ಡಿಸೆಂಬರ್ 14ರ ತನಕ ಗಡುವು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಸೌಲಭ್ಯ ಕ್ಯಾನ್ಸಲ್

ಬ್ಯಾಂಕ್ ಖಾತೆಗೆ (Bank Account) ರೇಷನ್ ಕಾರ್ಡ್ ಗೆ ಮೊದಲಾದ ವಿಷಯಗಳಿಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಮಾಡಿಕೊಳ್ಳುವುದು ಕಡ್ಡಾಯವಾಗಿದೆ

ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಾದ (guarantee schemes) ಅನ್ನಭಾಗ್ಯ ಯೋಜನೆ (Annahbhagya Yojana) ಗೃಹಲಕ್ಷ್ಮಿ ಯೋಜನೆ (Gruha lakshmi scheme) ಸಹಾಯಧನ ನಿಮಗೆ ಇನ್ನು ಮುಂದೆಯೂ ಸಿಗಬೇಕಾ?

ಹಾಗಾದ್ರೆ ತಕ್ಷಣವೇ ಈ ಕೆಲಸ ಮಾಡಿ, ಒಂದು ವೇಳೆ ನೀವು ಈ ಕೆಲಸ ಮಾಡದೆ ಇದ್ದಲ್ಲಿ ನಿಮಗೆ ಸರ್ಕಾರದಿಂದ ಸಿಗುವ ಯಾವ ಪ್ರಯೋಜನಗಳು ಕೂಡ ಸಿಗುವುದಿಲ್ಲ.

ಇಷ್ಟಕ್ಕೂ ನಾವು ಮಾಡಬೇಕಾದ ಕೆಲಸ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಡಿಸೆಂಬರ್ 14ರ ತನಕ ಗಡುವು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಸೌಲಭ್ಯ ಕ್ಯಾನ್ಸಲ್ - Kannada News

ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ₹58,500 ರೂಪಾಯಿ ಸಹಾಯಧನ; ಅರ್ಜಿ ಸಲ್ಲಿಸಿ

ಆಧಾರ್ ಕಾರ್ಡ್ ಅಪ್ಡೇಟ್! (Aadhar Card update)

ಭಾರತೀಯರು ತಮ್ಮನ್ನ ತಾವು ಗುರುತಿಸಿಕೊಳ್ಳುವುದಕ್ಕೆ ಇರುವ ಮೂಲ ಆಧಾರವೇ ಆಧಾರ್ ಕಾರ್ಡ್ (Aadhar Card). ನಿಮ್ಮ ಪರಿಚಯವನ್ನು ಸ್ವತಃ ಬಾಯಲ್ಲಿ ಹೇಳಿಕೊಳ್ಳುವುದಕ್ಕಿಂತ ಆಧಾರ್ ಕಾರ್ಡ್ ತೋರಿಸಿದರೆ ಜನ ನಂಬುತ್ತಾರೆ ಎನ್ನುವಷ್ಟರ ಮಟ್ಟಿಗೆ ಆಧಾರ್ ಕಾರ್ಡ್ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ.

ನೀವು ಮಗುವಿನ ಹೆಸರನ್ನು ಶಾಲೆಗೆ ಸೇರಿಸಲು ಆಧಾರ್ ಕಾರ್ಡ್ ಬೇಕು. ಅದೇ ರೀತಿ ಮನೆಯ ಕುಟುಂಬದ ಸದಸ್ಯರು ತೀರಿಕೊಂಡಾಗ ಮರಣ ಪ್ರಮಾಣ ಪತ್ರ ಮಾಡಿಸುವುದಕ್ಕೂ ಆಧಾರ್ ಕಾರ್ಡ್ ಬೇಕು. ಅಂದರೆ ಹುಟ್ಟಿನಿಂದ ಸಾಯುವವರೆಗಿನ ಪ್ರತಿಯೊಂದು ವ್ಯವಹಾರಗಳಲ್ಲಿಯೂ ಕೂಡ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ.

ನಿಮ್ಮ ಜಮೀನಿಗೆ ಕಾಲುದಾರಿ, ಬಂಡಿದಾರಿ ಇದೆಯೋ ಇಲ್ವೋ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಡಿಸೆಂಬರ್ 14ರ ವರೆಗೆ ಈ ಕೆಲಸ ಮಾಡಿ!

