ಬೆಳೆ ಸಾಲಕ್ಕೆ ಸಹಾಯಧನ! ರಾಜ್ಯ ಸರ್ಕಾರದಿಂದ ಸಿಗಲಿದೆ ರೈತರಿಗೆ ಸಬ್ಸಿಡಿ ಸಾಲ ಸೌಲಭ್ಯ

ರೈತ ಪರವಾಗಿರುವ ಆರ್‌ಬಿಐ ನ ಈ ಮಾರ್ಗ ಸೂಚಿಗಳನ್ನು ಅನುಸರಿಸಿ ಎಲ್ಲಾ ಬ್ಯಾಂಕುಗಳು (Banks) ಕೂಡ ರೈತರಿಗೆ ಅನುಕೂಲವಾಗುವಂತೆ ಬಡ್ಡಿ ಸಹಾಯಧನ ಬೆಳೆ ಸಾಲ (Subsidy Loan) ಒದಗಿಸಬೇಕು

ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಸಾಲ ಸೌಲಭ್ಯಗಳನ್ನು (Subsidy Loan) ಸರ್ಕಾರ ನೀಡುತ್ತದೆ, ಕೇಂದ್ರ ಸರ್ಕಾರ (central government) ಹಾಗೂ ರಾಜ್ಯ ಸರ್ಕಾರದ ಮೂಲಕ ರಿಯಾಯಿತಿ ದರದಲ್ಲಿ ಸಾಲವನ್ನು ರೈತರು (Loan For Farmer) ಪಡೆದುಕೊಳ್ಳಬಹುದು, ಅಷ್ಟೇ ಅಲ್ಲದೆ ಎಲ್ಲಾ ಸಾಲಕ್ಕೂ ಕೂಡ ಸಬ್ಸಿಡಿಯನ್ನು (subsidy for loan) ಸರ್ಕಾರ ಘೋಷಿಸುತ್ತದೆ.

ಆರ್ ಬಿ ಐ ಹೊಸ ಮಾರ್ಗಸೂಚಿ! (RBI new guidelines)

ಇದೀಗ ರೈತರಿಗೆ ಅನುಕೂಲವಾಗಲು ಬೆಳೆ ಸಾಲ ಬಡ್ಡಿ ಸಹಾಯಧನ (subsidy interest) ನೀಡಲು ಆರ್ ಬಿ ಐ ಎಲ್ಲಾ ಬ್ಯಾಂಕ್ (Bank)ಗಳಿಗೆ ಸೂಚಿಸಿದೆ, ಈ ಮೂಲಕ ರೈತರಿಗೆ ಫಸಲು ಬೆಳೆಯಲು ಹಾಗೂ ಅಗತ್ಯ ಇರುವ ಉಪಕರಣಗಳನ್ನು ಖರೀದಿಸಲು ಬೆಳೆ ಸಾಲ ಸಬ್ಸಿಡಿ (Crop Loan Subsidy) ದರದಲ್ಲಿ ದೊರೆಯುತ್ತದೆ, ಜೊತೆಗೆ ಇತರ ಉಪಕಸುಬು ಮಾಡಲು 50% ನಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು.

ಸ್ವಂತ ಜಮೀನು ಇಲ್ಲದ ರೈತರಿಗೆ ಕೃಷಿ ಮಾಡೋಕೆ ಸಿಗಲಿದೆ ಸರ್ಕಾರದಿಂದ ಜಮೀನು!

ಬೆಳೆ ಸಾಲಕ್ಕೆ ಸಹಾಯಧನ! ರಾಜ್ಯ ಸರ್ಕಾರದಿಂದ ಸಿಗಲಿದೆ ರೈತರಿಗೆ ಸಬ್ಸಿಡಿ ಸಾಲ ಸೌಲಭ್ಯ - Kannada News

ಬಡ್ಡಿ ಸಹಾಯಧನ ಬೆಳೆ ಸಾಲದ ಪ್ರಯೋಜನಗಳು!

2023-24ನೇ ಹಣಕಾಸು ವರ್ಷದಲ್ಲಿ, ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗುವಂತೆ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಸಹಾಯವಾಗುವಂತೆ ಸಹಾಯಧನ ನೀಡಲು ಆರ್ ಬಿ ಐ ಮಾರ್ಗಸೂಚಿ ನೀಡಿದೆ. ಇದರಿಂದ ರಾಜ್ಯದ 57 ಲಕ್ಷ ರೈತರಿಗೆ ಸಹಾಯವಾಗಲಿದೆ.

