ರೇಷನ್ ಕಾರ್ಡ್ ಇದ್ದು ರೇಷನ್ ಪಡೆಯುವ ಎಲ್ಲರಿಗೂ ಪ್ರಿಂಟೆಡ್ ಬಿಲ್ ಕಡ್ಡಾಯ!
ಪಡಿತರ ಚೀಟಿದಾರರು (Ration Card Holders) ಪಡಿತರ ವಸ್ತುಗಳನ್ನು ಪಡೆದುಕೊಂಡರು ಕೂಡ ತಮಗೆ ಸಿಗುತ್ತಿರುವ ಅಕ್ಕಿಗೆ ಅನುದಾನ ನೀಡುತ್ತಿರುವುದು ಕೇಂದ್ರ ಸರ್ಕಾರ ಎನ್ನುವ ವಿಷಯ ತಿಳಿದಿಲ್ಲ
ಚುನಾವಣಾ ಸಮಯ (election time) ಹತ್ತಿರ ಬರುತ್ತಿದ್ದಂತೆ ರಾಜ್ಯ ಸರ್ಕಾರವಾಗಿರಲಿ ಅಥವಾ ಕೇಂದ್ರ (central government) ಸರ್ಕಾರವಾಗಲಿ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ವಿವಿಧ ಟ್ರಿಕ್ಸ್ (election tricks) ಗಳನ್ನು ಮಾಡುತ್ತಾರೆ.
ವಿಧಾನಸಭಾ ಚುನಾವಣೆ 2023 (vidhansabha election 2023) ರಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಟ್ರಿಕ್ ಮೂಲಕ ಚುನಾವಣೆ ಗೆದ್ದಿತ್ತು. ಇದೀಗ ಲೋಕಸಭಾ ಎಲೆಕ್ಷನ್ ಬಿಸಿ ಎಲ್ಲೆಡೆ ಆರಂಭವಾಗಿದೆ
ಇದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ತಮ್ಮ ಸ್ಥಾನ ಬಲಪಡಿಸಿಕೊಳ್ಳಲು ವಿವಿಧ ರೀತಿಯ ಎಲೆಕ್ಷನ್ ಪ್ರಚಾರ ಮಾಡುತ್ತಿದ್ದಾರೆ.
ಮಹಿಳೆಯರಿಗೆ 30,000 ಉಚಿತವಾಗಿ ನೀಡುವ ಧನಶ್ರೀ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಪಡಿತರ ಅಂಗಡಿಯಲ್ಲಿ ಪ್ರಿಂಟೆಡ್ ಬಿಲ್! (Printed bill mandatory)
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಅನ್ನಭಾಗ್ಯ ಯೋಜನೆಯಡಿಯಲ್ಲಿ (Annabhagya Yojana) ಹತ್ತು ಕೆಜಿ ಉಚಿತ ಅಕ್ಕಿ ಎಂದು ಘೋಷಿಸಿತ್ತು. ಈಗ ಐದು ಕೆಜಿ ಅಕ್ಕಿಯನ್ನು ಮಾತ್ರ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತಿದೆ ಹಾಗೂ ಇನ್ನೂ ಐದು ಕೆಜಿ ಅಕ್ಕಿಯನ್ನು ಸರ್ಕಾರಕ್ಕೆ ಹೊಂದಿಸಲು ಸಾಧ್ಯವಾಗಿಲ್ಲ.
ಇಲ್ಲಿ ಒಂದು ಗಮನಿಸಬೇಕಾದ ವಿಚಾರ ಅಂದರೆ ಈಗ ನಮಗೆ ಸಿಗುತ್ತಿರುವ ಉಚಿತ ಅಕ್ಕಿ ಕೇಂದ್ರ ಸರ್ಕಾರದಿಂದ ಅನುದಾನಿತಗೊಂಡಿದ್ದು ಹಾಗೂ ಇತರ ಬೇಳೆ ಕಾಳುಗಳು ಮಾತ್ರ ರಾಜ್ಯ ಸರ್ಕಾರದಿಂದ ವಿತರಣೆಯಾಗುತ್ತಿದೆ.
ಇಲ್ಲಿಯವರೆಗೆ ಅದೆಷ್ಟೋ ಪಡಿತರ ಚೀಟಿದಾರರು (Ration Card Holders) ಪಡಿತರ ವಸ್ತುಗಳನ್ನು ಪಡೆದುಕೊಂಡರು ಕೂಡ ತಮಗೆ ಸಿಗುತ್ತಿರುವ ಅಕ್ಕಿಗೆ ಅನುದಾನ ನೀಡುತ್ತಿರುವುದು ಕೇಂದ್ರ ಸರ್ಕಾರ ಎನ್ನುವ ವಿಷಯ ತಿಳಿದಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಇದನ್ನು ಪ್ರತಿಯೊಬ್ಬರಿಗೂ ತಿಳಿಸುವ ಸಲುವಾಗಿ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಪ್ರಿಂಟೆಡ್ ಬಿಲ್ (Printed Bill) ಕೊಡಬೇಕು ಎಂದು ಘೋಷಣೆ ಮಾಡಿದೆ.