Aadhaar Card Update2013ಕ್ಕೂ ಮೊದಲೇ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದರೆ ಅಂದರೆ ಆಧಾರ್ ಕಾರ್ಡ್ ಮಾಡಿಸಿ 10 ವರ್ಷಗಳು ಕಳೆದಿದ್ದರೆ ಈಗ ಅದರ ನವೀಕರಣಕ್ಕೆ ಸರಿಯಾದ ಸಮಯ, ಕಳೆದೆ ಜೂನ್ ತಿಂಗಳಿನಲ್ಲಿಯೇ ಆಧಾರ್ ಕಾರ್ಡ್ ತಿದ್ದುಪಡಿ ಅವಧಿ ಮುಗಿಯಬೇಕಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದಾಗಿ (technical error) ಎಲ್ಲರೂ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ, ಈ ಹಿನ್ನೆಲೆಯಲ್ಲಿ ಮುಂಬರುವ ಡಿಸೆಂಬರ್ 14ರವರೆಗೆ ಆಧಾರ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಏನೆಲ್ಲ ತಿದ್ದುಪಡಿ ಮಾಡಬಹುದು? (Aadhaar Card correction)

ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಜನ್ಮ ದಿನಾಂಕ, ವಿಳಾಸ, ಲಿಂಗ, ಮೊಬೈಲ್ ಸಂಖ್ಯೆ ಈ ರೀತಿ ಎಲ್ಲಾ ವಿವರಗಳನ್ನು ಕೂಡ ಬದಲಾಯಿಸಬಹುದು. ಇತ್ತೀಚಿಗೆ ಆಧಾರ್ ಕಾರ್ಡ್ ನ ಫೋಟೋ ಬದಲಾಯಿಸಲು ಕೂಡ ಸರ್ಕಾರ ಅನುಮತಿ ನೀಡಿದೆ.

ಆಧಾರ್ ಕಾರ್ಡ್ ನಲ್ಲಿ ವಿಳಾಸ ಎಷ್ಟು ಬಾರಿ ಬೇಕಾದರೂ ಬದಲಾಯಿಸಿಕೊಳ್ಳಬಹುದು, ಆದರೆ ಹೆಸರು, ಜನ್ಮ ದಿನಾಂಕವನ್ನು ಎರಡು ಬಾರಿ ಹಾಗೂ ಲಿಂಗವನ್ನು ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಬಹುದು.

ಇಂತಹ ರೈತರಿಗೆ 8 ತಿಂಗಳೊಳಗೆ ಸರ್ಕಾರಿ ಜಮೀನು ಮಂಜೂರು! ಸರ್ಕಾರ ಮಹತ್ವದ ನಿರ್ಧಾರ

ಆಧಾರ್ ಕಾರ್ಡ್ ತಿದ್ದುಪಡಿ ಮಾಡದೆ ಇದ್ರೆ ಕಾರ್ಡ್ ಸ್ಥಗಿತ!

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ (UIDAI);ತಿಳಿಸಿರುವಂತೆ 10 ವರ್ಷಗಳಿಗಿಂತ ಹಳೆಯ ಆಧಾರ್ ಕಾರ್ಡ್ ನೀವು ಬಳಸುತ್ತಿದ್ದರೆ ಅದನ್ನು ತಕ್ಷಣವೇ ನವೀಕರಿಸಿಕೊಳ್ಳಿ. ಇಲ್ಲವಾದರೆ ನಿಮ್ಮ ಯಾವ ಇತರ ದಾಖಲೆಗಳೊಂದಿಗೆ ಆಧಾರ್ ಕಾರ್ಡ್ ಮ್ಯಾಚ್ ಆಗುವುದಿಲ್ಲ.

ಉದಾಹರಣೆಗೆ ಬ್ಯಾಂಕ್ ಖಾತೆಗೆ (Bank Account) ರೇಷನ್ ಕಾರ್ಡ್ ಗೆ ಮೊದಲಾದ ವಿಷಯಗಳಿಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನವೀಕರಿಸಿದ ಮಾಹಿತಿ ಇಲ್ಲದೆ ಇದ್ದಲ್ಲಿ ಈ ಲಿಂಕಿಂಗ್ ಪ್ರೋಸೆಸ್ ನಡೆಯುವುದಿಲ್ಲ. ಆಧಾರ್ ಕಾರ್ಡ್ ಉಪಯೋಗಕ್ಕೆ ಬರುವುದಿಲ್ಲ.

ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ಸ್ಥಗಿತಗೊಳ್ಳಬಹುದು. ಡಿಸೆಂಬರ್ 14ರ ಒಳಗೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವ ಎಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಿ.

ಗೃಹಲಕ್ಷ್ಮಿ ಹಣ ಡಿಸೆಂಬರ್ ನಲ್ಲೂ ಬಾರದೇ ಇದ್ರೆ, ಈ ದಾಖಲೆ ನಿಮ್ಮ ಬಳಿ ಇರಲೇಬೇಕು

ಆಧಾರ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ?

ಹತ್ತಿರದ ಸೇವಾ ಕೇಂದ್ರಗಳಲ್ಲಿ ಅಥವಾ ಆಧಾರ್ ಸೆಂಟರ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು. ಅಥವಾ ಮೈ ಆಧಾರ್ (my Aadhar) ಎನ್ನುವ ಅಪ್ಲಿಕೇಶನ್ ಮೂಲಕವೂ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

December 14th is Deadline, Gruha Lakshmi, Annabhagya Yojana Facility will Cancel

Follow us On

FaceBook Google News

December 14th is Deadline, Gruha Lakshmi, Annabhagya Yojana Facility will Cancel