ದುಡ್ಡಿದೆ ಅಂತ ಇದಕ್ಕಿಂತ ಹೆಚ್ಚು ಆಸ್ತಿ, ಜಮೀನು ಖರೀದಿ ಮಾಡುವಂತಿಲ್ಲ! ಇಲ್ಲಿದೆ ಮಾಹಿತಿ
ಕೆಲವು ಬುದ್ಧಿವಂತರು ತಮ್ಮ ಬಳಿ ಇರುವ ಹಣವನ್ನು ಭೂಮಿ ಖರೀದಿ (Property Purchase) ಮಾಡುವುದಕ್ಕೆ ಹೂಡಿಕೆ ಮಾಡುತ್ತಾರೆ
ಸಾಮಾನ್ಯವಾಗಿ ಕೈಯಲ್ಲಿ ದುಡ್ಡಿದ್ರೆ ಏನು ಮಾಡುತ್ತೇವೆ? ಭವಿಷ್ಯಕೋಸ್ಕರ ಒಂದಿಷ್ಟು ಹೂಡಿಕೆ (investment plan for future) ಮಾಡೋಣ ಎಂದು ಬಯಸುತ್ತೇವೆ. ಹೂಡಿಕೆ ಅಂದ ತಕ್ಷಣ ಕೆಲವರು ಬ್ಯಾಂಕ್ ನಲ್ಲಿ ಹಣ ಇಟ್ಟು ಬಡ್ಡಿ (deposit) ಪಡೆದುಕೊಳ್ಳಬಹುದು ಅಥವಾ ಕೆಲವರು ಚಿನ್ನದ ಮೇಲೆ ಹೂಡಿಕೆ (investment on gold) ಮಾಡಬಹುದು.
ಇನ್ನು ಕೆಲವು ಬುದ್ಧಿವಂತರು ತಮ್ಮ ಬಳಿ ಇರುವ ಹಣವನ್ನು ಭೂಮಿ ಖರೀದಿ (Property Purchase) ಮಾಡುವುದಕ್ಕೆ ಹೂಡಿಕೆ ಮಾಡುತ್ತಾರೆ.
ಭೂಮಿ ಖರೀದಿಗಾಗಿ ಹಣ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ ಎನಿಸಿಕೊಳ್ಳುತ್ತದೆ. ಯಾಕೆಂದರೆ ಭೂಮಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ನೀವು ಯಾವ ಸ್ಥಳದಲ್ಲಿ ಜಾಗ ಖರೀದಿ ಮಾಡಿದ್ದೀರಿ ಎಂಬುದರ ಆಧಾರದ ಮೇಲೆ ನೀವು ಖರೀದಿ ಮಾಡಿದ ಜಾಗಕ್ಕೆ ಕೆಲವೇ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚು ಹಣ ಹಿಂಪಡೆಯಲು ಸಾಧ್ಯವಿದೆ.
ಆದರೆ ಭೂಮಿ ಖರೀದಿಗೂ ಸರ್ಕಾರ ಅದರದ್ದೆ ಆದ ನಿಯಮ ಕಾನೂನುಗಳನ್ನು ಮಾಡಿದೆ, ದುಡ್ಡಿದೆ ಎನ್ನುವ ಕಾರಣಕ್ಕೆ ಮನಸ್ಸಿಗೆ ಬಂದಷ್ಟು ಭೂಮಿ ಖರೀದಿ ಮಾಡಲು ಸಾಧ್ಯವಿಲ್ಲ.
ಡಿ.14ರ ಒಳಗೆ ಈ ಕೆಲಸ ಮಾಡದೆ ಇದ್ರೆ ಆಧಾರ್ ಕಾರ್ಡ್ ಬಳಕೆ ಮಾಡಲು ಸಾಧ್ಯವಿಲ್ಲ
ಕೃಷಿ ಭೂಮಿ ಖರೀದಿಗೆ ಮಿತಿ (Limitation on agriculture land purchase)
ನಮ್ಮ ದೇಶದ ಕಾನೂನಿನ ಪ್ರಕಾರ ಭೂಮಿ ಖರೀದಿಗೂ ಕೂಡ ಕೆಲವು ನಿರ್ದಿಷ್ಟ ನಿಯಮಗಳನ್ನು ಮಾಡಲಾಗಿದೆ. ಉದಾಹರಣೆಗೆ ನಮ್ಮ ದೇಶದಲ್ಲಿ ಕೃಷಿಯೇತರ ಭೂಮಿ ಖರೀದಿ ಮಾಡಲು ಯಾವುದೇ ರೀತಿಯ ಮಿತಿಯನ್ನು ಹೇರಲಾಗಿಲ್ಲ.
ಆದರೆ ಕೃಷಿ ಭೂಮಿ ಖರೀದಿ ಮಾಡಲು ಮಾತ್ರ ಮಿತಿ ಇದೆ. ಒಂದೊಂದು ರಾಜ್ಯದಲ್ಲಿಯೂ ಕೂಡ ಕೃಷಿ ಭೂಮಿ ಖರೀದಿಗೆ ಒಂದೊಂದು ರೀತಿಯ ಮಿತಿ ವಿಧಿಸಲಾಗಿದೆ. ಕೃಷಿ ಭೂಮಿ ಖರೀದಿಗೆ ಕರ್ನಾಟಕ ರಾಜ್ಯದಲ್ಲಿಯೂ (Karnataka state) ಕೂಡ ಮಿತಿ ಇದೆ
ಆದರೆ ಕರ್ನಾಟಕದಲ್ಲಿ ಕೃಷಿಯೇತರ ಭೂಮಿಯನ್ನು ಎಷ್ಟು ಬೇಕಾದರೂ ಖರೀದಿ ಮಾಡಬಹುದು, ಅದಕ್ಕೆ ಸದ್ಯ ಮಿತಿಯನ್ನು ವಿಧಿಸಲಾಗಿಲ್ಲ. ಹಾಗಾದ್ರೆ ಯಾವ ರಾಜ್ಯದಲ್ಲಿ ಎಷ್ಟು ಕೃಷಿ ಭೂಮಿ ಖರೀದಿಸಲು ಅನುಮತಿ ಇದೆ ಎಂಬುದನ್ನು ನೋಡೋಣ.
ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ
*ಕೇರಳ ರಾಜ್ಯ (Kerala state) ದಲ್ಲಿ ಭೂ ತಿದ್ದುಪಡಿ ಕಾಯ್ದೆ 1963ರ ಅಡಿಯಲ್ಲಿ ಕೇರಳ ರಾಜ್ಯದಲ್ಲಿ 7.5 ಎಕರೆ ಕೃಷಿ ಭೂಮಿಯನ್ನು ಖರೀದಿ (agriculture land purchase) ಮಾಡಬಹುದು. ಮನೆಯಲ್ಲಿ ಐದು ಸದಸ್ಯರಿದ್ದರೆ 15 ಎಕರೆ ಕೃಷಿ ಭೂಮಿ ಖರೀದಿಸಲು ಅವಕಾಶವಿದೆ.
*ಕರ್ನಾಟಕ ರಾಜ್ಯದಲ್ಲಿ 54 ಎಕರೆ ಕೃಷಿ ಭೂಮಿಯನ್ನು ಒಬ್ಬ ವ್ಯಕ್ತಿ ಖರೀದಿಸಬಹುದು.
*ಹಿಮಾಚಲ ಪ್ರದೇಶ (Himachal Pradesh) ದಲ್ಲಿ 32 ಎಕರೆ ಕೃಷಿ ಭೂಮಿ ಖರೀದಿಸಲು ಅವಕಾಶವಿದೆ.
*ಉತ್ತರ ಪ್ರದೇಶದಲ್ಲಿ (Uttar Pradesh) 12.5 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದು.
*ಬಿಹಾರದಲ್ಲಿ (Bihar) ಕೃಷಿ ಭೂಮಿಯಲ್ಲಿ ಅಥವಾ ಕೃಷಿಯೇತರ ಭೂಮಿರಲ್ಲಿ ಒಬ್ಬ ವ್ಯಕ್ತಿ ರೂ.15 ಎಕರೆ ಅವರಿಗೆ ಖರೀದಿ ಮಾಡಲು ಮಾತ್ರ ಅವಕಾಶ.
*ಗುಜರಾತ್ (Gujarat) ನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು ಮಾತ್ರ ಕೃಷಿ ಭೂಮಿ ಖರೀದಿಸಬಹುದು.
*ಪಶ್ಚಿಮ ಬಂಗಾಳದಲ್ಲಿ (West West Bengal ) 24.5 ಎಕರೆ ಕೃಷಿ ಯೋಗ್ಯ ಭೂಮಿ ಖರೀದಿಗೆ ಅವಕಾಶವಿದೆ.
*ಮಹಾರಾಷ್ಟ್ರದಲ್ಲಿ (Maharashtra) ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರಿಗೆ ಮಾತ್ರ ಕೃಷಿ ಯೋಗ್ಯ ಭೂಮಿಯನ್ನು ಖರೀದಿಸಲು ಅವಕಾಶ. ಗರಿಷ್ಠ 54 ಎಕರೆವರೆಗೆ ಖರೀದಿಸಬಹುದು.
ನಿಮ್ಮ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೋ ಇಲ್ವೋ? ಈ ರೀತಿ ಪರಿಶೀಲಿಸಿ
ಇಂಥವರು ಕೃಷಿ ಭೂಮಿ ಖರೀದಿಸಲು ಅವಕಾಶವಿಲ್ಲ
ಅನಿವಾಸಿ ಭಾರತೀಯರು (NRIs) ಅಥವಾ ವಿದೇಶಿ ಪ್ರಜೆಗಳು (foreign people) ಭಾರತದಲ್ಲಿ ಕೃಷಿ ಯೋಗ್ಯ ಅಥವಾ ಕೃಷಿ ಭೂಮಿಯನ್ನು ಖರೀದಿ ಮಾಡಲು ಅವಕಾಶವಿಲ್ಲ. ತೋಟದ ಮನೆ ಅಥವಾ ತೋಟದ ಆಸ್ತಿ ಖರೀದಿ ಮಾಡುವುದಕ್ಕೂ ಸಾಧ್ಯವಿಲ್ಲ.
ಒಂದು ವೇಳೆ ತಮ್ಮ ಪಿತ್ರಾರ್ಜಿತ ಅಥವಾ ಸ್ವಯಾರ್ಜಿತ ಆಸ್ತಿಯನ್ನು ಯಾರಾದರೂ ದಾನ ಮಾಡಿದರೆ ಅದನ್ನ ಪಡೆದುಕೊಳ್ಳಬಹುದು ಅಷ್ಟೇ, ಆದರೆ ಅದನ್ನ ಅವರಿಂದ ಹಣ ಕೊಟ್ಟು ಖರೀದಿಸುವಂತಿಲ್ಲ.
ಈ ಬ್ಯಾಂಕ್‌ಗಳಲ್ಲಿ ಕಾರ್ ಲೋನ್‌ಗಳ ಮೇಲೆ ಬಂಪರ್ ಆಫರ್! ಕಡಿಮೆ ಬಡ್ಡಿಗೆ ಕಾರು ಖರೀದಿಸಿ
Limitation on agriculture land purchase or Property Purchase in India