ಇಂತಹ ರೈತರಿಗೆ ₹2000 ಸಹಾಯಧನ, ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ
ಈ ವರ್ಷದ ಮಳೆಯ ಅಭಾವದಿಂದಾಗಿ ರೈತರಿಗೆ (farmers)ಬಹಳ ಅನಾನುಕೂಲ ಆಗಿದೆ, ಉತ್ತಮವಾದ ಬೆಳೆ ತೆಗೆಯಲು ಈ ಬಾರಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 220ಕ್ಕೂ ಹೆಚ್ಚಿನ ಪ್ರದೇಶಗಳನ್ನು ಬರಪೀಡಿತ ಪ್ರದೇಶ (Drought prone area) ಎಂದು ಘೋಷಣೆ ಮಾಡಿದೆ.
ಬರಪೀಡಿತ ಪ್ರದೇಶದ ಫಲಾನುಭವಿ ಜನರಿಗೆ ಬಿಪಿಎಲ್ ಕಾರ್ಡ್ (BPL card) ಹೊಂದಿದ್ದರೆ ಉಚಿತ ಅಕ್ಕಿಯನ್ನು (free rice) ಸರ್ಕಾರ ನೀಡುತ್ತಿದೆ. ಅಂದರೆ ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಹಣವನ್ನ ಪ್ರತಿಯೊಬ್ಬರ ಖಾತೆಗೂ (Bank Account) ಜಮಾ ಮಾಡಲಾಗುತ್ತಿದೆ.
ಆದರೆ ಬರಪೀಡಿತ ಪ್ರದೇಶದಲ್ಲಿ ಮಾತ್ರ ಹಣದ ಬದಲು ಐದು ಕೆಜಿ ಅಕ್ಕಿಯನ್ನೇ ಒದಗಿಸಲು ಸರ್ಕಾರ ಮುಂದಾಗಿದೆ.
ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಇಂದೇ ಲಾಸ್ಟ್ ಡೇಟ್
ಬರಪೀಡಿದ ಪ್ರದೇಶಕ್ಕೆ 2,000 ರೂ. ಪರಿಹಾರ!
ಸರ್ಕಾರದಿಂದ ಘೋಷಣೆಯಾಗಿರುವ ಬರಪೀಡಿತ ಪ್ರದೇಶದಲ್ಲಿ ಅರ್ಹ ರೈತರಿಗೆ ಬೆಳೆ ಹಾನಿ ಎರಡು ಸಾವಿರ ರೂಪಾಯಿಗಳ ಮೊದಲ ಕಂತನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ
ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ (social media) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.”ಬರ ಪರಿಹಾರಕ್ಕೆ ಸಂಬಂಧ ಪಟ್ಟ ಹಾಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಈಗಾಗಲೇ ರಾಜ್ಯದ ಸಚಿವರು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ದೆಹಲಿಗೂ ಹೋಗಿದ್ದರು. ಆದರೆ ಪ್ರಾಥಮಿಕ ಸಭೆಯನ್ನು ಕೂಡ ಕೇಂದ್ರ ಸರ್ಕಾರ ನಡೆಸಿಲ್ಲ. ಈ ವಿಳಂಬದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಬರಪೀಡಿತ ಪ್ರದೇಶದ ಫಲಾನುಭವಿ ರೈತರ ಖಾತೆಗೆ (Bank Account) ಬೆಳೆ ಪರಿಹಾರವಾಗಿ ಎರಡು ಸಾವಿರ ರೂಪಾಯಿಗಳನ್ನು ಜಮಾ ಮಾಡುತ್ತಿದೆ” ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಸಮಸ್ಯೆ ಇಲ್ಲದೆ ನಿಮ್ಮ ಖಾತೆ ಸೇರುತ್ತೆ ಹಣ
ಬೆಳೆ ಪರಿಹಾರ ಪಡೆದುಕೊಳ್ಳಲು ಈ ಐಡಿ ಅಗತ್ಯ!
