ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಖರ್ಚಾಗಿರುವ ಒಟ್ಟು ಮೊತ್ತ ಎಷ್ಟು? ಇಲ್ಲಿದೆ ಲೆಕ್ಕಾಚಾರ

Story Highlights

ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಸೇರಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ 18 ಸಾವಿರ ಕೋಟಿ ರೂಪಾಯಿ ಅನುದಾನ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಆರು ತಿಂಗಳುಗಳನ್ನು ಕಂಪ್ಲೀಟ್ ಮಾಡಿರುವ ಕಾಂಗ್ರೆಸ್ ಪಕ್ಷ (Congress party) ವಿಧಾನಸಭಾ ಚುನಾವಣೆಯ (vidhansabha election 2023) ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಗ್ಯಾರಂಟಿ ಯೋಜನೆಗಳನ್ನು (guarantee schemes) ಒಂದಾದ ನಂತರ ಒಂದರಂತೆ ಜಾರಿಗೆ ತಂದಿದೆ.

ಇವೆಲ್ಲಾ ಮಹಿಳೆಯರಿಗೆ ಹೆಚ್ಚು ಬೆನಿಫಿಟ್ ಸಿಗುವಂತಹ ಯೋಜನೆಗಳಾಗಿದ್ದು ಈವರಿಗೆ ರಾಜ್ಯದಲ್ಲಿ ಕೋಟ್ಯಂತರ ಮಹಿಳೆಯರು ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಡಿಬಿಟಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಡೈರೆಕ್ಟ್ ಲಿಂಕ್

ಯೋಜನೆಗೆ ಸರ್ಕಾರದ ಅನುದಾನ ಎಷ್ಟು!

ರಾಜ್ಯ ಕಾಂಗ್ರೆಸ್ ಸರ್ಕಾರ ಇದುವರೆಗೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಸೇರಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ 18 ಸಾವಿರ ಕೋಟಿ ರೂಪಾಯಿಗಳನ್ನು ಅನುದಾನ ಬಿಡುಗಡೆ ಮಾಡಿರುವುದಾಗಿ ಮಾಹಿತಿ ನೀಡಿದೆ. ಹಾಗಾದ್ರೆ ಯಾವ ಯೋಜನೆಗೆ ಎಷ್ಟು ಹಣವನ್ನು ಸರ್ಕಾರ ಮೀಸಲಿಟ್ಟಿದೆ ಎಂಬುದನ್ನು ನೋಡೋಣ.

ಮಹಿಳೆಯರಿಗೆ ಉಚಿತ ಬಸ್ – ಶಕ್ತಿ ಯೋಜನೆ (Shakti Yojana)

ಶಕ್ತಿ ಯೋಜನೆ ಆರಂಭವಾಗಿ ಆರು ತಿಂಗಳು ಕಳೆದಿದೆ ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಸರಾಸರಿ 60 ಲಕ್ಷದಂತೆ 97.2 ಕೋಟಿ ಬಾರಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ಉಚಿತವಾಗಿ (free bus ticket) ವಿತರಣೆಯಾಗಿರುವ ಟಿಕೆಟ್ 2303 ಕೋಟಿ ರೂಪಾಯಿಗಳಷ್ಟು.

ಗೃಹಲಕ್ಷ್ಮಿ ಹಣ 2 ಬಾರಿ ತಪ್ಪಿದವರಿಗೂ ಈ ಬಾರಿ ಒಟ್ಟಿಗೆ ಜಮಾ ಆಗಿದೆ! ಚೆಕ್ ಮಾಡಿಕೊಳ್ಳಿ

ಗೃಹಲಕ್ಷ್ಮಿ ಯೋಜನೆ ಅನುದಾನ (Gruha lakshmi Yojana)

