6 ತಿಂಗಳಿಂದ ರೇಷನ್ ಪಡೆಯದವರ ಸಮೀಕ್ಷೆ; 15,000 ರೇಷನ್ ಕಾರ್ಡ್ ತಕ್ಷಣಕ್ಕೆ ರದ್ದು

ಸರ್ಕಾರ ಈಗಾಗಲೇ ತಿಳಿಸಿರುವಂತೆ ಯಾರು ಪಡಿತರವನ್ನು ಪಡೆದುಕೊಳ್ಳುತ್ತಿಲ್ಲವೋ, ಅನರ್ಹರು ಕೂಡ ಪಡಿತರ ಚೀಟಿಯನ್ನು ಪಡೆದುಕೊಂಡಿದ್ದಾರೋ ಅಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಲು (BPL card cancellation) ಸಮೀಕ್ಷೆ ಕಾರ್ಯ ಆರಂಭವಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಸಮೀಕ್ಷೆ (evaluation) ಆರಂಭಿಸಿರುವ ಸರ್ಕಾರ ಈ ವರ್ಷದ ಕೊನೆಯ ಒಳಗೆ ಲಕ್ಷಾಂತರ ಪಡಿತರ ಚೀಟಿಗಳನ್ನು ರದ್ದುಪಡಿಸಲಿದೆ.
ಬೆಳೆ ಸಾಲಕ್ಕೆ ಸಹಾಯಧನ! ರಾಜ್ಯ ಸರ್ಕಾರದಿಂದ ಸಿಗಲಿದೆ ರೈತರಿಗೆ ಸಬ್ಸಿಡಿ ಸಾಲ ಸೌಲಭ್ಯ
ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿ ರದ್ದು! (Ration card cancellation)
ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಅನ್ನು ಸರ್ಕಾರ ವಿತರಣೆ ಮಾಡಿದೆ, ಯಾವೊಬ್ಬ ವ್ಯಕ್ತಿ ಕೂಡ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ
ಆದರೆ ಅದೆಷ್ಟೋ ಜನ ಪಡಿತರ ಚೀಟಿ ಹೊಂದಿದ್ದರು ಕೂಡ ಅನ್ನಭಾಗ್ಯ ಯೋಜನೆಯ (Annabhagya scheme) ಪ್ರಯೋಜನ ಪಡೆದುಕೊಳ್ಳುತ್ತಿಲ್ಲ. ಹೊರತುಪಡಿಸಿ ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಮಾತ್ರ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತಹ ಪಡಿತರ ಚೀಟಿಯ ಸಮೀಕ್ಷೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ.
ಸ್ವಂತ ಜಮೀನು ಇಲ್ಲದ ರೈತರಿಗೆ ಕೃಷಿ ಮಾಡೋಕೆ ಸಿಗಲಿದೆ ಸರ್ಕಾರದಿಂದ ಜಮೀನು!
ಮೈಸೂರು ಜಿಲ್ಲೆಯಲ್ಲಿ ಮೊದಲ ಸಮೀಕ್ಷೆ (Mysore district Survey)

ತಿಳಿಸಿರುವಂತೆ ಆಹಾರ ಭದ್ರತೆ ಕಾಯ್ದೆಯ ಪ್ರಕಾರ ಯಾರು ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳುತ್ತಿಲ್ಲವೋ ಅಂತವರ ಪಡಿತರ ಕಾರ್ಡ್ ರದ್ದುಪಡಿಸಲು ನಿರ್ಧರಿಸಿದೆ.
ಮೈಸೂರು, ಚಿಕ್ಕಮಗಳೂರು ಹಾಗೂ ಮಡಿಕೇರಿ ಭಾಗದಲ್ಲಿ ಇರುವ ಜನರು ತಮ್ಮ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ ಈ ಹಿನ್ನೆಲೆಯಲ್ಲಿ ಎಲ್ಲಿ ಬೇಕಾದರೂ ಪಡಿತರ ಪಡೆದುಕೊಳ್ಳಬಹುದು ಎನ್ನುವ ನಿಯಮ ಅರಿವಿಲ್ಲದೆ ಇರುವವರು ಪಡಿತರವನ್ನು ಕಳೆದ ಆರು ತಿಂಗಳಿನಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದರ ಜೊತೆಗೆ ಸಾಕಷ್ಟು ಪಡಿತರ ಚೀಟಿ ಹೊಂದಿರುವವರು ಮೃತಪಟ್ಟಿದ್ದಾರೆ, ಅಂಗಡಿಗೆ ಹೋಗಿ ಪಡಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿಲ್ಲ. ಈ ಎಲ್ಲಾ ಕಾರಣಗಳ ಜೊತೆಗೆ ಇನ್ನೂ ಹಲವರು ಸರ್ಕಾರಿ ಸೌಲಭ್ಯ ಆರೋಗ್ಯ ಸೇವೆ (health benefit) ಮೊದಲಾದವುಗಳನ್ನು ಪಡೆದುಕೊಳ್ಳಲು ಮಾತ್ರ ಬಿಪಿಎಲ್ ಕಾರ್ಡ್ ಬಳಸುತ್ತಿದ್ದಾರೆಯೇ ಹೊರತು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿಲ್ಲ.
