ರೈತರಿಗೆ ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿ ದಾರಿಯ (agriculture land way for farmers) ಅವಶ್ಯಕತೆ ಇರುತ್ತದೆ, ಅದೇಷ್ಟೋ ಸಮಯದಲ್ಲಿ ರೈತರು ಈ ದಾರಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಇದಕ್ಕೆ ಮುಖ್ಯ ಕಾರಣ ರೈತರು ಖಾಸಗಿ ಜಮೀನಿನ ಮೂಲಕ ತಮ್ಮ ಜಮೀನಿಗೆ ಹೋಗಬೇಕಾದ ಅನಿವಾರ್ಯತೆ ಇರುತ್ತದೆ
ಅಂತಹ ಸಂದರ್ಭದಲ್ಲಿ ಖಾಸಗಿ ಜಮೀನು ಹೊಂದಿರುವವರು ದಾರಿ ಬಿಟ್ಟು ಕೊಡದೆ ಇದ್ದಾಗ ರೈತರಿಗೆ ಸಮಸ್ಯೆ ಆಗುವುದು ಸಹಜ. ಇದೀಗ ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ (State government) ಮಧ್ಯ ಪ್ರವೇಶಿಸಿದ್ದು ರೈತರಿಗೆ ನಿಜಕ್ಕೂ ಸರ್ಕಾರ ದಾರಿ ಮಾಡಿಕೊಡಲಿದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದೆ.
ಇಂತಹ ರೈತರಿಗೆ 8 ತಿಂಗಳೊಳಗೆ ಸರ್ಕಾರಿ ಜಮೀನು ಮಂಜೂರು! ಸರ್ಕಾರ ಮಹತ್ವದ ನಿರ್ಧಾರ
ಸರ್ಕಾರ ಕಾಲುದಾರಿ ಮಾಡಿಕೊಡಲು ಅಸಾಧ್ಯ!
ಸಾಕಷ್ಟು ರೈತರು ಸರಕಾರ ನಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಮಾಡಿಕೊಡಲಿದೆ ಎಂದೇ ಭಾವಿಸಿದ್ದಾರೆ. ಆದರೆ ಇಲ್ಲದೇ ಇರುವ ದಾರಿಯನ್ನು ಸರ್ಕಾರ ಸೃಷ್ಟಿ ಮಾಡಿಕೊಡಲು ಸಾಧ್ಯವಿಲ್ಲ.
ಸರ್ಕಾರ ಹೇಳಿರುವ ಪ್ರಕಾರ ಯಾವುದಾದರೂ ಕಾಲುದಾರಿ ಅಥವಾ ಬಂಡಿದಾರಿ ಯಾವುದಾದರೂ ಕಾರಣಗಳಿಂದ ಮುಚ್ಚಿ ಹೋಗಿದ್ದರೆ ಅಥವಾ ಬಲವಂತವಾಗಿ ಯಾರಾದರೂ ಮುಚ್ಚಿಸಿದ್ದರೆ ಅದನ್ನು ತಹಶೀಲ್ದಾರರ ಗಮನಕ್ಕೆ ತಂದು ಅವರ ಮೂಲಕ ಜನರಿಗೆ ದಾರಿ ಹಿಂಪಡೆದುಕೊಳ್ಳಲು ಸಹಾಯ ಮಾಡಲಿದೆ.
ಇದಕ್ಕಾಗಿ ಗ್ರಾಮ ನಕ್ಷೆಯಲ್ಲಿ ಯಾವುದಾದರೂ ಜಮೀನಿಗೆ (Property) ಅಂಟಿಕೊಂಡಂತೆ ಈ ಹಿಂದೆ ದಾರಿ ಇತ್ತೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ನಕ್ಷೆಯಲ್ಲಿ ದಾರಿ ಕಾಣಿಸಿದಾಗ ಮಾತ್ರ ಅದನ್ನು ಸರ್ಕಾರದಿಂದ ಪಡೆದುಕೊಳ್ಳಬಹುದು ಹೊರತಾಗಿ ಸರ್ಕಾರವೇ ರೈತರಿಗೆ ಹೊಸದಾಗಿ ದಾರಿ ಮಾಡಿಕೊಡಲು ಸಾಧ್ಯವಿಲ್ಲ.
