ಗೃಹಲಕ್ಷ್ಮಿ ಯೋಜನೆ ಹಣ (Gruha Lakshmi scheme) ಇನ್ನು ತಮ್ಮ ಖಾತೆಗೆ ಬಂದಿಲ್ಲ ಎಂದು ಯಾರು ಆತಂಕಗೊಂಡಿದ್ದರೋ ಅಂತವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಿನ್ನೆ ಸುಮಾರು 12 ಜಿಲ್ಲೆಗಳಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ನೇರವಾಗಿ ಜಮಾ ಮಾಡಲಾಗಿದೆ.
ಮಿಶ್ರ ತಳಿ ಹಸು ಸಾಕಾಣಿಕೆಗೆ ಸಿಗಲಿದೆ ₹58,500 ರೂಪಾಯಿ ಸಹಾಯಧನ! ಈ ರೀತಿ ಅರ್ಜಿ ಸಲ್ಲಿಸಿ
ನಿಮ್ಮ ಖಾತೆಗೆ ಹಣ ಜಮಾ ಆಗಿರಬಹುದು ಚೆಕ್ ಮಾಡಿ! (Check your Bank account)
ಇಲ್ಲಿಯವರೆಗೆ ಸರಕಾರ ನೀಡಿರುವ ಅಂಕಿ ಅಂಶದ ಪ್ರಕಾರ ಸುಮಾರು 10 ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದು ಬಾಕಿ ಇದೆ. ಇನ್ನು ಪ್ರಮುಖವಾಗಿ 12 ಜಿಲ್ಲೆಗಳಲ್ಲಿ ಮೂರು ಕಂತಿನ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ
ಈ ಹಿನ್ನೆಲೆಯಲ್ಲಿ ಬಹುತೇಕ ಮಹಿಳೆಯರು ಮೊದಲ ಕಂತಿನ ಹಣವನ್ನು ಕೂಡ ಪಡೆಯದೆ ಇದ್ದವರು ಈಗ ಮೂರು ಕಂತಿನ ಹಣವನ್ನು ಒಟ್ಟಿಗೆ ಪಡೆದಿದ್ದಾರೆ ಎನ್ನಬಹುದು.
ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದರೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (ration card correction) ಬಹಳ ಮುಖ್ಯವಾಗಿರುತ್ತದೆ, ಮನೆಯ ಯಜಮಾನಿಯ ಹೆಸರಿನಲ್ಲಿ ರೇಷನ್ ಕಾರ್ಡ್ ಇರಬೇಕು.
ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿದ್ಯಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಹಾಗೆ ನೀವು ರೇಷನ್ ಕಾರ್ಡ್ ಮೇಲೆ ತಿದ್ದುಪಡಿ ಮಾಡಿಕೊಂಡಿದ್ದು ಸರಿಯಾಗಿ ಸರ್ಕಾರದ ಡಾಟಾಬೇಸ್ (government database) ನಲ್ಲಿ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ, ಒಂದು ವೇಳೆ ಹಳೆಯ ರೇಷನ್ ಕಾರ್ಡ್ ನಂತೆ ಪುರುಷರ ಹೆಸರಿನಲ್ಲಿಯೇ ರೇಷನ್ ಕಾರ್ಡ್ ಇದ್ದರೆ ಅಂತವರಿಗೆ ಹಣ ಜಮಾ ಆಗುವುದಿಲ್ಲ.
ಇನ್ನೊಂದು ಮುಖ್ಯವಾದ ವಿಷಯ ಅಂದರೆ ಕಾಲಕಾಲಕ್ಕೆ ತಕ್ಕಂತೆ ರೇಷನ್ ಕಾರ್ಡ್ ಪರಿಶೀಲನೆ ಮಾಡುತ್ತಿರುವ ಆಹಾರ ಇಲಾಖೆ ಅನರ್ಹ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸುತ್ತಿದೆ.
ನಿಮ್ಮ ರೇಷನ್ ಕಾರ್ಡ್ ರದ್ದುಪಡಿಗೊಂಡಿದ್ದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆಯ ಹಣವಾಗಲಿ ಬರುವುದಿಲ್ಲ, ಆದ್ದರಿಂದ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ (Ration Card Status) ಏನಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಇಂತಹವರಿಗೆ ಸಿಗುತ್ತೆ ಉಚಿತ ದ್ವಿಚಕ್ರ ವಾಹನ, ಕರ್ನಾಟಕ ಸರ್ಕಾರದ ಮತ್ತೊಂದು ಯೋಜನೆ
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check ration card status)
https://mahitikanaja.karnataka.gov.in/ ಮಾಹಿತಿ ಕಣಜದ ಈ ಅಧಿಕೃತ ವೆಬ್ಸೈಟ್ (official website) ಅನ್ನು ತೆರೆಯಿರಿ. ಮುಖಪುಟದಲ್ಲಿ ಕಾರ್ಯಕ್ರಮಗಳು ಎನ್ನುವ ಬಟನ್ ಕ್ಲಿಕ್ ಮಾಡಿದರೆ ಸೇವೆಗಳು ಎಂಬ ಆಯ್ಕೆ ಕಾಣಿಸುತ್ತದೆ, ಅದನ್ನು ಕ್ಲಿಕ್ ಮಾಡಿ.
*ಇಲ್ಲಿ ಸಾಕಷ್ಟು ಆಯ್ಕೆಗಳು ಇದ್ದು ಪಡಿತರ ಚೀಟಿ ಪ್ರತ್ಯೇಕವಾಗಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ಈಗ ಮತ್ತೊಂದು page ತೆಗೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಸಬ್ಮಿಟ್ ಮಾಡಿ.
*ಈಗ ನಿಮ್ಮ ರೇಷನ್ ಕಾರ್ಡ್ ನ ವಿವರಗಳನ್ನು ಹೊಂದಿರುವ ಪೇಜ್ ತೆರೆದುಕೊಳ್ಳುತ್ತದೆ. ನಿನ್ನ ಜಿಲ್ಲೆ ತಾಲೂಕು ಹೋಬಳಿ ಎಲ್ಲ ವಿವರಗಳು ಇರುತ್ತವೆ.
ನ್ಯಾಯಬೆಲೆ ಅಂಗಡಿ, ಸದಸ್ಯರ ಸಂಖ್ಯೆ, ರೇಷನ್ ಕಾರ್ಡ್ ಸಕ್ರಿಯವಾಗಿದೆಯೋ (ration card active) ಇಲ್ಲವೋ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ ಹಣ ಸಿಗದಿದ್ರೆ, ಇನ್ನೂ ಕಾಲ ಮಿಂಚಿಲ್ಲ; ಈ ಕೆಲಸ ಮಾಡಿ ಹಣ ಪಡೆದುಕೊಳ್ಳಿ
ಈ ಜಿಲ್ಲೆಗಳಿಗೆ ಬಾಕಿಯಿದ್ದ ಗೃಹಲಕ್ಷ್ಮಿ ಹಣ ಬಿಡುಗಡೆ
ಬಾಗಲಕೋಟೆ
ವಿಜಯಪುರ
ಕೊಪ್ಪಳ
ಬಳ್ಳಾರಿ
ಗದಗ
ಉತ್ತರ ಕನ್ನಡ
ಚಿತ್ರದುರ್ಗ
ದಾವಣಗೆರೆ
ಕಲ್ಬುರ್ಗಿ
ಶಿವಮೊಗ್ಗ
ಯಾದಗಿರಿ
ಉಡುಪಿ
Gruha Lakshmi 3 installments Deposited together, Check your Bank account
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.