ರೇಷನ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭ ವಿಧಾನ
ಸಾಕಷ್ಟು ಜನರ ಪಡಿತರ ಚೀಟಿಯ ವಿವರಗಳು ತಪ್ಪಾಗಿದೆ (wrong print in Ration card), ಹೆಸರು ವಿಳಾಸ ಅಥವಾ ಮೊಬೈಲ್ ಸಂಖ್ಯೆ (mobile number) ಕೂಡ ತಪ್ಪಾಗಿ ಪ್ರಿಂಟ್ ಆಗಿರಬಹುದು.
ಒಂದುವೇಳೆ ನಿಮ್ಮ ಹಳೆಯ ಮೊಬೈಲ್ ನಂಬರ್ ರೇಷನ್ ಕಾರ್ಡ್ ನಿಂದ ತೆಗೆದು ಹೊಸ ನಂಬರ್ ಹಾಕಬೇಕು ಅಥವಾ ತಪ್ಪಾಗಿರುವ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ಅಪ್ಡೇಟ್ (update) ಮಾಡಬೇಕು ಎಂದಿದ್ದರೆ ಇದಕ್ಕೆ ಈಗ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ.
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಖರ್ಚಾಗಿರುವ ಒಟ್ಟು ಮೊತ್ತ ಎಷ್ಟು? ಇಲ್ಲಿದೆ ಲೆಕ್ಕಾಚಾರ
ರೇಷನ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಅಪ್ಡೇಟ್ (Ration card Mobile number update)
ನೀವು ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ವಿವರಗಳು ಕೂಡ ಸರಿಯಾಗಿ ಇರಬೇಕು
ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದ್ದರೂ ಕೂಡ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಯಾಕೆಂದರೆ ರೇಷನ್ ಕಾರ್ಡ್ ಹಾಗೂ ನಿಮ್ಮ ಬ್ಯಾಂಕ್ ಖಾತೆ (bank account) ಕೂಡ ಲಿಂಕ್ ಆಗಿರುವುದರಿಂದ ಸರ್ಕಾರದ ಅನ್ನಭಾಗ್ಯ ಯೋಜನೆಯ (Annabhagya Yojana ) ಹಣವಾಗಲಿ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣವಾಗಲಿ ಬರಬೇಕಾದರೆ ನಿಮ್ಮ ಮೊಬೈಲ್ ಸಂಖ್ಯೆ ಅಪ್ ಡೇಟ್ ಆಗಿರುವುದೂ ಕೂಡ ಅಷ್ಟೇ ಮುಖ್ಯ!
ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಡಿಬಿಟಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಡೈರೆಕ್ಟ್ ಲಿಂಕ್
ಪಡಿತರ ಚೀಟಿಗೆ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡುವುದು ಹೇಗೆ?
*ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ಸರ್ಕಾರದ ಅಧಿಕೃತ ವೆಬ್ಸೈಟ್ (government official website) ಆಗಿರುವ https://nfs.delhi.gov.in/Citizen/UpdateMobileNumber.aspx ಮೇಲೆ ಕ್ಲಿಕ್ ಮಾಡಿ.
*ಮೊಬೈಲ್ ಸಂಖ್ಯೆ ನವೀಕರಣಕ್ಕೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
*ನೋಂದಾಯಿತ ಮೊಬೈಲ್ ಸಂಖ್ಯೆ ನವೀಕರಣಕ್ಕೆ ಹೊಸ ಮೊಬೈಲ್ ಸಂಖ್ಯೆ ಹಾಕಲು ಮಾಹಿತಿಗಳನ್ನು ನೀಡಬೇಕು.
*ಮೊದಲ ಕಾಲಂನಲ್ಲಿ ಮನೆಯ ಮುಖ್ಯಸ್ಥರ ಆಧಾರ ಸಂಖ್ಯೆ/ NFS ID ನಮೂದಿಸಬೇಕು.
*ಎರಡನೇ ಬಾಕ್ಸ್ ನಲ್ಲಿ ರೇಷನ್ ಕಾರ್ಡ್ ಸಂಖ್ಯೆ ಹಾಕಬೇಕು
*ಮುಂದಿನ ಕಾಲಮ್ ನಲ್ಲಿ ಮುಖ್ಯಸ್ಥರ ಹೆಸರು ಬರೆಯಬೇಕು.
*ಬಳಿಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಅಪ್ಡೇಟ್ ಮಾಡಿದರೆ ನಿಮ್ಮ ಹೊಸ ಸಂಖ್ಯೆ ರೇಷನ್ ಕಾರ್ಡ್ ನಮೂದಿತವಾಗುತ್ತದೆ ಅಂದರೆ ಯಾವುದೇ ಅಪ್ಡೇಟ್ ಇದ್ದರೂ ನಿಮ್ಮ ಈ ಹೊಸ ಮೊಬೈಲ್ ಸಂಖ್ಯೆಗೆ ಬರುತ್ತದೆ.
ಗೃಹಲಕ್ಷ್ಮಿ ಹಣ 2 ಬಾರಿ ತಪ್ಪಿದವರಿಗೂ ಈ ಬಾರಿ ಒಟ್ಟಿಗೆ ಜಮಾ ಆಗಿದೆ! ಚೆಕ್ ಮಾಡಿಕೊಳ್ಳಿ
ಈ ರೀತಿಯಾಗಿ ರೇಷನ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ರೇಷನ್ ಕಾರ್ಡ್ ನ ಯಾವುದೇ ಅಪ್ಡೇಟ್ ತಿಳಿದುಕೊಳ್ಳಲು ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ಬಹಳ ಮುಖ್ಯವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ.
How to update mobile number in ration card, Easy method