ಮುಲಾಜಿಲ್ಲದೆ ಇಂತಹ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಸೌಲಭ್ಯ ಕ್ಯಾನ್ಸಲ್
ಸೂಕ್ತ ಕ್ರಮ ಕೈಗೊಂಡು ಎಲ್ಲರ ಖಾತೆಗೂ (Bank Account) ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ
ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಮೂರು ಕಂತಿನ ಹಣ ಬಿಡುಗಡೆ ಆಗಿದೆ, ಕೋಟ್ಯಾಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದ ಪೈಕಿ ಬಹುತೇಕ ಎಲ್ಲರಿಗೂ ಕೂಡ ಹಣ ಸಂದಾಯ (Money Deposit) ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ
ಸರ್ಕಾರದ ಅಂಕಿ ಅಂಶಗಳ ಪ್ರಕಾರ ಇನ್ನು ಸುಮಾರು ನಾಲ್ಕರಿಂದ ಐದು ಲಕ್ಷ ಫಲಾನುಭವಿ ಮಹಿಳೆಯರ ಖಾತೆಗೆ ಮಾತ್ರ ಹಣ ವರ್ಗಾವಣೆ (DBT) ಆಗಿಲ್ಲ ಇದಕ್ಕೂ ಕೂಡ ಸೂಕ್ತ ಕ್ರಮ ಕೈಗೊಂಡು ಎಲ್ಲರ ಖಾತೆಗೂ (Bank Account) ಹಣ ವರ್ಗಾವಣೆ ಆಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಸಿಗುತ್ತೆ ಇನ್ನಷ್ಟು ಬೆನಿಫಿಟ್
ಮಹಿಳೆಯರಿಗೆ ಶಾಕಿಂಗ್ ಸುದ್ದಿ ಕೊಟ್ಟ ಸರ್ಕಾರ!
ಒಂದು ಕಡೆ ಅರ್ಜಿ ಸಲ್ಲಿಸಿದ (application) ಮಹಿಳೆಯರು 2,000ಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೊಂದು ಕಡೆ ಒಂದಿಷ್ಟು ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿದೆ.
ಸುಮಾರು 50 ಸಾವಿರ ಅರ್ಜಿಗಳು ಈಗಾಗಲೇ ತಿರಸ್ಕಾರಗೊಂಡಿವೆ (50000 application rejected). ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ನಿರ್ಬಂಧಗಳನ್ನು ಸರ್ಕಾರ ಹೇಳಿದ್ದು ಅದರಲ್ಲಿ ಮುಖ್ಯವಾಗಿ ಯಾವುದೇ ಅರ್ಜಿದಾರ ಮಹಿಳೆ ಅಥವಾ ಆಕೆಯ ಪತಿ ತೆರಿಗೆ ಪಾವತಿ (tax payers) ಮಾಡುವವರಾಗಿದ್ದರೆ ಅಂತವರು ಅರ್ಜಿ ಸಲ್ಲಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
ಆದರೆ ಸಾಕಷ್ಟು ಜನ ತೆರಿಗೆ ಪಾವತಿ ಮಾಡುವ ಮಹಿಳೆಯರು ಕೂಡ ಅರ್ಜಿ ಸಲ್ಲಿಸಿದ್ದು ಇದೀಗ ಇಂತಹ ಅರ್ಜಿಗಳನ್ನು ಪತ್ತೆ ಹಚ್ಚಿ 50,000 ಅರ್ಜಿಗಳ ತಿರಸ್ಕಾರ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆ ಹಣ ಸಂದಾಯಕ್ಕೆ ಸರ್ಕಾರ ಹೊಸ ತಂತ್ರ! ಇನ್ಮುಂದೆ ಹಣ ಮಿಸ್ ಆಗೋಲ್ಲ
ಅರ್ಜಿ ಪತ್ತೆ ಮಾಡಿದ್ದು ಹೇಗೆ?
ಗೃಹಲಕ್ಷ್ಮಿ ಯೋಜನೆಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಇಲಿ ಸಾಕಷ್ಟು ಎಪಿಎಲ್ ಕಾರ್ಡ್ (APL card holders) ಹೊಂದಿರುವ ಮಹಿಳೆಯರ ಪತಿಯ ಆದಾಯ 7 ಲಕ್ಷಕ್ಕೂ ಅಧಿಕವಿದ್ದು ವಾರ್ಷಿಕ ತೆರಿಗೆ ಪಾವತಿ ಮಾಡುತ್ತಿದ್ದಾರೆ.
ಖಾತೆ ಹಾಗೂ ಪ್ಯಾನ್ ಕಾರ್ಡ್(Bank Account and PAN card) ಪರಿಶೀಲನೆ ಮಾಡಿದಾಗ ತೆರಿಗೆ ಪಾವತಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಂತಹ ಮಹಿಳೆಯರ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ 50,000 ಅರ್ಜಿಗಳು ರಿಜೆಕ್ಟ್! ಇವರಿಗೆ ಸಿಗೋಲ್ಲ ಹಣ
ಗೃಹಲಕ್ಷ್ಮಿ ಅದಾಲತ್ ಮೂಲಕ ಹಣ ಸಂದಾಯ! (Gruha lakshmi Adalat)
ಒಂದು ವಾರದ ಒಳಗೆ ಗೃಹಲಕ್ಷ್ಮಿ ಅದಾಲತ್ ಆರಂಭಿಸಿ ಯಾವ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಎಂಬುದನ್ನು ಖುದ್ದಾಗಿ ಗ್ರಾಮ ಪಂಚಾಯತ್ (gram Panchayat) ಸದಸ್ಯರು ಪತ್ತೆ ಹಚ್ಚಿ ಅಂತವರ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi hebbalkar) ತಿಳಿಸಿದ್ದಾರೆ.
ಒಂದು ಕೋಟಿ ಹತ್ತು ಲಕ್ಷ ಮಹಿಳೆಯರ ಖಾತೆಗೆ ಹಣ ತಲುಪಿದೆ ಇನ್ನು ಉಳಿದವರಿಗೆ, ನಗರ ಸಭೆ ಪುರಸಭೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ ಅವರ ಖಾತೆಗೂ ಹಣ ಜಮಾ ಆಗುವಂತೆ ಮಾಡಲಾಗುವುದು..
ಡಿಸೆಂಬರ್ ಅಂತ್ಯದ ಒಳಗೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ವರ್ಗಾವಣೆ (Money Transfer) ಆಗಿಯೇ ಆಗುತ್ತದೆ ಎನ್ನುವ ಭರವಸೆಯನ್ನು ಸಚಿವೆ ನೀಡಿದ್ದಾರೆ.
ಗೃಹಲಕ್ಷ್ಮಿ ಹಣ ಸಿಗದವರ ಲಿಸ್ಟ್ ಕೊಡಿ, ಮನೆ ಮನೆಗೆ ಹೋಗಿ ಸಮಸ್ಯೆ ಪರಿಹರಿಸಿ; ಸಿಎಂ ಆದೇಶ
Such Gruha Lakshmi Yojana Beneficiary Facility Cancel