ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಇಂದೇ ಲಾಸ್ಟ್ ಡೇಟ್

Story Highlights

ತುಮಕೂರು ಜಿಲ್ಲಾ ಪಂಚಾಯತ್ (Tumkuru Zilla Panchayat) ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ತುಮಕೂರು ಜಿಲ್ಲಾ ಪಂಚಾಯತ್ (Tumkur Zilla Panchayat) ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಂದು ಡಿಸೆಂಬರ್ 4 2023 ಕೊನೆಯ ದಿನಾಂಕವಾಗಿದೆ

ಆನ್ಲೈನ್ ಮೂಲಕವೇ ಅರ್ಜಿ (apply through online) ಸಲ್ಲಿಸಬಹುದಾದದ್ದರಿಂದ ತಕ್ಷಣವೇ ಅರ್ಜಿ ಸಲ್ಲಿಸಿ. ತುಮಕೂರಿನ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಸಮಸ್ಯೆ ಇಲ್ಲದೆ ನಿಮ್ಮ ಖಾತೆ ಸೇರುತ್ತೆ ಹಣ

ಖಾಲಿ ಇರುವ ಹುದ್ದೆಗಳ ವಿವರ (About job)

ತುಮಕೂರಿನ ಗ್ರಾಮ ಪಂಚಾಯತ್ ನಲ್ಲಿ 27 ಟೆಕ್ನಿಕಲ್ ಅಸಿಸ್ಟೆಂಟ್ (technical assistant) ಟೆಕ್ನಿಕಲ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಬಹುದು ಎಂದು ತುಮಕೂರು ಜಿಲ್ಲಾ ಪಂಚಾಯತ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಹತೆ; (qualification)

ತಾಲೂಕ್ MIS ಕೋಆರ್ಡಿನೇಟರ್- ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಇ, ಬಿಸಿಎ, ಎಂಸಿಎ, ಎಂ.ಎಸ್ಸಿ ಮುಗಿಸಿರಬೇಕು. ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗೆ ಬಿಇ, ಎಂ.ಟೆಕ್ ಆಗಿರಬೇಕು. ಹಾಗೂ ಟೆಕ್ನಿಕಲ್ ಅಸಿಸ್ಟೆಂಟ್ (TAA) ಬಿ.ಎಸ್ಸಿ, ಎಂ.ಎಸ್ಸಿ ಮತ್ತು
ಟೆಕ್ನಿಕಲ್ ಅಸಿಸ್ಟೆಂಟ್ (TAH/TAF/TAS) ಬಿ.ಎಸ್ಸಿ, ಎಂ.ಎಸ್ಸಿ ತೇರ್ಗಡೆ ಹೊಂದಿದರು ಅರ್ಜಿ ಸಲ್ಲಿಸಬಹುದು.

ನಿಮ್ಮ ಜಮೀನು, ಹೊಲ ಗದ್ದೆಗಳ ಸರ್ವೆ ಸ್ಕೆಚ್ ಅನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳಿ

Govt job vacancyವಯೋಮಿತಿ! (Age)

ತುಮಕೂರು ಜಿಲ್ಲಾ ಪಂಚಾಯತ್ ಅಧಿಸೂಚನೆಯ ಪ್ರಕಾರ ನಿಯಮಾನುಸಾರ ವಯೋಮಿತಿ ಇರಬೇಕು ಹಾಗೂ ವಯೋಮಿತಿ ಸಡಿಲಿಕೆ ಕೂಡ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಆಯ್ಕೆಯಾದರೆ ತುಮಕೂರು ಜಿಲ್ಲಾ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು.

ವೇತನ! (Salary)

ತುಮಕೂರು ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಇಂಜಿನಿಯರಿಂಗ್ ಹಾಗೂ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಯ್ಕೆಯಾದರೆ ಪ್ರತಿ ತಿಂಗಳು ಮಾಸಿಕ ವೇತನ 28,000ಗಳನ್ನು ಪಡೆದುಕೊಳ್ಳಬಹುದು.

ಗುಡಿಸಲು, ಹಳೆಯ ಮನೆ ಇರೋರಿಗೆ ಹೊಸ ಮನೆ ಕಟ್ಟಿಸಿ ಕೊಡುವ ಯೋಜನೆ! ಅರ್ಜಿ ಸಲ್ಲಿಸಿ

ಆಯ್ಕೆ ಪ್ರಕ್ರಿಯೆ! (Selection process)

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಲಿಖಿತ ಪರೀಕ್ಷೆ ಯಾವಾಗ ಎಂಬ ಮಾಹಿತಿಯನ್ನ ತುಮಕೂರು ಜಿಲ್ಲಾ ಪಂಚಾಯತ್ ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಅರ್ಜಿ ಸಲ್ಲಿಸಲು

https://sevasindhuservices.karnataka.gov.in/

ಈ ಲಿಂಕ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 4 2023. ಅಂದರೆ ಇಂದೇ ಕೊನೆಯ ದಿನಾಂಕವಾಗಿದ್ದು ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.

Applications are invited for filling up the vacancies in Tumkur Zilla Panchayat

Related Stories