ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣವನ್ನು ಎಲ್ಲಾ ಫಲಾನುಭವಿ ಗೃಹಿಣಿಯರ ಖಾತೆಗೆ (Bank Account) ಜಮಾ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಒಂದು ವೇಳೆ ಮಹಿಳೆಯ ಖಾತೆಗೆ ಜಮಾ ಮಾಡಲು ಸಾಧ್ಯವಾಗದೇ ಇದ್ದರೆ ಆ ಕುಟುಂಬದ ಪುರುಷ ಸದಸ್ಯನ ಖಾತೆಗೆ ವರ್ಗಾವಣೆ ಮಾಡಲು ಹೊಸ ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸಂಪುಟ ಸಚಿವ ಸಭೆ ನಡೆಸಿದ್ದಾರೆ, ಇದರಲ್ಲಿ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಡಿ DBT ಮಾಡುವ ಕುರಿತು ಸಾಕಷ್ಟು ಚರ್ಚೆ ನಡೆಸಲಾಗಿದೆ.
20,000 ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಗ್ರೀನ್ ಸಿಗ್ನಲ್; ನಿಮ್ಮ ಹೆಸರು ಇದೆಯಾ ನೋಡಿಕೊಳ್ಳಿ
ಅಲ್ಲದೆ ಇದುವರೆಗೆ ಮಹಿಳೆಯರ ಖಾತೆಗೆ ಯಾಕೆ ಹಣ ವರ್ಗಾವಣೆ (Money Transfer) ಆಗುತ್ತಿಲ್ಲ ಎನ್ನುವ ಬಗ್ಗೆ ತಲೆಕೆಡಿಸಿಕೊಂಡಿರುವ ಸರ್ಕಾರ ಕೊನೆಗೂ ಒಂದು ಪರಿಹಾರವನ್ನ ಸೂಚಿಸಿದೆ ಎಂದು ಹೇಳಬಹುದು.
ಸಂಪುಟ ಸಭೆಯಲ್ಲಿ ನಡೆದ ವಿಚಾರದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (minister Lakshmi hebbalkar) ಮಾಹಿತಿ ನೀಡಿದ್ದಾರೆ.
ಮನೆಯ 2ನೇ ಸದಸ್ಯ ಖಾತೆಗೆ ಹಣ ವರ್ಗಾವಣೆ (DBT to second senior member)
ಇಂತಹ ಮಹಿಳೆಯರಿಗೆ ಸಿಗುತ್ತೆ ಉಚಿತ ₹6,000 ರೂಪಾಯಿ; ಸರ್ಕಾರದ ಮಹತ್ವದ ಯೋಜನೆ
ಗೃಹಲಕ್ಷ್ಮಿ ಯೋಜನೆ ಆರಂಭವಾಗಿರುವುದು ಮನೆಯ ಹಿರಿಯ ಮಹಿಳಾ ಸದಸ್ಯರ ಖಾತೆಗೆ ಹಣ ವರ್ಗಾವಣೆ ಮಾಡುವುದಕ್ಕಾಗಿ. ಇಲ್ಲಿ ತಾಯಂದಿರು ಅಥವಾ ಅತ್ತೆಯಂದಿರು ಫಲಾನುಭವಿಗಳಾಗಿರುತ್ತಾರೆ.
ಆದರೆ ಅಂತವರ ಖಾತೆಗೆ ಹಣ ಜಮಾ ಮಾಡಲು (Money Deposit) ಸಾಧ್ಯವಾಗುತ್ತಿಲ್ಲ, ಇದಕ್ಕೆ ಕಾರಣ ಹಲವು ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಆಗುತ್ತಿಲ್ಲ. ಸರ್ಕಾರದಿಂದ ಹಣ ಜಮಾ ಆಗಿದ್ದರು ಕೂಡ ಇಂಥವರ ಖಾತೆಗೆ ಮಾತ್ರ ಹಣ ಬಂದು ತಲುಪುತ್ತಿಲ್ಲ
ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಸರ್ಕಾರ ಈಗ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಒಂದು ವೇಳೆ ಕುಟುಂಬದ ಮೊದಲ ಮಹಿಳಾ ಸದಸ್ಯ ಖಾತೆಗೆ (Bank Account) ಹಣ ವರ್ಗಾವಣೆ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಎರಡನೇ ಹಿರಿಯ ಸದಸ್ಯ ಖಾತೆಗೆ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.
ಏಕಾಏಕಿ ಪುರುಷ ಸದಸ್ಯರ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಮತ್ತೊಬ್ಬ ಮಹಿಳೆ ಇದ್ದರೆ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ, ಇಲ್ಲದೆ ಇದ್ದಲ್ಲಿ ಆಗ ಮನೆಯ ಯಜಮಾನ ಅಥವಾ ಮನೆಯ ಹಿರಿಯ ಪುರುಷ ಸದಸ್ಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಇಂಥವರ ಬಳಿ ಬಿಪಿಎಲ್ ಕಾರ್ಡ್ ಇದ್ರೂ ವೇಸ್ಟ್, ಇನ್ಮುಂದೆ ಸಿಗಲ್ಲ ಯಾವುದೇ ಯೋಜನೆ ಹಣ
ಅನ್ನಭಾಗ್ಯ ಯೋಜನೆಗೂ ಇದೆ ನೀತಿ ಜಾರಿ!
