ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ; ಇಲ್ಲವೇ ತಕ್ಷಣ ಈ ಕೆಲಸ ಮಾಡಿ
ರೈತರ ಖಾತೆಗೆ (Bank Account) ಬಿಡುಗಡೆ ಮಾಡಲಾಗಿದ್ದು ರೈತರು ತಕ್ಷಣವೇ ತಮ್ಮ ಖಾತೆಗೆ ಹಣ ಜಮಾ (Money Deposit) ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
ರಾಜ್ಯ ಸರ್ಕಾರ ರೈತರಿಗೆ ಗುಡ್ ನ್ಯೂಸ್ ನೀಡಿದೆ, ಈಗಾಗಲೇ ಮಳೆ ಅಭಾವದಿಂದ ಬೆಳೆ ಸರಿಯಾಗಿ ಆಗದೆ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರದಿಂದ ಧನ ಸಹಾಯ ಘೋಷಣೆಯಾಗಿದೆ
ಈಗ ಈ ಹಣವನ್ನು ರೈತರ ಖಾತೆಗೆ (Bank Account) ಬಿಡುಗಡೆ ಮಾಡಲಾಗಿದ್ದು ರೈತರು ತಕ್ಷಣವೇ ತಮ್ಮ ಖಾತೆಗೆ ಹಣ ಜಮಾ (Money Deposit) ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
ರೈತರ ಆದಾಯ ಡಬಲ್ ಮಾಡೋ ಕೇಂದ್ರದ ಯೋಜನೆ; ರಾಜ್ಯ ಸರ್ಕಾರವೂ ಕೊಡುತ್ತೆ ಸಬ್ಸಿಡಿ
ಬರಪೀಡಿತ ಪ್ರದೇಶಕ್ಕೆ ಬೆಳೆ ಪರಿಹಾರ
ರಾಜ್ಯದಲ್ಲಿ ಸುಮಾರು 220ಕ್ಕೂ ಹೆಚ್ಚು ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಈ ವರ್ಷ ಘೋಷಣೆ ಮಾಡಲಾಗಿದೆ, ಈ ಸ್ಥಳಗಳಲ್ಲಿ ಕೃಷಿಯನ್ನು ನಂಬಿಕೊಂಡು ಇರುವ ರೈತರಿಗೆ ಸಂಕಷ್ಟ ಎದುರಾಗಿದೆ
ಮಳೆ ಸರಿಯಾಗಿ ಬಾರದೆ ಇರುವ ಕಾರಣ ಬರಗಾಲ ಉಂಟಾಗಿದೆ. ಹಾಗಾಗಿ ರೈತರನ್ನ ಗುರುತಿಸಿ ಅವರಿಗೆ ತಲಾ 2,000 ರೂಪಾಯಿಗಳ ಬೆಳೆ ಪರಿಹಾರ ಹಣವನ್ನು ನೇರವಾಗಿ ರೈತರಿಗೆ ಈಗಾಗಲೇ ಮೊದಲ ಕಂತಿನ ಹಣ ಜಮಾ ಮಾಡಲಾಗಿದ್ದು ರೈತರು ತಮ್ಮ ಖಾತೆಗೆ ಹಣ ಸಂದಾಯ (Money Transfer) ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು.
ಗೃಹಲಕ್ಷ್ಮಿ 3ನೇ ಕಂತಿನ ಹಣ 26 ಜಿಲ್ಲೆಗಳಿಗೆ ಒಮ್ಮೆಲೇ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ರೈತರ ಬೆಳೆ ನಷ್ಟ
2023- 24ನೇ ಸಾಲಿನಲ್ಲಿ ಬರಗಾಲದ ನಿಮಿತ್ತ 48.19 ಜಮೀನಿನ ಬೆಳೆ ನಾಶ ಆಗಿದೆ ಎನ್ನುವ ಅಂಕಿ ಅಂಶ ಲಭ್ಯವಾಗಿದೆ. ಕೇಂದ್ರ ಸರ್ಕಾರಕ್ಕೆ ಬೆಳೆ ಪರಿಹಾರ ಹಣ ನೀಡಬೇಕಾಗಿ ರಾಜ್ಯ ಸರಕಾರ ಮನವಿ ಮಾಡಿತ್ತು. 18 711.44 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಬೇಕಾಗಿ ಕೇಳಿಕೊಳ್ಳಲಾಗಿತ್ತು.