Gruha Lakshmi Yojanaರಾಜ್ಯದ ಮಹಿಳೆಯರಿಗೆ ಮನೆಯ ಖರ್ಚು ನಿಭಾಯಿಸುವ ಸಲುವಾಗಿ ಪ್ರತಿ ತಿಂಗಳು 2000 ರೂ. ಗಳನ್ನು ಉಚಿತವಾಗಿ ನೀಡುವ ಯೋಜನೆಯೇ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಗೆ ರಾಜ್ಯದ್ಯಂತ 1.18 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಯೋಜನೆಗೆ 17,500 ಕೋಟಿ ರೂಪಾಯಿಗಳ ಅನುದಾನ ಮೀಸಲಿಡಲಾಗಿದ್ದು, 11,200 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

ಗೃಹಜ್ಯೋತಿ ಯೋಜನೆ ಅನುದಾನ (Gruha Jyothi Yojana)

ರಾಜ್ಯದಲ್ಲಿ ಪ್ರತಿಯೊಂದು ಮನೆಯಲ್ಲಿ ವಿದ್ಯುತ್ ಉಚಿತವಾಗಿ (Free Electricity) ಪಡೆದುಕೊಳ್ಳುವ ಸೌಲಭ್ಯ ನೀಡಲಾಗಿದೆ, 200 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ ಬಳಸುವ ಎಲ್ಲರಿಗೂ ಕೂಡ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಝೀರೋ ವಿದ್ಯುತ್ ಬಿಲ್ (Zero Electricity Bill) ಸೌಲಭ್ಯ ಒದಗಿಸಲಾಗಿದೆ.

ಯೋಜನೆಯ ಅಡಿಯಲ್ಲಿ ಒಟ್ಟು 1.56 ಕೋಟಿ ಜನ ನೊಂದಣಿ ಮಾಡಿಕೊಂಡಿದ್ದಾರೆ. ಯೋಜನೆ ಆರಂಭವಾಗಿ ಮೂರು ತಿಂಗಳುಗಳು ಕಳೆದು ಸರ್ಕಾರ ಒಟ್ಟು 2152 ಕೋಟಿ ರೂಪಾಯಿಗಳನ್ನು ಅನುದಾನ ನೀಡಿದೆ.

ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ದಿನಾಂಕ ಘೋಷಣೆ! ಇಲ್ಲಿದೆ ಪೂರ್ತಿ ಡೀಟೇಲ್ಸ್

ಅನ್ನಭಾಗ್ಯ ಯೋಜನೆ ಅನುದಾನ (Annabhagya Yojana)

Annabhagya Schemeಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೀಡುವ ಉಚಿತ ಐದು ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಪ್ರತಿ ಸದಸ್ಯನಿಗೆ ಐದು ಕೆಜಿ ಅಕ್ಕಿಗೆ 170ಗಳನ್ನು ಜಮಾ ಮಾಡಲಾಗುತ್ತಿದೆ.

ರಾಜ್ಯದಲ್ಲಿ 3.92 ಕೋಟಿ ಫಲಾನುಭವಿಗಳು ಖಾತೆಗೆ (Bank Account) ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ ಪಡೆದುಕೊಳ್ಳುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ 2,444 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

6 ತಿಂಗಳಿಂದ ರೇಷನ್ ಪಡೆಯದವರ ಸಮೀಕ್ಷೆ; 15,000 ರೇಷನ್ ಕಾರ್ಡ್ ತಕ್ಷಣಕ್ಕೆ ರದ್ದು

ಒಟ್ಟಾರೆಯಾಗಿ ಅನುದಾನ ಪಡೆದುಕೊಳ್ಳುವುದರಲ್ಲಿ ಗೃಹಲಕ್ಷ್ಮಿ ಯೋಜನೆಯದ್ದೇ ಸಿಂಹ ಪಾಲು ಎನ್ನಬಹುದು. ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾವು ನುಡಿದಂತೆ ನಡೆದಿದ್ದೇವೆ ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದ್ದೇವೆ, ಈ ಮೂಲಕ ಯಾವುದೇ ಜಾತಿ, ವರ್ಗ, ವರ್ಣ ಭೇದವಿಲ್ಲದೆ ರಾಜ್ಯದ ಜನತೆಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ.

What is the total amount spent on Gruha Lakshmi and Gruha Jyothi Schemes

Related Stories