ರೇಷನ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ! ಹೊಸ ಘೋಷಣೆ ಮಾಡಿದ ಮೋದಿ ಸರ್ಕಾರ
ಹಿಂದುಳಿದ ವರ್ಗದ ಕುಟುಂಬಗಳಿಗೆ ಅತಿ ಕಡಿಮೆ ಬೆಲೆಗೆ ಪಡಿತರ ವಸ್ತುಗಳು ಸಿಗುವಂತೆ ಗರೀಬ್ ಕಲ್ಯಾಣ್ ಅನ್ನಭಾಗ್ಯ (Garib Kalyan Annabhagya Yojana) ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (National Food Security Scheme) ಯ ಅಡಿಯಲ್ಲಿ ಬಡವರಿಗೆ ಹಾಗೂ ಹಿಂದುಳಿದ ವರ್ಗದ ಕುಟುಂಬಗಳಿಗೆ ಅತಿ ಕಡಿಮೆ ಬೆಲೆಗೆ ಪಡಿತರ ವಸ್ತುಗಳು ಸಿಗುವಂತೆ ಗರೀಬ್ ಕಲ್ಯಾಣ್ ಅನ್ನಭಾಗ್ಯ (Garib Kalyan Annabhagya Yojana) ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ
ಈಗಾಗಲೇ ಐದು ಹಂತಗಳಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸಿರುವ ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿರುವ ಪಡಿತರ ವಿತರಣೆಯ ಬಗ್ಗೆ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ.
ಕೇಂದ್ರ ಸರ್ಕಾರದ ಮೂಲ ಉದ್ದೇಶ, ಬಡತನ, ಹಸಿವು ನಿರ್ಮೂಲನೆ (Hunger eradication) ಮಾಡುವುದು. ಇದೇ ಕಾರಣಕ್ಕೆ ಅತಿ ಕಡಿಮೆ ಬೆಲೆಗೆ ಬಡವರಿಗೆ ಪಡಿತರ ವಸ್ತುಗಳನ್ನ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡಲಾಗುತ್ತಿದೆ.
ನವೆಂಬರ್ ತಿಂಗಳ ಅನ್ನಭಾಗ್ಯ ಹಣವೂ ಜಮಾ; ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಇದಕ್ಕೆ ಮುಖ್ಯವಾಗಿ ಬಿಪಿಎಲ್ ಕಾರ್ಡ್ (BPL Ration card) ಅಥವಾ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವುದು ಕಡ್ಡಾಯವಾಗಿದೆ. ಇನ್ನು 2020 ರ ಕರೋನ ಸಮಯ ನಿಮಗೆಲ್ಲರಿಗೂ ನೆನಪಿರಬಹುದು. ಜನ ಕೆಲಸವಿಲ್ಲದೆ ಆಹಾರ ಹೊಂದಿಸಲು ಕೂಡ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ (free rice) ನೀಡಲು ಆರಂಭಿಸಿತು. ಈಗಲೂ ಕೂಡ ಸಾಕಷ್ಟು ಪಡಿತರ ಚೀಟಿದಾರರು ಉಚಿತ ಅಕ್ಕಿಯನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳುತ್ತಿದ್ದಾರೆ. ಮೊದಲು ಒಂದು ವರ್ಷದ ವರೆಗೆ ಉಚಿತ ಅಕ್ಕಿ ವಿತರಣೆ ಮಾಡುವುದಾಗಿ ತಿಳಿಸಿದ್ದ ಕೇಂದ್ರ ಸರ್ಕಾರ ಗಡುವನ್ನು ಇಲ್ಲಿಯ ವರೆಗೂ ವಿಸ್ತರಿಸಿಕೊಂಡು ಬಂದಿದೆ.
