ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಆಸಕ್ತರು ಕೂಡಲೇ ಅರ್ಜಿ ಹಾಕಿ

Story Highlights

ಕೆಲವು ಗ್ರಾಮಗಳಲ್ಲಿ ಪಡಿತರ ವಸ್ತುಗಳನ್ನ ನೀಡುವ ನ್ಯಾಯಬೆಲೆ ಅಂಗಡಿಗಳ (Ration Shop) ಕೊರತೆ ಉಂಟಾಗಿದ್ದು ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಈಗಾಗಲೇ ಅನ್ನಭಾಗ್ಯ ಯೋಜನೆ (Annabhagya Yojana) ಅಡಿಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಕೊಡುತ್ತಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಈಗ ಕೆಲವು ಗ್ರಾಮಗಳಲ್ಲಿ ಪಡಿತರ ವಸ್ತುಗಳನ್ನ ನೀಡುವ ನ್ಯಾಯಬೆಲೆ ಅಂಗಡಿಗಳ (Ration Shop) ಕೊರತೆ ಉಂಟಾಗಿದ್ದು ಅಲ್ಲಿಯ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ವರದಿಯಾಗಿದೆ

ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದ್ದು ನೀವು ಸ್ಥಳೀಯರಾಗಿದ್ದರೆ ಅರ್ಜಿ ಸಲ್ಲಿಸಿ ನ್ಯಾಯಬೆಲೆ ಅಂಗಡಿಯನ್ನು ಆರಂಭಿಸಬಹುದು, ಇದಕ್ಕೆ ಆರಂಭಿಕ ಬಂಡವಾಳವನ್ನು (Investment) ನೀವು ಹೂಡಿಕೆ ಮಾಡಿದರು ಕೂಡ ಸರ್ಕಾರದಿಂದ ಎಲ್ಲಾ ರೀತಿಯ ಫೆಸಿಲಿಟಿ ಲಭ್ಯವಿದೆ.

ಸರ್ಕಾರದಿಂದ ನಿವೇಶನ, ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ! ಈ ಜಿಲ್ಲೆಯವರಿಗೆ ಸಿಗಲಿದೆ ಪ್ರಯೋಜನ

ಎಲ್ಲಿ ಅರ್ಜಿ ಸಲ್ಲಿಸಬೇಕು (Where to apply)

ಅರ್ಜಿ ಸಲ್ಲಿಸಲು ನವೆಂಬರ್ ತಿಂಗಳು ಕೊನೆಯ ದಿನಾಂಕವಾಗಿದ್ದು ನೀವು ಸಂಬಂಧ ಪಟ್ಟ ಅರ್ಜಿ ನಮೂನೆ ಎ ಹಾಗೂ ಸಂಬಂಧಪಟ್ಟ ದೃಢೀಕರಣ ಪ್ರಮಾಣ ಪತ್ರಗಳನ್ನು ನಿಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿಗೆ ಹೋಗಿ ಪಡೆದು, ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

ನ್ಯಾಯಬೆಲೆ ಅಂಗಡಿ ಆರಂಭಿಸಿದರೆ ಸಿಗುತ್ತೆ ಲಾಭ?

ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಪ್ರತಿ ಕೆಜಿ ದವಸ ಧಾನ್ಯ ಮಾರಾಟಕ್ಕೆ ಇಂತಿಷ್ಟು ಎಂದು ಕಮಿಷನ್ ನೀಡಲಾಗುತ್ತದೆ ಇನ್ನು ಕೆಲಗಡೆ ತಿಂಗಳ ಮೊತ್ತವನ್ನು ಪಾವತಿಸಲಾಗುತ್ತದೆ, ಇದರ ಜೊತೆಗೆ ಆ ಭಾಗದ ರೇಷನ್ ಕಾರ್ಡ್ ದಾರರ (Ration Card Holders) ಆಧಾರದ ಮೇಲೆ ಹೆಚ್ಚುವರಿ ಬೋನಸ್ ಕೂಡ ಸಿಗುತ್ತದೆ.

ಕೃಷಿ ಜಮೀನು ಇರೋ ರೈತರ ಖಾತೆಗೆ 25,000 ಜಮಾ; ನಿಮ್ಮ ಖಾತೆಗೂ ಬಂದಿದ್ಯಾ ಚೆಕ್ ಮಾಡಿ

Ration Shopಯಾರು ಅರ್ಜಿ ಸಲ್ಲಿಸಬಹುದು? (who can apply)

18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದ್ದು, ನ್ಯಾಯಬೆಲೆ ಅಂಗಡಿ ಆರಂಭಿಸುವ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ (computer knowledge is mandatory) ಇರುವುದು ಕಡ್ಡಾಯವಾಗಿದೆ, ಪಡಿತರ ವಿತರಣೆ ಮಾಡಿದ ನಂತರ ಗಣಕೀಕರಣ ಮಾಡುವ ಅಗತ್ಯ ಇರುವುದರಿಂದ ಕಂಪ್ಯೂಟರ್ ಬಗ್ಗೆ ಚೆನ್ನಾಗಿ ತಿಳಿದಿರಬೇಕು.

ಮಹಿಳೆಯರ ಸ್ವಂತ ವ್ಯಾಪಾರಕ್ಕೆ ರಾಜ್ಯ ಸರ್ಕಾರದ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಸಲ್ಲಿಸಿ

ಸಂಘ-ಸಂಸ್ಥೆಗಳಿಗೆ ಮೊದಲ ಆದ್ಯತೆ! (First preference for companies)

ಪ್ರಾಥಮಿಕ ಕೃಷಿ ಸಹಕಾರಿ ಸಂಘ, ತೋಟಗಾರಿಕಾ ಸಂಘ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಸಂಘ ಸಂಸ್ಥೆಗಳು, ಕಂಪನಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಾನ್ಯತೆ ಪಡೆದುಕೊಂಡಿರುವ ಸ್ವ ಸಹಾಯ ಗುಂಪುಗಳು ಮೊದಲಾದ ಸಂಘ-ಸಂಸ್ಥೆಗಳಿಗೆ ನ್ಯಾಯಬೆಲೆ ಅಂಗಡಿ (Ration Shop) ಆರಂಭಿಸಲು ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ನ್ಯಾಯಬೆಲೆ ಅಂಗಡಿ ಆರಂಭಿಸಲು ಅರ್ಜಿ ಸಲ್ಲಿಸುವುದಕ್ಕೂ ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ (official website) ಆಗಿರುವ https://ahara.kar.nic.in/Home/Home ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಆಗಸ್ಟ್ ನಂತರ ಅರ್ಜಿ ಸಲ್ಲಿಸಿದ್ರೆ ಮಹತ್ವದ ಮಾಹಿತಿ

Application invitation to open a new Ration Shop