ಗೃಹಲಕ್ಷ್ಮಿ ಯೋಜನೆಯನ್ನು (Gruha lakshmi scheme) ಜಾರಿಗೆ ತಂದು ನಾಲ್ಕು ತಿಂಗಳುಗಳೆ ಕಳೆದಿವೆ, ಈವರೆಗೆ ಮೂರು ಕಂತಿನ ಹಣ ಜಮಾ (Money Deposit) ಆಗಿರುವುದು ಮಹಿಳೆಯರಿಗೆ ಸಂತಸದ ವಿಷಯವಾಗಿದೆ

ಸಾಕಷ್ಟು ಮಹಿಳೆಯರು ತಿಂಗಳ ಸಣ್ಣಪುಟ್ಟ ಮನೆ ನಿರ್ವಹಣಾ ಖರ್ಚಿಗಾಗಿ ಸರ್ಕಾರದಿಂದ ಉಚಿತವಾಗಿರುವ ಈ ಹಣವನ್ನು ಬಳಸಿಕೊಳ್ಳಲು ಸಾಧ್ಯವಾಗಿದೆ. ರಾಜ್ಯದಲ್ಲಿ ಸಾಕಷ್ಟು ಬೇಡ ಮಹಿಳೆಯರು ವಾಸವಾಗಿದ್ದು ಅಂತವರಿಗೆ ಉಚಿತವಾಗಿ ಸಿಗುತ್ತಿರುವುದು ನಿಜಕ್ಕೂ ದೊಡ್ಡ ಮೊತ್ತ ಎನಿಸಿದೆ.

Gruha Lakshmi pending money is also deposited for the women of this district

ಅದೇನೇ ಇರಲಿ ಗೃಹಲಕ್ಷ್ಮಿ ಹಣ (Gruha lakshmi scheme) ತಮ್ಮ ಖಾತೆಗೆ (Bank Account) ಜಮಾ ಆಗಿಲ್ಲ ಎನ್ನುವ ಗೃಹಿಣಿಯರ ಸಂಖ್ಯೆಯಂತೂ ಕಡಿಮೆಯಾಗಿಲ್ಲ.

ಮಹಿಳೆಯರಿಗೆ ಮತ್ತೊಂದು ಯೋಜನೆ, ಉಚಿತವಾಗಿ ಸಿಗಲಿದೆ ₹30,000; ಅರ್ಜಿ ಸಲ್ಲಿಸಿ

ಮೂರನೇ ಕಂತಿನ ಹಣ 1.10ಕೋಟಿಗೂ ಅಧಿಕ ಮಹಿಳೆಯರಿಗೆ!

ಗೃಹಲಕ್ಷ್ಮಿ ಯೋಜನೆಯ ಉಚಿತ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಒಟ್ಟು ರಾಜ್ಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು 1.18 ಕೋಟಿ ಎಂದು ಸರ್ಕಾರ ತಮ್ಮ ಅಂಕಿ ಅಂಶ (statistics) ಬಿಡುಗಡೆ ಮಾಡಿದೆ.

ಪ್ರತಿಯೊಬ್ಬರ ಖಾತೆಗೂ ಹಣ ಬರುವಂತೆ ಮಾಡಲು ಸರ್ಕಾರ ಎರಡು ಸಾವಿರ ಕೋಟಿಗಳಿಗಿಂತಲೂ ಹೆಚ್ಚಿನ ಹಣವನ್ನು ಮೀಸಲಾಗಿಸಿದೆ. ಆದರೆ ಇನ್ನೂ ಸಾಕಷ್ಟು ಜನರ ಖಾತೆಗೆ ಹಣ ವರ್ಗಾವಣೆ (DBT) ಆಗಿಲ್ಲ ಇದಕ್ಕೆ ಮುಖ್ಯವಾದ ಕಾರಣವನ್ನು ಕೂಡ ಸರ್ಕಾರ ಈಗಾಗಲೇ ತಿಳಿಸಿದೆ.

ಗೃಹಲಕ್ಷ್ಮಿ ಹಣ ಸಿಗದವರ ಲಿಸ್ಟ್ ಕೊಡಿ, ಮನೆ ಮನೆಗೆ ಹೋಗಿ ಸಮಸ್ಯೆ ಪರಿಹರಿಸಿ; ಸಿಎಂ ಆದೇಶ

ಗೃಹಲಕ್ಷ್ಮಿ ಅರ್ಜಿ ತಿರಸ್ಕಾರ (Gruha lakshmi Scheme application rejected)

Gruha Lakshmi Yojana

ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ಹೊರಬಿತ್ತು ವಿದ್ಯುತ್ ಬಳಕೆಯ ಲೆಕ್ಕಾಚಾರ

