Karnataka NewsBangalore News

ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಬಿಡುಗಡೆ, ನಿಮ್ಮ ಖಾತೆ ಸ್ಟೇಟಸ್ ಚೆಕ್ ಮಾಡಿ

ಅನ್ನಭಾಗ್ಯ ಯೋಜನೆಯ (Annabhagya scheme) ಮತ್ತೊಂದು ಕಂತಿನ ಹಣ ಅಂದರೆ ನಾಲ್ಕನೇ ಕಂತಿನ ಹಣವು ಕೂಡ ಬಿಡುಗಡೆ ಆಗಿದ್ದು ನಿಮ್ಮ ಖಾತೆಗೂ ಬಂದಿದೆಯಾ ಎಂದು ಚೆಕ್ ಮಾಡಿಕೊಳ್ಳಿ.

ಹಣ ಬಂದಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಹಾಗೂ ಹಣ ಬಾರದೆ ಇದ್ರೆ ತಕ್ಷಣ ಏನು ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ!

Ration Card Holders Can Get 5 Thousand Through Atal Pension Yojana

ಗೃಹಲಕ್ಷ್ಮಿ ಹಣ ಬರೋದಿರಲಿ ಖಾತೆಯಲ್ಲಿದ್ದ ಹಣವೇ ಮಾಯ; ಆತಂಕದಲ್ಲಿ ಮಹಿಳೆಯರು

ಬ್ಯಾಂಕ್ ಖಾತೆಯ ಸಮಸ್ಯೆ ಇದ್ರೆ ಹೊಸ ಖಾತೆ ತೆರೆಯಿರಿ (Open New bank account)

ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳಲ್ಲಿ (5 guarantee schemes) ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿವೆ, ಇನ್ನೇನು ಕೆಲವೇ ದಿನಗಳಲ್ಲಿ ಐದನೇ ಗ್ಯಾರಂಟಿ ಯೋಜನೆ ಆಗಿರುವ ಯುವ ನಿಧಿ ಯೋಜನೆ (Yuva Nidhi Yojana) ಕೂಡ ಜಾರಿಗೆ ಬರುವ ನಿರೀಕ್ಷೆ ಇದೆ.

ಅನ್ನಭಾಗ್ಯ ಯೋಜನೆಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಸರ್ಕಾರ ನೀಡಬೇಕಿತ್ತು. ಆದರೆ ಅಷ್ಟು ದಾಸ್ತಾನು ಅಕ್ಕಿ ಇಲ್ಲದ ಕಾರಣ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಒಬ್ಬ ಸದಸ್ಯನಿಗೆ 170ಗಳಂತೆ ಮನೆಯ ಯಜಮಾನನ ಖಾತೆಗೆ (Bank Account) ಹಣ ವರ್ಗಾವಣೆ ( DBT) ಆಗುತ್ತದೆ

ರೇಷನ್ ಕಾರ್ಡ್ (ration card) ನಲ್ಲಿ ಮನೆಯ ಯಜಮಾನನ ಬದಲಾಗಿ ಯಜಮಾನಿ ಹೆಸರು ಸೇರ್ಪಡೆ ಆಗಿರುವುದರಿಂದ ಅನ್ನಭಾಗ್ಯ ಯೋಜನೆಯ ಹಣವು ಕೂಡ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ ಎಂಬುದನ್ನು ಗಮನಿಸಿ!

ಗೃಹಲಕ್ಷ್ಮಿ ಹಣ ಬಂದಿಲ್ವಾ? ದೂರು ಕೊಟ್ಟು ಹಣ ಪಡೆಯಿರಿ; ಹೊಸ ಸೇವೆ ಪ್ರಾರಂಭ

ಹೊಸ ಖಾತೆ ತೆರೆಯುವುದೇ ಬೆಸ್ಟ್!

ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಹಳೆಯ ಖಾತೆಯಲ್ಲಿ ಸಮಸ್ಯೆ ಇರುವ ಗೃಹಿಣಿಯರು ಹೊಸ ಖಾತೆ ತೆರೆದ ತಕ್ಷಣ ಆ ಖಾತೆಗೆ ಹಣ ವರ್ಗಾವಣೆ ಆಗಿದೆ ನೀವು ಹೊಸದಾಗಿರುವ ಖಾತೆ ಆರಂಭಿಸಿ ಅದಕ್ಕೆ ಆಧಾರ್ ಲಿಂಕ್ (Aadhaar link) ಮಾಡಿಕೊಂಡರೆ ಕೇವಲ ಕೆಲವು ಗಂಟೆಗಳಲ್ಲಿ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಅದೇ ರೀತಿ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi hebbalkar) ತಿಳಿಸಿರುವ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ರೆ ಯಾವ ಸಮಸ್ಯೆ ಇಲ್ಲದೆ ಸರಕಾರದ ಯೋಜನೆಯ ಹಣ ಜಮಾ ಆಗುತ್ತೆ.

