ಮಹಿಳೆಯರಿಗೆ ಮತ್ತೊಂದು ಯೋಜನೆ, ಉಚಿತವಾಗಿ ಸಿಗಲಿದೆ ₹30,000; ಅರ್ಜಿ ಸಲ್ಲಿಸಿ

Story Highlights

ನೀವು ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ (Bank branch) ಭೇಟಿ ನೀಡಿ ಉದ್ಯೋಗಿನಿ ಸಾಲ ಸೌಲಭ್ಯ (Bank Loan) ಪಡೆದುಕೊಳ್ಳಲು ಅರ್ಜಿ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ

ನೀವು ಮಹಿಳೆಯರಾಗಿದ್ದು ಸ್ವಂತ ಉದ್ಯೋಗ (own business) ಮಾಡಲು ಬಯಸುತ್ತೀರಾ? ಆರ್ಥಿಕವಾಗಿ ಸಬಲರಾಗಲು (financial stability) ಬಯಸುತ್ತೀರಾ? ಹಾಗಾದರೆ ಚಿಂತೆ ಬೇಡ ಸರ್ಕಾರವೇ ನಿಮಗೆ ಸಹಾಯಧನ ನೀಡುವುದರ ಮೂಲಕ ನಿಮ್ಮ ಸ್ವಂತ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತದೆ.

ಅಂತಹ ಒಂದು ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು ಲಕ್ಷಾಂತರ ಮಹಿಳೆಯರಿಗೆ ಇದರಿಂದ ಪ್ರಯೋಜನವಾಗಲಿದೆ.

ನಿರುದ್ಯೋಗಿ ಮಹಿಳೆಯರಿಗೆ ಸಹಾಯಧನ (Subsidy Loan for unemployed)

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (women and child welfare department) 2023- 24ನೇ ಸಾಲಿನಲ್ಲಿ ನಿರುದ್ಯೋಗಿ ಹೆಣ್ಣು ಮಕ್ಕಳಿಗೆ (unemployed women) ಸ್ವಂತ ಉದ್ಯಮ ಆರಂಭಿಸಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.

18 ರಿಂದ 55 ವರ್ಷ ವಯಸ್ಸಿನ ಒಳಗಿನ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಈ ಸಹಾಯ ಧನ ಯೋಜನೆಯ ಅಡಿಯಲ್ಲಿ ಬೇರೆ ಬೇರೆ ಯೋಜನೆಗಳು ಒಳಗೊಂಡಿದ್ದು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯಾ ಯೋಜನೆಗಳನ್ನು ಆಯ್ದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ದುಡ್ಡಿದೆ ಅಂತ ಇದಕ್ಕಿಂತ ಹೆಚ್ಚು ಆಸ್ತಿ, ಜಮೀನು ಖರೀದಿ ಮಾಡುವಂತಿಲ್ಲ! ಇಲ್ಲಿದೆ ಮಾಹಿತಿ

ಉದ್ಯೋಗಿನಿ ಯೋಜನೆ (Udyogini Yojana)

ನಿರುದ್ಯೋಗಿ ಮಹಿಳೆಯರಿಗಾಗಿ ಮೀಸಲಿರುವ ಈ ಯೋಜನೆಯಡಿಯಲ್ಲಿ, ಸಹಾಯಧನ ಪಡೆದುಕೊಳ್ಳಬಹುದು, ನೀವು ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ (Bank branch) ಭೇಟಿ ನೀಡಿ ಉದ್ಯೋಗಿನಿ ಸಾಲ ಸೌಲಭ್ಯ (Bank Loan) ಪಡೆದುಕೊಳ್ಳಲು ಅರ್ಜಿ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ (scheduled cast and scheduled Tribes) ಸೇರಿದ ಮಹಿಳೆಯರು ಕನಿಷ್ಠ ಒಂದು ಲಕ್ಷ ರೂಪಾಯಿಗಳಿಂದ ಗರಿಷ್ಠ ಮೂರು ಲಕ್ಷ ರೂಪಾಯಿಗಳವರೆಗೆ ಪಡೆದುಕೊಳ್ಳಬಹುದು