ಗೃಹಲಕ್ಷ್ಮಿ ಯೋಜನೆಗೆ ಹೊಸ ಕಂಡೀಷನ್! ಈ ರೀತಿ ಆದ್ರೆ ₹2,000 ಹಣ ಕ್ಯಾನ್ಸಲ್ ಆಗುತ್ತೆ
ಈವರೆಗೆ ಪಡಿತರ ವಸ್ತುಗಳನ್ನು ಪಡೆದುಕೊಂಡು, ಬಿಲ್ಲನ್ನು ಪಡಿತರ ವಿತರಕರು ಕೈಯಿಂದ ಬರೆದುಕೊಡುತ್ತಿದ್ದರು. ಇದರಲ್ಲಿ ಯಾವ ಸ್ಪಷ್ಟ ವಿವರಣೆ ಕೂಡ ಇರುತ್ತಿರಲಿಲ್ಲ
ಆದರೆ ಇನ್ನು ಮುಂದೆ ಯಾವುದೇ ಪಡಿತರ ಅಂಗಡಿಗಳಲ್ಲಿ ಪಡಿತರ ವಿತರಣೆ ಆದ ನಂತರ ಗ್ರಾಹಕರಿಗೆ ಪ್ರಿಂಟೆಡ್ ಬಿಲ್ ನೀಡಬೇಕು. ಇದರಲ್ಲಿ ಐದು ಕೆಜಿ ಕೇಂದ್ರ ಸರ್ಕಾರದಿಂದ ಅನುದಾನಿತ ಎಂದು ನಮೂದಿಸಿರಲಾಗುತ್ತಿದೆ. ಪಡಿತರ ಚೀಟಿದಾರರ ಹೆಸರು ಮನೆಯ ಸದಸ್ಯರು ಕೇಂದ್ರ ಸರ್ಕಾರದ ಅನುದಾನ ಎಷ್ಟು, ರಾಜ್ಯ ಸರ್ಕಾರದ ಅನುದಾನ ಎಷ್ಟು? ಮೊದಲಾದ ಸಂಪೂರ್ಣ ವಿವರಗಳನ್ನು ಪ್ರಿಂಟೆಡ್ ಬಿಲ್ ನಲ್ಲಿ ಕಾಣಬಹುದು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರಕ್ಕೆ ಟಕ್ಕರ್ ಕೊಟ್ಟಿದೆ ಎನ್ನಬಹುದು.
ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಈ ದಿನದ ಒಳಗೆ ಅಪ್ಲೈ ಮಾಡಿ
ಅಕ್ಕಿ ಬದಲು ಹಣ ನೀಡುವುದು!
ನಿಜ ಹೇಳಬೇಕು ಅಂದರೆ ಸಾಕಷ್ಟು ಜನರಿಗೆ ಹಣ ನೀಡುವುದಕ್ಕಿಂತ ಅಕ್ಕಿಯನ್ನು ಉಚಿತವಾಗಿ ಕೊಟ್ಟರೆ ಬಹಳ ಅನುಕೂಲವಾಗುತ್ತಿತ್ತು. ಆದರೆ ಸರ್ಕಾರಕ್ಕೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳನ್ನು ಫಲಾನುಭವಿ ಕುಟುಂಬದ ಖಾತೆಗೆ (Bank Account) ಸರ್ಕಾರ ಜಮಾ ಮಾಡುತ್ತಿದೆ. ಇದು ಎಷ್ಟು ದಿನ ಮುಂದುವರಿಯುತ್ತದೆ ಗೊತ್ತಿಲ್ಲ ಸರ್ಕಾರ ಹೇಳಿರುವ ಪ್ರಕಾರ ಅಕ್ಕಿ ಹೊಂದಾಣಿಕೆ ಆಗುವವರೆಗೂ ಹಣವನ್ನು ಮಿಸ್ ಮಾಡದೆ ಪಡಿತರ ಚೀಟಿದಾರರಿಗೆ ನೀಡಲಾಗುವುದು.
ರೇಷನ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭ ವಿಧಾನ
ಒಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಿಂಟೆಡ್ ಬಿಲ್ ನೀಡುವುದರಿಂದ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುವ ಅಕ್ರಮವನ್ನು ತಡೆಯಬಹುದು. ಅದರಂತೆ ರಾಜ್ಯ ಸರ್ಕಾರ ನೀಡುವ ಹಣದ ಪ್ರಯೋಜನ ಎಷ್ಟು ದಿನ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡಬೇಕು.
A printed bill is mandatory for all those who get ration with a ration card