ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಸಿಹಿ ಸುದ್ದಿ, ಇನ್ಮುಂದೆ ಇನ್ನಷ್ಟು ಉಚಿತ ಸೇವೆ

ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ (BPL card) ಇರುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (aayushman Bharat health card) ಅನ್ನು ಕೂಡ ನೀಡಲಾಗುತ್ತಿದೆ

Bengaluru, Karnataka, India
Edited By: Satish Raj Goravigere

ಪ್ರತಿಯೊಬ್ಬರಿಗೂ ಆರೋಗ್ಯ (health) ಅನ್ನೋದು ಬಹಳ ಮುಖ್ಯವಾಗಿರುವ ವಿಚಾರ. ಆದರೆ ದುರಾದೃಷ್ಟವಶಾತ್ ಬಡವರಿಗೆ ಯಾವುದಾದರೂ ಕಾಯಿಲೆ ಬಂದರೆ ಆಸ್ಪತ್ರೆಗೆ ಬಿಲ್ (hospital bill) ಕಟ್ಟುವುದಕ್ಕೂ ಹಣ ಇಲ್ಲದ ಪರಿಸ್ಥಿತಿ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಆರೋಗ್ಯ ವಿಮೆ (Health Insurance) ಮಾಡಿಸಿಕೊಳ್ಳಲು ಸೂಚಿಸಲಾಗುತ್ತದೆ, ಇದರ ಜೊತೆಗೆ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ (BPL card) ಇರುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (aayushman Bharat health card) ಅನ್ನು ಕೂಡ ನೀಡಲಾಗುತ್ತಿದೆ.

Good news for APL, BPL card holders, more free service from now on

ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಬದಲಾವಣೆ ತಂದಿದ್ದು ಇದರಿಂದ ರಾಜ್ಯದ ಜನತೆ ಇನ್ನಷ್ಟು ಪ್ರಯೋಜನ ಪಡೆದುಕೊಳ್ಳುವಂತಾಗಿದೆ.

ಗೃಹಲಕ್ಷ್ಮಿ 4ನೇ ಕಂತಿನ ಹಣಕ್ಕೆ ಹೊಸ ಕಂಡೀಷನ್; ಪಾಲಿಸದೆ ಇದ್ರೆ ಹಣ ಬರೋಕೆ ಚಾನ್ಸೇ ಇಲ್ಲ

ಆಯುಷ್ಮಾನ್ ಆರೋಗ್ಯ ಹೆಲ್ತ್ ಕಾರ್ಡ್ ಬದಲಾವಣೆ!

ಸಿಎಂ ಸಿದ್ದರಾಮಯ್ಯ (CM siddaramaiah) ಅವರು “ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಎಂಬುದಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಹೆಲ್ತ್ ಕಾರ್ಡ್ ಹೆಸರನ್ನು ಬದಲಾಯಿಸಿದ್ದಾರೆ. ಇದೀಗ ಕರ್ನಾಟಕ ಕಾರ್ಡ್ ಬಿಡುಗಡೆ ಮಾಡಲಾಗಿದ್ದು ಇದರಿಂದ ರಾಜ್ಯದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಬದಲಾವಣೆ ಬಗ್ಗೆ ತಿಳಿಸಿದ್ದಾರೆ.

ಇನ್ನು ಹೆಚ್ಚಿನ ಆರೋಗ್ಯ ಕಾರ್ಡ್ ಒದಗಿಸುವ ಗುರಿ ಹೊಂದಿರುವ ಆರೋಗ್ಯ ಇಲಾಖೆ!

ಸದ್ಯ 5.9 ಕೋಟಿ ಅವರಿಗೆ ಹೆಲ್ತ್ ಕಾಡು ಒದಗಿಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ. ಡಿಸೆಂಬರ್ 7 ಅಂದರೆ ಇಂದು ಹೊಸ ಆರೋಗ್ಯ ಕಾರ್ಡ್ ಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ರಾಜ್ಯದ ಜನಸಾಮಾನ್ಯರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸಲು ನೆರವಾಗುವಂತೆ ಕರ್ನಾಟಕ ಆರೋಗ್ಯ ಕಾರ್ಡ್ ಜಾರಿಗೆ ತರಲಾಗಿದೆ.

ರೇಷನ್ ಕಾರ್ಡ್ ರದ್ದುಪಡಿಗೆ ಆದೇಶ; ಇಂತಹವರಿಗೆ ಸಿಗೋಲ್ಲ ಬಿಪಿಎಲ್ ಕಾರ್ಡ್ ಬೆನಿಫಿಟ್

ಆಯುಷ್ಮಾನ್ ಮುಖ್ಯಮಂತ್ರಿಗಳ ಕರ್ನಾಟಕ ಕಾರ್ಡ್ ನ ವಿಶೇಷತೆ ಏನು? (Benefits Of Karnataka health card)

Health Scheme*ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿರುವವರು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಇತರ ರಾಜ್ಯದಲ್ಲಿಯೂ ಕೂಡ ಹೆಲ್ತ್ ಕಾರ್ಡ್ ಅಡಿಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಇದಕ್ಕಾಗಿ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ನ್ಯಾಷನಲ್ ಪೋರ್ಟಲ್ ಗೆ ಕರ್ನಾಟಕ ರಾಜ್ಯದ ಹೊಸ ಕಾರ್ಡ್ ಸಂಯೋಜನೆಗೊಳಿಸಲಾಗಿದೆ.

*ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಗುರಿಯನ್ನು ಸಾಧಿಸಲು ಮುಂದಿನ ಆರು ತಿಂಗಳ ಅವಕಾಶ ಇದೆ, ಈ ಆರು ತಿಂಗಳುಗಳಲ್ಲಿ 5.9 ಕೋಟಿ ಫಲಾನುಭವಿಗಳಿಗೆ ಕಾರ್ಡ್ ವಿತರಣೆ ಮಾಡಲಾಗುವುದು.

*ಈ ಹೊಸ ಆರೋಗ್ಯ ಕಾರ್ಡ್ ಗೆ ಕೇಂದ್ರ ಸರ್ಕಾರದಿಂದ 34% ನಷ್ಟು ಅನುದಾನ ದೊರೆತರೆ ರಾಜ್ಯ ಸರ್ಕಾರ 66% ನಷ್ಟು ಅನುದಾನವನ್ನ ನೀಡಲಿದೆ. ಅಂದ್ರೆ ಈ ಯೋಜನೆಯಲ್ಲಿ ಬಹುಪಾಲು ರಾಜ್ಯ ಸರ್ಕಾರದ್ದು.

*ಈ ಕಾರ್ಡ್ ಹೊಂದಿರುವ ಬಿಪಿಎಲ್ ಫಲಾನುಭವಿಗಳು ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳ ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬ ಸದಸ್ಯ ಅಥವಾ ಒಟ್ಟಾರೆಯಾಗಿ ಇರುವ ಸದಸ್ಯರಿಗೆ ಪಡೆದುಕೊಳ್ಳಬಹುದು.

ಮಹಿಳೆಯರಿಗೂ ಸಿಗಲಿದೆ ಸರ್ಕಾರದಿಂದ 50,000 ಸುಲಭ ಸಾಲ; ಕಡಿಮೆ ಬಡ್ಡಿ ಹೆಚ್ಚು ಬೆನಿಫಿಟ್

*ಇನ್ನು ಮೊಟ್ಟಮೊದಲನೇ ಬಾರಿಗೆ ಎಪಿಎಲ್ ಕಾರ್ಡ್ (APL card) ಹೊಂದಿರುವವರೆಗೂ ಕೂಡ ಈ ಆರೋಗ್ಯ ಕಾರ್ಡ್ ಅನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ. ಎಪಿಎಲ್ ಕುಟುಂಬದ ವಾರ್ಷಿಕ ಚಿಕಿತ್ಸೆಯ ಮೊತ್ತ 5 ಲಕ್ಷ ರೂಪಾಯಿಗಳಾಗಿದ್ದರೆ ಅದರಲ್ಲಿ 1.5 ಲಕ್ಷ ರೂಪಾಯಿಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆದರೆ 70%ನಷ್ಟು ಚಿಕಿತ್ಸಾ ವೆಚ್ಚವನ್ನು ಎಪಿಎಲ್ ಕಾರ್ಡ್ ಹೊಂದಿರುವವರು ಭರಿಸಬೇಕು ಹಾಗೂ ಶೇಕಡ 30% ನಷ್ಟು ಸರ್ಕಾರ ಭರಿಸಲಿದೆ.

“ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಈ ಯೋಜನೆಯ ಸಾಕಾರಗೊಳ್ಳಲು ರಾಜ್ಯದ 3450ಕ್ಕೂ ಹೆಚ್ಚಿನ ಆರೋಗ್ಯ ಸಂಸ್ಥೆಗಳು ನೊಂದಾಯಿಸಿಕೊಂಡಿದೆ.

*ಮತ್ತೊಂದು ವಿಶೇಷವೆಂದರೆ ಈ ಕಾರ್ಡ್ ಅಡಿಯಲ್ಲಿ 1650 ಚಿಕಿತ್ಸಾ ಪ್ಯಾಕೇಜ್ ಗಳು ಲಭ್ಯವಿದ್ದು ಎಲ್ಲ ಸಾರ್ವಜನಿಕ ಆಸ್ಪತ್ರೆ ಹಾಗೂ 540 ನೊಂದಾಯಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಪ್ಯಾಕೇಜ್ ಗಳನ್ನು ಪಡೆಯಬಹುದು. ಜೊತೆಗೆ 171 ತುರ್ತು ಚಿಕಿತ್ಸೆ ಹಾಗೂ ಜೀವ ಉಳಿಸುವ ಪ್ಯಾಕೇಜ್ ಗಳನ್ನು ಕೂಡ ನೀಡಲಾಗುವುದು.

*ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಈ ಕಾರ್ಡ್ ಅನ್ನು ಪಡೆಯಲು ಫಲಾನುಭವಿಗಳು ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಇತರ ಯಾವುದೇ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಒಂದು ಕಾರ್ಡ್ ಇದ್ದರೆ ಫಲಾನುಭವಿಗಳ ವೈದ್ಯಕೀಯ ದಾಖಲೆಯನ್ನು ಪರಿಶೀಲಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸರ್ಕಾರ ನೆರವಾಗಲಿದೆ.

Good news for APL, BPL card holders, more free service from now on