ಇಂಥವರ ವಾರ್ಷಿಕ ಆದಾಯ (income) 2 ಲಕ್ಷ ಮೀರುವಂತಿಲ್ಲ. ಇಲ್ಲಿ ಸಾಲ (Loan) ತೆಗೆದುಕೊಂಡ ಮಹಿಳೆಯರಿಗೆ 50% ನಷ್ಟು ಸಾಲವನ್ನು ಮಾತ್ರ ಹಿಂತಿರುಗಿಸಬೇಕು. ಇನ್ನುಳಿದ ಶೇಕಡ 50 ರಷ್ಟು ಸರ್ಕಾರವೇ ಭರಿಸುತ್ತದೆ.

ಇನ್ನು ಸಾಮಾನ್ಯ ಮಹಿಳೆಯರಿಗೆ 30% ನಷ್ಟು ಹಣವನ್ನು ಸರ್ಕಾರವೇ ಭರಿಸುತ್ತದೆ 70% ನಷ್ಟು ಮಾತ್ರ ಮಹಿಳೆಯರು ಹಿಂತಿರುಗಿಸಬೇಕು. ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Govt Loan) ಪಡೆದುಕೊಳ್ಳಬಹುದು, ಆದರೆ ಸಾಮಾನ್ಯ ಮಹಿಳೆಯರ ವಾರ್ಷಿಕ ಆದಾಯ 1.50 ಲಕ್ಷ ಮೀರಬಾರದು.

ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ

Govt Schemeಧನಶ್ರೀ ಯೋಜನೆ (Dhanashri scheme)

18 ರಿಂದ 60 ವರ್ಷದ ಒಳಗಿನ ಮಹಿಳೆಯರು ಸ್ವಂತ ಉದ್ಯೋಗ (Own Business) ಆರಂಭಿಸಲು ಧನಶ್ರೀ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಸರ್ಕಾರ ಇಂಥವರಿಗೆ 30 ಸಾವಿರ ರೂಪಾಯಿಗಳು ಸಹಾಯಧನ ನೀಡುತ್ತದೆ.

ನಿಮ್ಮ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೋ ಇಲ್ವೋ? ಈ ರೀತಿ ಪರಿಶೀಲಿಸಿ

ಪುನರ್ವಸತಿ ಯೋಜನೆ

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿಗಾಗಿ ಈ ಯೋಜನೆ ಜಾರಿಗೆ ಬಂದಿದ್ದು ಆದಾಯ ಬರುವಂತಹ ಚಟುವಟಿಕೆ ಮಾಡಲು 30,000 ರೂ. ಸಹಾಯಧನವನ್ನು ಇಂಥವರಿಗೆ ನೀಡಲಾಗುತ್ತದೆ.

ಚೇತನ ಯೋಜನೆ

ಮಹಿಳೆಯರಿಗಾಗಿ ಆದಾಯ ಉತ್ಪನ್ನ ಚಟುವಟಿಕೆ ಆರಂಭಿಸಲು 30,000 ರೂ. ಸಹಾಯಧನ ಈ ಯೋಜನೆ ಅಡಿಯಲ್ಲಿ ನೀಡಲಾಗುವುದು, 18 ವರ್ಷ ಮೇಲ್ಪಟ್ಟ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಮೇಲಿನ ಎಲ್ಲ ಯೋಜನೆಗಳು ಮಹಿಳೆಯರಿಗಾಗಿಯೇ ಮೀಸಲಿದ್ದು, ಅಗತ್ಯ ಮತ್ತು ಅರ್ಹ ಮಹಿಳೆಯರು ತಕ್ಷಣವೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಹಾಗೂ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

Another scheme for women, will get free Rs 30,000

Related Stories