ಬಡ್ಡಿ ಸಹಾಯಧನ ಬೆಳೆ ಸಾಲ ಯೋಜನೆಯನ್ನು ರೈತರಿಗೆ ನೀಡುವಂತೆ ಎಲ್ಲಾ ಬ್ಯಾಂಕ್ ಗಳು (Banks) ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಗಳು ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ಸೂಚಿಸಿದೆ.

Subsidy Loanಇದರಿಂದಾಗಿ ರೈತರಿಗೆ ಉಪಕಸುಬು ಮಾಡಲು 50% ನಷ್ಟು ಸಹಾಯಧನ ದೊರೆಯುತ್ತದೆ. ಅಲ್ಪಾವಧಿಯ ಬೆಳೆ ಸಾಲಕ್ಕೆ ಪ್ರಾದೇಶಿಕ, ವಾಣಿಜ್ಯ (commercial banks) ಬ್ಯಾಂಕ್ ಗಳು 8.50% ನಲ್ಲಿ ಸಾಲ ಒದಗಿಸುತ್ತವೆ.

ಕೇಂದ್ರ ಸರ್ಕಾರ 1.50% ನಷ್ಟು ಸಹಾಯಧನ ನೀಡುತ್ತದೆ, ಇದರಿಂದ ಕೇವಲ 7% ಗೆ ಲೋನ್ (Loan) ಪಡೆಯಬಹುದು. ಈ ಅಲ್ಪಾವಧಿಯ ಸಾಲವನ್ನು ಕಾಲಮಿತಿಯೊಳಗೆ ಪಾವತಿ ಮಾಡಿದ್ರೆ 3% ಬಡ್ಡಿದರ ರಿಯಾಯಿತಿ ದೊರೆಯುತ್ತದೆ ಅಂದರೆ 4% ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು.

ನಿಮ್ಮ ಜಮೀನು, ಕೃಷಿ ಭೂಮಿಗೆ ದಾರಿ ಇದೆಯೋ ಇಲ್ವೋ ಈ ರೀತಿ ಮೊಬೈಲ್ ನಲ್ಲೇ ತಿಳಿದುಕೊಳ್ಳಿ

ಯಾರಿಗೆ ಸಿಗಲಿದೆ ಪ್ರಯೋಜನ! (Who can get benefit)

ಸಣ್ಣ ಮತ್ತು ಅತಿ ಸಣ್ಣ ರೈತರು ಅಂದರೆ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ಬಡ್ಡಿ ಸಹಾಯಧನ, ಬೆಳೆ ಸಾಲ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ರೈತರು ಉಪಕಸುಬುಗಳಾದ ಪಶು ಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಮೊದಲಾದವುಗಳಿಗೂ ಸಹಾಯಧನ ಪಡೆದುಕೊಳ್ಳಬಹುದು.

ರೈತ ಪರವಾಗಿರುವ ಆರ್‌ಬಿಐ ನ ಈ ಮಾರ್ಗ ಸೂಚಿಗಳನ್ನು ಅನುಸರಿಸಿ ಎಲ್ಲಾ ಬ್ಯಾಂಕುಗಳು (Banks) ಕೂಡ ರೈತರಿಗೆ ಅನುಕೂಲವಾಗುವಂತೆ ಬಡ್ಡಿ ಸಹಾಯಧನ ಬೆಳೆ ಸಾಲ (Subsidy Loan) ಒದಗಿಸಬೇಕು, ಪ್ರತಿಯೊಬ್ಬ ಅನ್ನದಾತ ಕೂಡ ಇದರ ಪ್ರಯೋಜನ ಪಡೆದುಕೊಂಡು ಬರದ ಸಮಯದಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು (financial problem) ಸುಧಾರಿಸಿಕೊಳ್ಳಬಹುದು.

ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಆದೇಶ; ಲಕ್ಷಾಂತರ ಕುಟುಂಬಕ್ಕೆ ಸೌಲಭ್ಯ ಇಲ್ಲ

Subsidy for crop loans, Farmers will get Subsidy loan from the state government

Follow us On

FaceBook Google News

Subsidy for crop loans, Farmers will get Subsidy loan from the state government