ಮುದ್ದೆ ಪ್ರಿಯರಿಗೆ ಸಿಹಿಸುದ್ದಿ! ಇಂದಿರಾ ಕ್ಯಾಂಟೀನ್ ನಲ್ಲಿ ಇನ್ಮುಂದೆ ಸಿಗಲಿದೆ ರಾಗಿಮುದ್ದೆ
ಕರ್ನಾಟಕ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ (Indira canteen) ಬಹಳ ಫೇಮಸ್ ಆಗಿದೆ. ಬಡವರು ಅತಿ ಕಡಿಮೆ ಬೆಲೆಗೆ ಬೆಳಗಿನ ಉಪಹಾರ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಮಾಡಲು ಇಂದಿರಾ ಕ್ಯಾಂಟೀನ್ ಅನ್ನು ಕಾಂಗ್ರೆಸ್ ಸರ್ಕಾರ (Congress government) ಆರಂಭಿಸಿತ್ತು. ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಪುನರಾರಂಭಿಸಿದೆ.
ಗೃಹಲಕ್ಷ್ಮಿ ಯೋಜನೆ ಬಿಟ್ಟು ₹30,000 ಸಿಗುವ ಹೊಸ ಯೋಜನೆಗೆ ಮುಗಿಬಿದ್ದ ಮಹಿಳೆಯರು!
ಇಂದಿರಾ ಕ್ಯಾಂಟೀನ್ ನಲ್ಲಿ ಬದಲಾಗಲಿದೆ ಮೆನು (Indira canteen new food menu)
ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಹಾಗೂ ಊಟಕ್ಕೆ ಕೊಡುವ ಆಹಾರಗಳ ಮೆನು ಲಿಮಿಟ್ ಆಗಿದೆ. ಅಂದರೆ ನೀವು ಬೇರೆ ಹೋಟೆಲ್ಗಳಲ್ಲಿ ಇರುವಂತೆ ಹೆಚ್ಚು ಆಹಾರಗಳ ಆಯ್ಕೆ ಇರುವುದಿಲ್ಲ ಆದರೆ ಇದೀಗ ಇಂದಿರಾ ಕ್ಯಾಂಟೀನ್ ಮೆನು ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿ (BBMP) ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ನಲ್ಲಿ (Indira canteen) ಸಂಕ್ರಾಂತಿಯ ನಂತರ ಅಂದರೆ ಜನವರಿ 2024ರ ಆಸುಪಾಸಿನಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಸೇವಿಸುವವರಿಗೆ ರಾಗಿ ಮುದ್ದೆ ಕೂಡ ನೀಡಲು ತೀರ್ಮಾನಿಸಲಾಗಿದೆ
ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೆ ರಾಗಿ ಮುದ್ದೆ ಕೊಡುವ ಸಾಧ್ಯತೆ ಇದೆ. ಆದರೆ ಈ ಹೊಸ ಮೆನು ಕೊಡಲು ನಿರ್ವಹಣೆ ಸಮಸ್ಯೆ (maintenance problem) ಉಂಟಾಗುವುದರಿಂದ ಸರ್ಕಾರ ಟೆಂಡರ್ ಇಡುವ ಬಗ್ಗೆ ಚಿಂತನೆ ನಡೆಸಿದೆ.
ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆಗೆ ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ!
ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳು ಬಂದ್! (Indira canteen closes in Mysore)
ನಿರ್ವಹಣೆಯ ಕೊರತೆಯಿಂದಾಗಿ (maintenance problem) ಮೈಸೂರಿನ ಬನ್ನಿಮಂಟಪ ಮತ್ತು ಉದಯಗಿರಿಯಲ್ಲಿರುವ ಎರಡು ಕ್ಯಾಂಟೀನ್ ಗಳನ್ನು ಕಳೆದ ಎರಡು ತಿಂಗಳಿನಿಂದ ಮುಚ್ಚಲಾಗಿದೆ.
ಈ ರೀತಿ ನಿರ್ವಹಣೆ ಸಮಸ್ಯೆ ಬಹುತೇಕ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿಯೂ ಕೂಡ ಕಂಡುಬರುತ್ತದೆ, ಇದೇ ಕಾರಣಕ್ಕೆ ಸರ್ಕಾರ ನಿರ್ವಹಣೆಗಾಗಿ ಟೆಂಡರ್ (tender for maintenance) ಕರೆಯುವ ಸಾಧ್ಯತೆ ಇದೆ.
