ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ಹೊರಬಿತ್ತು ವಿದ್ಯುತ್ ಬಳಕೆಯ ಲೆಕ್ಕಾಚಾರ
ಯಾವುದೇ ವಸ್ತುವನ್ನು ಯಾರಿಗೂ ಉಚಿತವಾಗಿ (free things) ಕೊಡಬಾರದು. ಹಾಗೆ ಉಚಿತವಾಗಿ ಕೊಟ್ಟರೆ ಆ ವಸ್ತುವಿನ ದುರುಪಯೋಗವಾಗುತ್ತದೆ ಎನ್ನುವುದು ಬಹಳ ಹಿಂದಿನಿಂದ ಹೇಳಲಾಗಿರುವ ಮಾತು.
ಇದೇ ಕಾರಣಕ್ಕೆ ಯಾವಾಗ ರಾಜ್ಯ ಸರ್ಕಾರ ಉಚಿತ ವಿದ್ಯುತ್ (free electricity) ನೀಡುವ ಗೃಹಜೋತಿ ಯೋಜನೆಗೆ (Gruha Jyothi scheme) ಚಾಲನೆ ನೀಡಿತ್ತೋ ಅಂದಿನಿಂದ ಸಾಕಷ್ಟು ಟೀಕೆಗೆ ಗುರಿಯಾಗಿತ್ತು, ಉಚಿತ ವಿದ್ಯುತ್ ಜನರಿಗೆ ನೀಡಿದರೆ ಅಧಿಕ ವಿದ್ಯುತ್ ಖರ್ಚಾಗುತ್ತದೆ ಎಂದು ಚರ್ಚೆಗಳು ಹರಿದಾಡಿದ್ದವು.
ರೇಷನ್ ಕಾರ್ಡ್ ಇದ್ದು ರೇಷನ್ ಪಡೆಯುವ ಎಲ್ಲರಿಗೂ ಪ್ರಿಂಟೆಡ್ ಬಿಲ್ ಕಡ್ಡಾಯ!
200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ
ಆದ್ರೆ ಹೆಸ್ಕಾಂ (hescom)ಅಡಿಯಲ್ಲಿ ಬರುವ ಸುಮಾರು 8 ಜಿಲ್ಲೆಗಳು ಈ ಎಲ್ಲಾ ಟೀಕೆಗಳನ್ನು ಸುಳ್ಳಾಗಿಸಿವೆ ಸರ್ಕಾರದಿಂದ ಉಚಿತವಾಗಿ ಸಿಗುವ ವಿದ್ಯುತ್ ಅನ್ನು ಬೇಕಾಬಿಟ್ಟಿ ಬಳಸದೆ ಹಿತ ಮಿತವಾಗಿ ಬಳಸಿ ಜವಾಬ್ದಾರಿ ಮೆರೆದಿದೆ.
ಗೃಹಜ್ಯೋತಿ ಯೋಜನೆ ಆರಂಭವಾಗಿ ಈಗಾಗಲೇ ಆರು ತಿಂಗಳು ಕಳೆಯುತ್ತಾ ಬಂತು ಈ ಸಂದರ್ಭದಲ್ಲಿ ಇದುವರೆಗೆ ಖರ್ಚಾಗಿರುವ ವಿದ್ಯುತ್ ನ ಲೆಕ್ಕಾಚಾರ ಲಭ್ಯವಾಗಿದ್ದು ದಿನದಿಂದ ದಿನಕ್ಕೆ ಗ್ರಾಹಕರು ಬಳಕೆ ಮಾಡುತ್ತಿರುವ ವಿದ್ಯುತ್ ಕಡಿಮೆಯಾಗುತ್ತಿದೆ ಹೊರತು ಹೆಚ್ಚಾಗಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಈ ದಿನದ ಒಳಗೆ ಅಪ್ಲೈ ಮಾಡಿ
8 ಜಿಲ್ಲೆಗಳಲ್ಲಿ ಕಡಿಮೆ ವಿದ್ಯುತ್ ಬಳಕೆ!
ಗೃಹಲಕ್ಷ್ಮಿ ಯೋಜನೆಗೆ ಹೊಸ ಕಂಡೀಷನ್! ಈ ರೀತಿ ಆದ್ರೆ ₹2,000 ಹಣ ಕ್ಯಾನ್ಸಲ್ ಆಗುತ್ತೆ
ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ 8 ಜಿಲ್ಲೆಗಳಲ್ಲಿ (8 district) ಪ್ರತಿ ತಿಂಗಳು ಬಳಕೆ ಮಾಡುವ ವಿದ್ಯುತ್ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಲ್ಲಿಯವರೆಗೆ ವಿದ್ಯುತ್ ಬಳಕೆ ನೋಡುವುದಾದರೆ ಜುಲೈ ತಿಂಗಳಿನಲ್ಲಿ 202 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು.