ರಾಜ್ಯದ ರೈತರಿಗೆ ಅಕ್ರಮ ಸಕ್ರಮ ಜಮೀನು ವಿತರಣೆ; ರಾಜ್ಯ ಸರ್ಕಾರದ ಮಹತ್ವದ ಆದೇಶ
ಮುಂದಿನ ಆರು ತಿಂಗಳು ಉಚಿತ ಪಡಿತರ ವಿತರಣೆ! (Free rice will be distribute next 6 month)
ಈಗ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ಒಂದನ್ನು ನೀಡಿದೆ. ಉಚಿತವಾಗಿ ಅಕ್ಕಿ ನೀಡುವ ಪ್ರಕ್ರಿಯೆಯನ್ನು ಇನ್ನು ಆರು ತಿಂಗಳ ಕಾಲ ಮುಂದುವರಿಸುವುದಾಗಿ ತಿಳಿಸಿದೆ. ಇದರಿಂದಾಗಿ ದೇಶದ ಸುಮಾರು 80 ಕೋಟಿ ಜನರು ಉಚಿತ ಅಕ್ಕಿ ಪಡೆದುಕೊಳ್ಳುವಂತಾಗಿದೆ.
ಇನ್ನು ರಾಜ್ಯ ಸರ್ಕಾರ ಕೂಡ ಅನ್ನಭಾಗ್ಯ ಯೋಜನೆಯ (AnnaBhagya scheme) ಅಡಿಯಲ್ಲಿ ಕೇಂದ್ರ ಸರ್ಕಾರದ ಉಚಿತ 5 ಕೆಜಿ ಅಕ್ಕಿಯ ಜೊತೆಗೆ ತಾವು ಕೂಡ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ತಿಳಿಸಿತ್ತು.
ಆದರೆ ರಾಜ್ಯ ಸರ್ಕಾರ ಅಷ್ಟು ದೊಡ್ಡ ಮೊತ್ತದ ಅಕ್ಕಿಯನ್ನು ದಾಸ್ತಾನು ಹೊಂದಿಲ್ಲದೆ ಇರುವ ಕಾರಣ ಅಕ್ಕಿ ಹೊಂದಿಸುವವರೆಗೂ ಹಣವನ್ನು ನೀಡುವುದಾಗಿ ತಿಳಿಸಿದೆ. ಅದರ ಪ್ರಕಾರ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170ಗಳನ್ನು ಫಲಾನುಭವಿ ಕುಟುಂಬದ ಯಜಮಾನನ ಖಾತೆಗೆ (Bank Account) ವರ್ಗಾವಣೆ (DBT ) ಮಾಡಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ, ನಿಮ್ಮ ಖಾತೆಗೂ ಜಮಾ ಆಗಿರಬಹುದು ಚೆಕ್ ಮಾಡಿ
ಕೇಂದ್ರ ಸರ್ಕಾರ PMGKAY ಯೋಜನೆಗಾಗಿ 2.60 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇನ್ನು ಮುಂದಿನ ಆರು ತಿಂಗಳುಗಳಲ್ಲಿ ಉಚಿತ ಪಡಿತರ ವಿತರಣೆಯಿಂದಾಗಿ ಕೇಂದ್ರದ ಬೊಕ್ಕಸಕ್ಕೆ 80,000 ಕೋಟಿಗಳ ಹೊರೆ ಆಗಬಹುದು.
ಆದರೂ ಕೂಡ ಯಾವುದೇ ವ್ಯಕ್ತಿ ಹಸಿವು ನಿವಾರಿಸಿಕೊಳ್ಳಲು ಉಚಿತ ಪಡಿತರ ಪಡೆದುಕೊಳ್ಳಲು ಅರ್ಹನಾಗಿದ್ದಾನೆ ಎನ್ನುವ ಕಾರಣಕ್ಕೆ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದ್ದು ಮುಂದಿನ ಆರು ತಿಂಗಳು ಉಚಿತ ಪಡಿತರ ನೀಡಲಾಗುವುದು, ಇದರಿಂದ 80 ಕೋಟಿ ದೇಶದ ಬಡವರಿಗೆ ಹೆಚ್ಚು ಅನುಕೂಲ ಆಗಲಿದೆ.
PM Modi government has made a new announcement for ration card Holders