ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ

ಚಿನ್ನದ ಮೇಲೆ ಹೂಡಿಕೆ (investment on gold) ಮಾಡುವುದು ನಮ್ಮ ಆರ್ಥಿಕ ನೆರವಿಗೆ ಸಹಾಯವಾಗುತ್ತದೆ ಅಥವಾ ಚಿನ್ನದ ಮೇಲೆ ಸಾಲ (Gold Loan) ಪಡೆದುಕೊಳ್ಳಬಹುದು

ಚಿನ್ನ (Gold) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದರಲ್ಲೂ ಭಾರತೀಯ (Indians) ಜನರಿಗೆ ಚಿನ್ನ ಅಂದ್ರೆ ಪಂಚಪ್ರಾಣ. ಇನ್ನು ಯಾವುದೇ ಹಬ್ಬ ಹರಿದಿನ ಸಭೆ ಸಮಾರಂಭ ಇದ್ದರೂ ಚಿನ್ನಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತದೆ

ಮಹಿಳೆಯರು ಚಿನ್ನಾಭರಣಗಳನ್ನು (Gold Jewellery) ಬಹಳಷ್ಟು ಇಷ್ಟಪಡುತ್ತಾರೆ. ಇನ್ನು ಪುರುಷರಲ್ಲಿ ಕೆಲವರು ಹೆಣ್ಣು ಮಕ್ಕಳಿಗಿಂತಲೂ ಹೆಚ್ಚು ಚಿನ್ನವನ್ನು ಇಷ್ಟಪಡುವವರು ಇದ್ದಾರೆ

ಇನ್ನು ಚಿನ್ನ ಎನ್ನುವುದು ಆಪತ್ಬಾಂಧವ ಎಂದು ಹೇಳಬಹುದು, ಚಿನ್ನದ ಮೇಲೆ ಹೂಡಿಕೆ (investment on gold) ಮಾಡುವುದು ನಮ್ಮ ಆರ್ಥಿಕ ನೆರವಿಗೆ ಸಹಾಯವಾಗುತ್ತದೆ ಅಥವಾ ಚಿನ್ನದ ಮೇಲೆ ಸಾಲ (Gold Loan) ಪಡೆದುಕೊಳ್ಳಬಹುದು.

ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ - Kannada News

ಇಂದು ಚಿನ್ನ ಬೆಳ್ಳಿ ಖರೀದಿದಾರರಿಗೆ ಕೊಂಚ ರಿಲೀಫ್! ಹೇಗಿದೆ ಗುರುವಾರ ಚಿನ್ನದ ಬೆಲೆ

ಮನೆಯಲ್ಲಿ ಎಷ್ಟು ಚಿನ್ನ ಇರಬಹುದು ಗೊತ್ತಾ!

ನಾವು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎನ್ನುವುದರ ಬಗ್ಗೆಯೂ ಕೂಡ ಕೆಲವು ನಿಯಮಗಳು ಇವೆ, ದಾಖಲೆಗಳು (documents) ಇಲ್ಲದೆ ಇರುವ.. ಉದಾಹರಣೆಗೆ ಮದುವೆಯಾದ ಹೆಣ್ಣು ಮಗುವಿಗೆ (married women) ತಂದೆಯ ಮನೆಯಿಂದ ಉಡುಗೊರೆಯಾಗಿ (father gifted gold) ಸಿಕ್ಕ ಚಿನ್ನ. ಇದಕ್ಕೆ ಆದ ದಾಖಲೆ ಇರುವುದಿಲ್ಲ ಹಾಗಾಗಿ ದಾಖಲೆ ಇಲ್ಲದೆ ನೀವು ಮನೆಯಲ್ಲಿ ಎಷ್ಟು ಇಟ್ಟುಕೊಳ್ಳಬಹುದು ಎಂಬುದನ್ನು ಆದಾಯ ಇಲಾಖೆ ಸ್ಪಷ್ಟಪಡಿಸಿದೆ.

*ಮದುವೆಯಾದ ಮಹಿಳೆ ಮನೆಯಲ್ಲಿ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು.

*ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು.

*ಪುರುಷ 100 ಗ್ರಾಂ ಚಿನ್ನವನ್ನು ಮಾತ್ರ ಮನೆಯಲ್ಲಿ ಇಟ್ಟುಕೊಳ್ಳಬಹುದು.

ಸ್ಟೇಟ್ ಬ್ಯಾಂಕ್ ಸೇರಿದಂತೆ ಇವು ಫಿಕ್ಸೆಡ್ ಡೆಪಾಸಿಟ್‌ಗಳ ಇತ್ತೀಚಿನ ಬಡ್ಡಿ ದರಗಳು! ಬಾರೀ ಆದಾಯ

Gold Jewelleryಅಧಿಕಾರಿಗಳು ನಮ್ಮಿಂದ ಚಿನ್ನಾಭರಣ ವಶಪಡಿಸಿಕೊಳ್ಳಬಹುದೇ?

