ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಈ ದಿನದ ಒಳಗೆ ಅಪ್ಲೈ ಮಾಡಿ

ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Update) ನವೆಂಬರ್ 20 2023ರಿಂದ ಅವಕಾಶ ನೀಡಲಾಗಿದ್ದು ಮಧ್ಯಾಹ್ನ 2:30 ರಿಂದ ಸಂಜೆ 5:00 ಒಳಗೆ ಮಾತ್ರ ತಿದ್ದುಪಡಿಗೆ ಅವಕಾಶವಿದೆ

Bengaluru, Karnataka, India
Edited By: Satish Raj Goravigere

ಎಲ್ಲಾ ಗ್ಯಾರಂಟಿ ಯೋಜನೆಗಳಿಗೂ (guarantee schemes) ಕೂಡ ರೇಷನ್ ಕಾರ್ಡ್ (ration card) ಕಡ್ಡಾಯವಾಗಿ ಬೇಕು ಎನ್ನುವ ಕಾರಣದಿಂದ ರೇಷನ್ ಕಾರ್ಡ್ ಹೊಂದಿಲ್ಲದೆ ಇರುವವರು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಕಾತುರರಾಗಿದ್ದಾರೆ.

ಅದೇ ರೀತಿ ಈಗಾಗಲೇ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ (ration card correction) ಮಾಡಿಕೊಟ್ಟಿದ್ದರು ಕೂಡ ಮತ್ತೆ ತಿದ್ದುಪಡಿ ಮಾಡಿಕೊಳ್ಳಲು ಯಾವಾಗ ಅವಕಾಶ ಸಿಗುತ್ತದೆ ಎಂದು ಜನ ಕಾಯುತ್ತಿದ್ದಾರೆ.

distribution of new ration card, Also the decision to cancel ration cards

ಎಲ್ಲಾ ಕಾಯುವುದಕ್ಕೆ ಸರ್ಕಾರ ಈಗ ಉತ್ತರ ನೀಡಿದ್ದು ಸರ್ಕಾರ ತಿಳಿಸಿರುವ ಈ ದಿನಾಂಕದ ಒಳಗೆ ನೀವು ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ತಿದ್ದುಪಡಿ ಮಾಡಿಕೊಳ್ಳಬಹುದು.

ಉಚಿತ ಬಸ್, ಶಕ್ತಿ ಯೋಜನೆಯ ಹೊಸ ಅಪ್ಡೇಟ್! ಮಹಿಳೆಯರಿಗೆ ಗುಡ್ ನ್ಯೂಸ್

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ಸರ್ಕಾರ

ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ರೇಷನ್ ಕಾರ್ಡ್ ಮನೆಯ ಯಜಮಾನಿಯ ಹೆಸರಿನಲ್ಲಿ ಇರಬೇಕು ಎನ್ನುವ ನಿಯಮದ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಸರ್ಕಾರ ಈಗಾಗಲೇ 3 ಬಾರಿ ಅವಕಾಶ ಮಾಡಿಕೊಟ್ಟಿದೆ. ಆದರೆ ಸರ್ವರ್ ಸಮಸ್ಯೆ (server problem) ಉಂಟಾಗಿ ಸಾಕಷ್ಟು ಜನ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಮತ್ತೊಮ್ಮೆ ತಿದ್ದುಪಡಿ ಮಾಡಿಕೊಳ್ಳಲು ಸರಕಾರ ಅವಕಾಶ ನೀಡಲಿದೆ.

ರೇಷನ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭ ವಿಧಾನ

Ration Card Correctionರೇಷನ್ ಕಾರ್ಡ್ ನಲ್ಲಿ ಮಾಡಬಹುದಾದ ತಿದ್ದುಪಡಿಗಳು

*ಮನೆ ಯಜಮಾನನ ಹೆಸರಿನ ಬದಲು ಯಜಮಾನಿ ಹೆಸರು ಸೇರ್ಪಡೆ
*ಮಕ್ಕಳ ಹೆಸರು ಸೇರ್ಪಡೆ
*ಇಕೆವೈಸಿ ಅಪ್ಡೇಟ್ ಮಾಡುವುದು
*ವಿಳಾಸ ಬದಲಾವಣೆ

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಖರ್ಚಾಗಿರುವ ಒಟ್ಟು ಮೊತ್ತ ಎಷ್ಟು? ಇಲ್ಲಿದೆ ಲೆಕ್ಕಾಚಾರ

ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಬೇಕಾಗಿರುವ ದಾಖಲೆಗಳು

ಆಧಾರ್ ಕಾರ್ಡ್ (Aadhaar card)

ಜಾತಿ ಪ್ರಮಾಣ ಪತ್ರ (caste certificate)

ಆದಾಯ ಪ್ರಮಾಣ ಪತ್ರ (income certificate)

ಕುಟುಂಬದ ಸದಸ್ಯರ ಆಧಾರ್ ಕಾರ್ಡ್

ಆರು ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ

ಬಯೋಮೆಟ್ರಿಕ್ ಅಪ್ಡೇಟ್ (biometric update) ಮಾಡಿಸಲು ಹಳೆಯ ರೇಷನ್ ಕಾರ್ಡ್, ಬಯೋಮೆಟ್ರಿಕ್ ಮಾಡಿಸುವ ಸದಸ್ಯರ ಆಧಾರ್ ಕಾರ್ಡ್

ಮೊಬೈಲ್ ಸಂಖ್ಯೆ.

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಡಿಬಿಟಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಡೈರೆಕ್ಟ್ ಲಿಂಕ್

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿ ಕೊಟ್ಟಾಗ ಎಲ್ಲಾ ಸೇವಾ ಕೇಂದ್ರಗಳಲ್ಲಿಯೂ ಕೂಡ ತಿದ್ದುಪಡಿ ಮಾಡಿಕೊಳ್ಳಬಹುದಿತ್ತು. ಆದರೆ ಸಾಕಷ್ಟು ಜನ ತಿದ್ದುಪಡಿ ಮಾಡಿಕೊಳ್ಳಲು ಮುಂದಾಗಿದ್ದರಿಂದ ಸರ್ವ ಸಮಸ್ಯೆಯನ್ನು ಎದುರಿಸಬೇಕಾಗಿತ್ತು.

ಈ ಕಾರಣದಿಂದ ಭವಿಷ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂಬುದಕ್ಕಾಗಿ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರದಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Update) ನವೆಂಬರ್ 20 2023ರಿಂದ ಅವಕಾಶ ನೀಡಲಾಗಿದ್ದು ಮಧ್ಯಾಹ್ನ 2:30 ರಿಂದ ಸಂಜೆ 5:00 ಒಳಗೆ ಮಾತ್ರ ತಿದ್ದುಪಡಿಗೆ ಅವಕಾಶವಿದೆ.

Apply For New Ration Card and Ration Card Correction