ಕೃಷಿ ಜಮೀನು ಇರೋ ರೈತರ ಖಾತೆಗೆ 25,000 ಜಮಾ; ನಿಮ್ಮ ಖಾತೆಗೂ ಬಂದಿದ್ಯಾ ಚೆಕ್ ಮಾಡಿ
ರಾಜ್ಯ ರೈತರ ಸಂಕಷ್ಟ ನಿವಾರಿಸುವುದಕ್ಕೆ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಕೆಲವು ಯೋಜನೆಗಳನ್ನು ಜಾರಿಗೆ (schemes for farmers) ತಂದಿದೆ, ಅದರಲ್ಲೂ ಈ ಬಾರಿ ರಾಜ್ಯದಲ್ಲಿ ಬರಪೀಡಿತ ಪ್ರದೇಶ ( Drought prone area) ಎಂದು ಕೆಲವು ಜಿಲ್ಲೆಗಳನ್ನು (district) ಘೋಷಣೆ ಮಾಡಲಾಗಿದ್ದು ಅಂತಹ ಪ್ರದೇಶದಲ್ಲಿ ವಾಸಿಸುವ ರೈತರಿಗೆ ನೇರವಾಗಿ ಹಣ ವರ್ಗಾವಣೆ (DBT) ಮಾಡಲು ಸರ್ಕಾರ ನಿರ್ಧರಿಸಿದೆ.
ಬರಪೀಡಿತ ಪ್ರದೇಶ ರೈತರಿಗೆ ಧನಸಹಾಯ ( Subsidy to farmers)
ಈ ಬಾರಿ ರಾಜ್ಯದಲ್ಲಿ ಮಳೆಯ ಅಭಾವದಿಂದ ಸಾಕಷ್ಟು ಪ್ರದೇಶಗಳು ಅಂದರೆ 195 ಜಿಲ್ಲೆಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ, ಈ ಜಿಲ್ಲೆಗಳಿಗೆ ಅಗತ್ಯ ಇರುವ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರ ನಿರ್ಧರಿಸಿದ್ದು ರೈತರಿಗೆ ಧನಸಹಾಯ ನೀಡಲಾಗುತ್ತಿದೆ.
ರೈತರಿಗೆ ಮಳೆಯ ಅಭಾವದಿಂದಾಗಿ ಬೆಳೆಯ ನಷ್ಟ ಉಂಟಾಗಿದ್ದು ಈ ಬಾರಿ ಸರಿಯಾದ ಫಸಲು ಪಡೆಯಲು ಕೂಡ ಸಾಧ್ಯವಾಗುತ್ತಿಲ್ಲ, ಇದಕ್ಕಾಗಿ ರೈತರ ಕಷ್ಟಕ್ಕೆ ನಿಂತಿರುವ ರಾಜ್ಯ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ.
ಮಹಿಳೆಯರ ಸ್ವಂತ ವ್ಯಾಪಾರಕ್ಕೆ ರಾಜ್ಯ ಸರ್ಕಾರದ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಸಲ್ಲಿಸಿ
ಬೆಳೆ ಪರಿಹಾರಕ್ಕೆ ನಿರೀಕ್ಷೆ (crop relief)
ರಾಜ್ಯ ಸರ್ಕಾರ (state government) ಈಗಾಗಲೇ ಹೇಳಿರುವಂತೆ ಬರಪೀಡಿತ ಪ್ರದೇಶಕ್ಕೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕೆಲವು ಮುಖ್ಯ ಕ್ರಮವನ್ನು ಕೈಗೊಂಡಿದೆ.
ಅಷ್ಟೇ ಅಲ್ಲದೆ ಮೇವು ಇಲ್ಲದೆ ಜಾನುವಾರಗಳು ಸಾಯಿಬಾರದು ಎನ್ನುವ ಕಾರಣಕ್ಕೆ ನೀರಾವರಿ ಹೊಂದಿರುವ ರೈತರು ಜಾನುವಾರು ಸಾಕಾಣಿಕೆಗೆ ಮೇವು ಬೆಳೆಸಲು ಮುಂದಾದರೆ ಅಂಥವರಿಗೆ ಉಚಿತವಾಗಿ ಮೇವು ಕಿಟ್ ಕೂಡ ನೀಡಲು ಸರ್ಕಾರ ನಿರ್ಧರಿಸಿದೆ.
