Karnataka NewsBangalore News

ರೇಷನ್ ಕಾರ್ಡ್ ನಿಯಮ ಬದಲಾವಣೆ, ಬಿಪಿಎಲ್ ಕಾರ್ಡ್ ರದ್ದಾಗುವ ಮುನ್ನ ಈ ಕೆಲಸ ಮಾಡಿ

ದೇಶದಲ್ಲಿ ಇರುವ ಬಡವರಿಗೆ, ನಿರ್ಗತಿಕರಿಗೆ ಅನುಕೂಲ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರ (Central government) ಪಡಿತರ ವಿತರಣೆ ವ್ಯವಸ್ಥೆಯನ್ನು ಆರಂಭಿಸಿ ದೇಶದಲ್ಲಿ ಇರುವ ಹಸಿವು ನಿರ್ಮೂಲನೆಗಾಗಿ ಪಡಿತರ ವಸ್ತುಗಳನ್ನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (below poverty line family) ಬಿಪಿಎಲ್ ಕಾರ್ಡ್ (BPL card) ವಿತರಣೆ ಮಾಡುವ ಮೂಲಕ ನೀಡಲಾಗುತ್ತದೆ.

ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ, ಪಡಿತರ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳುವುದು ಮಾತ್ರವಲ್ಲದೆ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನಗಳು ಕೂಡ ಲಭ್ಯವಾಗುತ್ತದೆ.

Good news for APL, BPL card holders, more free service from now on

ರೈತರ ಖಾತೆಗೆ ₹2,000 ರೂಪಾಯಿ ಜಮಾ! ರಾಜ್ಯ ಸರ್ಕಾರದಿಂದ ಮತ್ತೊಂದು ಯೋಜನೆ

ಬಿಪಿಎಲ್ ಕಾರ್ಡ್ ಇದ್ರೆ ಬೆನಿಫಿಟ್ (BPL card benefits)

ನಮ್ಮ ರಾಜ್ಯ ಒಂದರಲ್ಲಿಯೇ 1.27 ಕೋಟಿ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ವಿತರಣೆ ಮಾಡಲಾಗಿದ್ದು 4.73 ಕೋಟಿಗೂ ಅಧಿಕ ಕುಟುಂಬದವರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ರೇಷನ್ ಕಾರ್ಡ್ (Ration Card) ಪಡೆದುಕೊಳ್ಳಲು ಅದರದ್ದೇ ಆದ ಮಾನದಂಡಗಳು (criteria) ಕೂಡ ಇದೆ, ಒಂದು ವೇಳೆ ಸರ್ಕಾರದ ನಿಯಮವನ್ನು ಮೀರಿ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು ಪ್ರಯತ್ನಿಸಿದರೆ ಅದು ಕಾನೂನುಬಾಹಿರವಾಗುತ್ತದೆ ಹಾಗೂ ಅಂತಹ ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತದೆ (Ration Card Cancellation).

ಗೃಹಲಕ್ಷ್ಮಿ ಬಾಕಿ ಮೊತ್ತ ಜಮೆ, ಇಂತಹ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿ

ಇಂತಹ ಬಿಪಿಎಲ್ ಕಾರ್ಡ್ ಗಳು ರದ್ದು (BPL card cancellation)