ಆದರೆ ಕೇಂದ್ರ ಸರ್ಕಾರ ಬೆಳೆ ಪರಿಹಾರವಾಗಿ ಮೊದಲ ಹಂತದ ಚರ್ಚೆಯನ್ನು ಕೂಡ ಮಾಡಿಲ್ಲ, ಹಾಗಾಗಿ ಸರ್ಕಾರದಿಂದ ಬೆಳೆ ಪರಿಹಾರ ನೀಡುವುದು ಸಾಕಷ್ಟು ವಿಳಂಬವಾಗುತ್ತಿದೆ ಇದೇ ಕಾರಣಕ್ಕೆ ನಾವೇ ಸ್ವತಃ ರೈತರಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡುವುದರ ಮೂಲಕ ಆರ್ಥಿಕ ನೆರವು ನೀಡಲಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಸರ್ಕಾರದಿಂದ ಬೆಳೆ ವಿಮೆ ಪರಿಹಾರವಾಗಿ 6.50 ಲಕ್ಷ ರೈತರಿಗೆ 860 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ! ಅರ್ಜಿಗೆ ಇಲ್ಲ ಅವಕಾಶ
ಬೆಳೆ ಪರಿಹಾರ ಹಣ ಖಾತೆಗೆ ಬಂದಿದೆಯಾ ತಿಳಿದುಕೊಳ್ಳುವುದು ಹೇಗೆ?
ಸರ್ಕಾರ ಮೊದಲ ಕಂತಿನ 2,000ಗಳನ್ನು ಬೆಳೆ ಪರಿಹಾರ ನಿಧಿ ಎಂದು ಫಲಾನುಭವಿ ರೈತರ ಖಾತೆಗೆ ಜಮ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಇನ್ನು ಕೇವಲ ನಾಲ್ಕರಿಂದ ಐದು ದಿನಗಳ ಒಳಗೆ ಪ್ರತಿಯೊಬ್ಬ ಫಲಾನುಭವಿ ರೈತರ ಖಾತೆಗೆ 2,000 ಜಮಾ ಆಗಲಿದೆ.
ನಿಮ್ಮ ಖಾತೆಯನ್ನು ಮಾಡಿಕೊಳ್ಳಲು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ https://landrecords.karnataka.gov.in/PariharaPayment/ ಮೇಲೆ ಕ್ಲಿಕ್ ಮಾಡಿ. ಈಗ ಒಂದು ಹೊಸ ಪುಟ್ಟ ತೆರೆದುಕೊಳ್ಳುತ್ತದೆ ಅದರಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ತಿಳಿದುಕೊಳ್ಳಬಹುದು
ಆದರೆ ಇಲ್ಲಿ ಮುಖ್ಯವಾಗಿರುವ ವಿಚಾರ ಅಂದರೆ ರೈತರಿಗೆ ಫ್ರೂಟ್ಸ್ ಐಡಿ (FID) ಬೇಕಾಗಿರುತ್ತದೆ. ನೀವು ಈ ಐಡಿಯನ್ನು ಕೂಡ ನಮೂದಿಸಿದರೆ ತಕ್ಷಣ ನಿಮ್ಮ ಖಾತೆಗೆ ಹಣ ಜಮಾ ಆದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದು.
ಇಂತಹ ರೈತರಿಗೆ ₹2000 ಸಹಾಯಧನ, ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ
Check whether the crop compensation money has reached your account or Not