ಪಿಯುಸಿ ಪಾಸಾದವರಿಗೆ ಖಾಲಿಯಿದೆ ಅರಣ್ಯ ಇಲಾಖೆಯ ಸರ್ಕಾರಿ ಕೆಲಸ; ಅಪ್ಲೈ ಮಾಡಿ
ನೀವು ಪಿಯುಸಿ (second PUC) ತೇರ್ಗಡೆ ಹೊಂದಿದ್ದೀರಾ? ಆದರೆ ಸುರಕ್ಷಿತವಾದ ಸರ್ಕಾರಿ ಉದ್ಯೋಗ (government job) ಪಡೆದುಕೊಳ್ಳುವ ಆಸೆ ಇದೆಯಾ? ಹಾಗಾದ್ರೆ ಈ ಲೇಖನ ನಿಮಗಾಗಿ.
ಕರ್ನಾಟಕ ಅರಣ್ಯ ಇಲಾಖೆ (Karnataka forest department – KFD) ಅಧಿ ಸೂಚನೆ ಹೊರಡಿಸಿದ್ದು ತನ್ನಲ್ಲಿ ಖಾಲಿ ಇರುವ 540 ಕ್ಕೂ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವುದು ಹೇಗೆ ಕೊನೆಯ ದಿನಾಂಕ ಈ ಎಲ್ಲಾ ಮಾಹಿತಿಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮುಂದೆ ಓದಿ.
ಗೃಹಲಕ್ಷ್ಮಿ ಹಣ ಬಂದಿಲ್ವಾ? ದೂರು ಕೊಟ್ಟು ಹಣ ಪಡೆಯಿರಿ; ಹೊಸ ಸೇವೆ ಪ್ರಾರಂಭ
ಹುದ್ದೆಯ ವಿವರ (About job)
ಕರ್ನಾಟಕ ಅರಣ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಸದ್ಯ 540 ಫಾರೆಸ್ಟ್ ಗಾರ್ಡ್ (forest guard) ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು (Qualification/ eligibility)
ಕರ್ನಾಟಕ ಅರಣ್ಯ ಇಲಾಖೆಯ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರುವ ದಾಖಲೆ ಸಲ್ಲಿಸಬೇಕು.
ವಯೋಮಿತಿ (Age)
ಡಿಸೆಂಬರ್ 30 2023 ಕ್ಕೆ 18 ವರ್ಷ ವಯಸ್ಸಾಗಿರುವ ಹಾಗೂ 35 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಓಬಿಸಿ ಅಭ್ಯರ್ಥಿಗಳಿಗೆ ಎರಡು ವರ್ಷ ಹಾಗೂ ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ರೇಷನ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ! ಹೊಸ ಘೋಷಣೆ ಮಾಡಿದ ಮೋದಿ ಸರ್ಕಾರ
ಅರ್ಜಿ ಶುಲ್ಕ (Application fee)
ಎಸ್ ಸಿ / ಎಸ್ ಟಿ, ಪ್ರವರ್ಗ 1 ನೂರು ರೂಪಾಯಿ ಅರ್ಜಿ ಶುಲ್ಕವಾಗಿದ್ದರೆ ಸಾಮಾನ್ಯ ಅಭ್ಯರ್ಥಿಗಳು 200 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.
ವೇತನ ಮತ್ತು ಉದ್ಯೋಗ ಸ್ಥಳ (Salary And Placement)
ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿಯೇ ಕೆಲಸ ಮಾಡಬಹುದು, ಇನ್ನು ವೇತನ 18,600 ರೂ.ರಿಂದ 32,600 ರೂ.ತಿಂಗಳ ವೇತನ ಪಡೆಯಬಹುದು.
ರಾಜ್ಯದ ರೈತರಿಗೆ ಅಕ್ರಮ ಸಕ್ರಮ ಜಮೀನು ವಿತರಣೆ; ರಾಜ್ಯ ಸರ್ಕಾರದ ಮಹತ್ವದ ಆದೇಶ
ಆಯ್ಕೆ ಪ್ರಕ್ರಿಯೆ (Section process)
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಸಂದರ್ಶನ ಹಾಗೂ ಮೆಡಿಕಲ್ ಫಿಟ್ನೆಸ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://kfdrecruitment.in/ ಈ ವೆಬ್ಸೈಟ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 30, 2023 ಕೊನೆಯ ದಿನಾಂಕ (last date to apply) . ಅರ್ಜಿ ಶುಲ್ಕ ಪಾವತಿಸಲು ಜನವರಿ 5, 2024 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.
ನವೆಂಬರ್ ತಿಂಗಳ ಅನ್ನಭಾಗ್ಯ ಹಣವೂ ಜಮಾ; ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
Vacancy for PUC Passed, Govt Job in Forest Department