ಅದೇ ಅಕ್ಟೋಬರ್ ವೇಳೆಗೆ 161.88 ದಶಲಕ್ಷ ಯೂನಿಟ್ ಬಳಕೆಯಾಗಿದೆ. ಆಗಸ್ಟ್ ನಲ್ಲಿ 152.36 ದಶಲಕ್ಷ ಯೂನಿಟ್ ಹಾಗೂ ಸಪ್ಟೆಂಬರ್ ತಿಂಗಳಿನಲ್ಲಿ 168.51 ದಶಲಕ್ಷ ಯೂನಿಟ್ ಗಳು ಬಳಕೆಯಾಗಿದೆ
ಅಂದರೆ ದಿನದಿಂದ ದಿನಕ್ಕೆ ವಿದ್ಯುತ್ ಯೂನಿಟ್ ಬಳಕೆ ಕಡಿಮೆಯಾಗಿದ್ದು ಗ್ರಾಹಕರು ಉಚಿತವಾಗಿ ಸಿಗುತ್ತಿರುವ ವಿದ್ಯುತ್ತನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ ಎನ್ನುವ ಮಾತು ಸತ್ಯವಾಗಿದೆ.
ಹೆಸ್ಕಾಂ ತಿಳಿಸಿದ ಎಂಟು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ, ಆದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅಧಿಕ ವಿದ್ಯುತ್ ಬಳಕೆಯಾಗಿದೆ ಆದರೆ ವಿಶೇಷವೆಂದರೆ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಯೂನಿಟ್ ಬಳಕೆ ಹೆಚ್ಚಾಗುತ್ತದೆ. ದೀಪಾವಳಿಯ ಸಮಯದಲ್ಲಿ ಸರಾಸರಿ 45.44 ದಶಲಕ್ಷ ಯೂನಿಟ್ ಆಗಿದೆ. ಆದರೆ ಮೂರು ದಿನಗಳ ಹಿಂದೆ ಅಂದರೆ ದೀಪಾವಳಿಗೆ ಮೂರು ದಿನಗಳ ಹಿಂದೆ 44.33 ಗಳು ಖರ್ಚಾಗಿತ್ತು ಅಂದರೆ ದೀಪಾವಳಿ ಸಮಯದಲ್ಲಿ ಹೆಚ್ಚುವರಿ ವಿದ್ಯುತ್ ಖರ್ಚಾಗಿಲ್ಲ ಎಂಬುದು ತಿಳಿದು ಬಂದಿದೆ.
ಮಹಿಳೆಯರಿಗೆ 30,000 ಉಚಿತವಾಗಿ ನೀಡುವ ಧನಶ್ರೀ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ವಿದ್ಯುತ್ ಬಿಲ್ ನಲ್ಲಿಯೂ ಗಣನೀಯ ಇಳಿಕೆ (Electricity bill decreased)
ವಿದ್ಯುತ್ ಬಿಲ್‌ನಲ್ಲಿಯೂ ಕೂಡ ನಿರೀಕ್ಷೆಗೂ ಮೀರಿ ಇಳಿಕೆಯಾಗಿದೆ. ಅಂಕಿ ಅಂಶಗಳ ಪ್ರಕಾರ ಜೂನ್ ತಿಂಗಳಲ್ಲಿ ರೂ. 248.23 ಕೋಟಿ
ಜುಲೈ ತಿಂಗಳಲ್ಲಿ ರೂ. 175.16 ಕೋಟಿ
ಆಗಸ್ಟ್‌ನಲ್ಲಿ ರೂ. 159 ಕೋಟಿ
ಸಪ್ಟೆಂಬರ್‌ನಲ್ಲಿ ರೂ. 162.32 ಕೋಟಿ
ಅಕ್ಟೋಬರ್‌ನಲ್ಲಿ ರೂ. 153 ಕೋಟಿ ರೂ. ಇಳಿಕೆ ಕಂಡಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಉಚಿತವಾಗಿ ವಿದ್ಯುತ್ ನೀಡಿ ವಿದ್ಯುತ್ ಪೂರೈಕೆಯನ್ನು ಮಾಡಲು ಸಾಧ್ಯವಾಗದೇ ಇರುವಷ್ಟು ವಿದ್ಯುತ್ತನ್ನು ಗ್ರಾಹಕರು ಬಳಕೆ ಮಾಡಬಹುದು ಎಂದು ಊಹಿಸಲಾಗಿತ್ತು.
ಯಾಕೆಂದರೆ ಮೊದಲೇ ನಮ್ಮ ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ, ಈ ಬಾರಿ ಮಳೆ ಸರಿಯಾಗಿ ಆಗದೆ ಇರುವ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಅಭಾವ ಇರುವ ವಿದ್ಯುತ್ ಅನ್ನು ಇತರ ರಾಜ್ಯಗಳಿಂದ ಖರೀದಿ ಮಾಡಲು ಕೂಡ ಸರ್ಕಾರ ನಿರ್ಧರಿಸಿತ್ತು.
ಇದೀಗ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಸರ್ಕಾರದ ಯೋಜನೆಯನ್ನು ಗ್ರಾಹಕರು ದುರುಪಯೋಗಪಡಿಸಿಕೊಳ್ಳದೆ ಮತ್ತಷ್ಟು ಯೂನಿಟ್ ಬಳಕೆಯನ್ನು ಕಡಿಮೆ ಮಾಡಿದ್ದು ಸರ್ಕಾರ ತಮ್ಮ ಗ್ಯಾರಂಟಿ ಯೋಜನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಹಾಯಕವಾಗಿದೆ ಎನ್ನಬಹುದು.
Gruha jyothi Scheme Free electricity consumption calculation