ಗೃಹಲಕ್ಷ್ಮಿ ಬಾಕಿ ಮೊತ್ತ ಜಮೆ, ಇಂತಹ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿ
Gruha lakshmi scheme : ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಮೂರನೇ ಕಂತಿನ ಹಣ ಬಿಡುಗಡೆ ಆಗಿದೆ, ಬಹುತೇಕ ಎಲ್ಲಾ ಮಹಿಳೆಯರ ಖಾತೆಗೂ (Bank Account) ಹಣ ವರ್ಗಾವಣೆ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ರಾಜ್ಯದಲ್ಲಿ ತನ್ನದೇ ಆದ ಮೈಲಿಗಲ್ಲು (milestone) ಸ್ಥಾಪಿಸಿದೆ, ಗೃಹಲಕ್ಷ್ಮಿ ಯೋಜನೆ ಈಗಾಗಲೇ ಮೂರು ಕಂತಿನ ಹಣವನ್ನು (3 installment released) ಮಹಿಳೆಯರ ಖಾತೆಗೆ ವರ್ಗಾವಣೆ (DBT) ಮಾಡುವುದರಲ್ಲಿ ಯಶಸ್ವಿಯಾಗಿದೆ.
ಅಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ ಆಗಿತ್ತು. ನಂತರ ಸಪ್ಟೆಂಬರ್ ಕೊನೆಯ ವಾರದಲ್ಲಿ ಹಾಗೂ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಮೂರನೇ ಕಂತಿನ ಹಣ ಬಿಡುಗಡೆ ಆಗಿದೆ, ಬಹುತೇಕ ಎಲ್ಲಾ ಮಹಿಳೆಯರ ಖಾತೆಗೂ (Bank Account) ಹಣ ವರ್ಗಾವಣೆ ಮಾಡಲಾಗಿದೆ.
ಇಂತಹವರ ರೇಷನ್ ಕಾರ್ಡ್ ರದ್ದು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಕೂಡ ಸಿಗೋಲ್ಲ
ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಸರ್ಕಾರದ ಕ್ರಮ!
ಆದಾಗ್ಯೂ ಇನ್ನು ಸಲ್ಲಿಕೆಯಾಗಿರುವ ಕೋಟ್ಯಂತರ ಮಹಿಳೆಯರ ಅರ್ಜಿಗಳ ಪೈಕಿ 5 ಲಕ್ಷ ಮಹಿಳೆಯರ ಖಾತೆಗೆ ಮಾತ್ರ ಹಣ ಜಮಾ (Money Deposit) ಆಗಿಲ್ಲ. ಇದಕ್ಕೆ ಮಹಿಳೆಯರ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗದೆ ಇರುವುದು, ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (ration card correction) ಆಗದೆ ಇರುವುದು, ಮಹಿಳೆಯರ ಬ್ಯಾಂಕ್ ಖಾತೆ ಆಕ್ಟಿವ್ ಇಲ್ಲದೆ ಇರುವುದು ಹಾಗೂ ತಾಂತ್ರಿಕ ದೋಷಗಳು ಕೂಡ ಕಾರಣವಾಗಿವೆ.
ಸರ್ಕಾರ ತನ್ನ ಕಡೆಯಿಂದ ಆಗಿರುವ ತಾಂತ್ರಿಕ ದೋಷಗಳನ್ನು ಪರಿಹರಿಸಲು ಸಾಕಷ್ಟು ಪ್ರಯತ್ನ ಪಡುತ್ತಿದೆ, ಇದರ ಜೊತೆಗೆ ಆಧಾರ್ ಸೀಡಿಂಗ್ ಆಗದೆ ಇರುವ ಮಹಿಳೆಯರ ಖಾತೆಗೂ ಕೂಡ ಹಣ ಜಮಾ (Money Transfer) ಮಾಡಲು ಕ್ರಮ ಕೈಗೊಂಡಿದೆ.
ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಬಿಡುಗಡೆ, ನಿಮ್ಮ ಖಾತೆ ಸ್ಟೇಟಸ್ ಚೆಕ್ ಮಾಡಿ
ಡಿಸೆಂಬರ್ ನಲ್ಲಿ ಹಣ ಜಮಾ ಆಗೇ ಆಗುತ್ತೆ! (Money will transfer in the month of December)
ಗೃಹಲಕ್ಷ್ಮಿ ಅದಾಲತ್ (Lakshmi Adalat) ಆರಂಭವಾಗಿದ್ದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಕುಟುಂಬದ ಮಹಿಳೆಯರ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎನ್ನುವ ಪರಿಶೀಲನೆ ಮಾಡಲು ಗ್ರಾಮ ಪಂಚಾಯತ್ (gram Panchayat) ಸದಸ್ಯರು ಹಾಗೂ ಅಂಗನವಾಡಿ ಸಹಾಯಕಿಯರು ಮನೆ ಬಾಗಿಲಿಗೆ ಬಂದು ಪರಿಶೀಲನೆ ನಡೆಸಲಿದ್ದಾರೆ ಹಾಗೂ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಯಾವ ಮಹಿಳೆಯ ಖಾತೆಗೆ ಹಣ ವರ್ಗಾವಣೆ ಆಗಿಲ್ಲವೋ ಅಂತವರನ್ನು ಗುರುತಿಸಿ ಅವರ ಖಾತೆಗೂ ಹಣ ವರ್ಗಾವಣೆ ಆಗುವಂತೆ ಸಿಬ್ಬಂದಿಗಳು ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗೃಹಲಕ್ಷ್ಮಿ ಹಣ ಬರೋದಿರಲಿ ಖಾತೆಯಲ್ಲಿದ್ದ ಹಣವೇ ಮಾಯ; ಆತಂಕದಲ್ಲಿ ಮಹಿಳೆಯರು
ನಿಮ್ಮ ಖಾತೆಗೂ ಹಣ ಬಂದಿದ್ಯ ಚೆಕ್ ಮಾಡಿ! (Check your DBT status)
ಸರ್ಕಾರ ಈಗಾಗಲೇ ಡಿ ಬಿ ಟಿ ಕರ್ನಾಟಕ ಎನ್ನುವ ಮೊಬೈಲ್ ಅಪ್ಲಿಕೇಶನ್ (DBT Karnataka mobile application) ಬಿಡುಗಡೆ ಮಾಡಿದೆ. ಅಪ್ಲಿಕೇಶನ್ ಅನ್ನು ಮೊಬೈಲಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ ಬಳಿಕ ನಿಮ್ಮ ಖಾತೆಗೆ ಸಂಬಂಧಪಟ್ಟ ಎಲ್ಲಾ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಬಹುದು.
ಅನ್ನಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎನ್ನುವ ಮಾಹಿತಿ ಈ ಅಪ್ಲಿಕೇಶನ್ ನಲ್ಲಿ ಸಿಗುತ್ತದೆ.
ಗೃಹಲಕ್ಷ್ಮಿ ಹಣ ಬಂದಿಲ್ವಾ? ದೂರು ಕೊಟ್ಟು ಹಣ ಪಡೆಯಿರಿ; ಹೊಸ ಸೇವೆ ಪ್ರಾರಂಭ
ಇಷ್ಟಾಗಿಯೂ ಸಾಕಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿರುವುದರ ಬಗ್ಗೆ ಮೆಸೇಜ್ ಬರದೇ ಇರಬಹುದು. ಈಗಾಗಲೇ ಬಾಕಿ ಇರುವ ಹಣವು ಕೂಡ ಕೆಲವು ಮಹಿಳೆಯರ ಖಾತೆಗೆ ಸಂದಾಯವಾಗಿದೆ
ಕೆಲವರಿಗೆ 4 ಸಾವಿರ ರೂಪಾಯಿ ಕೆಲವರಿಗೆ 6000 ರೂ. ಬಂದಿದೆ. ಹಾಗಾಗಿ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ನೀವು ನೇರವಾಗಿ ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲಿಸುವುದು ಉತ್ತಮ.
Gruha Lakshmi balance Money deposit, money transferred only for such People