ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ! ಸರ್ಕಾರ ಖಡಕ್ ನಿರ್ಧಾರ
ನ್ನಭಾಗ್ಯ ಯೋಜನೆ (Annabhagya Scheme) ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣವಾಗಲಿ ನಿಮ್ಮ ಖಾತೆಗೆ (Bank Account) ಬರಬೇಕು ಅಂದ್ರೆ ಬಿಪಿಎಲ್ ಕಾರ್ಡ್ ಬಹಳ ಮುಖ್ಯ
ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ (government scheme benefit) ಪಡೆದುಕೊಳ್ಳಲು ಆಧಾರ್ ಕಾರ್ಡ್ (Aadhaar Card) ನಂತೆ ಈಗ ಪಡಿತರ ಚೀಟಿ (ration card) ಕೂಡ ಬಹಳ ಮುಖ್ಯವಾಗಿದೆ.
ಅದರಲ್ಲೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಗ್ಯಾರಂಟಿ ಯೋಜನೆಗಳ (guarantee schemes) ಪ್ರಯೋಜನ ಪಡೆದುಕೊಳ್ಳಲು ಎಪಿಎಲ್ (APL card) ಅಥವಾ ಬಿಪಿಎಲ್ ಕಾರ್ಡ್ (BPL card) ಮುಖ್ಯವಾಗಿ ಬೇಕು.
ಅನ್ನಭಾಗ್ಯ ಯೋಜನೆಯ (Annabhagya Scheme) ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣವಾಗಲಿ ನಿಮ್ಮ ಖಾತೆಗೆ (Bank Account) ಬರಬೇಕು ಅಂದ್ರೆ ಬಿಪಿಎಲ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ.
ಇದರಿಂದಾಗಿ ಯಾರು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರು ಅಂತವರಿಗೆ ಸರ್ಕಾರದ ಕಡೆಯಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.
ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರೂ ಕರೆಂಟ್ ಬಿಲ್ ಬರ್ತಾಯಿದಿಯಾ? ಈ ರೀತಿ ಮಾಡಿ
ಹೊಸ ಪಡಿತರ ಕಾರ್ಡ್ ವಿಲೇವಾರಿಗೆ ಸರ್ಕಾರದ ಗ್ರೀನ್ ಸಿಗ್ನಲ್!
ವಿಧಾನಸಭಾ ಚುನಾವಣೆಗೂ (vidhansabha election) ಮುನ್ನ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಹೊಸ ಪಡಿತರ ಚೀಟಿಯ ಅರ್ಜಿಗಳು ಸುಮಾರು ಮೂರು ಲಕ್ಷದಷ್ಟು. ಆದರೆ ಎಲೆಕ್ಷನ್ ಹತ್ತಿರ ಬರುತ್ತಿದ್ದ ಹಾಗೆ ಅರ್ಜಿ ತೆಗೆದುಕೊಳ್ಳುವುದನ್ನು ಸರ್ಕಾರ ನಿಲ್ಲಿಸಿತು.
ಅಷ್ಟೇ ಅಲ್ಲದೆ ಈಗಾಗಲೇ ಸಲ್ಲಿಕೆ ಆಗಿರುವ ಪಡಿತರ ಚೀಟಿ ಅರ್ಜಿಗಳನ್ನು ಕೂಡ ಪರಿಗಣಿಸದೆ ಅದರ ವಿಲೇವಾರಿ ಕೂಡ ಮಾಡಿಲ್ಲ. ಇದರಿಂದಾಗಿ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಕಷ್ಟು ಕುಟುಂಬಗಳಿಗೆ ಸಾಧ್ಯವಾಗಿಲ್ಲ, ತಮ್ಮ ಅರ್ಜಿಗಳನ್ನು ಪರಿಗಣಿಸಿ ಆದಷ್ಟು ಬೇಗ ಹೊಸ ಪಡಿತರ ಚೀಟಿ ವಿತರಣೆ ಮಾಡಿ ಎಂದು ಸರ್ಕಾರಕ್ಕೆ ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಪರಿಶೀಲನೆ (Ration card application verification) ನಡೆಸುತ್ತಿದೆ ಹಾಗೂ ಸದ್ಯದಲ್ಲಿಯೇ ಸರಿಯಾದ ಅರ್ಜಿಗಳನ್ನು ಪರಿಗಣಿಸಿ ಅಂತವರಿಗೆ ಪಡಿತರ ಚೀಟಿ ವಿತರಣೆ ಮಾಡುವುದಾಗಿ ತಿಳಿಸಿದೆ.
