ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ; ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರ ಬಸವ ವಸತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಮನೆಗಳನ್ನು ನಿರ್ಮಾಣ (Build House) ಮಾಡಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಸಾಕಷ್ಟು ಬೇರೆ ಬೇರೆ ರೀತಿಯ ವಸತಿ ಯೋಜನೆಗಳು (housing scheme) ಲಭ್ಯ ಇವೆ. ಕೇಂದ್ರ ಸರ್ಕಾರವು (central government) ಕೂಡ ಕೆಲವು ವಸತಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದಕ್ಕೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರಕಾರದ ಸಹಾಯಧನವು ಕೂಡ ಲಭ್ಯವಿದೆ.

ಉದಾಹರಣೆಗೆ ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi vasati Yojana) ಬಸವ ವಸತಿ ಯೋಜನೆ (basava vasati Yojana) ಹೀಗೆ ಬೇರೆ ಬೇರೆ ರೀತಿಯಾದಂತಹ ವಸತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಜಮಾ ಆಗದೇ ಇದ್ದಲ್ಲಿ! ಸರ್ಕಾರ ಸೂಚಿಸಿದೆ ಪರಿಹಾರ

ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ; ಅರ್ಜಿ ಸಲ್ಲಿಸಿ - Kannada News

ವಸತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ?

ರಾಜ್ಯ ಸರ್ಕಾರ ಬಸವ ವಸತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಮನೆಗಳನ್ನು ನಿರ್ಮಾಣ (Build House) ಮಾಡಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ಅರ್ಜಿಗಳು ಕೂಡ ಸರ್ಕಾರಕ್ಕೆ ಸಂದಾಯ ಆಗಿದೆ

ಆದರೆ ಗ್ರಾಮ ಪಂಚಾಯತ್ (gram Panchayat) ವ್ಯಾಪ್ತಿಯ ಅಡಿಯಲ್ಲಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಹಾಗೂ ಅಂಥವರಿಗೆ ಅನುಮತಿ ನೀಡಲು ಸಮಸ್ಯೆ ಎದುರಾಗುತ್ತಿದೆ.

ಗಡುವು ವಿಸ್ತರಿಸಿದ ಸರ್ಕಾರ! (Date extended)

ವಸತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಫಲಾನುಭವಿಗಳಿಗೆ ದಾಖಲೆಗಳನ್ನು ಹೊಂದಿಸಲು ಕಷ್ಟವಾಗುತ್ತಿತ್ತು. ಯಾಕಂದ್ರೆ ಕಳೆದ ನವೆಂಬರ್ 30ರಂದು ಗ್ರಾಮ ಸಭೆ ನಡೆಸಿ ಗ್ರಾಮ ಪಂಚಾಯಿತಿಗಳು ಫಲಾನುಭವಿಗಳ ಆಯ್ಕೆಯನ್ನ ಮಾಡಬೇಕಿತ್ತು.

ಜೊತೆಗೆ ಆಯ್ಕೆಯಾದ ಫಲಾನುಭವಿಗಳ ಜಾತಿ ಆದಾಯ ಪ್ರಮಾಣ ಪತ್ರ (income certificate) ಎಲ್ಲವನ್ನ ಪಡೆದುಕೊಂಡು ನವೆಂಬರ್ 30ರ ಒಳಗೆ ಸರ್ಕಾರಕ್ಕೆ ಅದರ ಬಗ್ಗೆ ಮಾಹಿತಿ ನೀಡಬೇಕಿತ್ತು.

ಆದರೆ ಸರ್ವರ್ ಸಮಸ್ಯೆ (server problem) ಯಿಂದಾಗಿ ಜನರು ತಮ್ಮ ಹೆಸರುಗಳನ್ನ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ಹೆಸರು ನೋಂದಾಯಿಸಿಕೊಂಡಿರುವ ಹಾಗೂ ವಸತಿ ಪಡೆದುಕೊಳ್ಳಲು ಅರ್ಹರಾಗಿರುವ ಫಲಾನುಭವಿಗಳು ಬೇಕಾಗಿರುವ ದಾಖಲೆಗಳನ್ನು ನೀಡುವುದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ಇತ್ತು.

