ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ, ನಿಮ್ಮ ಖಾತೆಗೂ ಜಮಾ ಆಗಿರಬಹುದು ಚೆಕ್ ಮಾಡಿ
ಮಹಿಳೆಯರು ತಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ (Mobile Number) ಎಸ್ ಎಂ ಎಸ್ (SMS) ಬಾರದೆ ಇದ್ದಿದ್ದಕ್ಕೆ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಭಾವಿಸುತ್ತಾರೆ.
ಈಗಾಗಲೇ ರಾಜ್ಯ ಸರ್ಕಾರ (State government) ಗೃಹಲಕ್ಷ್ಮಿ ಯೋಜನೆಯಲ್ಲಿ (Gruha lakshmi scheme) ಸಂಪೂರ್ಣ ಸಕ್ಸಸ್ ಸಾಧಿಸುವ ಸಲುವಾಗಿ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿದೆ, ಈ ಮೂಲಕವಾದರೂ ಉಳಿದ ಮಹಿಳೆಯರ ಖಾತೆಗೂ (Bank Account) ಕೂಡ ಹಣ ಜಮಾ ಆಗಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಮೂರು ಕಂತಿನ ಹಣ ಜಮಾ (Money Deposit) ಆಗಿದೆ. ಕೋಟ್ಯಾಂತರ ಮಹಿಳೆಯರು ತಮ್ಮ ಮಾಸಿಕ ವೆಚ್ಚಕ್ಕಾಗಿ ಈ ಹಣವನ್ನು ಬಳಸಿಕೊಳ್ಳಬಹುದು. ಹಲವು ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತಿರುವ 2,000 ರೂಪಾಯಿಗಳು ಬಹಳ ಪ್ರಯೋಜನಕಾರಿಯಾಗಿವೆ ಎನ್ನಬಹುದು.
ಹೊಸ ರೇಷನ್ ಕಾರ್ಡ್ ಅರ್ಜಿ, ತಿದ್ದುಪಡಿಗೆ ಮತ್ತೆ ಅವಕಾಶ! ಸ್ಥಳ, ದಿನಾಂಕ, ಸಮಯ ತಿಳಿಯಿರಿ
ಆದರೆ ಇನ್ನೂ ಮೂರರಿಂದ ನಾಲ್ಕು ಲಕ್ಷ ಮಹಿಳೆಯರ ಖಾತೆಗೆ ಮಾತ್ರ ಹಣ ವರ್ಗಾವಣೆ (Money Transfer) ಆಗಿಲ್ಲ ಹಾಗಾಗಿ ಆರ್ಥಿಕ ನೆರವು ಪಡೆದುಕೊಳ್ಳಲು ಪ್ರತಿಯೊಬ್ಬ ಮಹಿಳೆಯರು (women) ಕೂಡ ಕಾದು ಕುಳಿತಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ಈಗ ಬೇರೆ ಬೇರೆ ತಂತ್ರಗಳನ್ನು ರೂಪಿಸುವುದರ ಮೂಲಕ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದೆ.
6,000 ರೂ. ಮಹಿಳೆಯರ ಖಾತೆಗೆ
ಸಾಕಷ್ಟು ಮಹಿಳೆಯರು ಬ್ಯಾಂಕ್ ಖಾತೆ ಹಾಗೂ ಆಧಾರ ಸೀಡಿಂಗ್ (Aadhaar link) ಇಂದಿಗೂ ಕೂಡ ಸಂಪೂರ್ಣವಾಗಿ ಆಗಿಲ್ಲ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಆಧಾರ್ ಲಿಂಕ್ ಆಗಿದ್ದರು ಕೂಡ ಅದು ಸರಕಾರದ ಡೇಟಾಬೇಸ್ ನಲ್ಲಿ ತೋರಿಸುತ್ತಿಲ್ಲ.
ಇಂತಹ ಯಾವುದೇ ಸಮಸ್ಯೆ ಇದ್ದರೂ ಅವುಗಳನ್ನು ಪರಿಹರಿಸಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ, ಈಗಾಗಲೇ ಮೊದಲ ಕಂತಿನ ಹಣ ಬಾರದೆ ಇರುವ ಮಹಿಳೆಯರು ಅಕ್ಟೋಬರ್ ತಿಂಗಳಿನಲ್ಲಿ ತಮ್ಮ ಖಾತೆಯನ್ನು ಸರಿಪಡಿಸಿಕೊಂಡಿದ್ದರೆ ಅಂತಹವರಿಗೆ ಎರಡು ಕಂತಿನ ಹಣವನ್ನು ಅಂದರೆ ನಾಲ್ಕು ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗಿದೆ.
