ನಿಮ್ಮ ಜಮೀನು, ಹೊಲ ಗದ್ದೆಗಳ ಸರ್ವೆ ಸ್ಕೆಚ್ ಅನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳಿ
ಇದು ರೈತರಿಗೆ (farmers) ಗುಡ್ ನ್ಯೂಸ್ ಎಂದೇ ಹೇಳಬಹುದು. ರೈತರು ತಮ್ಮ ಜಮೀನಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು (farmers can know about their land) ತಿಳಿದುಕೊಳ್ಳಲು ಇನ್ನು ಮುಂದೆ ಸಂಬಂಧ ಪಟ್ಟ ಕಚೇರಿಗೆ ಅಲೆದಾಡಬೇಕಿಲ್ಲ.
ಒಂದೇ ಒಂದು ಸರ್ವೇ ನಂಬರ್ (survey number) ಪಡೆದುಕೊಳ್ಳುವ ಸಲುವಾಗಿ ಸರ್ವೇ ಮಾಡುವವರನ್ನು ತಮ್ಮ ಜಮೀನಿಗೆ (Property) ಕರೆಸಬೇಕಾಗಿಲ್ಲ. ಕೈಯಲ್ಲಿ ಬಂದು ಮೊಬೈಲ್ ಇದ್ರೆ ಸಾಕು ಈ ಎಲ್ಲಾ ಮಾಹಿತಿಗಳು ತಕ್ಷಣ ನಿಮ್ಮ ಕಣ್ಣು ಮುಂದೆ ಇರುತ್ತವೆ.
ಗುಡಿಸಲು, ಹಳೆಯ ಮನೆ ಇರೋರಿಗೆ ಹೊಸ ಮನೆ ಕಟ್ಟಿಸಿ ಕೊಡುವ ಯೋಜನೆ! ಅರ್ಜಿ ಸಲ್ಲಿಸಿ
ಕಂದಾಯ ಇಲಾಖೆಯ ಹೊಸ ಸ್ಟೆಪ್!
ಹೌದು, ರಾಜ್ಯ ಕಂದಾಯ ಇಲಾಖೆ ರೈತರಿಗೆ ತಮ್ಮ ಜಮೀನಿನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ದಾರಿಯನ್ನು ಇನ್ನಷ್ಟು ಸುಗಮವಾಗಿಸಿದೆ. ರೈತರು ಕಚೇರಿಗಳಿಗೆ ಅಲೆದು ಹೆಚ್ಚು ಸಮಯ ಕಳೆದು ಅಥವಾ ದುಡ್ಡು ಖರ್ಚು ಮಾಡಿ ತಮ್ಮ ಜಮೀನಿನ ಸರ್ವೇ ನಂಬರ್ ತಿಳಿದುಕೊಳ್ಳುವ ಅಗತ್ಯವಿಲ್ಲ. ಅಥವಾ ಸರ್ವೇ ನಂಬರ್ ಕೈಯಲ್ಲಿ ಹಿಡಿದು ಜಮೀನಿನ ಬಗ್ಗೆ ಮಾಹಿತಿ ಪಡೆಯಲು ಅಲೆಯಬೇಕಿಲ್ಲ. ಕ್ಷಣಮಾತ್ರದಲ್ಲಿ ಮೊಬೈಲ್ ಆಪ್ (mobile app) ಬಳಸಿ ಈ ಕೆಲಸ ಮಾಡಿಕೊಳ್ಳಬಹುದು.
ಹೊಸ ಆಪ್ ಬಿಡುಗಡೆ ಮಾಡಿದ ಕಂದಾಯ ಇಲಾಖೆ! (New App by revenue department)
1960ರ ಸರ್ವೇ ನಕ್ಷೆಯ ಆಧಾರದ ಮೇಲೆ ಕಂದಾಯ ಇಲಾಖೆ ಹೊಸ ಮೊಬೈಲ್ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ಅದುವೇ ದಿಶಾಂಕ್ ಆಪ್ (Dishaank application)! ನೀವು ನಿಮ್ಮ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಭೂಮಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಕೂಡ ದಿಶಾಂಕ್ ಆಫ್ ನಲ್ಲಿ ಪಡೆದುಕೊಳ್ಳಬಹುದು.