ಆಹಾರ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಸದ್ಯದಲ್ಲಿಯೇ ಸುಮಾರು ಏಳು ಸಾವಿರ ಹೊಸ ಪಡಿತರ ಚೀಟಿ (new ration card distribution) ವಿತರಣೆ ಮಾಡಲಾಗುವುದು. ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕುಟುಂಬದ ಪರಿಸ್ಥಿತಿ ಪರಿಶೀಲಿಸಿ ನಂತರವಷ್ಟೇ ಹೊಸ ಪಡಿತರ ವಿತರಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋ ರಾತ್ರಿ ಬದಲಾವಣೆ! ಹಣ ವರ್ಗಾವಣೆಗೆ ಹೊಸ ಕ್ರಮ
ಸರ್ಕಾರದ ಕಟ್ಟುನಿಟ್ಟಿನ ಕ್ರಮ
ಹಿಂದೆ ಬಹುತೇಕ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಯಾವುದೇ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಅಥವಾ ನಿಯಮಗಳ ಹೇರಿಕೆ ಇಲ್ಲದೆ ತಕ್ಷಣವೇ ಪಡಿತರ ಚೀಟಿ ವಿತರಣೆ ಮಾಡಲಾಗಿತ್ತು. ಆದರೆ ಈಗ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಕತ್ತರಿಯೇ ಬಿದ್ದಿದ್ದು, ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ.
ಜೊತೆಗೆ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಕೂಡ ಬಹಳ ಸೂಕ್ಷ್ಮವಾಗಿ ಪರಿಶೀಲಿಸಿ ನೂರಕ್ಕೆ ನೂರು ಪ್ರತಿಶತದಷ್ಟು ಅರ್ಹರು ಎನಿಸಿದ ಕುಟುಂಬದವರಿಗೆ ಮಾತ್ರ ಹೊಸ ಪಡಿತರ ಚೀಟಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.
ಬರ ಪರಿಹಾರಕ್ಕೆ ಅರ್ಹ ರೈತರ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯ ಚೆಕ್ ಮಾಡಿಕೊಳ್ಳಿ
ಸದ್ಯಕ್ಕೆ ಇಲ್ಲ ಹೊಸ ಅರ್ಜಿ ಸ್ವೀಕಾರ!
ಈಗಾಗಲೇ ಮೂರು ಲಕ್ಷದಷ್ಟು ಪಡಿತರ ಚೀಟಿ ವಿತರಣೆ ಬಾಕಿ ಇದ್ದು ಇವುಗಳ ಪರಿಶೀಲನೆಯನ್ನು ಸರ್ಕಾರ ನಡೆಸುತ್ತಿದೆ, ಈ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿ ವಿಲೇವಾರಿ ಆಗುವವರೆಗೂ ಮತ್ತೆ ಹೊಸ ಅರ್ಜಿಗಳನ್ನು ತೆಗೆದುಕೊಳ್ಳಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹಾಗಾಗಿ ಸದ್ಯಕ್ಕಂತೂ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆದರೆ ಈಗಾಗಲೇ ಅರ್ಜಿ ಸಲ್ಲಿಕೆ ಆಗಿರುವ ಸಾಕಷ್ಟು ಕುಟುಂಬಗಳು ಸದ್ಯದಲ್ಲಿ ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳಲಿದ್ದಾರೆ. ಯಾವ ಜಿಲ್ಲೆಗೆ ಹಾಗೂ ಎಷ್ಟು ಕುಟುಂಬಗಳಿಗೆ ರೇಷನ್ ಕಾರ್ಡ್ ವಿತರಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಆಸಕ್ತರು ಕೂಡಲೇ ಅರ್ಜಿ ಹಾಕಿ
Distribution of new ration card only for such people, Govt Key decision