ಇದೀಗ ಮೊದಲ ಕಂತಿನ ಹಣವನ್ನು ಸೇರಿಸಿ ಮೂರು ಕಂತಿನ ಹಣ (three installments) ಅಂದರೆ 6,000ಗಳನ್ನು ಇದುವರೆಗೆ ಯಾರೂ ಪಡೆದುಕೊಂಡಿಲ್ಲವೂ ಅಂತಹ ಫಲಾನುಭವಿ ಮಹಿಳೆಯರ ಖಾತೆಗೂ ವರ್ಗಾವಣೆ ಮಾಡಲಾಗುವುದು.
ಕಳೆದ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಪಡೆಯದವರಿಗೆ ವಿಶೇಷ ಸೂಚನೆ! ಬದಲಾಗಿದೆ ನಿಯಮ
ಪೆಂಡಿಂಗ್ (pending amount) ಇರುವ ಹಣವನ್ನು ಕೂಡ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು ಮಹಿಳೆಯರು ಒಂದೇ ಒಂದು ತಿಂಗಳು ಕೂಡ ಮಿಸ್ ಆಗದೆ ಪ್ರತಿ ತಿಂಗಳಿನ ಹಣವನ್ನು ಪಡೆದುಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ಮಹಿಳೆಯರ ಖಾತೆಗೆ ಹಣ ಸಂದಾಯವಾಗಲು ಗ್ರಾಮ ಅದಾಲತ್ (gram Adalat) ನಡೆಸಲು ಕೂಡ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಯಾವುದೇ ಕುಟುಂಬದ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಸಾಧ್ಯವಾಗದೆ ಇದ್ದಲ್ಲಿ, ಅಂತವರನ್ನು ಗುರುತಿಸಿ ಅವರ ಹೆಸರುಗಳ ಲಿಸ್ಟ್ ಸರ್ಕಾರಕ್ಕೆ ನೀಡಬೇಕು ಹಾಗೂ ಅವರ ಖಾತೆಗೆ ಹಣ ವರ್ಗಾವಣೆ ಆಗಲೂ ಬೇಕಾಗಿರುವ ಎಲ್ಲಾ ಕೆಲಸಗಳನ್ನು ಮಾಡಬೇಕು ಎಂದು ಸರ್ಕಾರ ಗ್ರಾಮ ಪಂಚಾಯತ್ (gram Panchayat) ಸಿಬ್ಬಂದಿಗಳಿಗೆ ಆದೇಶ ನೀಡಿದೆ.
ಇಷ್ಟೇ ಅಲ್ಲದೆ ಅಂಗನವಾಡಿ ಸಹಾಯಕಿಯರು ಪ್ರತಿ ಮನೆಗೆ ಹೋಗಿ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದ್ದರೆ ಮಹಿಳೆಯರನ್ನು ನೇರವಾಗಿ ಬ್ಯಾಂಕಿಗೆ (Bank) ಕರೆದುಕೊಂಡು ಹೋಗಿ ತಾವೇ ಸ್ವತಃ ಸಮಸ್ಯೆ ಪರಿಹರಿಸಬೇಕಾಗಿಯೂ ಕೂಡ ಸರ್ಕಾರ ತಿಳಿಸಿದೆ. ಸರ್ಕಾರದ ಈ ಎಲ್ಲಾ ಉಪಕ್ರಮಗಳಿಂದ ಡಿಸೆಂಬರ್ ತಿಂಗಳ ಹೊತ್ತಿಗೆ 100% ನಷ್ಟು ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಬಹುದು ಎನ್ನುವ ನೀರಿಕ್ಷೆ ಇದೆ.
ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ! ಸರ್ಕಾರ ಖಡಕ್ ನಿರ್ಧಾರ
ಇನ್ನು ಮಹಿಳೆಯರು ತಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ (Mobile Number) ಎಸ್ ಎಂ ಎಸ್ (SMS) ಬಾರದೆ ಇದ್ದಿದ್ದಕ್ಕೆ ಹಣ ವರ್ಗಾವಣೆ ಆಗಿಲ್ಲ ಎಂದು ಭಾವಿಸುತ್ತಾರೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ (technical error) ಎಸ್ಎಮ್ಎಸ್ ಬಾರದೇ ಇರಬಹುದು.
ಆದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುತ್ತದೆ. ಹಾಗಾಗಿ ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿ ತಿಂಗಳು 15ರಿಂದ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ, ಆ ಸಂದರ್ಭದಲ್ಲಿ ನೀವು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯನ್ನು (Check The Bank Account) ಪರಿಶೀಲಿಸಿಕೊಳ್ಳಬಹುದು.
ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರೂ ಕರೆಂಟ್ ಬಿಲ್ ಬರ್ತಾಯಿದಿಯಾ? ಈ ರೀತಿ ಮಾಡಿ
Gruha Lakshmi Yojana balance Fund Release, Check your Bank account