ಡಿ.14ರ ಒಳಗೆ ಈ ಕೆಲಸ ಮಾಡದೆ ಇದ್ರೆ ಆಧಾರ್ ಕಾರ್ಡ್ ಬಳಕೆ ಮಾಡಲು ಸಾಧ್ಯವಿಲ್ಲ
ಇತ್ತೀಚಿಗೆ UIDAI ಆಧಾರ್ ಕಾರ್ಡ್ (Aadhaar Card) ಕುರಿತಂತೆ ಹೊಸ ಅಪ್ಡೇಟ್ ನೀಡಿದೆ. ನೀವೂ ಆಧಾರ್ ಕಾರ್ಡ್ ಹೊಂದಿದ್ದರೆ ಇದೆ ಬರುವ 14, ಡಿಸೆಂಬರ್ 2023ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
ಇತ್ತೀಚಿಗೆ UIDAI ಆಧಾರ್ ಕಾರ್ಡ್ (Aadhaar Card) ಕುರಿತಂತೆ ಹೊಸ ಅಪ್ಡೇಟ್ ನೀಡಿದೆ. ನೀವೂ ಆಧಾರ್ ಕಾರ್ಡ್ ಹೊಂದಿದ್ದರೆ ಇದೆ ಬರುವ 14, ಡಿಸೆಂಬರ್ 2023ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಆಧಾರ್ ಕಾರ್ಡ್ ನ್ನು ಹಲವು ವಿಚಾರಗಳಿಗೆ ಬಳಕೆ ಮಾಡಲು ಸಾಧ್ಯವಿಲ್ಲ.
ಆಧಾರ್ ನವೀಕರಣಕ್ಕೆ ಆದೇಶ (Aadhaar card update)
ಎಲ್ಲರಿಗೂ ಗೊತ್ತಿರುವ ಹಾಗೆ, ಪ್ರತಿಯೊಬ್ಬ ವ್ಯಕ್ತಿಯ ಪ್ರಮುಖ ಆಧಾರವೇ ಆಧಾರ್ ಕಾರ್ಡ್. ನಿಮ್ಮ ಆಧಾರ್ ಕಾರ್ಡ್ ಬೇರೆಯವರಿಗೆ ಸಿಗದಂತೆ ಕಾಯ್ದು ಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆಧಾರ್ ನಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಸಿಕೊಳ್ಳುವುದು. ಇದಕ್ಕೆ ಡಿಸೆಂಬರ್ 14ರ ವರೆಗೆ ಅವಕಾಶ ನೀಡಲಾಗಿದೆ.
ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ
ಏನೆಲ್ಲ ತಿದ್ದುಪಡಿ ಮಾಡಬಹುದು!
ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಬದಲಾವಣೆ (name change) , ವಿಳಾಸ (address), ಲಿಂಗ (gender) , ಜನ್ಮ ದಿನಾಂಕ (birth date) ಫೋನ್ ನಂಬರ್ (phone number) , ಈ ಮೇಲ್ ಐಡಿ ಮೊದಲಾದವುಗಳಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಬಹುದು.
10 ವರ್ಷ ಹಳೆಯ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಅಗತ್ಯ
ಇನ್ನು ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ, ಈ ಹತ್ತು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿರಬಹುದು. ನಿಮ್ಮ ವಿಳಾಸ, ಮದುವೆಯಾಗಿದ್ದರೆ ಹೆಣ್ಣುಮಕ್ಕಳ ಹೆಸರು ಬದಲಾವಣೆ, ಮೊಬೈಲ್ ಸಂಖ್ಯೆ ಮೊದಲಾದವು ಬದಲಾಗಿರಬಹುದು. ಅದನ್ನು ತಕ್ಷಣವೇ ನವೀಕರಿಸಿಕೊಳ್ಳಿ.
ಸ್ಟೇಟ್ ಬ್ಯಾಂಕ್ ಸೇರಿದಂತೆ ಇವು ಫಿಕ್ಸೆಡ್ ಡೆಪಾಸಿಟ್‌ಗಳ ಇತ್ತೀಚಿನ ಬಡ್ಡಿ ದರಗಳು! ಬಾರೀ ಆದಾಯ
ಆನ್ ಲೈನ್ ಆಧಾರ್ ನವೀಕರಣ (Aadhar Card update in online)
ಆನ್ ಲೈನ್ ನಲ್ಲಿ ಆಧಾರ್ ನವೀಕರಿಸಲು UIDAI ಅಧಿಕೃತ ವೆಬ್ಸೈಟ್ ಗೆ ಹೋಗಿ. ಲಾಗಿನ್ ಆಗಲು ಯೂಸರ್ ಐಡಿ ಪಾಸ್ ವರ್ಡ್ (user ID + password) ಹಾಕಬೇಕು.
