Karnataka NewsBangalore News

ಗುಡಿಸಲು, ಹಳೆಯ ಮನೆ ಇರೋರಿಗೆ ಹೊಸ ಮನೆ ಕಟ್ಟಿಸಿ ಕೊಡುವ ಯೋಜನೆ! ಅರ್ಜಿ ಸಲ್ಲಿಸಿ

ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಜನರಿಗೆ ಮನೆ ಒದಗಿಸಿ (Own house for poor people) ಕೊಡುವಂತಹ ಯೋಜನೆ ಒಂದನ್ನು ರಾಜ್ಯ ಸರ್ಕಾರ (State government) ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಸಾಕಷ್ಟು ಜನ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದೆ

ನಿಮ್ಮದೇ ಆಗಿರುವ ಸಣ್ಣ ಜಾಗ ಇದ್ದರೆ ಅಥವಾ ಹಳೆಯ ಮನೆ ಹಾಗೂ ಗುಡಿಸಲು ಇದ್ದರೆ ಅದೇ ಜಾಗದಲ್ಲಿ ಹೊಸದಾಗಿರುವ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿ ಕೊಡುತ್ತಿದೆ. ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿದೆ.

Housing Scheme

ಹಲವರಿಗೆ ಉಪಯೋಗವಾಗುವಂತಹ ಈ ರಾಜ್ಯ ಸರ್ಕಾರದ ಹೊಸ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಿ ಹಾಗೂ ಇತರರಿಗೂ ತಿಳಿಸಿ. ಯಾಕೆಂದರೆ ರಾಜ್ಯದಲ್ಲಿ ವಾಸಿಸುವ ಜನರಿಗೆ ಈ ಯೋಜನೆಯಿಂದ ಪ್ರಯೋಜನ ಆಗಲಿದೆ. ಎಲ್ಲರೂ ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು ಹೋಮ್ ಲೋನ್ (Home Loan) ಪಡೆಯುವುದು, ಜೀವನ ಪರ್ಯಂತ ಉಳಿತಾಯ ಮಾಡುವುದು ಅಸಾಧ್ಯ.

ಹಾಗಾದ್ರೆ ಸರ್ಕಾರ ಸ್ವಂತ ವಸತಿ ನಿರ್ಮಾಣಕ್ಕೆ ಅನುಕೂಲವಾಗುವಂತಹ ಯಾವ ವಸತಿ ಯೋಜನೆಯನ್ನು ಜಾರಿಗೆ ತಂದಿದೆ ಎಂಬುದನ್ನು ನೋಡುವುದಾದರೆ,

ಮಹಿಳೆಯರು ಸ್ವಂತ ವ್ಯಾಪಾರ ಮಾಡೋಕೆ ಸಿಗುತ್ತೆ ₹2.50 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ

ಬಸವ ವಸತಿ ಯೋಜನೆ:(Basava vasati Yojana)

ರಾಜ್ಯದಲ್ಲಿ ವಾಸಿಸುವ ದುರ್ಬಲ ವರ್ಗದವರು ಬಡ ಕುಟುಂಬಗಳು (poor family) ತಮ್ಮದೇ ಆಗಿರುವ ಸ್ವಂತ ಮನೆ ನಿರ್ಮಾಣ (built own house) ಮಾಡಿ ಕೊಳ್ಳುವುದಕ್ಕೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ (RGRHCL) ಅಡಿಯಲ್ಲಿ ಬಸವ ವಸತಿ ಯೋಜನೆಯನ್ನು 2022 ರಲ್ಲಿ ಆರಂಭಿಸಲಾಗಿದೆ

ಇದಕ್ಕಾಗಿ ರಾಜ್ಯ ಸರ್ಕಾರ 2,500ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು ರಾಜ್ಯದಲ್ಲಿ ಒಟ್ಟು ಎರಡು ಲಕ್ಷ ಬಡ ಕುಟುಂಬಗಳಿಗೆ ಸ್ವಂತ ಸೂರು ನಿರ್ಮಾಣ ಮಾಡಿಕೊಡುವ ಕನಸು ಹೊಂದಿದೆ ರಾಜ್ಯ ಸರ್ಕಾರ.

ಡಿಸೆಂಬರ್ 14ರ ತನಕ ಗಡುವು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಸೌಲಭ್ಯ ಕ್ಯಾನ್ಸಲ್

ಯಾರು ಅರ್ಜಿ ಸಲ್ಲಿಸಬಹುದು! (Who can apply)

Own House Scheme*ಅರ್ಜಿ ಸಲ್ಲಿಸುವ ಅಭ್ಯರ್ಥಿ ಕರ್ನಾಟಕದ ಮೂಲ ನಿವಾಸಿ ಆಗಿರಬೇಕು.

*ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 32,000 ಒಳಗೇ ಇರಬೇಕು.