ಗೃಹಲಕ್ಷ್ಮಿ ಹಣ ಡಿಸೆಂಬರ್ ನಲ್ಲೂ ಬಾರದೇ ಇದ್ರೆ, ಈ ದಾಖಲೆ ನಿಮ್ಮ ಬಳಿ ಇರಲೇಬೇಕು
ಗ್ರಾಮ ನಕ್ಷೆಯಲ್ಲಿ (village map) ದಾರಿ ಇದೆಯೋ ಇಲ್ಲವೋ ತಿಳಿಯಿರಿ
ಗ್ರಾಮ ನಕ್ಷೆಯಲ್ಲಿ ದಾರಿಯ ಬಗ್ಗೆ ಉಲ್ಲೇಖ ಇದ್ದರೆ ಮಾತ್ರ ಸರ್ಕಾರದಿಂದ ಆ ದಾರಿ ರೈತರಿಗೆ ಸಿಗಲಿದೆ. ಹಾಗಾದ್ರೆ ಗ್ರಾಮ ನಕ್ಷೆಯಲ್ಲಿ ತಮ್ಮ ಜಮೀನಿಗೆ (Agriculture Land) ಅಂಟಿಕೊಂಡಂತೆ ರಸ್ತೆ ಇದೆಯೋ ಇಲ್ಲವೋ ಎಂಬುದನ್ನು ರೈತರು ತಿಳಿದುಕೊಳ್ಳಲು ಕಚೇರಿಗೆ ಅಲೆದಾಡಬೇಕಿಲ್ಲ. ಅದರ ಬದಲು ಮೊಬೈಲ್ನಲ್ಲಿ ಮನೆಯಲ್ಲಿಯೇ ಕುಳಿತು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
ರೇಷನ್ ಕಾರ್ಡ್ ನಿಯಮ ಬದಲಾವಣೆ, ಬಿಪಿಎಲ್ ಕಾರ್ಡ್ ರದ್ದಾಗುವ ಮುನ್ನ ಈ ಕೆಲಸ ಮಾಡಿ
ಮೊಬೈಲ್ ನಲ್ಲಿ ಚೆಕ್ ಮಾಡಿ ದಾರಿಯ ಬಗ್ಗೆ ಮಾಹಿತಿ
ರೈತರು ಇದೀಗ ಆನ್ಲೈನ್ ಮೂಲಕ ಸಂಪೂರ್ಣವಾಗಿ ತಮ್ಮ ಜಮೀನಿನ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಸರ್ವೇ ನಂಬರ್ ಒಂದು ಇದ್ರೆ ಸಾಕು ಜಮೀನಿನ ಸುತ್ತಮುತ್ತ ಇರುವ ದಾರಿಗಳ ಬಗ್ಗೆ, ಹಳ್ಳ ಕೊಳ್ಳಗಳ ಬಗ್ಗೆ, ರಸ್ತೆಯ ಬಗ್ಗೆ, ಜಮೀನಿನ ಅಕ್ಕ ಪಕ್ಕದಲ್ಲಿ ಯಾವ ಜಮೀನು ಇದೆ ಅಥವಾ ಯಾವ ರೀತಿ ನೀರಿನ ವ್ಯವಸ್ಥೆ ಇದೆ ಎಲ್ಲವನ್ನು ಕೂಡ ಸುಲಭವಾಗಿ ತಿಳಿದುಕೊಳ್ಳಬಹುದು.
ಗ್ರಾಮ ನಕ್ಷೆಯ ಎಡಗಡೆ ಇರುವಂತಹ ಕಾಲಂನಲ್ಲಿ ಗಡಿ ರೇಖೆ, ಸರ್ವೇ ನಂಬರ್ ಗಡಿ, ಕಾಲುದಾರಿ ಡಾಂಬರು ರಸ್ತೆ ಹಳ್ಳ ಗಳು ಮೊದಲಾದ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ಅನ್ನದಾತ ರೈತರಿಗೆ ಭರ್ಜರಿ ಗಿಫ್ಟ್! ಸಿಗಲಿದೆ ಎಲ್ಲಾ ಕೃಷಿ ಉಪಕರಣಗಳ ಮೇಲೆ ಭಾರಿ ಸಬ್ಸಿಡಿ
ಗ್ರಾಮ ನಕ್ಷೆ ಪಡೆದುಕೊಳ್ಳುವುದು ಹೇಗೆ!
ಗ್ರಾಮ ನಕ್ಷೆಯನ್ನು ಪಡೆದುಕೊಳ್ಳಲು ರೈತರು ಕಂದಾಯ ಇಲಾಖೆಯ https://landrecords.karnataka.gov.in/service3/ ಈ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ನಂತರ ಗ್ರಾಮ ನಕ್ಷೆ ಪಡೆದುಕೊಳ್ಳಲು ಸರ್ವೇ ನಂಬರ್ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮೊದಲಾದ ಮಾಹಿತಿಯನ್ನು ಭರ್ತಿ ಮಾಡಬೇಕು.
ಪಿ ಡಿ ಎಫ್ ಪೇಜ್ ಒಂದು ತೆರೆದುಕೊಳ್ಳುತ್ತದೆ ನೀವು ಇದನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಕಾಲುದಾರಿ ಅಥವಾ ಬಂಡಿದಾರಿ ಇದ್ದು ಅದು ನಿಮಗೆ ಈಗ ಲಭ್ಯವಾಗದೆ ಇದ್ದಲ್ಲಿ ತಹಶೀಲ್ದಾರರ ಗಮನಕ್ಕೆ ತಂದರೆ ಮತ್ತೆ ನಿಮಗೆ ದಾರಿ ಲಭ್ಯವಾಗುವಂತೆ ಸರ್ಕಾರವೇ ಮಾಡಿಕೊಡುತ್ತದೆ, ಹಾಗಾಗಿ ಗ್ರಾಮ ನಕ್ಷೆ ಡೌನ್ಲೋಡ್ (download) ಮಾಡಿಕೊಂಡು ನಿಮ್ಮ ಜಮೀನಿನ (Property) ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.
Check whether the road to your agricultural land is there or not
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.