ಗೃಹಲಕ್ಷ್ಮಿ ಹಣ ಬರೋದಿರಲಿ ಖಾತೆಯಲ್ಲಿದ್ದ ಹಣವೇ ಮಾಯ; ಆತಂಕದಲ್ಲಿ ಮಹಿಳೆಯರು
ಗೃಹಲಕ್ಷ್ಮಿ ಯೋಜನೆಗಾಗಿ (Gruha lakshmi scheme) ಸರ್ಕಾರ ಬಹಳ ದೊಡ್ಡ ಮತದ ಅನುದಾನವನ್ನೇ ಬಿಡುಗಡೆ ಮಾಡಿದೆ. 2444 ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಅನುದಾನ ನೀಡುವುದು ಎಂದರೆ ದೊಡ್ಡ ವಿಚಾರವೇ.
ಇಷ್ಟು ದೊಡ್ಡ ಮೊತ್ತದ ಅನುದಾನ ಬೇರೆ ಯಾವ ಗ್ಯಾರಂಟಿ ಯೋಜನೆಗಳಿಗೂ (guarantee schemes) ಕೂಡ ಸಿಕ್ಕಿಲ್ಲ. ಇಷ್ಟಾಗಿಯೂ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬ ಮಹಿಳೆಯರ ಖಾತೆಗೂ (Bank Account) ತಲುಪಿದೆಯಾ ಎಂದರೆ ಉತ್ತರ ಇಲ್ಲ!

ಹೌದು, ಗೃಹಲಕ್ಷ್ಮಿ ಯೋಜನೆ ಹಣ ಪ್ರತಿಯೊಬ್ಬರ ಖಾತೆಗೂ ತಲುಪಿಲ್ಲ, ಆದರೆ ಈ ವಿಚಾರವನ್ನು ಸ್ವಲ್ಪ ಸೈಡಿಗೆ ಇಟ್ಟು ಮತ್ತೊಂದು ಆತಂಕದ ವಿಚಾರವನ್ನು ಹೇಳುತ್ತೇವೆ ಕೇಳಿ!
ಒಂದು ವೇಳೆ ನೀವು ಸ್ವಲ್ಪ ಯಾಮಾರಿದ್ರು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಮಾತ್ರವಲ್ಲ ನಿಮ್ಮ ಖಾತೆಯಲ್ಲಿ ಇರುವ ಸಂಪೂರ್ಣ ಹಣವನ್ನು ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ಇರುತ್ತವೆ.
ಪಿಯುಸಿ ಪಾಸಾದವರಿಗೆ ಖಾಲಿಯಿದೆ ಅರಣ್ಯ ಇಲಾಖೆಯ ಸರ್ಕಾರಿ ಕೆಲಸ; ಅಪ್ಲೈ ಮಾಡಿ
ಗೃಹಲಕ್ಷ್ಮಿಯ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ!
ಎಲ್ಲರಿಗೂ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯನ್ನು ಸಂಪೂರ್ಣ ಡಿಜಿಟಲೀಕರಿಸಲಾಗಿದೆ. (Digitalisation) ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅರ್ಜಿ ಸಲ್ಲಿಸಿದ ಫಲಾನುಭವಿ ಮಹಿಳೆಯರ ಖಾತೆಗೆ ನೇರವಾಗಿ ವರ್ಗಾವಣೆ (Money Transfer) ಮಾಡಲಾಗುತ್ತದೆ.
ಡೇಟಾಬೇಸ್‌ನಲ್ಲಿ (government database) ಫಲಾನುಭವಿಗಳ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ( ration card) ಇರುವುದರಿಂದ ಸುಲಭವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Deposit) ಮಾಡಲಾಗುತ್ತಿದೆ.
ಇದರ ಜೊತೆಗೆ ಮಹಿಳೆಯರು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು ಡಿ ಬಿ ಡಿ ಕರ್ನಾಟಕ ಎನ್ನುವ ಅಪ್ಲಿಕೇಶನ್ (DBT Karnataka mobile application) ಕೂಡ ಬಿಡುಗಡೆ ಮಾಡಲಾಗಿದೆ.
ಇದನ್ನೇ ಬಂಡವಾಳವಾಗಿಸಿಕೊಂಡ ವಂಚಕರು ಬೇರೆಬೇರೆ ರೀತಿಯ ಸರ್ಕಾರದ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಹೋಲುವ ನಕಲಿ ಅಪ್ಲಿಕೇಶನ್ ತಯಾರಿಸಿ ಗೂಗಲ್ ಪ್ಲೇ ಸ್ಟೋರ್ (Play Store) ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ
ಈ ಹಿನ್ನೆಲೆಯಲ್ಲಿ ಅಂತಹ ಅಪ್ಲಿಕೇಶನ್ ಡೌನ್ಲೋಡ್ (application download) ಮಾಡಿಕೊಂಡು ಸಾಕಷ್ಟು ಮಹಿಳೆಯರು ಹಣ ಕಳೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಹಣ ಬಂದಿಲ್ವಾ? ದೂರು ಕೊಟ್ಟು ಹಣ ಪಡೆಯಿರಿ; ಹೊಸ ಸೇವೆ ಪ್ರಾರಂಭ
ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡ ಮಹಿಳೆ!
