Karnataka NewsBangalore News

ಅನ್ನಭಾಗ್ಯ ಯೋಜನೆ ಹಣ ಸಂದಾಯಕ್ಕೆ ಸರ್ಕಾರ ಹೊಸ ತಂತ್ರ! ಇನ್ಮುಂದೆ ಹಣ ಮಿಸ್ ಆಗೋಲ್ಲ

ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು (guarantee schemes) ಬಹುತೇಕ ಯಶಸ್ಸಿನ ದಾರಿಯಲ್ಲಿವೆ. ಆದರೆ ಅನ್ನಭಾಗ್ಯ (Annabhagya Yojana) ಹಾಗೂ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಮಾತ್ರ ಸಾಕಷ್ಟು ಜನರ ಖಾತೆಗೆ (Bank Account) ಬರದೇ ಇರುವುದು ನಿಜಕ್ಕೂ ಬೇಸರದ ಸಂಗತಿ.

ಇದಕ್ಕೆ ಕೆಲವು ತಾಂತ್ರಿಕ ಕಾರಣಗಳು (technical error) ಅಥವಾ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗದೆ ಇರುವುದು ಕೂಡ ಒಂದು ಕಾರಣವಾಗಿದೆ.

Do this if Annabhagya Yojana money not reached your Bank account yet

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ 50,000 ಅರ್ಜಿಗಳು ರಿಜೆಕ್ಟ್! ಇವರಿಗೆ ಸಿಗೋಲ್ಲ ಹಣ

ಅನ್ನಭಾಗ್ಯ ಯೋಜನೆಯ ಹಣ ಸಂದಾಯ ಮಾಡಲು ಹೊಸ ತಂತ್ರ

ಅನ್ನಭಾಗ್ಯ ಹಣ ಪ್ರತಿಯೊಬ್ಬರ ಖಾತೆಗೂ ಜಮಾ ಆಗಬೇಕು (DBT) ಎಂದು ಹೊಸ ತಂತ್ರವನ್ನು ರಾಜ್ಯ ಸರ್ಕಾರ ರೂಪಿಸಿದೆ, ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದ್ದು ಸದ್ಯದಲ್ಲಿಯೇ ಸರ್ಕಾರ ತನ್ನ ನಿರ್ಧಾರವನ್ನು ಬಹಿರಂಗಗೊಳಿಸಲಿದೆ.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ 1,10,96,413 ಕಾರ್ಡ್ ದಾರರ ಖಾತೆಗೆ ಡಿಬಿಟಿ (Money Deposit) ಮಾಡಲಾಗಿದೆ. ಸರ್ಕಾರ ಒಟ್ಟು 2,444 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮಹಿಳೆಯರಿಗೆ ಮತ್ತೊಂದು ಯೋಜನೆ, ಉಚಿತವಾಗಿ ಸಿಗಲಿದೆ ₹30,000; ಅರ್ಜಿ ಸಲ್ಲಿಸಿ

Annabhagya Scheme2.60 ಲಕ್ಷ ಹೊಸ ಖಾತೆಯನ್ನು ಅಂಚೆ ಕಚೇರಿಯಲ್ಲಿ (post office) ತೆರೆಯಲಾಗಿದೆ ಹಾಗೂ 12.95 ಲಕ್ಷ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar link) ಮಾಡಲಾಗಿದೆ.

ಉಚಿತ ಎಲೆಕ್ಟ್ರಿಕ್ ಹೊಲಿಗೆ ಯಂತ್ರ ಹಾಗೂ ಟೂಲ್ ಕಿಟ್ ವಿತರಣೆ; ಕೂಡಲೇ ಅರ್ಜಿ ಸಲ್ಲಿಸಿ

ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ಜಮಾ

ಸರ್ಕಾರ ಇಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಬದಲು ಸಿಗುತ್ತಿರುವ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170ಗಳನ್ನು ಬಿಪಿಎಲ್ ಕಾರ್ಡ್ ( BPL card) ದಾರರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದ್ದು ಈ ಹಣ ಎಲ್ಲರ ಖಾತೆಗೆ ಬಂದು ತಲುಪುವಲ್ಲಿ ವಿಫಲವಾಗಿದೆ

ಇದೇ ಕಾರಣಕ್ಕೆ ಈಗ ಹೊಸ ತಂತ್ರ ರೂಪಿಸಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಮೊದಲ ಯಜಮಾನನ ಹೆಸರಿಗೆ ಹಣ ವರ್ಗಾವಣೆ ಆಗುತ್ತಿಲ್ಲ. ಈ ಕಾರಣಕ್ಕಾಗಿ ಮನೆಯಲ್ಲಿ ಇರುವ ಎರಡನೇ ಸದಸ್ಯ ಅಥವಾ ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸಲು ಪ್ರಸ್ತಾವನೆ ಮಂಡಿಸಲಾಗಿದೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಮತ್ತೊಂದು ಹೊಸ ಯೋಜನೆ ಜಾರಿ

ಡಿಸೆಂಬರ್ (December) ಹೊತ್ತಿಗೆ ರಾಜ್ಯ ಸರ್ಕಾರ ಈ ಹೊಸ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ, ಈ ರೀತಿ ಆದರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಎರಡು ಯೋಜನೆಯ ಹಣ ಮಿಸ್ ಆಗದೇ ಪ್ರತಿ ಫಲಾನುಭವಿ ಕುಟುಂಬಕ್ಕೆ ಸಿಗಲಿದೆ.

government new strategy for Annabhagya Yojana Money Deposit

Our Whatsapp Channel is Live Now 👇

Whatsapp Channel

Related Stories