ಹಾಗಾಗಿ ಮಹಿಳೆಯರು ಆದಷ್ಟು ಬೇಗ ಹಳೆಯದಾಗಿರುವ ಖಾತೆಯನ್ನು ಬಿಟ್ಟು ಹೊಸದಾಗಿ ಅಂಚೆ ಕಚೇರಿಯಲ್ಲಿ (post office account) ಖಾತೆ ತೆರೆದು ಹಣ ಬರುವಂತೆ ಮಾಡಿಕೊಳ್ಳಿ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.

ನವೆಂಬರ್ ತಿಂಗಳ ಅನ್ನಭಾಗ್ಯ ಹಣವೂ ಜಮಾ; ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಡಿ ಬಿ ಡಿ ಸ್ಟೇಟಸ್ ಚೆಕ್ ಮಾಡಲು ಹೀಗೆ ಮಾಡಿ! (To check DBT status)

Annabhagya Yojana DBT status check Online*ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://ahara.kar.nic.in/lpg/ ಗೆ ಭೇಟಿ ನೀಡಿ.

*ಇದು ಡೈರೆಕ್ಟ್ ಲಿಂಕ್ ಆಗಿದ್ದು ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೂರು ಲಿಂಕ್ ಗಳನ್ನು ಕಾಣಬಹುದು. ಅದರಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಆ ಜಿಲ್ಲೆಯ ಮೇಲ್ಭಾಗದಲ್ಲಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

*ನಂತರ ಹೊಸ ಪೇಜ್ ತೆರೆದುಕೊಳ್ಳುತ್ತದೆ ಅದರಲ್ಲಿ ನೀವು ಅನ್ನ ಭಾಗ್ಯ ಯೋಜನೆಯ ಯಾವ ತಿಂಗಳಿನ ಹಣ ಜಮಾ ಆಗಿದೆ ಎನ್ನುವುದನ್ನು ಪರಿಶೀಲಿಸಲು ತಿಂಗಳು ಆಯ್ಕೆ ಮಾಡಬೇಕು.

ಬಳಿಕ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಬೇಕು.

ಸರ್ಕಾರದಿಂದಲೇ ಸಿಗಲಿದೆ ಮಹಿಳೆಯರಿಗೆ ಬಡ್ಡಿ ರಹಿತ 3 ಲಕ್ಷ ಸಾಲ; ಅರ್ಜಿ ಸಲ್ಲಿಸಿ

*ಅಲ್ಲಿಯೇ ಕೆಳಭಾಗದಲ್ಲಿ ಇರುವ ಕ್ಯಾಪ್ಚ ನಂಬರ್ ಕೂಡ ಹಾಕಿ ಗೋ ಎಂದು ಕೊಟ್ಟರೆ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ವಿವರ ಕಾಣಿಸುತ್ತದೆ.

*ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಸಂಖ್ಯೆ, ಯಾರ ಖಾತೆಗೆ ಹಣ ಜಮಾ ಆಗಿದೆ? ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ? ಎಷ್ಟು ಹಣ ವರ್ಗಾವಣೆ ಆಗಿದೆ ? ಎಲ್ಲಾ ವಿವರಗಳನ್ನು ಕೂಡ ಕಾಣಬಹುದು.

ಒಂದು ವೇಳೆ ಪಾವತಿ ಪ್ರಗತಿಯಲ್ಲಿದೆ ಎನ್ನುವ (payment in process) ಸಂದೇಶ ಕಾಣಿಸಿದರೆ ಸದ್ಯದಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ಅರ್ಥ. ಬ್ಯಾಂಕ್ ಖಾತೆಯೊಂದಿಗೆ (Bank Account) ರೇಷನ್ ಕಾರ್ಡ್ ಕೆ ವೈ ಸಿ (Ration Card EKYC) ಆಗಿದ್ದರೆ ಮಾತ್ರ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ (Money Deposit) ಆಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.

Annabhagya Yojana Fund Release, Check Your Bank Account Status

Our Whatsapp Channel is Live Now 👇

Whatsapp Channel

Related Stories