ವಂಚಕರು ಹೇಗೆಲ್ಲಾ ಹಣವನ್ನು ನಿಮ್ಮ ಖಾತೆಯಿಂದ ಎಗರಿಸಬಹುದು ಎನ್ನುವುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ ಇದೆ ನೋಡಿ. ಕುಂದಗೋಳ ತಾಲೂಕಿನ ಯಾರಗುಪ್ಪಿ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆ ಒಬ್ಬರು ತಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದಿಯೋ ಇಲ್ಲವೋ ಎಂದು ಪರೀಕ್ಷಿಸಲು ಹೋಗಿ ತಮ್ಮ ಖಾತೆಯಲ್ಲಿ ಇರುವ 64,000 ರೂ.ಗಳನ್ನು ಕಳೆದುಕೊಂಡಿದ್ದಾರೆ.
ಹೌದು, ಇದು ನಿಜಕ್ಕೂ ಆತಂಕದ ವಿಚಾರ, ಯಾಕೆಂದರೆ ಈಗ ಯಾವುದೇ ಖಾತೆಯಿಂದ ಹಣ ವರ್ಗಾವಣೆ ಮಾಡುವುದು ಅನಿವಾರ್ಯವಾಗಿರುತ್ತದೆ ಆದರೆ ಇಲ್ಲಿ ವಂಚಕರು ಓಟಿಪಿ (OTP) ಅನ್ನು ಕೇಳಿದ್ದಾರೆ ಹಾಗೆಯೇ ಆ ಮಹಿಳೆಯ ಖಾತೆಯ ಹಣವನ್ನು ಲಪಟಾಯಿಸಿದ್ದಾರೆ.
ರಾಜ್ಯದ ರೈತರಿಗೆ ಅಕ್ರಮ ಸಕ್ರಮ ಜಮೀನು ವಿತರಣೆ; ರಾಜ್ಯ ಸರ್ಕಾರದ ಮಹತ್ವದ ಆದೇಶ
ಈ ಹಿಂದೆ ಯಾವುದೋ ಸೈಟ್ ಖರೀದಿ ಮಾಡುವಾಗ ಆ ಮಹಿಳೆ ತನ್ನ ಬೆರಳಚ್ಚು ಗುರುತು ನೀಡಿದ್ದಾಳೆ. ಇದನ್ನೇ ಬಂಡವಾಳವಾಗಿಸಿಕೊಂಡ ವಂಚಕರು ಅಕ್ಟೋಬರ್ 24 ರಿಂದ ಜನವರಿ ಮೂರನೇ ತಾರೀಕಿನವರೆಗೆ ತಮ್ಮ ಬೇರೆ ಬೇರೆ ಖಾತೆಗೆ ಆಕೆಯ ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ
ಒಟ್ಟು 64,000ರೂ.ಗಳನ್ನು ಕಳೆದುಕೊಂಡ ಮಹಿಳೆ ಈಗಾಗಲೇ ಪೊಲೀಸರಿಗೆ ದೂರು ಸಲ್ಲಿಸಿದ್ದು ತಾನು ಕಷ್ಟಪಟ್ಟು ಸಂಗ್ರಹಿಸಿದ ಹಣವನ್ನು ಹಿಂತಿರುಗಿಸಿ ಕೊಡಿ ಎಂದು ಕಣ್ಣೀರು ಹಾಕಿದ್ದಾಳೆ.
ಇದು ಒಬ್ಬ ಮಹಿಳೆಯ ಉದಾಹರಣೆ ಅಷ್ಟೇ, ನೀವು ಕೂಡ ಸ್ಟೇಟಸ್ ಚೆಕ್ ಮಾಡುವ ನೆಪದಲ್ಲಿ ಯಾವುದೋ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹಾಗೂ ನಿಮ್ಮ ಮೊಬೈಲ್ ಗೆ ಬರುವ ಯಾವುದಾದರೂ ಲಿಂಕ್ ಕ್ಲಿಕ್ ಮಾಡುವುದು ಮಾಡಿದ್ರೆ ನಿಮ್ಮ ಖಾತೆಯಲ್ಲಿ ಇರುವ ಎಲ್ಲಾ ಹಣವನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬೇಕಾಗುತ್ತದೆ.
ಹಾಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಹೊರತುಪಡಿಸಿ ಬೇರೆ ಯಾವುದೇ ಅಪ್ಲಿಕೇಶನ್ಗಳನ್ನು ನಂಬಲು ಹೋಗಬೇಡಿ ಹಾಗೂ ಅನಗತ್ಯವಾಗಿ ನಿಮ್ಮ ಮೊಬೈಲ್ ಗೆ ಬರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.
ನವೆಂಬರ್ ತಿಂಗಳ ಅನ್ನಭಾಗ್ಯ ಹಣವೂ ಜಮಾ; ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
Women are being cheated in the name of Gruha Lakshmi Scheme