿ ವಾರದಲ್ಲಿ ಒಂದು ದಿನ ಎರಡು ದಿನ ಹೀಗೆ ಬೇರೆ ಬೇರೆ ಸಮಯಗಳನ್ನು ನಿಗದಿಪಡಿಸಿ ಜಿಲ್ಲಾವಾರು ವಿಭಾಗಗಳನ್ನು ಮಾಡಿ ಆರೋಗ್ಯ ಕಾರಣಕ್ಕೆ ಬಿಪಿಎಲ್ ಕಾರ್ಡ್ (BPL card) ಪಡೆದುಕೊಳ್ಳಲು ಹಾಗೂ ಎಪಿಎಲ್ ಕಾರ್ಡ್ (APL Card) ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಇಷ್ಟು ಕಡಿಮೆ ಕಾಲಾವಕಾಶದಲ್ಲಿ ಸರಕಾರಕ್ಕೆ ಮತ್ತೆ ಒಂದು ಲಕ್ಷ ಹೊಸ ಪಡಿತರ ಹಾಗೂ ತಿದ್ದುಪಡಿಗಾಗಿ ಅರ್ಜಿ ಸಲ್ಲಿಕೆಯಾಗಿದೆ.

ಈಗ ಒಟ್ಟಾರೆ ಸರ್ಕಾರದಲ್ಲಿ ಇರುವ ಪಡಿತರ ಅರ್ಜಿಗಳ ಪೈಕಿ ಸರ್ಕಾರ ಸಾರಾಸಗಟಾಗಿ ಒಂದು ಲಕ್ಷ ಅರ್ಜಿಗಳನ್ನು ತಿರಸ್ಕರಿಸಿದೆ.

ಸೈಟ್ ಹಾಗೂ ನಿವೇಶನ ಹಂಚಿಕೆ, ಅತಿ ಕಡಿಮೆ ದರದಲ್ಲಿ ಗೃಹ ಮಂಡಳಿಯಿಂದ ಅರ್ಜಿ ಆಹ್ವಾನ

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್!

Ration Cardಒಂದಷ್ಟು ಅರ್ಜಿಗಳು ತಿರಸ್ಕಾರಗೊಂಡಿದ್ದರು ಕೂಡ ಇನ್ನೂ ಒಂದಷ್ಟು ಅರ್ಜಿಗಳನ್ನು ಪರಿಶೀಲಿಸಿ ಅವುಗಳ ವಿತರಣೆಗೆ ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸುಮಾರು 25 ಸಾವಿರ ಹೊಸ ಪಡಿತರ ಮತ್ತು ತಿದ್ದುಪಡಿ ಅರ್ಜಿಗಳನ್ನು ಸರ್ಕಾರ ಮಾನ್ಯ ಮಾಡಿದೆ.

ಹಾಗಾಗಿ ರಾಜ್ಯಾದ್ಯಂತ ಸದ್ಯದಲ್ಲಿಯೇ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಕಾದು ಕುಳಿತವರಿಗೆ ಪಡಿತರ ಚೀಟಿ ಸಿಗಲಿದೆ. 25 ಸಾವಿರ ಮಾನ್ಯವಾಗಿರುವ ಅರ್ಜಿಗಳಲ್ಲಿ ಹೊಸ ಬಿಪಿಎಲ್ ಕಾರ್ಡ್ ಹೊಸ ಎಪಿಎಲ್ ಕಾರ್ಡ್ ಹಾಗೂ ಹೀಗಿರುವ ಪಡಿತರ ಚೀಟಿಯ ತಿದ್ದುಪಡಿ ಅರ್ಜಿಗಳು ಸೇರಿವೆ.

ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ಬೇರೆ ಸಂಖ್ಯೆಯ ಪಡಿತರ ಚೀಟಿ ಒದಗಿಸಲಾಗುತ್ತದೆ. ಉದಾಹರಣೆಗೆ ಬೆಳಗಾವಿ ಜಿಲ್ಲೆಗೆ 5 ಸಾವಿರದಷ್ಟು ಹೊಸ ಪಡಿತರ ಚೀಟಿ ಅರ್ಜಿಗಳು ಓಕೆ ಆಗಿದ್ದರೆ ಕಲಬುರ್ಗಿಯಲ್ಲಿ 3000 ದಷ್ಟು ಪಡಿತರ ಚೀಟಿ ವಿತರಣೆ ಮಾಡಲಾಗುವುದು. ಅದೇ ರೀತಿ ಉತ್ತರ ಕನ್ನಡಕ್ಕೆ ಒಂದೂವರೆ ಸಾವಿರದಷ್ಟು ಅರ್ಜಿ ಮಾನ್ಯವಾಗಿದೆ.

ಮುದ್ದೆ ಪ್ರಿಯರಿಗೆ ಸಿಹಿಸುದ್ದಿ! ಇಂದಿರಾ ಕ್ಯಾಂಟೀನ್ ನಲ್ಲಿ ಇನ್ಮುಂದೆ ಸಿಗಲಿದೆ ರಾಗಿಮುದ್ದೆ

ನಿಮ್ಮ ಪಡಿತರ ಚೀಟಿ ಅರ್ಜಿ ಸ್ಟೇಟಸ್ ಚೆಕ್ ಮಾಡಿ! (Check your Ration card application status)

ಯಾರ್ಯಾರಿಗೆ ಪಡಿತರ ಚೀಟಿ ಸಿಗಲಿದೆ, ಯಾರ ಅಪ್ಲಿಕೇಶನ್ಗಳು ಮಾನ್ಯವಾಗಿವೆ ಎಂಬುದನ್ನು ತಿಳಿದುಕೊಳ್ಳಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಹಾಲಿ /ಚಾಲ್ತಿಯಲ್ಲಿರುವ ಪಡಿತರ ಚೀಟಿ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಒಟ್ಟಿನಲ್ಲಿ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಅರ್ಜಿಗಳಲ್ಲಿ ಒಂದಷ್ಟು ಅರ್ಜಿಗಳನ್ನು ಸರ್ಕಾರ ಮಾನ್ಯ ಮಾಡಿದ್ದು ಸದ್ಯದಲ್ಲಿ ಅವುಗಳ ವಿತರಣೆ ಮಾಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಗೃಹಲಕ್ಷ್ಮಿ ಯೋಜನೆ ಬಿಟ್ಟು ₹30,000 ಸಿಗುವ ಹೊಸ ಯೋಜನೆಗೆ ಮುಗಿಬಿದ್ದ ಮಹಿಳೆಯರು!

Date fixed for issue of new ration card, correction is also allowed

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories