ಸ್ವಂತ ಮನೆ, ಆಸ್ತಿ ಇ-ಖಾತ ಮಾಡಿಸಿಕೊಳ್ಳದೆ ಇರುವವರಿಗೆ ಸರ್ಕಾರದ ಮಹತ್ವದ ಆದೇಶ

ನೀವು ನಿಮ್ಮ ಸ್ವಂತ ಜಮೀನು (Own Property) ಅಥವಾ ಆಸ್ತಿ ಹೊಂದಿದ್ದರೆ (Land) ಅದು ನಿಮ್ಮ ಹೆಸರಿನಲ್ಲಿ ಇರಬೇಕು, ಇದನ್ನ ನೀವು ಖಾತ ಮಾಡಿಸಬೇಕು ಇನ್ನು ಮನೆ ಆಗಿದ್ದರೆ ಇ-ಸ್ವತ್ತು ಮಾಡಿಸಬೇಕು

ಸಾಮಾನ್ಯವಾಗಿ ಗ್ರಾಮೀಣ (village) ಭಾಗದಲ್ಲಿ ಈ ಹೊಸ ನಿಯಮ ಅನ್ವಯವಾಗುತ್ತದೆ ಎನ್ನಬಹುದು, ಗ್ರಾಮೀಣ ಭಾಗದಲ್ಲಿ ಸ್ವಂತ ಮನೆಯನ್ನು (own house) ಬಹುತೇಕ ಎಲ್ಲರೂ ಹೊಂದಿರುತ್ತಾರೆ ಆದರೆ ಸಾಕಷ್ಟು ಜನ ಮನೆ ಖಾತೆ ಪತ್ರ (property documents) ಮಾಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ.

ಯಜಮಾನ ಸತ್ತಾಗ ಆ ಮನೆಯಲ್ಲಿ ಆತನ ವಾರಸುದಾರರು ಅಥವಾ ಆತನ ಮನೆಯವರು ವಾಸಿಸುತ್ತಾರೆ ಅವರು ಕೂಡ ಮನೆಯನ್ನ ಹೆಸರಿಗೆ ಮಾಡಿಕೊಳ್ಳುವುದು ಅಥವಾ ಖಾತಾ ಮಾಡಿಸಿಕೊಳ್ಳುವ ವಿಚಾರವನ್ನೇ ಮರೆಯುತ್ತಾರೆ

ಹೀಗೆ ಮಾಡಿದರೆ ಮುಂದೆ ಸಮಸ್ಯೆ ಆಗಬಹುದು ಎಂದು ಸರ್ಕಾರ ಈಗಾಗಲೇ ತಿಳಿಸಿದ್ದು ನೀವು ಮನೆಗೆ ಇ ಸ್ವತ್ತು ಮಾಡಿಸಬಹುದು ಎಂದು ಹೇಳಿದೆ.

ಸ್ವಂತ ಮನೆ, ಆಸ್ತಿ ಇ-ಖಾತ ಮಾಡಿಸಿಕೊಳ್ಳದೆ ಇರುವವರಿಗೆ ಸರ್ಕಾರದ ಮಹತ್ವದ ಆದೇಶ - Kannada News

ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್! ಹಣ ಜಮಾ ಮಾಡೋಕೆ ಹೊಸ ಮಾರ್ಗ

ಈ ಸ್ವತ್ತು ಮಾಡಿಸುವುದು ಅಂದ್ರೆ ಏನು? (E – swattu)

ನೀವು ನಿಮ್ಮ ಸ್ವಂತ ಜಮೀನು (Own Property) ಅಥವಾ ಆಸ್ತಿ ಹೊಂದಿದ್ದರೆ (Land) ಅದು ನಿಮ್ಮ ಹೆಸರಿನಲ್ಲಿ ಇರಬೇಕು, ಇದನ್ನ ನೀವು ಖಾತ ಮಾಡಿಸಬೇಕು ಇನ್ನು ಮನೆ ಆಗಿದ್ದರೆ ಇ-ಸ್ವತ್ತು ಮಾಡಿಸಬೇಕು. ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸಿ ಖಾತ ಮಾಡಿಟ್ಟುಕೊಳ್ಳುವುದಕ್ಕೆ ಇ ಸ್ವತ್ತು ಎನ್ನಲಾಗುತ್ತದೆ.

Property Documentsಇ- ಸ್ವತ್ತು ಮಾಡಿಸಲು ಬೇಕಾಗುವ ದಾಖಲೆಗಳು! (documents)

*ಮನೆ ಹಕ್ಕು ಪತ್ರ (ಗ್ರಾಮ ವ್ಯಾಪ್ತಿಯಲ್ಲಿ ನೋಂದಣಿ ಆಗಿರುವ ಪತ್ರ)
*ಅರ್ಜಿದಾರರ ಫೋಟೋ
*ಆಧಾರ್ ಕಾರ್ಡ್
* ಮನೆಯ ನಕ್ಷೆ (ತಹಶೀಲ್ದಾರದಿಂದ ಕಚ್ಚಾ ನಕ್ಷೆ ಪಡೆಯಬಹುದು)
*ಕಟ್ಟಡದ ರಶೀದಿ ಅಥವಾ ವಿದ್ಯುತ್ ಬಿಲ್
*ಇ- ಸ್ವತ್ತು ಮಾಡಿಸಲು ನಿಗದಿತ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಗೃಹಲಕ್ಷ್ಮಿ ಹಣ ಗಂಡನ ಖಾತೆಗೆ ವರ್ಗಾವಣೆ! ಮಹಿಳೆಯರ ಬ್ಯಾಂಕ್ ಖಾತೆ ಸಮಸ್ಯೆಗೆ ಪರಿಹಾರ

ಇ – ಸ್ವತ್ತು ಮಾಡಿಸುವುದು ಹೇಗೆ?

ಈ ಸ್ವತ್ತು ಮಾಡಿಸಲು ಅದಕ್ಕಾಗಿ ಮೀಸಲಿರುವ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು ನಂತರ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯತ್ (gram Panchayat) ನಲ್ಲಿ ನೀಡಿದರೆ ದಾಖಲೆಗಳನ್ನು ಪರಿಶೀಲಿಸಿ ಇ – ಸ್ವತ್ತು ಮಾಡಿಸಿಕೊಡಲಾಗುತ್ತದೆ.

ಆದರೆ ಇದಕ್ಕೆ ನೀವು ಮನೆಯ ನಕ್ಷೆ ಸಲ್ಲಿಸಬೇಕು ಒಂದು ವೇಳೆ ಗ್ರಾಮ ಪಂಚಾಯತ್ ಡಾಟಾದಲ್ಲಿ ನಿಮ್ಮ ಮನೆಯ ನಕ್ಷೆ ಇದ್ದರೆ ಹೊಸ ನಂಬರ್ ಕೊಟ್ಟು ನಕ್ಷೆಯನ್ನು ದಾಖಲಿಸಿಕೊಳ್ಳಬಹುದು

ಇಲ್ಲವಾದರೆ ನಿಮ್ಮ ಜಾಗದ ಸರ್ವೆ ಮಾಡಲಾಗುತ್ತದೆ ನಿಗದಿತ ದಿನ ಗ್ರಾಮ ಪಂಚಾಯತ್ ನಿಂದ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ. ಪಿಡಿಓ ಪರಿಶೀಲನೆ ನಡೆಸಿ ನಕ್ಷೆ ತಯಾರಿಸಿ ನಂತರ ಇ – ಸ್ವತ್ತು ಮಾಡಿಕೊಡಲಾಗುತ್ತದೆ.

ಮುಲಾಜಿಲ್ಲದೆ ಇಂತಹ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಸೌಲಭ್ಯ ಕ್ಯಾನ್ಸಲ್

ಫಾರಂ ನಂಬರ್ 9 ಮತ್ತು 11 ನಿಮ್ಮ ಇ – ಸ್ವತ್ತು ಆಗಿರುವ ದಾಖಲೆಯಾಗಿರುತ್ತದೆ. ಈ ದಾಖಲೆಯನ್ನು ನೀಡಿದರೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ಆದ್ದರಿಂದ ನೀವು ಸ್ವಂತ ಮನೆ ಹೊಂದಿದ್ದರೆ ತಪ್ಪದೆ ಇ – ಸ್ವತ್ತು ಮಾಡಿಸಿಕೊಳ್ಳಿ.

government Update for those who have their own house and do not have an e-khata

Follow us On

FaceBook Google News

government Update for those who have their own house and do not have an e-khata