ಈಗಾಗಲೇ ಇಂದಿರಾ ಕ್ಯಾಂಟೀನ್ ಪುನರಾರಂಭಗೊಂಡಾಗ ಹೊಸ ಗುತ್ತಿಗೆದಾರರು ಇಂದಿರಾ ಕ್ಯಾಂಟೀನ್ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದರು ಆದರೆ ಅವರು ಸರಿಯಾಗಿ ನಿರ್ವಹಣೆ ಮಾಡದೇ ಇರುವ ಸಲುವಾಗಿ ನಮಗೆ ಕ್ಯಾಂಟೀನ್ ನಲ್ಲಿ ಕಾರ್ಯನಿರ್ವಹಿಸಲು ಸಂಬಳವೂ ಸಿಗುತ್ತಿಲ್ಲ ಎಂದು ಮುಚ್ಚಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ಮಹಿಳೆ ಒಬ್ಬರು ತಿಳಿಸಿದ್ದಾರೆ.
ಸ್ವಂತ ಜಮೀನು ಹೊಂದಿರುವ ರೈತರಿಗೆ ಸಿಹಿ ಸುದ್ದಿ! ಸಿಗಲಿದೆ ಡಿಜಿಟಲ್ ಜಮೀನು ಪತ್ರ
ಇಂದಿರಾ ಕ್ಯಾಂಟೀನ್ ಇನ್ನೂ ಸರಿಯಾಗಿ ನಿರ್ವಹಣೆ ಆಗಬೇಕು ಅಂದರೆ ಅದಕ್ಕೆ ಹೊಸ ಗುತ್ತಿಗೆದಾರರನ್ನು ಸರ್ಕಾರ ಹುಡುಕಬೇಕು. ಇಲ್ಲವಾದಲ್ಲಿ ದಿನದಿಂದ ದಿನಕ್ಕೆ ನಿರ್ವಹಣೆ ಸಮಸ್ಯೆಯಿಂದಾಗಿ ಇಂದಿರಾ ಕ್ಯಾಂಟೀನ್ ಮತ್ತೆ ಮುಚ್ಚುವ ಸಾಧ್ಯತೆ ಇದೆ.
2017ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರ ಕಾರ್ಮಿಕ ವರ್ಗದವರಿಗೆ ಅತಿ ಕಡಿಮೆ ಬೆಲೆಗೆ ಆಹಾರ ಒದಗಿಸುವ ಸಲುವಾಗಿ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿದರು.
ಆದರೆ 2018ರಲ್ಲಿ ಸರ್ಕಾರ ಬದಲಾದ ನಂತರ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಬೇಕಾದ ಹಣಕಾಸು ಕೊರತೆಯಿಂದ ಕ್ಯಾಂಟೀನ್ ಸ್ಥಗಿತಗೊಳಿಸಬೇಕಾಯಿತು. ಈಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮತ್ತೆ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿದೆ.
ಸಾಕಷ್ಟು ಲೋಪದೋಷದ ನಡುವೆಯೂ ಕೂಡ ಸಿಎಂ ಸಿದ್ದರಾಮಯ್ಯ ಅವರು ಆರಂಭಿಸಿದ 175 ಕ್ಯಾಂಟೀನ್‌ಗಳಲ್ಲಿ 163 ಕ್ಯಾಂಟೀನ್ ಗಳು ಇನ್ನೂ ಕಾರ್ಯನಿರ್ವಹಿಸುತ್ತವೆ ಎನ್ನುವ ಮಾಹಿತಿ ಇದೆ. ಒಟ್ಟಿನಲ್ಲಿ ಸದ್ಯ ಇಂದಿರಾ ಕ್ಯಾಂಟೀನ್ ನಿರ್ವಹಣೆ ಜವಾಬ್ದಾರಿಯನ್ನು ಸರಿಯಾದ ಟೆಂಡರ್ ಮೂಲಕ ಗುತ್ತಿಗೆದಾರರಿಗೆ ಸರ್ಕಾರ ವಹಿಸಿಕೊಟ್ಟರೆ ಆದಷ್ಟು ಹೊಸ ಮೆನು ಕೂಡ ಆಹಾರ ಸೇವಿಸುವವರಿಗೆ ಲಭ್ಯವಾಗಬಹುದು.
ಗೃಹಲಕ್ಷ್ಮಿ ಹಣ ಕೊನೆಗೂ ಸಿಗದೇ ಇದ್ರೆ, ನಿಮ್ಮ ಗಂಡನ ಖಾತೆಗೆ ಬರುವಂತೆ ಮಾಡಿಕೊಳ್ಳಿ!
Ragi Mudde will be available at Indira Canteen from now on