*ಸ್ವಂತ ಮನೆ ಹೊಂದಿರುವವರು ಅಥವಾ ಸರಕಾರದ ಇತರ ವಸತಿ ಯೋಜನೆಯ ಪ್ರಯೋಜನ ಪಡೆದುಕೊಂಡಿರುವವರು ಬಸವ ವಸತಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

*ಬಡತನ ರೇಖೆಗಿಂತ ಕೆಳಗಿರುವವರು ಹಾಗೂ ಹಿಂದುಳಿದ ವರ್ಗ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ನಿಮ್ಮ ಜಮೀನಿಗೆ ಕಾಲುದಾರಿ, ಬಂಡಿದಾರಿ ಇದೆಯೋ ಇಲ್ವೋ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಬಸವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Documents)

ಆಧಾರ್ ಕಾರ್ಡ್ (Aadhaar card)

ಆದಾಯ ಪ್ರಮಾಣ ಪತ್ರ (income certificate)

ಜಾತಿ ಪ್ರಮಾಣ ಪತ್ರ caste (certificate)

ಸ್ವಂತ ಜಾಗ ಹೊಂದಿದರೆ ಅದರ ದಾಖಲೆ (Property Details)

ಬ್ಯಾಂಕ್ ಖಾತೆಯ ವಿವರ (Bank Account Details)

ಅಭ್ಯರ್ಥಿಯ ಭಾವಚಿತ್ರ.

ಇಂತಹ ರೈತರಿಗೆ 8 ತಿಂಗಳೊಳಗೆ ಸರ್ಕಾರಿ ಜಮೀನು ಮಂಜೂರು! ಸರ್ಕಾರ ಮಹತ್ವದ ನಿರ್ಧಾರ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಬಸವ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕರ್ನಾಟಕದ ಅಧಿಕೃತ ವೆಬ್ಸೈಟ್ https://ashraya.karnataka.gov.in/index.aspx ಕ್ಲಿಕ್ ಮಾಡಿ.

ವೆಬ್ಸೈಟ್ನ ಮುಖಪುಟದಲ್ಲಿ ಆನ್ಲೈನ್ ಅಪ್ಲೈ ಮಾಡಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಈಗ ನೀವು ನಿಮಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀಡಬೇಕು.

ನಿಮ್ಮ ಹೆಸರು, ಜನ್ಮ ದಿನಾಂಕ, ಊರು, ಆಧಾರ್ ಕಾರ್ಡ್ ಸಂಖ್ಯೆ ಮೊದಲಾದ ಮಾಹಿತಿಗಳನ್ನ ನೀಡಬೇಕು.

ಅರ್ಜಿ ಭರ್ತಿ ಮಾಡಿದ ನಂತರ ಮೇಲೆ ತಿಳಿಸಲಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಇಷ್ಟು ಮಾಡಿ ಸಬ್ಮಿಟ್ (submit) ಎಂದು ಕೊಟ್ಟರೆ ನಿಮ್ಮ ಅರ್ಜಿ ಸರ್ಕಾರಕ್ಕೆ ಸಲ್ಲಿಕೆ ಆಗುತ್ತದೆ. ನಂತರ ಇದನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡುತ್ತದೆ.

ಬಸವ ವಸತಿ ಯೋಜನೆ ಅಡಿಯಲ್ಲಿ ನಿಮ್ಮ ಸ್ವಂತ ಸಣ್ಣ ಜಾಗ ಹೊಂದಿದ್ದರೆ ಅದರಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರ ಶೇಕಡ 85% ನಷ್ಟು ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ಸುಮಾರು 1.5 ಲಕ್ಷ ರೂಪಾಯಿಗಳವರೆಗೆ ಸರ್ಕಾರದಿಂದ ಪಡೆದುಕೊಳ್ಳಬಹುದು.

ಆಯ್ಕೆ ಪ್ರಕ್ರಿಯೆ ಹೇಗೆ? (Selection process)

ಅರ್ಜಿ ಸಲ್ಲಿಕೆ ಆದ ನಂತರ ಕ್ಷೇತ್ರದ ಶಾಸಕರು ಅಥವಾ ಗ್ರಾಮ ಪಂಚಾಯತ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ, ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಬಸವ ವಸತಿ ಯೋಜನೆಯ ಅಧಿಕಾರಿಗಳು ಈ ಅರ್ಜಿಯನ್ನು ಮಾನ್ಯ ಮಾಡುತ್ತಾರೆ.

ನಿಮ್ಮ ಅರ್ಜಿ ಸ್ವೀಕೃತಿ ಆಗಿದ್ದರೆ ಸ್ವಂತ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಧನ ಸಹಾಯ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿ ಸ್ಟೇಟಸ್ (know your application status) ಅನ್ನು ಆನ್ಲೈನ್ ಮೂಲಕ https://ashraya.karnataka.gov.in/index.aspx ಈ ವೆಬ್ಸೈಟ್ನಲ್ಲಿ ತಿಳಿದುಕೊಳ್ಳಬಹುದು.

Govt Scheme to build a new house for empty land, old house Holders

Our Whatsapp Channel is Live Now 👇

Whatsapp Channel

Related Stories