*ಈಗ ಹೊಸ ಪುಟ್ಟ ತೆರೆದುಕೊಳ್ಳುತ್ತದೆ ಅಲ್ಲಿ ನನ್ನ ಆಧಾರ್ ಎನ್ನುವ ಬಾಕ್ಸ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ನೀವು ಬದಲಾವಣೆ ಮಾಡಿಕೊಳ್ಳಲು ಬಯಸುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ
*ವಿವರಗಳನ್ನು ಭರ್ತಿ ಮಾಡಿದ ನಂತರ ಸೆಂಡ್ ಒಟಿಪಿ (OTP) ಎನ್ನುವ ಆಯ್ಕೆ ಕಾಣಿಸುತ್ತದೆ, ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ನೀವು ವೆಬ್ಸೈಟ್ನಲ್ಲಿ ನಮೂದಿಸಬೇಕು. ಈ ರೀತಿ ಮಾಡಿದರೆ ನಿಮ್ಮ ಆಧಾರದಲ್ಲಿ ಅಗತ್ಯ ಇರುವ ಬದಲಾವಣೆಗಳು ಆಗಿರುತ್ತವೆ.
ನಿಮ್ಮ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೋ ಇಲ್ವೋ? ಈ ರೀತಿ ಪರಿಶೀಲಿಸಿ
ಆಧಾರ್ ಕಾರ್ಡ್ ನಲ್ಲಿ ಯಾವ ಬದಲಾವಣೆ ಮಾಡಬಹುದು?
ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸಿದರೆ ಒಂದು ಬಾರಿ ಲಿಂಗ ಬದಲಾವಣೆ ಮಾಡಬಹುದು, ಅದೇ ರೀತಿಯಾಗಿ ಹೆಸರು ಹಾಗೂ ಜನ್ಮ ದಿನಾಂಕವನ್ನು ಎರಡು ಬಾರಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.
ಇನ್ನು ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಬದಲಾವಣೆಗೆ ಮಿತಿ ಇಲ್ಲ. ಯಾಕಂದ್ರೆ ಕೆಲವರು ಆಗಾಗ ಮೊಬೈಲ್ ಸಂಖ್ಯೆ ಬದಲಾಯಿಸುತ್ತಾರೆ. ಜೊತೆಗೆ ಬೇರೆ ಬೇರೆ ಸ್ಥಳಕ್ಕೆ ಹೋಗಿ ವಾಸಿಸುವ ಪರಿಸ್ಥಿತಿ ಬಂದಾಗ ವಿಳಾಸವು ಕೂಡ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ತಿದ್ದುಪಡಿ ಮಾಡಿಕೊಳ್ಳಲು ಮಾತ್ರ ನಿಗದಿತ ಮಿತಿ ಹೇರಿಕೆ ಮಾಡಿಲ್ಲ.
ಇಂದು ಯಾವುದೇ ಕ್ಷೇತ್ರದಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಲು ಕೂಡ ನಿಮಗೆ ಆಧಾರ್ ಕಾರ್ಡ್ ಬೇಕೇ ಬೇಕು, ಅಷ್ಟೇ ಅಲ್ಲದೆ ಅಗತ್ಯ ಇರುವ ಯಾವುದೇ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಕೂಡ ಆಧಾರ್ ಬಹಳ ಮುಖ್ಯವಾಗಿರುವ ದಾಖಲೆಯಾಗಿರುತ್ತದೆ.
ನಿಮ್ಮ ಬ್ಯಾಂಕ್ ಖಾತೆಗೂ (Bank Account) ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿರುವುದರಿಂದ ಆಧಾರ್ ಕಾರ್ಡ್ ನಲ್ಲಿ ನಿಮ್ಮ ವಿವರ ಸರಿಯಾಗಿ ಇರಬೇಕು ಒಂದು ವೇಳೆ ವಿವರ ತಪ್ಪಾಗಿದ್ದಲ್ಲಿ ಸರ್ಕಾರದ ಯೋಜನೆಯ ಪ್ರಯೋಜನಗಳಾಗಲಿ ಅಥವಾ ಬ್ಯಾಂಕ್ ನಲ್ಲಿ ನೀವು ಇಟ್ಟ ಹಣಕ್ಕೆ ಸಿಗುವ ಬಡ್ಡಿ ಆಗಲಿ ಯಾವುದೂ ಕೂಡ ಸರಿಯಾಗಿ ನಿಮ್ಮ ಕೈಗೆ ಸೇರುವುದಿಲ್ಲ, ಸಾಕಷ್ಟು ಸಮಸ್ಯೆಗಳು ಕೂಡ ಉಂಟಾಗುತ್ತದೆ. ನೀವು ಸರಿಯಾದ ಸಮಯಕ್ಕೆ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
Update Aadhaar card Before December 14