ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಸಿಗದೇ ಇರಲು ಈ ಸಮಸ್ಯೆಗಳೇ ಕಾರಣ! ಸರಿ ಮಾಡಿಕೊಳ್ಳಿ
Gruha lakshmi scheme : ಗೃಹಲಕ್ಷ್ಮಿ ಯೋಜನೆಯ 2,000 ನಿಮ್ಮ ಖಾತೆಗೆ ಜಮಾ (Money Transfer) ಆದ ತಕ್ಷಣ ಒಂದು ಎಸ್ಎಂಎಸ್ ಬರುತ್ತದೆ
ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಮೂರನೇ ಕಂತಿನ ಹಣವು (third installment) ಕೂಡ ಬಿಡುಗಡೆ ಆಗಿದೆ. ಈಗಾಗಲೇ ಈ ಯೋಜನೆ ಆರಂಭವಾಗಿ ಮೂರು ತಿಂಗಳುಗಳು ಕಳೆದಿದ್ದು, ಸುಮಾರು 1.10 ಕೋಟಿ ಮಹಿಳೆಯರ ಖಾತೆಗೆ (Bank Account) 6000 ರೂ. ಜಮಾ ಆಗಿವೆ.
ದುರದೃಷ್ಟವಶಾತ್ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ( DBT ) ಆಗಿಲ್ಲ. ಸುಮಾರು ಆರು ಲಕ್ಷ ಮಹಿಳೆಯರು ಇನ್ನೂ ಗೃಹಲಕ್ಷ್ಮಿ ಯೋಜನೆಯ ಒಂದೇ ಒಂದು ಕಂತಿನ ಹಣವನ್ನು ನೋಡಿಲ್ಲ.
ಸರಕಾರ ಬೇರೆ ಬೇರೆ ಕ್ರಮಗಳನ್ನು ಕೂಡ ಕೈಗೊಂಡಿದ್ದು ಡಿಸೆಂಬರ್ ತಿಂಗಳ ಒಳಗೆ ಪ್ರತಿಯೊಬ್ಬರ ಖಾತೆಗೂ ಹಣ ಜಮಾ ಮಾಡುವ ಭರವಸೆ ನೀಡಿದೆ. ಅದಕ್ಕೂ ಮೊದಲು ನೀವು ಈ ಕೆಲವು ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಖಾತೆಗೆ ಹಣ ಜಮಾ (Money Deposit) ಮಾಡಿಸಿಕೊಳ್ಳಬಹುದು!
ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಕುರಿತು ಹೊಸ ಮಾಹಿತಿ
ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆದುಕೊಳ್ಳಿ
ಸಾಕಷ್ಟು ಜನ ಬ್ಯಾಂಕ್ ಖಾತೆಯಲ್ಲಿ (bank account) ಇರುವ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದು, ಸರ್ವರ್ ಸಮಸ್ಯೆ (server issue) ಅಥವಾ ಇತರ ಕಾರಣಗಳಿಂದ ಬ್ಯಾಂಕ್ ಖಾತೆ ಅಪ್ಡೇಟ್ ಆಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಅಲ್ಲಿರುವ ಸಹಾಯಕಿಯರಿಗೆ ಅಥವಾ ಟೀಚರ್ ಗೆ ಮಾಹಿತಿ ನೀಡಿದರೆ ಅವರು ಸ್ವತ: ನಿಮ್ಮನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸುತ್ತಾರೆ, ಇದು ಸರ್ಕಾರದ ಆದೇಶವಾಗಿದ್ದು ಪ್ರತಿ ಒಬ್ಬ ಅಂಗನವಾಡಿ ಸಹಾಯಕಿಯರು ಮಹಿಳೆಯರ ಖಾತೆಗೆ ಹಣ ಜಮಾ ಆಗಲು ಈ ಸಹಾಯ ಮಾಡಲೇಬೇಕು.
ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಮಾಸ್ಟರ್ ಪ್ಲಾನ್! ಎಲ್ಲರಿಗೂ ಹಣ ಜಮಾ
ಈ ಕೆ ವೈ ಸಿ ಅಪ್ಡೇಟ್ ಮಾಡಿಸಿ (EKYC update)
ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಸೇರಬೇಕು ಅಂದ್ರೆ ಆ ಕುಟುಂಬದ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿಯೇ ಇರಬೇಕು. ಇದೇ ಕಾರಣಕ್ಕೆ ಸಾಕಷ್ಟು ಕುಟುಂಬದ ಯಜಮಾನನ ಹೆಸರಿನ ಬದಲಿಗೆ ಯಜಮಾನಿಯ ಹೆಸರನ್ನು ಸೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ಆಧಾರ್ ಸಿಡಿಂಗ್ ಆಗುವುದು ಬಹಳ ಮುಖ್ಯವಾಗಿರುತ್ತದೆ. ಜೊತೆಗೆ ಈಕೆವೈ ಸಿ ಆಗಬೇಕಾಗಿರುತ್ತದೆ. ಬ್ಯಾಂಕು ಖಾತೆಗೆ ಈಕೆ ವೈ ಸಿ ಆಗದೆ ಇದ್ದಲ್ಲಿ ಯಜಮಾನಿ ಖಾತೆಗೆ ಹಣ ಜಮಾ ಆಗುವುದಿಲ್ಲ. ಆದ್ದರಿಂದ ತಕ್ಷಣವೇ ನೀವು ಬ್ಯಾಂಕಿನಲ್ಲಿ ಕೆಲಸ ಮಾಡಿಕೊಳ್ಳಿ.
ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದ್ದೀರಾ? (Check your bank balance)
ಗೃಹಲಕ್ಷ್ಮಿ ಯೋಜನೆಯ 2,000 ನಿಮ್ಮ ಖಾತೆಗೆ ಜಮಾ (Money Transfer) ಆದ ತಕ್ಷಣ ಒಂದು ಎಸ್ಎಂಎಸ್ ಬರುತ್ತದೆ. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಈ ಸಂದೇಶ ನಿಮಗೆ ಭಾರದೇ ಇರಬಹುದು. ಹಾಗಾಗಿ ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿ ತಿಂಗಳು 15ರಿಂದ 20ನೇ ತಾರೀಕಿನ ಒಳಗೆ ಪ್ರತಿಯೊಬ್ಬ ಗೃಹಿಣಿಯರ ಖಾತೆಗೆ ಹಣ ಜಮಾ ಆಗುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ನೀವು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯನ್ನು ಬಗ್ಗೆ ಸ್ವತ; ಬ್ಯಾಂಕ್ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದುಕೊಳ್ಳಬಹುದು.
ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ; ಅರ್ಜಿ ಸಲ್ಲಿಸಿ
ಗ್ರಾಮ ಅದಾಲತ್ ಪ್ರಯೋಜನ ಪಡೆದುಕೊಳ್ಳಬಹುದು!
ರಾಜ್ಯ ಸರ್ಕಾರ ಈಗಾಗಲೇ ತಿಳಿಸಿರುವಂತೆ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಎಂದಾದರೆ ಗ್ರಾಮ ಪಂಚಾಯತ್ ನ ಸಿಬ್ಬಂದಿಗಳ ಬಳಿ ದೂರು ಸಲ್ಲಿಸಬಹುದು ಅವರು ಯಾರ ಖಾತೆಗೆ ಹಣ ಜಮಾ ಆಗಿಲ್ಲವೋ ಅಂತವರನ್ನು ಗುರುತಿಸಿ ಹಣ ಜಮಾ ಆಗಲು ಸಹಕರಿಸುತ್ತಾರೆ. ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಲು ನೀವು ಗ್ರಾಮ ಪಂಚಾಯತ್ ಸಿಬ್ಬಂದಿಗಳನ್ನು ಕೂಡ ಭೇಟಿ ಮಾಡಬಹುದು, ಅದೇ ರೀತಿ ಸಿಡಿಪಿಓ ಕಚೇರಿಯಲ್ಲಿಯೂ ಕೂಡ ನೀವು ದೂರು ಸಲ್ಲಿಸಬಹುದು.
ನಿಮ್ಮ ಬ್ಯಾಂಕ್ ಚೆಕ್ ಮಾಡಿಕೊಳ್ಳಿ
ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿರುವ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಜಮಾ ಆಗಿರುತ್ತದೆ ಹಾಗಾಗಿ ಅನ್ನ ಭಾಗ್ಯ ಡಿಬಿಟಿ ಸ್ಟೇಟಸ್ ಚೆಕ್ ಮಾಡಿದರೆ ಗೃಹಲಕ್ಷ್ಮಿ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಜಮಾ ಆಗದೇ ಇದ್ದಲ್ಲಿ! ಸರ್ಕಾರ ಸೂಚಿಸಿದೆ ಪರಿಹಾರ
ರಾಜ್ಯ ಸರ್ಕಾರ ಡಿಬಿಡಿ ಕರ್ನಾಟಕ (DBT Karnataka mobile application) ಎನ್ನುವ ಅಪ್ಲಿಕೇಶನ್ ಕೂಡ ಬಿಡುಗಡೆ ಮಾಡಿದೆ, ನೀವು ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಸಂದಾಯ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
ಈ ಎಲ್ಲಾ ಕೆಲಸಗಳನ್ನು ಮಾಡಿಕೊಂಡರೆ, ನಿಮ್ಮ ಖಾತೆಯಲ್ಲಿ ಯಾವ ದೋಷವೂ ಇಲ್ಲದೆ ಇದ್ದರೆ ಡಿಸೆಂಬರ್ 20ರ ಒಳಗೆ ಪೆಂಡಿಂಗ್ ಹಣವು ಸೇರಲಿವೆ.
By December 20th the pending money of Gruha Lakshmi Yojana will be credited to Bank account