Karnataka NewsBengaluru News

ಹೊಸ ರೇಷನ್ ಕಾರ್ಡ್ ಅರ್ಜಿ, ತಿದ್ದುಪಡಿಗೆ ಮತ್ತೆ ಅವಕಾಶ! ಸ್ಥಳ, ದಿನಾಂಕ, ಸಮಯ ತಿಳಿಯಿರಿ

ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮಹತ್ವದ ಪ್ರಕಟಣೆ ಒಂದನ್ನು ಹೊರಡಿಸಲಾಗಿದ್ದು, ರೇಷನ್ ಕಾರ್ಡ್ ತಿದ್ದುಪಡಿಯನ್ನು (ration card correction) ಇನ್ನೂ ಮಾಡಿಕೊಳ್ಳದೆ ಇರುವವರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ

ಆದರೆ ಈಗ ತಿದ್ದುಪಡಿಗೆ ಅವಕಾಶ ನೀಡಿದ್ದು ಕೆಲವು ಜಿಲ್ಲೆಗಳಲ್ಲಿ (district) ಹಾಗೂ ಕೆಲವು ಸಮಯದ ಅವಧಿಗೆ ಮಾತ್ರ, ಹಾಗಾಗಿ ಯಾರಿಗೆಲ್ಲ ತಿದ್ದುಪಡಿ ಮಾಡುವ ಅಗತ್ಯ ಇದೆಯೋ ಅವರು ತಕ್ಷಣವೇ ಆ ಕೆಲಸ ಮಾಡಿಕೊಳ್ಳಬೇಕು.

BPL Ration Card

ಕಳೆದ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಪಡೆಯದವರಿಗೆ ವಿಶೇಷ ಸೂಚನೆ! ಬದಲಾಗಿದೆ ನಿಯಮ

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ (Ration card correction)

ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ (Annabhagya scheme) ಹಾಗೂ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ

ಒಂದು ವೇಳೆ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ತಪ್ಪು ಮುದ್ರಣ (wrong print) ಇದ್ದರೆ ಅಂತಹ ಕುಟುಂಬದವರು ಸರ್ಕಾರದ ಯಾವ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ

ಈ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಮೂರು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು, ಈಗ ಮತ್ತೆ ಎರಡು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಯಾವೆಲ್ಲ ತಿದ್ದುಪಡಿ ಮಾಡಬಹುದು

ಹಲವರ ರೇಷನ್ ಕಾರ್ಡ್ ನಲ್ಲಿ ಹೆಸರು ಹಾಗೂ ವಿಳಾಸ ತಪ್ಪಾಗಿ ಮುದ್ರಣಗೊಂಡಿರುತ್ತದೆ. ಹಾಗಾಗಿ ನೀವು ನಿಮ್ಮ ಹೆಸರು ತಿದ್ದುಪಡಿ ಮಾಡಲು ಸರ್ಕಾರ ಮತ್ತೆ ಅವಕಾಶ ಮಾಡಿಕೊಟ್ಟಿದೆ, ಅಷ್ಟೇ ಅಲ್ಲದೆ ಮನೆಯಲ್ಲಿ ಇರುವ ಯಾವುದೇ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಬಹುದು ಹಾಗೂ ಮನೆಯಲ್ಲಿ ಇಲ್ಲದ ಸದಸ್ಯರ ಹೆಸರು ರೇಷನ್ ಕಾರ್ಡ್ ನಲ್ಲಿ ಇದ್ದರೆ ಅವರ ಹೆಸರನ್ನು ಕೂಡ ತೆಗೆದು ಹಾಕಬಹುದು.

ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ! ಸರ್ಕಾರ ಖಡಕ್ ನಿರ್ಧಾರ

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದು ಎಲ್ಲಿ? (Ration card correction place and time)

Ration Card Correctionಸದ್ಯ ರೇಷನ್ ಕಾರ್ಡ್ ತಿದ್ದುಪಡಿಗೆ ಕಲ್ಬುರ್ಗಿ ಜಿಲ್ಲೆಯಲ್ಲಿ (Kalaburgi district) ಮಾತ್ರ ಅವಕಾಶ ನೀಡಲಾಗಿದ್ದು ನವೆಂಬರ್ 29 ಹಾಗೂ 30ನೇ ತಾರೀಕಿನಂದು ತಿದ್ದುಪಡಿ ಮಾಡಿಕೊಳ್ಳಬಹುದು.

ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಮಾತ್ರ ಅವಕಾಶವಿದೆ. ನೀವು ನಿಮ್ಮ ಹತ್ತಿರದ ಗ್ರಾಮ ಒನ್ (grama one) ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಕೂಡ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರೂ ಕರೆಂಟ್ ಬಿಲ್ ಬರ್ತಾಯಿದಿಯಾ? ಈ ರೀತಿ ಮಾಡಿ

ಹೊಸ ಪಡಿತರ ಚೀಟಿ ಪಡೆಯಲು ಅರ್ಜಿಗೆ ಅವಕಾಶ

ಇನ್ನು ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಕೆಲವು ಕುಟುಂಬದವರಿಗೆ ಅವಕಾಶ ನೀಡಲಾಗಿದೆ ಹಾಗೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ಡಿಸೆಂಬರ್ 3ನೇ ತಾರೀಕಿನಂದು, ಆಧಾರ್ ಕಾರ್ಡ್, ಮನೆಯ ವಿಳಾಸ ಮತ್ತು ಇತರ ದಾಖಲೆಗಳೊಂದಿಗೆ ಗ್ರಾಮ ಒನ್, ಕರ್ನಾಟಕ ಒನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕಲಬುರ್ಗಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಜಿ. ಗುಣಕಿ ತಿಳಿಸಿದ್ದಾರೆ.

ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳದೆ ಇದ್ದರೆ ಸರಕಾರದ ಯಾವ ಯೋಜನೆಯ ಹಣವು ಕೂಡ ಸಿಗುವುದಿಲ್ಲ ಅಷ್ಟೇ ಅಲ್ಲದೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಬರ ಪರಿಹಾರಕ್ಕೆ ಅರ್ಹ ರೈತರ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯ ಚೆಕ್ ಮಾಡಿಕೊಳ್ಳಿ

ಈ ಕಾರಣಕ್ಕಾಗಿ ಪಡಿತರ ಚೀಟಿ ಹೊಂದಿರುವವರು ಅಗತ್ಯ ಇರುವ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು. ಸದ್ಯ ರೇಷನ್ ಕಾರ್ಡ್ ತಿದ್ದುಪಡಿಗೆ ಆನ್ಲೈನ್ ಪೋರ್ಟಲ್ (online portal) ನಲ್ಲಿ ಅಥವಾ ಸೈಬರ್ ಕೇಂದ್ರಗಳಲ್ಲಿ ಅವಕಾಶ ಇಲ್ಲ. ಹಾಗಾಗಿ ಸ್ಥಳೀಯರು ಸ್ಥಳೀಯ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.

Apply For New ration card and For Ration Card correction

Our Whatsapp Channel is Live Now 👇

Whatsapp Channel

Related Stories