ಗೃಹಲಕ್ಷ್ಮಿ 3ನೇ ಕಂತಿನ ಹಣ 26 ಜಿಲ್ಲೆಗಳಿಗೆ ಒಮ್ಮೆಲೇ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

housing scheme

ಅನ್ನಭಾಗ್ಯ ಯೋಜನೆ ಸ್ಟೇಟಸ್ ಈ ರೀತಿ ತೋರಿಸಿದ್ರೆ ನಿಮ್ಮ ಖಾತೆಗೆ ಹಣ ಜಮಾ ಆಗೋಲ್ಲ

ಎಲ್ಲಾ ಸಮಸ್ಯೆಗಳನ್ನು ಗಮನಿಸಿರುವ ಸರ್ಕಾರ ಚಳಿಗಾಲದ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಗೆ ಗ್ರಾಮ ಪಂಚಾಯಿತಿಗಳು ಕೇಳಿರುವಂತೆ ಡಾಟಾ ಎಂಟ್ರಿ ಮತ್ತು ಅನುಮೋದನೆ ಹಾಗೂ ಫಲಾನುಭವಿಗಳ ಆಯ್ಕೆಗಾಗಿ ಡಿಸೆಂಬರ್ 30ರವರೆಗೆ ಅವಧಿ ನೀಡಲಾಗಿದೆ ಎಂದು ವಸತಿ ಇಲಾಖೆ ತಿಳಿಸಿದೆ. ಹಾಗಾಗಿ ಗ್ರಾಮ ಪಂಚಾಯತ್ ಗಳು ಇನ್ನೂ ಒಂದು ತಿಂಗಳ ಕಾಲಾವಕಾಶವನ್ನು ಪಡೆದುಕೊಂಡು ಫಲಾನುಭವಿಗಳ ಆಯ್ಕೆ ಮಾಡುವ ಅಗತ್ಯವಿದೆ.

ಕರ್ನಾಟಕ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿ 2021 -22 ಹಾಗೂ 22- 23ರ ಸಾಲಿನಲ್ಲಿ ಸಾಕಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ. ಆದರೆ ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ಲಾಗಿನ್ ಹಂತದಲ್ಲಿ ಅನುಮೋದನೆ ಬಾಕಿ ಇರುವ ಫಲಾನುಭವಿಗಳು ಹಾಗೂ ಇನ್ನೂ ಆಯ್ಕೆಯಾಗದೆ ಇರುವ 1,35,976 ಫಲಾನುಭವಿಗಳನ್ನು ಕೂಡ ಆಯ್ಕೆ ಮಾಡಿ ಡಾಟಾ ಎಂಟ್ರಿ ಮಾಡಿಸಿ ಅವರಿಗೆ ಅನುಮೋದನೆ ನೀಡುವ ಕಾರ್ಯ ಇನ್ನೂ ನೆರವೇರದೇ ಇರುವ ಕಾರಣದಿಂದಾಗಿ ಗಡುವು ವಿಸ್ತರಣೆ ಮಾಡಲಾಗಿದ್ದು ನವೆಂಬರ್ 30ಕ್ಕೆ ಇದ್ದ ಗಡುವು ಈಗ ಡಿಸೆಂಬರ್ 30ರವರೆಗೆ ವಿಸ್ತರಣೆಯಾಗಿದೆ.

ಅಂದರೆ ಇನ್ನೂ ಒಂದು ತಿಂಗಳ ಅವಕಾಶ ನೀಡಲಾಗಿದ್ದು ಗ್ರಾಮ ಪಂಚಾಯತ್ ಫಲಾನುಭವಿಗಳ ಆಯ್ಕೆ ಮಾಡಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ವಸತಿ ಸಚಿವಾಲಯ ತಿಳಿಸಿದೆ.

ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ; ಇಲ್ಲವೇ ತಕ್ಷಣ ಈ ಕೆಲಸ ಮಾಡಿ

ಚಾಮರಾಜನಗರ ಹಾಗೂ ಹನೂರು ತಾಲೂಕುಗಳಲ್ಲಿ ಬಸವ ವಸತಿ ಯೋಜನೆಯ ಅಡಿಯಲ್ಲಿ 5,315 ಹಾಗೂ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಯೋಜನೆ ಅಡಿಯಲ್ಲಿ 3,349 ಮನೆಗಳು ಸೇರಿದಂತೆ ಒಟ್ಟು 8,664 ಕಳೆದ ತಿಂಗಳಿನಲ್ಲಿ ಹಂಚಿಕೆಯಾಗಿದೆ. ಸದ್ಯದಲ್ಲಿಯೇ ಇನ್ನಷ್ಟು ಫಲಾನುಭವಿಗಳಿಗೆ ವಸತಿ ಹಂಚಿಕೆ ಮಾಡಲಾಗುವುದು.

housing scheme, Extension of time for distribution of house

Follow us On

FaceBook Google News

housing scheme, Extension of time for distribution of house