ರೇಷನ್ ಕಾರ್ಡ್ ರದ್ದುಪಡಿಗೆ ಆದೇಶ; ಇಂತಹವರಿಗೆ ಸಿಗೋಲ್ಲ ಬಿಪಿಎಲ್ ಕಾರ್ಡ್ ಬೆನಿಫಿಟ್

ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುವ ಮಾನದಂಡದ (ration card guidelines) ಅಡಿಯಲ್ಲಿ ಬರುವುದಿಲ್ಲವೋ ಅಂತವರು ಕೂಡ ರೇಷನ್ ಕಾರ್ಡ್ ಹೊಂದಿದ್ದರೆ ರದ್ದಾಗುತ್ತದೆ

ಇನ್ನು ಮುಂದೆ ಇಂಥವರ ಬಿಪಿಎಲ್ ಕಾರ್ಡ್ (BPL card cancellation) ರದ್ದು ಪಡಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ಹೊಂದಿರುವವರ ಸ್ಥಳ ಪರಿಶೀಲನೆ ಮಾಡಲು ಹೊರಟಿದೆ.

ಯಾರು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುವ ಮಾನದಂಡದ (ration card guidelines) ಅಡಿಯಲ್ಲಿ ಬರುವುದಿಲ್ಲವೋ ಅಂತವರು ಕೂಡ ರೇಷನ್ ಕಾರ್ಡ್ ಹೊಂದಿದ್ದರೆ ಅವರ ರೇಷನ್ ಕಾರ್ಡ್ ರದ್ದುಪಡಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಸ್ವತಹ ಆದೇಶ ನೀಡಿದ್ದಾರೆ ಎನ್ನಲಾಗಿದೆ.

ಮಹಿಳೆಯರಿಗೂ ಸಿಗಲಿದೆ ಸರ್ಕಾರದಿಂದ 50,000 ಸುಲಭ ಸಾಲ; ಕಡಿಮೆ ಬಡ್ಡಿ ಹೆಚ್ಚು ಬೆನಿಫಿಟ್

ರೇಷನ್ ಕಾರ್ಡ್ ರದ್ದುಪಡಿಗೆ ಆದೇಶ; ಇಂತಹವರಿಗೆ ಸಿಗೋಲ್ಲ ಬಿಪಿಎಲ್ ಕಾರ್ಡ್ ಬೆನಿಫಿಟ್ - Kannada News

ಯಾರ ರೇಷನ್ ಕಾರ್ಡ್ ರದ್ದಾಗುತ್ತೆ ಗೊತ್ತಾ? (Ration card cancellation)

* ದುಬಾರಿ ಕಾರು ಇದ್ದವರ ಬಿಪಿಎಲ್ ಕಾರ್ಡ್ ರದ್ದು.

* ಸರಕಾರಿ ಉದ್ಯೋಗಿಗಳ ಕಾರ್ಡ್ ರದ್ದು.

* 3 ಎಕರೆಗಿಂತ ಜಾಸ್ತಿ ಕೃಷಿ ಜಮೀನು ಇದ್ದವರ ಕಾರ್ಡ್ ರದ್ದು.

*ತೆರಿಗೆ ಪಾವತಿ ಮಾಡುವವರ ಕಾರ್ಡ್ ರದ್ದು.

*ನಕಲಿ BPL ಕಾರ್ಡ್ ಅನ್ನು ಹೊಂದಿದವರ ಕಾರ್ಡ್ ರದ್ದು.

ಈಗಾಗಲೇ ಸಾಕಷ್ಟು ನಕಲಿ ರೇಷನ್ ಕಾರ್ಡ್ ಹೊಂದಿರುವ ವಿಚಾರ ಆಹಾರ ಇಲಾಖೆಯ ಗಮನಕ್ಕೆ ಬಂದಿದ್ದು ಕೂಲಂಕುಶವಾಗಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾರು ನಕಲಿ ರೇಷನ್ ಕಾರ್ಡ್ ಬಳಸಿ ಪಡಿತರ ತೆಗೆದುಕೊಳ್ಳುತ್ತಿದ್ದಾರೋ ಅಂತವರ ಕಾರ್ಡ್ ತಕ್ಷಣವೇ ರದ್ದಾಗಲಿದೆ.

ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಸಿಗದೇ ಇರಲು ಈ ಸಮಸ್ಯೆಗಳೇ ಕಾರಣ! ಸರಿ ಮಾಡಿಕೊಳ್ಳಿ

ಬಿಪಿಎಲ್ ಕಾರ್ಡ್ ರದ್ದುಪಡಿ ಜೊತೆಗೆ ದಂಡ

ರಾಜ್ಯ ಸರ್ಕಾರ (State government) ಈಗಾಗಲೇ ಸುಮಾರು 4.6 ಲಕ್ಷ ನಕಲಿ ಬಿಪಿಎಲ್ ಕಾರ್ಡ್ (fake BPL card users) ಬಳಕೆದಾರರನ್ನು ಗುರುತಿಸಿದ್ದು ಇಂಥವರ ಕಾರ್ಡ್ ರದ್ದುಪಡಿಯ ಜೊತೆಗೆ ದಂಡವನ್ನು ಕೂಡ ವಿಧಿಸುತ್ತಿದೆ. 12,583 ಬಿಪಿಎಲ್ ಕಾರ್ಡ್ ಕುಟುಂಬದವರು ನಾಲ್ಕು ಚಕ್ರದ ವಾಹನ ಹೊಂದಿದ್ದು ಅಂಥವರ ಕಾರ್ಡ್ ರದ್ದುಪಡಿ ಮಾಡಲಾಗಿದೆ.

ಉಚಿತ ಪಡಿತರ ವಸ್ತು ಪಡೆದು ಮಾರಾಟ ಮಾಡುವುದು ಶಿಕ್ಷಾರ್ಹ!

BPL Ration Cardರೇಷನ್ ಅಂಗಡಿಯಲ್ಲಿ ಉಚಿತ ಪಡಿತರ ವಿತರಣೆ ಮಾಡುವುದು ಬಡವರು ಅಥವಾ ಬಡತನ ರೇಖೆಗಿಂತ ಕೆಳಗಿನವರು ಯಾವುದೇ ಕಾರಣಕ್ಕೂ ಹಸಿವನ್ನು ಅನುಭವಿಸಬಾರದು ಎಂಬುದಕ್ಕಾಗಿ. ಬಡವರ ಹಸಿವು ನಿವಾರಣೆ ಮಾಡುವುದಕ್ಕೆ ಉಚಿತ ಪಡಿತರ ವಿತರಣೆಯನ್ನು ಸರ್ಕಾರ ಆರಂಭಿಸಿದೆ.

ಆದರೆ ಇಂದು ಸಾಕಷ್ಟು ಜನ ಉಚಿತ ಪಡಿತರ ವಸ್ತುಗಳನ್ನು ಪಡೆದುಕೊಂಡು ಅದನ್ನು ಬೇರೆ ಕಡೆ ಹಣಕ್ಕೆ ಮಾರಿ ಅದರಿಂದ ಹಣ ಗಳಿಸಿಕೊಳ್ಳುತ್ತಿದ್ದಾರೆ. ಇದೀಗ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಯಾರು ಸರ್ಕಾರದಿಂದ ಉಚಿತವಾಗಿ ಸಿಗುತ್ತಿರುವ ಅಕ್ಕಿಯನ್ನು ಮಾರಾಟ ಮಾಡುತ್ತಾ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೋ ಅಂತವರಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ನಿರ್ಧರಿಸಿದೆ.

ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಕುರಿತು ಹೊಸ ಮಾಹಿತಿ

ಉಚಿತವಾಗಿ ಪಡಿತರ ಪಡೆದುಕೊಳ್ಳುತ್ತಿದ್ದರೆ ಅದನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರೇ ಬಳಸಿಕೊಳ್ಳಬೇಕು. ಹೊರತಾಗಿ ಅದನ್ನ ಇನ್ನೆಲ್ಲೋ ಮಾರಾಟ ಮಾಡುವಂತಿಲ್ಲ.

ಇದು ಸರ್ಕಾರದ ಗಮನಕ್ಕೆ ಬಂದರೆ ಅಂತವರ ಬಿಪಿಎಲ್ ಕಾರ್ಡ್ ರದ್ದುಪಡಿಗೊಳಿಸುವುದು ಮಾತ್ರವಲ್ಲದೆ ಮನೆಯ ಯಜಮಾನನಿಗೆ ದಂಡ ಹಾಗೂ ಶಿಕ್ಷೆ ಕೂಡ ವಿಧಿಸಬಹುದು.

ಈಗಾಗಲೇ ಸಾಕಷ್ಟು ಅರ್ಹರು ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ ಅಂತದ್ರಲ್ಲಿ ನಿಜವಾಗಿ ಯಾರಿಗೆ ಬಿಪಿಎಲ್ ರೇಷನ್ ಕಾರ್ಡ್ ಅಗತ್ಯವೇ ಇಲ್ಲವೋ ಅಂತವರು ಕೂಡ ಕಾರ್ಡ್ ಇಟ್ಟುಕೊಂಡಿರುವುದು ನಿಜಕ್ಕೂ ವಿಷಾದನೀಯ. ಕನಿಷ್ಠ ತಮಗೆ ಅಗತ್ಯ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ಆಹಾರ ಇಲಾಖೆಗೆ ಸರೆಂಡರ್ (BPL card surrender) ಮಾಡಿ ನಿಜವಾಗಿ ಅಗತ್ಯ ಇರುವವರಿಗೆ ತಲುಪುವಂತೆ ಮಾಡಬಹುದು.

Order to cancel the ration card of such Peoples

Follow us On

FaceBook Google News

Order to cancel the ration card of such Peoples