ಕೇವಲ ಗೃಹಲಕ್ಷ್ಮಿ ಯೋಜನೆಯಲ್ಲಿ ಮಾತ್ರವಲ್ಲ ಅನ್ನಭಾಗ್ಯ (Annabhagya Yojana) ಯೋಜನೆಯಲ್ಲೇ DBT ಮಾಡುವಲ್ಲಿಯೂ ಕೂಡ ಸಮಸ್ಯೆ ಉಂಟಾಗಿದ್ದು, ಯಜಮಾನನ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ
ಒಂದು ವೇಳೆ ಈ ಸಮಸ್ಯೆ ಇದ್ದಲ್ಲಿ ಅಂತಹ ಕುಟುಂಬದ ಹಿರಿಯ ಎರಡನೇ ಸದಸ್ಯರ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಎರಡನೇ ಸದಸ್ಯರ ಬ್ಯಾಂಕ್ ಖಾತೆ ಅಪ್ಡೇಟ್ (Bank Account update) ಆಗಿರಬೇಕು ಆಧಾರ್ ಲಿಂಕ್ ಕೆವೈಸಿ (KYC) ಪ್ರಕ್ರಿಯೆ ಮುಗಿದಿರಬೇಕು
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಕುರಿತು ರಾತ್ರೋರಾತ್ರಿ ಹೊಸ ಅಪ್ಡೇಟ್
ಗೃಹಲಕ್ಷ್ಮಿ ಅದಾಲತ್ ಆರಂಭವಾಗಿದ್ದೇ ನಿಮಗಾಗಿ!
ಇದೇ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಮಹಿಳೆಯ ಖಾತೆಗೆ ಸಂದಾಯವಾಗಿಲ್ಲವೋ ಅಂತಹ ಮಹಿಳೆ ನೇರವಾಗಿ ಗ್ರಾಮ ಪಂಚಾಯಿತಿಗೆ ಹೋಗಿ ಗೃಹಲಕ್ಷ್ಮಿ ಅದಾಲತ್ ಅಡಿಯಲ್ಲಿ ದೂರು ಸಲ್ಲಿಸಬಹುದು.
ಇದನ್ನು ಗ್ರಾಮ ಪಂಚಾಯತ್ (Gram panchayat) ಸಿಬ್ಬಂದಿಗಳು ಗಂಭೀರವಾಗಿ ಪರಿಗಣಿಸಿ ಸ್ವತಃ ತಾವೇ ಖುದ್ದಾಗಿ ಮಹಿಳೆಯ ಖಾತೆಗೆ ಯಾಕೆ ಹಣ ಜಮಾ ಆಗಿಲ್ಲ ಎಂಬುದನ್ನು ಪರಿಶೀಲಿಸಬೇಕು ಹಾಗೂ ಅವರ ಖಾತೆಗೆ ಹಣ ವರ್ಗಾವಣೆ ಮಾಡಲು ಸಹಕರಿಸಬೇಕು.
ಅದೇ ರೀತಿ ಅಂಗನವಾಡಿ ಸಹಾಯಕಿಯರು ಪ್ರತಿ ಮನೆಮನೆಗೂ ತೆರಳಿ ಹಣ ಜಮಾ ಆಗದೆ ಇರುವ ಮಹಿಳೆಯರ ಜೊತೆಗೆ ಅವರ ಬ್ಯಾಂಕಿಗೆ ಹೋಗಿ ಬ್ಯಾಂಕ್ ನಲ್ಲಿ ಇರುವ ಖಾತೆಯ ಸಮಸ್ಯೆಯನ್ನು ಪರಿಹರಿಸುವಲ್ಲಿ ನೆರವಾಗಬೇಕು.
ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಮೂರು ಕಂತಿನ ಹಣ ಪ್ರತಿಯೊಬ್ಬ ಫಲಾನುಭವಿ ಖಾತೆಗೆ ಜಮಾ ಆಗಬೇಕು ಎನ್ನುವುದು ಸರಕಾರದ ಉದ್ದೇಶ. ಕನಿಷ್ಠ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗುವ ಸಂದರ್ಭದಲ್ಲಿ ಇಂತಹ ಯಾವುದೇ ಸಮಸ್ಯೆ ಇಲ್ಲದೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೂ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಸಂದಾಯ ಆಗಬಹುದೇ ಎಂಬುದನ್ನು ಕಾದು ನೋಡಬೇಕು.
ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಸಿಹಿ ಸುದ್ದಿ, ಇನ್ಮುಂದೆ ಇನ್ನಷ್ಟು ಉಚಿತ ಸೇವೆ
If you don’t get Gruha Lakshmi Scheme money, get it in your husband Bank account
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.