BPL Ration Cardಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಹೇರಿಕೆ ಮಾಡಿರುವ ಮಾನದಂಡಗಳನ್ನು ಮೀರಿ ಸಾಕಷ್ಟು ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಈ ಹಿನ್ನೆಯಲ್ಲಿ ಇಂತಹ ರೇಷನ್ ಕಾರ್ಡ್ ದಾರರನ್ನು ಗುರುತಿಸಿ ಅವರ ರೇಷನ್ ಕಾರ್ಡ್ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಅದರಲ್ಲೂ ಮುಖ್ಯವಾಗಿ ಕಳೆದ ಆರು ತಿಂಗಳಿನಿಂದ ಯಾರೂ ಪಡಿತರ ವಸ್ತುಗಳನ್ನು ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದುಪಡಿಮಾಡಲಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಪ್ರತಿ ತಿಂಗಳು ಪಡಿತರ ವಸ್ತುಗಳನ್ನು ಪಡೆದುಕೊಳ್ಳಬೇಕು, ಒಂದು ವೇಳೆ ಪಡಿತರ ವಸ್ತುಗಳನ್ನ ಕಳೆದ ಆರು ತಿಂಗಳಿನಿಂದ ತೆಗೆದುಕೊಳ್ಳದೆ ಇರುವ ಬಿಪಿಎಲ್ ಕಾರ್ಡ್ ಅಮಾನತ್ತು ಗೊಳಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂದರೆ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇರುವ ರೇಷನ್ ಕಾರ್ಡ್ ಗಳನ್ನು ನೇರವಾಗಿ ರದ್ದುಪಡಿ ಮಾಡಿಲ್ಲ. ಯಾಕೆ ಪಡಿತರ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗುತ್ತದೆ ಒಂದು ವೇಳೆ ಪಡಿತರ ಕಾರ್ಡ್ ಹೊಂದಿರುವ ಕುಟುಂಬದವರು ಆ ಜಾಗದಲ್ಲಿ ವಾಸಿಸದೆ ಇದ್ದರೆ ಅಂತವರ ಕಾರ್ಡ್ ಅನ್ನು ಅಮಾನತ್ತು ಗೊಳಿಸಲಾಗುತ್ತದೆ.

ಇಂತಹವರ ರೇಷನ್ ಕಾರ್ಡ್ ರದ್ದು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಕೂಡ ಸಿಗೋಲ್ಲ

ಮತ್ತೆ ಕಾರ್ಡ್ ಆಕ್ಟಿವ್ ಮಾಡಿಕೊಳ್ಳಬಹುದು (How to activate your cancelled BPL card)

ಸಾಕಷ್ಟು ಕುಟುಂಬದವರು ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದೆ ಇದ್ದರೆ ಅಂತಹ ಕಾರ್ಡ್ ಅಮಾನತುಗೊಳಿಸಲಾಗಿದೆ. ಪಡಿತರ ವಸ್ತುಗಳನ್ನು ಬಯೋಮೆಟ್ರಿಕ್ (biometric) ಆಧಾರಿತವಾಗಿ ವಿತರಣೆ ಮಾಡಲಾಗುತ್ತದೆ, ಹೀಗಾಗಿ ಕಳೆದ ಆರು ತಿಂಗಳಿನಿಂದ ಪಡಿತರ ಪಡಿದುಕೊಳ್ಳದೆ ಇರುವವರು ಅವರ ಕಾರ್ಡ್ ಅಮಾನತ್ತು ಗೊಂಡಿದ್ದರು ಕೂಡ ಮತ್ತೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವಕಾಶ ಮಾಡಿಕೊಟ್ಟಿದೆ

ಹಾಗೂ ಯಾವಾಗ ಬಯೋಮೆಟ್ರಿಕ್ ಆಧಾರಿತವಾಗಿ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಆರಂಭಿಸುತ್ತಿರೋ ಆಗ ಅಮಾನತ್ತುಗೊಂಡಿರುವ ಬಿಪಿಎಲ್ ಕಾರ್ಡ್ ಆಕ್ಟಿವೇಟ್ ಆಗುತ್ತದೆ.

ಆದಾಗ್ಯೂ ನಿಮ್ಮ ಬಿಪಿಎಲ್ ಕಾರ್ಡ್ ಆಕ್ಟಿವೇಟ್ ಆಗದೇ ಇದ್ದರೆ ನೀವು ಸ್ಥಳೀಯ ಆಹಾರ ಮತ್ತು ನಾಗರಿಕ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದರ ಮೂಲಕ ಸರಿಯಾದ ಕಾರಣ ನೀಡಿದರೆ ನಿಮ್ಮ ಅಮಾನತ್ತುಗೊಂಡ ಬಿಪಿಎಲ್ ಕಾರ್ಡ್ ಮತ್ತೆ ಆಕ್ಟಿವ್ ಆಗುತ್ತದೆ.

ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಬಿಡುಗಡೆ, ನಿಮ್ಮ ಖಾತೆ ಸ್ಟೇಟಸ್ ಚೆಕ್ ಮಾಡಿ

Do this before canceling your BPL card, Change in Ration Card Rules

Our Whatsapp Channel is Live Now 👇

Whatsapp Channel

Related Stories