ಗೃಹಲಕ್ಷ್ಮಿ ಯೋಜನೆ ಆರಂಭವಾದಾಗಿನಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಸಾಕಷ್ಟು ಬೇರೆ ಬೇರೆ ಕ್ರಮಗಳನ್ನು ಕೈಗೊಂಡಿದೆ. ಆದರೆ ಇಲ್ಲಿಯವರೆಗೆ ಕೋಟಿ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಸಿಕ್ಕಿದ್ದರು ಕೂಡ ಸುಮಾರು ನಾಲ್ಕರಿಂದ ಐದು ಲಕ್ಷ ಮಹಿಳೆಯರು ಇದುವರೆಗೆ ಒಂದೇ ಒಂದು ಕಂತಿನ ಹಣವನ್ನು ಕೂಡ ಪಡೆದುಕೊಂಡಿಲ್ಲ.

ಈ ಕಾರಣಕ್ಕೆ ಯಾರಿಗೆ ಹಣ ಸಿಕ್ಕಿಲ್ಲ ಎಂಬುದನ್ನು ಪರಿಶೀಲನೆ ಮಾಡಲು ಗ್ರಾಮ ಪಂಚಾಯತ್ (gram Panchayat) ಸಿಬ್ಬಂದಿಗಳಿಗೆ ಸರ್ಕಾರ ತಿಳಿಸಿದೆ.

ಇನ್ನು ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದರೂ ಕೂಡ ಅವರ ಅರ್ಜಿ ರಿಜೆಕ್ಟ್ ಆಗಿದೆ, ಇದಕ್ಕೆ ಸರ್ಕಾರದ ಸರ್ವರ್ ಸಮಸ್ಯೆಯಿಂದ ಹಿಡಿದು, ರೇಷನ್ ಕಾರ್ಡನ್ನು ಮನೆ ಯಜಮಾನಿ ಹೆಸರಿಗೆ ಮಾಡಿಕೊಳ್ಳದೆ ಇರುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ.

ಈ ಕಾರಣಕ್ಕಾಗಿ ಸುಮಾರು 50 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ, ಇನ್ನು ಸುಮಾರು 3082 ಅರ್ಜಿ ಹಾಕಿದ ಮಹಿಳೆಯರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂಥವರಿಗೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಲಭ್ಯವಾಗುವುದಿಲ್ಲ, ಅವರ ಅರ್ಜಿಯನ್ನು ರಿಜೆಕ್ಟ್ ಮಾಡಲಾಗಿದೆ.

ರದ್ದಾಗುತ್ತೆ ರೇಷನ್ ಕಾರ್ಡ್, ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ! ಸರ್ಕಾರದ ಹೊಸ ಕ್ರಮ

ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ (Check your application status)

ಸರ್ಕಾರ ಈಗಾಗಲೇ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಕೆ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ನೀವು ನಿಮ್ಮ ರೇಷನ್ ಸಂಖ್ಯೆಯನ್ನು 8147500500 ನಂಬರ್ಗೆ ಎಸ್ಎಂಎಸ್ (SMS) ಮಾಡಿ ತಕ್ಷಣ ನಿಮಗೆ ಒಂದು ರಿಪ್ಲೈ ಬರುತ್ತದೆ.

ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿದ್ದರೆ ಯಶಸ್ವಿಯಾಗಿದೆ (application successful) ಎಂದು ಸಂದೇಶ ಬರುತ್ತದೆ. ಇಲ್ಲವಾದಲ್ಲಿ ಅರ್ಜಿ ಸಲ್ಲಿಕೆ ಆಗಿಲ್ಲ ಎನ್ನುವ ಸಂದೇಶ ಬರುತ್ತದೆ

ಹೀಗೆ ಏನಾದರೂ ನೀವು ಸಂದೇಶ ಸ್ವೀಕರಿಸಿದರೆ ತಕ್ಷಣವೇ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದುವರೆಗೆ ಯಾರು ಅರ್ಜಿ ಸಲ್ಲಿಕೆ ಮಾಡಿಲ್ಲವೋ ಅಥವಾ ಅರ್ಜಿ ಸಲ್ಲಿಕೆ ಮಾಡಿದರೂ ಕೂಡ ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿ ಆಗಿಲ್ಲ ಎಂದು ಬರುತ್ತಿದೆಯೋ ಅಂತವರು ತಕ್ಷಣವೇ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ಸಿಗುವ 2,000 ರೂ. ಉಚಿತವಾಗಿ ಸಿಗುವಂತೆ ಮಾಡಿಕೊಳ್ಳಿ.

50,000 applications applied for Gruha lakshmi Yojana was rejected