ನಿಮ್ಮ ಜಮೀನು, ಕೃಷಿ ಭೂಮಿಗೆ ದಾರಿ ಇದೆಯೋ ಇಲ್ವೋ ಈ ರೀತಿ ಮೊಬೈಲ್ ನಲ್ಲೇ ತಿಳಿದುಕೊಳ್ಳಿ
ಪಡಿತರ ಚೀಟಿ ಪರಿಶೀಲನೆ!
ಆಹಾರ ಇಲಾಖೆ ಮೊದಲಿಗೆ 6 ತಿಂಗಳಿನಿಂದ ಪಡಿತರವನ್ನು ಯಾಕೆ ಪಡೆದುಕೊಳ್ಳುತ್ತಿಲ್ಲ ಎನ್ನುವ ಸಮೀಕ್ಷೆ ನಡೆಸಲಿದೆ, ಇದಕ್ಕೆ ಸರಿಯಾದ ಕಾರಣ ಇದ್ದರೆ ಅಂತಹ ಪಡಿತರ ಚೀಟಿಯನ್ನು ರದ್ದು ಪಡಿಸುವುದಿಲ್ಲ ಹಾಗೂ ಇನ್ನು ಮುಂದೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಆದೇಶ ನೀಡುತ್ತದೆ.
ಆದರೆ ಪ್ರಾಮಾಣಿಕ ಕಾರಣ ಇಲ್ಲದೆ ಇರುವಂತಹ ಬಿಪಿಎಲ್ ಕಾರ್ಡ್ ಅನ್ನು ತಕ್ಷಣವೇ ರದ್ದು ಪಡಿಸಲಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಸರಿಯಾಗಿ ಅನುಷ್ಠಾನಗೊಂಡಿದೆಯೋ ಇಲ್ಲವೋ ಎನ್ನುವ ಸಮೀಕ್ಷೆಯನ್ನು ಕೂಡ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ
ಕಳೆದ ಫೆಬ್ರುವರಿ ತಿಂಗಳಿನಿಂದ ಹೆಚ್ ಡಿ ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಮೊದಲಾದ ಜಿಲ್ಲೆಗಳು ಸೇರಿದಂತೆ ಒಟ್ಟು 8,300 ಅರ್ಜಿಗಳು ಹೊಸ ಪಡಿತರ ಚೀಟಿ ಪಡೆದುಕೊಳ್ಳುವುದಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿ ಇರುವ ಒಟ್ಟು ಪಡಿತರ ಕಾರ್ಡ್ ಗಳು 7,08,914. ಇವುಗಳಲ್ಲಿ ಅಕ್ಟೋಬರ್ ತಿಂಗಳಿನಿಂದ 6,43,747 ಪಡಿತರ ಕುಟುಂಬಗಳಿಗೆ ಅಕ್ಕಿಯ ಬದಲು ಹಣ ವನ್ನು ನೇರ ವರ್ಗಾವಣೆ (Bank Account) ಮಾಡಲಾಗುತ್ತಿದೆ.
ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಆದೇಶ; ಲಕ್ಷಾಂತರ ಕುಟುಂಬಕ್ಕೆ ಸೌಲಭ್ಯ ಇಲ್ಲ
ಆದರೆ ಸಾಕಷ್ಟು ಜನ ಈ ಕೆ ವೈ ಸಿ ಮಾಡಿಸಿಕೊಳ್ಳದೆ ಇರುವ ಕಾರಣ ಅಂತವರ ಖಾತೆಗೆ ಹಣ (Money Deposit) ಬಂದಿಲ್ಲ. ಇದೀಗ ಸರ್ಕಾರ ಸಮೀಕ್ಷೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇರುವವರಿಗೆ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ.
ಬಿಪಿಎಲ್ ಕಾರ್ಡ್ ಅನ್ನು ತಕ್ಷಣವೇ ರದ್ದುಪಡಿಸಲು ಕೂಡ ಆಹಾರ ಇಲಾಖೆ ಮುಂದಾಗಿದೆ. ಒಟ್ಟಿನಲ್ಲಿ ಮೈಸೂರು ಜಿಲ್ಲೆ ಒಂದರಲ್ಲಿಯೇ 15,000ಕ್ಕೂ ಹೆಚ್ಚಿನ ಪಡಿತರ ಚೀಟಿ ರದ್ದಾಗುವ ಸಾಧ್ಯತೆ ಇದೆ.
ಆಹಾರ ಇಲಾಖೆ ಈ ಸಮೀಕ್ಷೆಯನ್ನು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿರುವ ನಡೆಸಲಿದೆ ಹಾಗಾಗಿ ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದೆ ಇದ್ದಲ್ಲಿ ತಕ್ಷಣವೇ ಪಡಿತರ ವಸ್ತುಗಳನ್ನು ಪಡೆದುಕೊಳ್ಳಿ. ಇಲ್ಲವಾದರೆ ನಿಮ್ಮ ಬಿಪಿಎಲ್ ಕಾರ್ಡ್ ಕೂಡ ರದ್ದಾಗಬಹುದು.
ಗೃಹಲಕ್ಷ್ಮಿ ಮೂರೂ ಕಂತಿನ ಹಣ ಒಟ್ಟಿಗೆ ಜಮಾ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ
Survey of those who have not Taking ration for 6 months, 15,000 ration card is canceled