ಒಂದು ವೇಳೆ ನಿಮ್ಮ ಮನೆಯನ್ನು ಪರಿಶೀಲನೆ ಮಾಡಲು ಅಧಿಕಾರಿಗಳು ಬಂದರೂ ಕೂಡ ಸರ್ಕಾರ ವಿಧಿಸಿರುವ ಮಿತಿಯ ಒಳಗೆ ಚಿನ್ನಾಭರಣ (Gold Jewellery) ಇಟ್ಟುಕೊಂಡಿದ್ದರೆ ಅದನ್ನು ಅಧಿಕಾರಿಗಳು ಪ್ರಶ್ನೆ ಮಾಡುವಂತಿಲ್ಲ. ಅಥವಾ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ (CBDT) ತನ್ನ ನಿಯಮದಲ್ಲಿ ಹೇಳಿದೆ.

ನಿಮ್ಮ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೋ ಇಲ್ವೋ? ಈ ರೀತಿ ಪರಿಶೀಲಿಸಿ

ಚಿನ್ನದ ಮೇಲೆ ಟ್ಯಾಕ್ಸ್ ಅನ್ವಯ

ನಿಮ್ಮ ಬಳಿ ಇರುವ ಎಲ್ಲ ಚಿನ್ನಾಭರಣಕ್ಕೂ ಟ್ಯಾಕ್ಸ್ (tax)ಅನ್ವಯವಾಗುತ್ತದೆಯೇ ಎಂದರೆ, ಖಂಡಿತವಾಗಿಯೂ ಇಲ್ಲ. ನೀವು ನಿಮ್ಮ ಮನೆಯಿಂದ ಹಾಗೂ ಸ್ನೇಹಿತರಿಂದ ಪಡೆದುಕೊಂಡ ಚಿನ್ನಕ್ಕೆ ಟ್ಯಾಕ್ಸ್ ವಿಧಿಸಲಾಗುವುದಿಲ್ಲ

ಆದರೆ ನಿಮ್ಮ ಬಳಿ ಇರುವ ಚಿನ್ನವನ್ನು ಮೂರು ವರ್ಷಕ್ಕಿಂತ ಮೊದಲು ಮಾರಾಟ ಮಾಡಿದರೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೆನ್ಸ್ (short term capital gens tax) ತೆರಿಗೆಯನ್ನು ಕಟ್ಟಬೇಕು

ಅದೇ ರೀತಿ ನಿಮ್ಮ ಬಳಿ ಇರುವ ಚಿನ್ನವನ್ನು ಮೂರು ವರ್ಷಕ್ಕಿಂತ ಹೆಚ್ಚು ಸಮಯ ಇಟ್ಟುಕೊಂಡು ನಂತರ ಅದನ್ನು ಮಾರಾಟ ಮಾಡಿದರೆ ಲಾಂಗ್ ಟರ್ಮ್ ಕ್ಯಾಪಿಟಲ್ ಟ್ಯಾಕ್ಸ್ (long term capital gains tax) ಪಾವತಿ ಮಾಡಬೇಕು.

ಅಂದರೆ ನೀವು ಮಾರಾಟ ಮಾಡಿ ಬಂದ ಆದಾಯದ ಮೇಲೆ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ ಯಾವುದೇ ರೀತಿಯ ಹೆಚ್ಚು ಟ್ಯಾಕ್ಸ್ ಭರಿಸುವುದನ್ನು ತಪ್ಪಿಸಿಕೊಳ್ಳಲು ಹಾಗೂ ಇನ್ಕಮ್ ಟ್ಯಾಕ್ಸ್ ಪರಿಶೀಲನೆಯಿಂದ ದೂರ ಉಳಿಯಲು ಇಲಾಖೆ ಹೇಳಿರುವ ಮಿತಿಯಲ್ಲಿಯೇ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಿ. ಅದಕ್ಕಿಂತ ಹೆಚ್ಚು ಚಿನ್ನ ಇದ್ದರೆ ಅದಕ್ಕೆ ಸರಿಯಾದ ದಾಖಲೆಗಳು ಚಿನ್ನ ಖರೀದಿಯ ರಶೀದಿ ಎಲ್ಲವೂ ನಿಮ್ಮ ಬಳಿ ಇರಬೇಕು.

How much Gold Jewellery can be kept at home, What was the Limit

Follow us On

FaceBook Google News

How much Gold Jewellery can be kept at home, What was the Limit