ಸ್ವಂತ ಮನೆ, ಆಸ್ತಿ ಇ-ಖಾತ ಮಾಡಿಸಿಕೊಳ್ಳದೆ ಇರುವವರಿಗೆ ಸರ್ಕಾರದ ಮಹತ್ವದ ಆದೇಶ
ಬರಪೀಡಿತ ಪ್ರದೇಶದ ರೈತರಿಗೆ ಬೆಳೆ ವಿಮೆ!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್ ಬೀಮಾ ಯೋಜನೆ (fasal Bima Yojana) ಅಡಿಯಲ್ಲಿ ನೋಂದಾಯಿಸಿಕೊಂಡ ರೈತರಿಗೆ ಬೆಳೆ ವಿಮೆ ಕೂಡ ಸರ್ಕಾರ ನೀಡುತ್ತಿದೆ. ರೈತರು ಮಳೆಯ ಅಭಾವದಿಂದಾಗಿ ಭೂಮಿಯನ್ನು ಹದ ಮಾಡಿಕೊಂಡಿದ್ದರು ಕೂಡ ಬೆಳೆ ಬೆಳೆಯಲು ಬೀಜಗಳನ್ನು ಖರೀದಿ ಮಾಡಿದ್ದರು ಕೂಡ ಸರಿಯಾದ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗದೆ ಬಿತ್ತನೆ ಕೆಲಸವನ್ನು ಮುಂದುವರಿಸಲು ಆಗುತ್ತಿಲ್ಲ.
ಈ ರೀತಿ ಆದರೆ ರೈತರ ಜೀವನವೇ ಸಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ಸರ್ಕಾರ ಫಸಲ್ ಬೀಮಾ ಯೋಜನೆಯ ಅಡಿಯಲ್ಲಿ ವಿಮೆ ನೀಡುತ್ತಿರುವುದು ರೈತರಿಗೆ ಸ್ವಲ್ಪ ಸಮಾಧಾನ ನೀಡಿದೆ. ಯಾರು ಫಸಲು ಯೋಜನೆಗೆ ಪ್ರೀಮಿಯಂ ಹಣವನ್ನು (premium payment) ಪಾವತಿ ಮಾಡಿ ನೋಂದಾಯಿಸಿಕೊಂಡಿರುತ್ತಾರೋ ಅಂಥವರಿಗೆ ತಕ್ಷಣವೇ ವಿಮೆ ಪರಿಹಾರ ಹಣ ಸಿಗಲಿದೆ.
ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಆಗಸ್ಟ್ ನಂತರ ಅರ್ಜಿ ಸಲ್ಲಿಸಿದ್ರೆ ಮಹತ್ವದ ಮಾಹಿತಿ
ಅದೇ ರೀತಿ ಬೆಳೆ ಹಾನಿ ಅಥವಾ ಫಸಲು ಭಾರದೇ ಇರುವ ಕಾರಣಕ್ಕೆ ರೈತರು ಸಮಸ್ಯೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಹಂಗಾಮಿ ಸಬ್ಸಿಡಿ ನಿಗದಿತ ದರದಲ್ಲಿ ರಾಜ್ಯ ವಿಪತ್ತು ಸ್ಪಂದನ ನಿಧಿಯಿಂದ ಹಣ ಒದಗಿಸಲು ಸರ್ಕಾರ ನಿರ್ಧರಿಸಿದೆ.
ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡನ್ನೂ ಈ ಬಾರಿ ರಾಜ್ಯದ ರೈತರು ಅನುಭವಿಸುತ್ತಿದ್ದಾರೆ. ಇಂಥವರಿಗೆ ಪರಿಹಾರ ನೀಡಲು ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು ಜೂನ್ ನಿಂದ ಆಗಸ್ಟ್ 2023ರ ವರೆಗೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೆ ಒಳಗಾದ ರೈತರಿಗೆ ಪರಿಹಾರ ನೀಡಲು ನಿರ್ಧರಿಸಿದೆ.
2022 ಜುಲೈ ಹೊತ್ತಿಗೆ ಕೆಲವು ರೈತರ ಖಾತೆಗೆ ಸರ್ಕಾರ ಹಣವನ್ನು ನೇರವಾಗಿ ಜಮಾ ಮಾಡಿದೆ ಇನ್ನು ಶೀಘ್ರದಲ್ಲಿಯೇ ಬೆಳೆ ಪರಿಹಾರ ನಿಧಿ ರೈತರ ಖಾತೆಗೆ (Bank Account) ತಲುಪಲಿದೆ, ನೀವು ಆನ್ಲೈನ್ ಮೂಲಕವೇ ನಿಮ್ಮ ಖಾತೆಗೆ ಹಣ ಸಂದಾಯ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು ಒಂದು ವೇಳೆ ಹಣ ಬಾರದೆ ಇದ್ದಲ್ಲಿ ಹತ್ತಿರದ ಕೃಷಿ ಕೇಂದ್ರ ಅಥವಾ ಗ್ರಾಮ ಪಂಚಾಯತ್ ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು.
ರೇಷನ್ ಕಾರ್ಡ್ ಈಗ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ಬಿಡುಗಡೆ! ಏನಿದರ ಬೆನಿಫಿಟ್ ಗೊತ್ತಾ?
25,000 deposited into Bank account of farmers who own agricultural land