ಮಹಿಳೆಯರು ಸ್ವಂತ ವ್ಯಾಪಾರ ಮಾಡೋಕೆ ಸಿಗುತ್ತೆ ₹2.50 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ
ಏನಿದು ದಿಶಾಂಕ್ ಆಪ್ (Dishaank application)
ಸಾಮಾನ್ಯ ಜನರು ಕೂಡ ತಾವು ನಿಂತಿರುವ ಜಾಗ ಯಾರ ಮಾಲೀಕತ್ವದಲ್ಲಿ (ownership) ಇದೆ ಎನ್ನುವಂತಹ ವಿಚಾರವನ್ನು ಕೂಡ ಇಡೀ ಅಪ್ಲಿಕೇಶನ್ ಬಳಸಿ ತಿಳಿದುಕೊಳ್ಳಬಹುದು. ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ದಿಶಾಂಕ್ ಜನಸಾಮಾನ್ಯರಿಗೆ ಬಹಳ ಅನುಕೂಲಕರವಾಗಿದೆ ಎಂದು ಹೇಳಬಹುದು. ಈ ಅಪ್ಲಿಕೇಶನ್ ಹೇಗೆ ಬಳಸುವುದು ಎಂಬುದನ್ನು ನೋಡೋಣ.
ಡಿಸೆಂಬರ್ 14ರ ತನಕ ಗಡುವು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಸೌಲಭ್ಯ ಕ್ಯಾನ್ಸಲ್
ದಿಶಾಂಕ್ ಆಪ್ ಬಳಸುವ ವಿಧಾನ! (How to use Dishaank app)
*ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ Dishaank ಎಂದು ಟೈಪ್ ಮಾಡಿ. ಈಗ ಕರ್ನಾಟಕ ಸರ್ಕಾರದ ದಿಶಾಂಕ್ ಆಪ್ ಕಾಣಿಸುತ್ತದೆ.
*ಈ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.
*ಜಾಗದ ಮಾಲೀಕತ್ವದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದರಿಂದ ಹಿಡಿದು ರೈತರ ಜಮೀನಿನ ಬಗ್ಗೆಯೂ ಕೂಡ ಮಾಹಿತಿ ಪಡೆಯಬಹುದು. ಅಷ್ಟೇ ಅಲ್ಲದೆ ನಿಮ್ಮ ಸುತ್ತಲಿನ ನಕ್ಷೆಯ ಬಗ್ಗೆ ಮಾಹಿತಿ ಸಿಗುತ್ತದೆ.
*ಜಿಲ್ಲೆ, ತಾಲೂಕು, ಹೋಬಳಿ, ಮೊದಲಾದ ಗಡಿ ಭಾಗಗಳನ್ನು ಬೇರೆ ಬೇರೆ ಬಣ್ಣಗಳಲ್ಲಿ ಗುರುತಿಸಲಾಗಿದ್ದು ನೀವು ನಿಮಗೆ ಸಂಬಂಧಪಟ್ಟ ಜಮೀನಿನ ಬಗ್ಗೆ ಮಾಹಿತಿ ಪಡೆಯಬಹುದು.
*ನಿಮ್ಮ ಸರ್ವೆ ನಂಬರ್ ನಮೂದಿಸುವುದರ ಮೂಲಕ ಜಮೀನಿನ ಸುತ್ತಮುತ್ತ ಇರುವ ರಸ್ತೆ ನದಿ ಹೀಗೆ ಮೊದಲಾದ ಭೂಪ್ರದೇಶಗಳ ಬಗ್ಗೆಯೂ ಕೂಡ ತಿಳಿದುಕೊಳ್ಳಬಹುದು.
ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಬಹಳ ಉತ್ತಮವಾದ ಅಪ್ಲಿಕೇಶನ್ ಇದಾಗಿದ್ದು ಸರ್ಕಾರಿ ಅಧಿಕಾರಿಗಳು ಸರ್ವೇ ಮಾಡುವ ಸಮಯದಲ್ಲಿಯೂ ಇದೆ ಅಪ್ಲಿಕೇಶನ್ ಬಳಸುತ್ತಾರೆ. ಹಾಗಾಗಿ ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿರುವ ದಿಶಾಂಕ್ ಅಪ್ಲಿಕೇಶನ್ ಭೂಮಿಯ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುತ್ತದೆ.
ನಿಮ್ಮ ಜಮೀನಿಗೆ ಕಾಲುದಾರಿ, ಬಂಡಿದಾರಿ ಇದೆಯೋ ಇಲ್ವೋ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ
Know the survey sketch of your land and Property through mobile
Our Whatsapp Channel is Live Now 👇