ಇಂದು ಸರ್ಕಾರದಿಂದ ರೈತರಿಗೆ ಲಭ್ಯವಾಗುವಂತಹ ಬೆಳೆ ಪರಿಹಾರ ನಿಧಿ, ಸರ್ಕಾರದ ಸಾಲ ಸೌಲಭ್ಯಗಳು, ಸಬ್ಸಿಡಿ, ಕಿಸಾನ್ ಯೋಜನೆಯ ಹಣ ಹೀಗೆ ಯಾವುದೇ ರೀತಿಯ ಪ್ರಯೋಜನ ಪಡೆದುಕೊಳ್ಳುವುದಿದ್ದರು ಕೂಡ ರೈತರು ಫ್ರೂಟ್ಸ್ ಐಡಿ (FRUITS ID – FID) ಹೊಂದಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಐಡಿ ಇಲ್ಲದ ರೀತಿಯಲ್ಲಿ ತಕ್ಷಣವೇ ಮಾಡಿಕೊಳ್ಳಿ ಇಲ್ಲವಾದರೆ ನಿಮ್ಮ ಖಾತೆಗೆ ಹಣ ಜಮಾ (Money Deposit) ಆಗುವುದಿಲ್ಲ.
ಗುಡಿಸಲು, ಹಳೆಯ ಮನೆ ಇರೋರಿಗೆ ಹೊಸ ಮನೆ ಕಟ್ಟಿಸಿ ಕೊಡುವ ಯೋಜನೆ! ಅರ್ಜಿ ಸಲ್ಲಿಸಿ
ಫ್ರೂಟ್ಸ್ ಐಡಿ ಮಾಡಿಕೊಳ್ಳುವುದು ಹೇಗೆ?
ರೈತರು ತಮ್ಮ ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಖಾತೆಯ ವಿವರ ಹಾಗೂ ಪಹಣಿ ಪತ್ರದ ದಾಖಲೆಗಳ ಜೊತೆಗೆ ಹತ್ತಿರದ ತೋಟಗಾರಿಕಾ ಇಲಾಖೆ, ರೈತ ಸಂಪರ್ಕ ಕೇಂದ್ರಗಳು ಅಥವಾ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಸರ್ಕಾರದಿಂದ ಲಭ್ಯವಾಗುವ ಯಾವುದೇ ಕೃಷಿ ಚಟುವಟಿಕೆಗಳಿಗೆ ಸಿಗುವ ಪ್ರಯೋಜನಗಳನ್ನು ಪಡೆದುಕೊಳ್ಳಲು ರೈತರು ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯ.
ಡಿಸೆಂಬರ್ 14ರ ತನಕ ಗಡುವು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಸೌಲಭ್ಯ ಕ್ಯಾನ್ಸಲ್
ಬರ ಪರಿಹಾರ ನಿಧಿ ಜಮಾ ಆಗಿದೆಯಾ? ಚೆಕ್ ಮಾಡಿಕೊಳ್ಳಿ
https://fruitspmk.karnataka.gov.in/MISReport/GetDetailsByAadhaar.aspx ಈ ವೆಬ್ಸೈಟ್ ಲಿಂಕ್ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಮೊದಲ ಪುಟಕ್ಕೆ ಪ್ರವೇಶ ಪಡೆಯಬಹುದು. ನಂತರ ನಿಮ್ಮ ಫ್ರೂಟ್ಸ್ ಐಡಿ FID ಯನ್ನು ನಮೂದಿಸಿ. ಈಗ ನಿಮ್ಮ ಹೆಸರು ಕಾಣಿಸಿದರೆ ನಿಮ್ಮ ಖಾತೆಗೂ ಹಣ ಜಮಾ ಆಗಿದೆ ಎಂದು ಅರ್ಥ, ಇಲ್ಲಾಂದ್ರೆ ಸ್ವಲ್ಪ ಸಮಯದಲ್ಲಿಯೇ ನಿಮ್ಮ ಖಾತೆಗೂ ಹಣ ಜಮಾ (Money Transfer) ಆಗಬಹುದು.
2000 compensation for such farmers, Check Your Name in the List
Our Whatsapp Channel is Live Now 👇